ಸ್ತನ ಕ್ಯಾನ್ಸರ್ ಪೀಡಿತರಿಗೆಂದೇ ವಿಶೇಷ ಒಳ ಉಡುಪು ತಯಾರಿಸ್ತಾರೆ ಈ ಮಹಿಳೆ!

First Published 23, Feb 2020, 3:57 PM

ಜಗತ್ತಿನಾದ್ಯಂತ ಸ್ತನ ಕ್ಯಾನ್ಸರ್ ಅಪಾಯ ದಿನೇ ದಿನೇ ಹೆಚ್ಚುತ್ತಿದೆ. ಲಕ್ಷಾನುಗಟ್ಟಲೇ ಮಹಿಳೆಯರು ಈ ಕಾಯಿಲೆಗೆ ಗುರಿಯಾಗಿದ್ದಾರೆ. ಇನ್ನು ಸ್ತನ ಕ್ಯಾನ್ರ್ ಒಪೀಡಿತ ಮಹಿಳೆಯರಿಗೆ ಸ್ತನ ತೆಗೆಸಬೇಕಾದ ಅನಿವರ್ಯತೆಯೂ ಬರುತ್ತದೆ. ಬಹುತೇಕ ಕೇಸ್ ಗಳಲ್ಲಿ ಇಂತಹ ಪ್ರಕ್ರಿಯೆ ನಡೆಸಿ ಚಿಕಿತ್ಸೆ ನಿಡಲಾಗುತ್ತದೆ. ಆದರೆ ಚಿಕಿತ್ಸೆಗಾಗಿ ಸ್ತನ ತೆಗೆಸಿಕೊಂಡ ಮಹಿಳೆಯರಲ್ಲಿ ಒಂದು ರೀತಿಯ ಅಪೂರ್ಣತೆ ಕಾಣಿಸಿಕೊಳ್ಳುತ್ತದೆ. ಇಂತಹ ಮಹಿಳೆಯರಿಗೆಂದೇ, ಈ ಅಪೂರ್ಣತೆ ನಿವಾರಿಸಲೆಂದೇ ಮಹಿಳೆಯೊಬ್ಬರು ವಿಶೇಷವಾದ ಒಳ ಉಡುಪು ವಿನ್ಯಾಸಗೊಳಿಸುತ್ತಿದ್ದಾರೆ. ಹೇಗಿರುತ್ತೆ ಈ ಉಡುಪು? ಇಲ್ಲಿದೆ ಫೋಟೋಸ್

ಹೌದು ವಾಷಿಂಗ್ಟನ್ ನಲ್ಲಿರುವ Knitted Knockers Support Foundation (KKSF) ಬ್ರೆಸ್ ಪ್ರೊಸ್ಟೇಸಿಸ್[ಕೃತಕ ಸ್ತನ] ತಯಾರಿಸುತ್ತದೆ. ಇದು Woolen[ಹತ್ತಿ ಉಣ್ಣೆ]ಯಿಂದ ತಯಾರಿಸಲಾಗುತ್ತದೆ

2011ರಲ್ಲಿ ಸ್ಥಾಪನೆಯಾದ KKSF, ಸ್ವಯಂಸೇವಕ ಸಂಸ್ಥೆಯ ಬ್ರಾಂಚ್ ಗಳು ಸದ್ಯ ಜಗತ್ತಿನ ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 3500 ಸ್ವಯಂ ಸೇವಕರಿರುವ ಈ ಸಂಸ್ಥೆ ಒಂದು ವರ್ಷದಲ್ಲಿ ಸುಮಾರು 168,000 ವುಲನ್ ಬ್ರಾ ತಯಾರಿಸುತ್ತದೆ.

ಮಲೇಷ್ಯಾದ ನಿವಾಸಿ ಹೋ ಹೆಸರಿನ ಮಹಿಳೆಯೊಬ್ಬರು ದೀರ್ಘ ಸಮಯದಿಂದ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ತಮಗಿರುವ ಬಿಡುವಿನ ವೇಳೆ ಅವರು ಒಳ ಉಡುಪು ತಯಾರಿಸುವ ಕೆಲಸ ಮಾಡುತ್ತಾರೆ. ಎಲ್ಲಿಯವರೆಗೆ ಎಂದರೆ ಇಂಟರ್ನೆಟ್ ನಲ್ಲಿ ಕೆಲಸ ಮಾಡುವಾಗಲೂ ಅವರು ಈ ವಿಶೇಷ ಉಡುಪು ತಯಾರಿಸುವ ಕೆಲಸ ಮಾಡುತ್ತಾರೆ.

ಇಬ್ಬರು ಮಕ್ಕಳ ತಾಯಿ ಹೋ ಈ ಕುರಿತು ಮಾತನಾಡುತ್ತಾ ನಾನು ಕಳೆದ 5 ದಶಕದಿಂದ ಹವ್ಯಾಸವಾಗಿ ನೇಯ್ಗೆ ಮಾಡುತ್ತೇನೆ. ಆದರೆ ಕ್ಯಾನ್ಸರ್ ಮಹಿಳೆಯರಿಗಾಗಿ ಬ್ರಾ ಮಾಡುವ ಕೆಲಸ ಖುಷಿ ಕೊಡುತ್ತದೆ ಎಂದಿದ್ದಾರೆ.

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರಿಗೆಂದೇ ಸಿದ್ಧಪಡಿಸುವ ವುಲನ್ ಬ್ರಾ ಪ್ರದರ್ಶಿಸುತ್ತಿರುವ ಇಬ್ಬರು ವೃದ್ಧೆಯರು.

ಈ ವಿಶೇಷ ಒಳ ಉಡುಪು ನೇಯುತ್ತಿರುವ ಹಿರಿಯ ಮಹಿಳೆ. ವಯಸ್ಸಿನ ಮಿತಿ ಇಲ್ಲದೇ, ಈ ಸಂಸ್ಥೆಗೆ ಸೇರುವ ಮಹಿಳೆಯರು ಕ್ಯಾನ್ಸರ್ ಪೀಡಿತಯರಿಗಾಗಿ ಈ ಸೇವೆ ಮಾಡುತ್ತಾರೆ.

ಈ ಬ್ರಾ ಬಹಳಷ್ಟು ಆರಾಮದಾಯಕವಾಗಿರುತ್ತದೆ. ಚಿಕಿತ್ಸೆ ವೇಳೆ ಆಪರೇಷನ್ ಮಾಡಿ ಯಾವೆಲ್ಲಾ ಮಹಿಳೆಯರ ಸ್ತನ ತೆಗೆಯಲಾಗುತ್ತದೋ, ಅವರಿಗೆಲ್ಲಾ ಈ ಬ್ರಾ ಕೊಂಚ ರಿಲೀಫ್ ನೀಡುವುದರಲ್ಲಿ ಅನುಮಾನವಿಲ್ಲ.

ಸ್ತನ ಕ್ಯಾನ್ಸರ್ನಿಂದ ಬದುಕುಳಿದವರಿಗೆಂದೇ ಕಲರ್ ಫುಲ್ ಹಾಗೂ ವಿವಿಧ ವಿನ್ಯಾಸಗಳ ಬ್ರಾ ಕೂಡಾ ಈ ಸಂಸ್ಥೆ ತಯಾರಿಸುತ್ತದೆ.

ಕ್ಯಾನ್ಸರ್ ನಿಂದ ಬದುಕುಳಿದ, ಸ್ತನ ತೆಗೆಯಲಾದ ಮಹಿಳೆಯರಿಗೆ ಈ ಬ್ರಾ ಒಂದು ವರದಾನದಂತೆ.

ಕ್ಯಾನ್ಸರ್ ಹೊಡೆದೋಡಿಸಿದ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬಿಸಲು ಹಾಗೂ ಒಳ್ಳೆಯ ಅನುಭವ ನೀಡಲು ರಂಗು ರಂಗಿನ ಒಳ ಉಡುಪು ತಯಾರಿಸಲಾಗುತ್ತದೆ.

ಈ ವಿಶೇಷ ಬ್ರಾಗಳು ಆನ್ ಲೈನ್ ನಲ್ಲೂ ಮಾರಾಟ ಮಾಡಲಾಗುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಈ ಬ್ರಾ ಲಾಭಕ್ಕಾಗಿ ಅಲ್ಲ ಬದಲಾಗಿ ಕ್ಯಾನ್ಸರ್ ಪೀಡಿತ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲು ತಯಾರಿಸಲಾಗುತ್ತಿದೆ.

loader