Asianet Suvarna News Asianet Suvarna News

Maral Yazarloo: ಬೈಕ್‌ನಲ್ಲಿ ವಿಶ್ವ ಸುತ್ತಿದ ಗರ್ಭಿಣಿ ತನ್ನ ಕಥೆ ಹೇಳಿದ್ದಾಳೆ, ಕೇಳಿ..

ಮರಲ್ ಯಝಾರ್ ಲೂ ಮೂಲತಃ ಇರಾನಿನವಳು. ಓದೋದಕ್ಕೆ ಅಂತ ಭಾರತಕ್ಕೆ ಬಂದ ಈಕೆ ಬೈಕಿಂಗ್ ಕ್ರೇಜಿಯಾಗಿದ್ದು ದೊಡ್ಡ ಕತೆ. ಗರ್ಭಿಣಿಯಾಗಿದ್ರೂ ಬೈಕಿಂಗ್ ಮೂಲಕ ಜಗತ್ತು ಸುತ್ತಿದ ಈಕೆಯ ಕತೆಯೇ ಇಂಟರೆಸ್ಟಿಂಗ್. ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ಈಕೆಯ ಸಾಹಸ ಕಥೆ ಪ್ರಕಟವಾಗಿದೆ. 800 ಸಿಸಿ ಬೈಕ್‌ನಲ್ಲಿ ಗರ್ಭಿಣಿಯಾಗಿದ್ದುಕೊಂಡೇ ಜಗತ್ತು ಸುತ್ತಿದ ಕತೆಯನ್ನು ಅವಳ ಮಾತಲ್ಲೇ ಕೇಳೋಣ.

Biker Maral Yazarloo Traveled  Around The World With A Baby Bump
Author
Bengaluru, First Published Jun 17, 2022, 4:01 PM IST | Last Updated Jun 17, 2022, 4:01 PM IST

ನನ್ನ ಹೆಸರು ಮರಲ್ ಯಝಾರ್ ಲೂ(Maral Yazarloo). ಸಂಪ್ರದಾಯವಾದಿ ಇರಾನ್‌(Iran)ನಲ್ಲಿ ಸಂಪ್ರದಾಯಕ್ಕಿಂತಲೂ ಮಾನವೀಯತೆ, ಬದುಕಿನ ಖುಷಿಯೇ ಮುಖ್ಯ ಎಂದು ನಂಬಿದ್ದ ಕುಟುಂಬದಲ್ಲಿ ನಾನು ಜನಿಸಿದೆ. ನನ್ನ ಸುತ್ತಲಿರುವ ಹುಡುಗಿಯರಿಗೆ ಅವರಿಷ್ಟ ಬಂದ ಹಾಗೆ ಬದುಕುವ, ಆಸೆ ಪಟ್ಟದ್ದನ್ನು ಕಲಿಯುವ ಸ್ವಾತಂತ್ರ್ಯ(Freedom) ಇರಲಿಲ್ಲ. ಆದರೆ ನಾನು ಮಾತ್ರ ಬೇಕಾದ್ದನ್ನು ಕಲಿಯುತ್ತಾ, ಸ್ವತಂತ್ರ್ಯವಾಗಿ ಬೆಳೆದೆ, ನಾನು ಭಾರತಕ್ಕೆ ಬಂದದ್ದು ನನ್ನ 20 ನೇ ವಯಸ್ಸಿನಲ್ಲಿ. ನನ್ನ ಮಾಸ್ಟರ್ಸ್(Masters) ಅನ್ನು ಮುಂದುವರಿಸುವುದು ಈ ಜರ್ನಿಯ ಉದ್ದೇಶ. ನಮ್ಮೂರಲ್ಲಿ ಹುಡುಗಿಯರು ಬೈಕ್ (Bike) ಓಡಿಸುತ್ತಿರಲಿಲ್ಲ. ಆದರೆ ಇಲ್ಲಿ ಹುಡುಗಿಯರು, ಹೆಂಗಸರು ತಮ್ಮಷ್ಟದಂತೆ ಬೈಕಿಂಗ್ ಮಾಡುತ್ತಿದ್ದರು. ಇದನ್ನು ನೋಡಿ ಅದೆಲ್ಲಿತ್ತೋ ಆಸೆ, ನನಗೂ ಬೈಕಿಂಗ್ ಕಲಿಯಬೇಕು ಅಂತ ತೀವ್ರವಾಗಿ ಅನಿಸತೊಡಗಿತು. ಹಾಗಾಗಿ ನನ್ನ ಸ್ನೇಹಿತನಿಗೆ ಕಲಿಸಲು ಕೇಳಿದೆ.

ಕಾರಿನೊಳಗೆ ತಲೆ ಹಾಕಿ ಮಹಿಳೆಗೆ ಕುಕ್ಕಲು ಶುರು ಮಾಡಿದ ಉಷ್ಟ್ರ ಪಕ್ಷಿ: ವಿಡಿಯೋ ವೈರಲ್

ದ್ವಿಚಕ್ರವಾಹನದ ಸವಾರಿ ನನಗೆ ನೀಡಿದ ಸ್ವಾತಂತ್ರ್ಯ ಮಾತುಗಳಲ್ಲಿ ವಿವರಿಸಲಾಗದ್ದು. ಗಾಳಿಗೆ ಕೂದಲು ಹಾರಾಡುತ್ತಿರುವಾಗ ನಾನು ಬೇರೇ ಲೋಕದಲ್ಲಿದ್ದ ಹಾಗೆ ಭಾಸವಾಗುತ್ತಿತ್ತು. ಈ ಸ್ವತಂತ್ರ್ಯ ಭಾವನೆಯನ್ನು ಪ್ರೀತಿಸುತ್ತಿದ್ದೆ. ನನಗೆ ಬೈಕಿಂಗ್ ಬಹಳ ಇಷ್ಟವಾಯ್ತು. ಒಂದು ವರ್ಷದ ನಂತರ, ಒಂದಿಷ್ಟು ಹಣ ಉಳಿತಾಯ ಮಾಡಿ ಸ್ವಂತ ಬೈಕು ಖರೀದಿಸಿದೆ. ಆದರೆ ಬೈಕ್ ಕಲಿತೆ, ಬೈಕಿಂಗ್ ಮಾಡೋದು ಗೊತ್ತಿತ್ತು. ಆದರೆ ಜೊತೆ ಬೇಕಲ್ವಾ? ಭಾರತದಲ್ಲಿ ಮಹಿಳಾ ಬೈಕರ್(Biker) ಗ್ರೂಪ್‌ಗಳು ಸಾಕಷ್ಟಿರಲಿಲ್ಲ. ಬೈಕರ್‌ಗಳಾಗಿದ್ದರೂ ಅವರು ಸಾಹಸಕ್ಕಾಗಿ ಬೈಕ್ ಸವಾರಿ ಮಾಡುತ್ತಿರಲಿಲ್ಲ. ಆ ಹೊತ್ತಿಗೆ ಸೋಷಿಯಲ್ ಮೀಡಿಯಾಗಳ ಚಟುವಟಿಕೆ ಗರಿಗೆದರಿತ್ತು. ನಾನು ಅದರ ಲಾಭವನ್ನು ಪಡೆದುಕೊಂಡೆ ಮತ್ತು ಮಹಿಳಾ ಬೈಕರ್‌ಗಳ ಗ್ರೂಪ್ ನಿರ್ಮಿಸಿದೆ!

ಕೆಲವು ಸ್ಟ್ರಾಂಗ್(Strong) ಬೈಕರ್ ಮಹಿಳೆಯರನ್ನು ಭೇಟಿಯಾದೆ, ದೇಶಾದ್ಯಂತ ಅನೇಕ ಪ್ರವಾಸ(Travels)ಗಳನ್ನು ಮಾಡಿದ್ದೇನೆ ಮತ್ತು ಭಾರತದ ಬಗ್ಗೆ ತುಂಬಾ ಕಲಿತಿದ್ದೇನೆ. ಇದಾಗಿ ನನ್ನ ಪಿಎಚ್‌ಡಿ(Phd) ಮುಗಿದಾಗ ಯಾವ ಫೀಲ್ಡ್ ಆಯ್ಕೆ ಮಾಡೋದು ಅನ್ನೋ ಗೊಂದಲವಿತ್ತು. ಆದರೆ ನನ್ನ ಆಯ್ಕೆ ನನ್ನಿಷ್ಟದ ಬೈಕಿಂಗೇ ಆಗಿತ್ತು. ನನ್ನ 32 ನೇ ವಯಸ್ಸಿನಲ್ಲಿ, ನಾನು 7 ಖಂಡ(Continents) ಗಳಲ್ಲಿ ಬೈಕ್ ಸವಾರಿ ಮಾಡುವ ಹೊಸ ಕನಸು ಕಂಡೆ.

ಮಹಿಳೆಯರು ಗೂಗಲ್‌ನಲ್ಲಿ ಗಪ್‌ಚುಪ್ ಆಗಿ ಹುಡುಗರ ಬಗ್ಗೆ ಇಂಥದ್ದನ್ನೆಲ್ಲಾ ಸರ್ಚ್ ಮಾಡ್ತಾರಂತೆ !

ಆದರೆ ನಾನು ಅದೇ ಸಮಯದಲ್ಲಿ ಅಲೆಕ್ಸ್‌ನನ್ನು ಭೇಟಿಯಾಗಿದ್ದೆ. ನಮ್ಮಿಬ್ಬರ ನಡುವೆ ಸ್ನೇಹ, ಪ್ರೀತಿ ಬೆಳೆದಿತ್ತು. ನಾನು ಈ ಸಾಹಸಕ್ಕೆ ಹೋದರೆ, ನಮ್ಮ ಸಂಬಂಧವು ಹದಗೆಡುತ್ತದೆ ಎಂದು ನನಗೆ ತಿಳಿದಿತ್ತು. ಅನಿವಾರ್ಯವಾಗಿ ಅವನಿಗೆ ವಿದಾಯ ಹೇಳಿದೆ. ಆದರೆ ಪ್ರೀತಿ ದೊಡ್ಡದು. ಅವನು ನನ್ನನ್ನು ಬಿಡಲಿಲ್ಲ.

ನಾನು ಇದ್ದ ದೇಶದಲ್ಲಿ ಪ್ರತಿ ತಿಂಗಳು ನನ್ನನ್ನು ಭೇಟಿ ಮಾಡುತ್ತಿದ್ದ. ನಮ್ಮಿಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಯಿತು. ನಾವಿಬ್ಬರೂ ಮದುವೆಯಾಗಲು ನಿರ್ಧರಿಸಿದೆವು. ಮದುವೆ ನಮ್ಮಿಬ್ಬರನ್ನು ಇನ್ನಷ್ಟು ಹತ್ತಿರ ತಂದಿತು. ಸಂಗಾತಿಯ ಜೊತೆಯಲ್ಲಿ ನಾನು ಎಷ್ಟು ಸಂತೋಷಪಟ್ಟೆನೋ.. ಇನ್ನೊಂದೆಡೆ ನಾನು ನನ್ನ ಪ್ರಯಾಣವನ್ನು ಮುಂದುವರಿಸಬೇಕಾಗಿತ್ತು. ಹಾಗಾಗಿ, ನಮ್ಮ ಮದುವೆಯ ಮರುದಿನ ನಾನು ಮತ್ತೆ ಹೊರಟೆ. ನಾನು ನನ್ನ ಪಟ್ಟಿಯಿಂದ ಸ್ಥಳಗಳನ್ನು ಟಿಕ್ ಮಾಡುತ್ತಲೇ ಇದ್ದಾಗ ಅಲೆಕ್ಸ್ ನನ್ನನ್ನು ಭೇಟಿ ಮಾಡುವುದನ್ನು ಮುಂದುವರೆಸಿದನು. ನಾನು ಅಂಟಾರ್ಟಿಕಾ(Antarctica)ಕ್ಕೆ ಸಹ ಪ್ರಯಾಣಿಸಿದೆ.

ಅಪ್ಪ ಗಾರ್ಡ್, ಮಗ ಟಿಟಿ: ಪಯಣಿಸುವಾಗ ಸಿಕ್ಕ ಅಪ್ಪ ಮಗನ ಫೋಟೋ ವೈರಲ್

ಆಗ ನಾನು ಪಟ್ಟಿ ಮಾಡಿಕೊಂಡಿದ್ದ 6 ನೇ ಖಂಡವಾದ ಆಫ್ರಿಕಾ(Africa)ದಲ್ಲಿದ್ದೆ. ಆಗ ನಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತಾಯ್ತು. ಸುದ್ದಿ ತಿಳಿದಷ್ಟು ಖುಷಿಯಾಯ್ತು, ಆದರೆ ಕವಲುದಾರಿಯಲ್ಲಿದ್ದೆ – ಇಷ್ಟು ದೂರ ಬಂದಿದ್ದೆ, ಕನಸನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ.

ಆಫ್ರಿಕಾದ ಹಳ್ಳಿಗಳಲ್ಲಿ ಹೆಂಗಸರು ಮಕ್ಕಳನ್ನು ಹೊತ್ತುಕೊಂಡೆ ಕುಣಿದು ಕುಪ್ಪಳಿಸುತ್ತಾ, ಕೆಲಸ ಮಾಡುತ್ತಾ, ಪ್ರಯಾಣಿಸುವುದನ್ನು ನೋಡಿ, ಅವರಿಂದ ಸ್ಫೂರ್ತಿ ಪಡೆದು ನನ್ನ ಹೊಟ್ಟೆಯನ್ನು ಉಜ್ಜಿಕೊಂಡು ಹೇಳಿದೆ, 'ನಾವೂ ಇದನ್ನು ಮಾಡಬಹುದು!'

ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿದ ನಂತರ, ನನ್ನ ಪ್ರವಾಸವನ್ನು ಮುಂದುವರಿಸಲು ನಾನು ನಿರ್ಧರಿಸಿದೆ. ನಾನು ನನ್ನ ಆಹಾರಕ್ರಮವನ್ನು ಬದಲಾಯಿಸಿದೆ, ನನ್ನ ಮಾರ್ಗಗಳನ್ನು ಕಡಿಮೆ ಮಾಡಿದೆ ಮತ್ತು ನನ್ನ ವೇಗವನ್ನು ಕಡಿಮೆ ಮಾಡಿದೆ, ಆದರೆ ನಾನು ಮುಂದುವರಿಯುತ್ತಿದ್ದೆ! ಅಲೆಕ್ಸ್ ನನ್ನನ್ನು ಭೇಟಿ ಮಾಡುವುದನ್ನು ಮುಂದುವರೆಸಿದ, ಅವರು ನಾನು ಯಾವ ನಗರದಲ್ಲಿದ್ದರೂ ನನ್ನ ಚೆಕಪ್‌ ಗಳಿಗೆ ಬುಕಿಂಗ್ ಮಾಡುತ್ತಿದ್ದ. ಪ್ರತಿ ತಿಂಗಳು ಅವಶ್ಯಕಾಗಿದ್ದ ಮಿಟಮಿನ್ ಮಾತ್ರೆ, ಉತ್ತಮ ಆಹಾರ ಇತ್ಯಾದಿಗಳನ್ನು ನನಗೆ ತರುತ್ತಿದ್ದ. ವಾಕರಿಕೆ ನನಗೆ ಸ್ವಲ್ಪ ಅನಾನುಕೂಲವನ್ನುಂಟುಮಾಡಿತು. ಆದರೆ ನನ್ನ ಗುರಿ ಸ್ಪಷ್ಟವಿತ್ತು. ಗರ್ಭಧಾರಣೆಯ 6 ತಿಂಗಳನ್ನು ನಾನು ಪ್ರವಾಸದಲ್ಲಿ ಕಳೆದೆ!

 

ನಾನು ಅಂತಿಮವಾಗಿ ದೆಹಲಿಗೆ ಹಿಂತಿರುಗಿದಾಗ, ನನ್ನ ಮಗುವಿಗೆ ಆಗಮನಕ್ಕೆ ಸಿದ್ಧತೆ ಮಾಡತೊಡಗಿದೆ. 6ನೇ ನವೆಂಬರ್ 2018 ರಂದು, ಅಲೆಕ್ಸ್ ಮತ್ತು ನಾನು ಮಗಳು ನಫಾಸ್ ಅವರನ್ನು ಜಗತ್ತಿಗೆ ಸ್ವಾಗತಿಸಿದೆವು.

ನಫಾಸ್‌ಗೆ ಈಗ 3 ವರ್ಷ. ಅವಳು ಈಗಾಗಲೇ ಬೈಕ್‌ಗಳನ್ನು ಪ್ರೀತಿಸುತ್ತಾಳೆ. ನಾವು ಒಟ್ಟಿಗೆ ಸಾಹಸಗಳನ್ನು ಮುಂದುವರಿಸುವ ಕನಸಲ್ಲಿದ್ದೇವೆ.

Latest Videos
Follow Us:
Download App:
  • android
  • ios