Asianet Suvarna News Asianet Suvarna News

ಅಪ್ಪ ಗಾರ್ಡ್, ಮಗ ಟಿಟಿ: ಪಯಣಿಸುವಾಗ ಸಿಕ್ಕ ಅಪ್ಪ ಮಗನ ಫೋಟೋ ವೈರಲ್

ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಪ್ಪ ಹಾಗೂ ಅದೇ ಇಲಾಖೆಯಲ್ಲಿ ಟಿಟಿಯಾಗಿ ಕೆಲಸ ಮಾಡುವ ಮಗ. ಈ ಇಬ್ಬರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿಈಗ ವೈರಲ್ ಆಗಿದೆ.

photo of father and son both works Indian Railway goes viral akb
Author
Bangalore, First Published Jun 17, 2022, 10:05 AM IST

ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಪೇದೆಯೊಬ್ಬರು ತಮ್ಮದೇ ಇಲಾಖೆಯಲ್ಲಿ ತಮಗಿಂತ ಉನ್ನತ ಸ್ಥಾನಕ್ಕೇರಿದ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡುತ್ತಿರುವ ಫೋಟೋ ಹಾಗೂ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ತನಗಿಂತ ಉನ್ನತ ಸ್ಥಾನಕ್ಕೇರಿದ ಮಗಳಿಗೆ ಅಪ್ಪ ಎದೆಯುಬ್ಬಿಸಿ ಸೆಲ್ಯೂಟ್ ಮಾಡುತ್ತಿರುವ ಫೋಟೋ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗೇಯೇ ಈಗ ರೈಲ್ವೆ ಇಲಾಖೆಯಲ್ಲಿ ಅಪ್ಪನಿಗಿಂತ ಉನ್ನತ ಸ್ಥಾನಕ್ಕೆ ಮಗನೋರ್ವ ಏರಿದ್ದಾನೆ. ಅವರಿಬ್ಬರ ಫೋಟೋ ವೈರಲ್ ಆಗಿದೆ.

ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಎಲ್ಲವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ತಮಗಿಂತ ಉನ್ನತ ಸ್ಥಾನದಲ್ಲಿ ತಮ್ಮ ಮಕ್ಕಳು ಇರಬೇಕು ಎಂಬ ಆಸೆಯಿಂದ ಪೋಷಕರು ತಮ್ಮಿಂದ ಸಾಧ್ಯವಾಗುವ ಎಲ್ಲಾ ನೆರವನ್ನು ನೀಡುತ್ತಾರೆ. ಈ ಎಲ್ಲಾ ಬೆಂಬಲ ಪಡೆದ ಕೆಲ ಮಕ್ಕಳು ತಮ್ಮ ಪೋಷಕರ ಆಸೆಯನ್ನು ಈಡೇರಿಸಿ ಅವರು ಹೆಮ್ಮೆಯಿಂದ ನಲಿಯುವಂತೆ ಮಾಡುತ್ತದೆ. ಹಾಗೆಯೇ ಇಲ್ಲೊಂಡು ಕಡೆ ಒಂದೇ ಇಲಾಖೆಯಲ್ಲಿ ಅಪ್ಪನಿಗಿಂತ ಮಗ ಉನ್ನತ ಸ್ಥಾನಕ್ಕೇರಿದ್ದಾನೆ. ಇವರಿಬ್ಬರ ಒಂದು ಸೆಲ್ಫಿ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ಮಗ ಭಾರತೀಯ ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಟಿಕೆಟ್‌ ಪರೀಕ್ಷಕ (Travelling Ticket Examiner) ಅಪ್ಪ ಅದೇ ಇಲಾಖೆಯಲ್ಲಿ ಓರ್ವ ಸಾಮಾನ್ಯ ಗಾರ್ಡ್‌, ಎರಡು ಬೇರೆ ಬೇರೆ ರೈಲುಗಳಲ್ಲಿರುವ  ಇವರು ರೈಲು ಪಾಸಾಗುವ ಸಮಯದಲ್ಲಿ ಕ್ಲಿಕ್ಕಿಸಿದ ಸೆಲ್ಫಿಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಸೆಕೆಂಡ್‌ಹ್ಯಾಂಡ್ ಸೈಕಲ್ ತಂದ ಅಪ್ಪ: ಮಗಳ ಈ ಖುಷಿಗೆ ಸರಿಸಾಟಿ ಎಲ್ಲಿ: ವಿಡಿಯೋ

ಸುರೇಶ್‌ ಕುಮಾರ್ (Suresh Kumar) ಎಂಬುವವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಪ ರೈಲೆಯಲ್ಲಿ ಗಾರ್ಡ್ ಆಗಿದ್ದರೆ ಮಗ ಟಿಕೆಟ್ ಪರೀಕ್ಷಕ ಆಗಿದ್ದು, ಕರ್ತವ್ಯದ ವೇಳೆ ರೈಲು ಹಾದು ಹೋಗುವ ಸಮಯದಲ್ಲಿ ಮಗ ಆ ಕ್ಷಣವನ್ನು ಕ್ಲಿಕ್‌ ಮಾಡಲು ನಿರ್ಧರಿಸಿದ ಎಂದು ಬರೆದುಕೊಂಡಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಫೋಟೋವನ್ನು ಈ ಅಪ್ಪ ಮಗ ಸದಾಕಾಲ ನೆನಪು ಮಾಡಿಕೊಳ್ಳಲಿದ್ದಾರೆ ಎಂದು ಓರ್ವ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಮಕ್ಕಳು ಸಮಾಜದಲ್ಲಿ ತನಗಿಂತ ಉನ್ನತ ಸ್ಥಾನ, ಹೆಚ್ಚಿನ ಗೌರವ ಗಳಿಸಿದಾಗಲೇ ತಂದೆಗೆ ಸಮಾಧಾನ. ಎದೆಯುದ್ದ ಬೆಳೆದ ಮಗ ಅಥವಾ ಮಗಳು ಸಾಧನೆ ಮಾಡಿದಾಗ ತಂದೆಯ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಸಮಾಜದಲ್ಲಿ ಅವರ ಗೌರವ ಇನ್ನಷ್ಟು ಹೆಚ್ಚುತ್ತದೆ. ಇಂತಹ ಘಟನೆ ಕಳೆದ ವರ್ಷ ನವಂಬರ್‌ನಲ್ಲಿ ಉತ್ತರಪ್ರದೇಶದಲ್ಲಿ ನಡೆದಿದೆ. ಐಟಿಬಿಪಿಯಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (Deputy inspector General) ಆಗಿ ಕಾರ್ಯನಿರ್ವಹಿಸುತ್ತಿರುವ ಎಪಿಎಸ್ ನಿಂಬಾಡಿಯಾ (APS Nimbadia) ಅವರ ಪುತ್ರಿ ಅಪೇಕ್ಷಾ ನಿಂಬಾಡಿಯಾ ( Apeksha Nimbadia) ತಮ್ಮ ತಂದೆಗೆ ಸೆಲ್ಯೂಟ್‌ ಮಾಡಿರುವ ಚಿತ್ರ  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು, ಭಾವನಾತ್ಮಕ ಬಂಧಕ್ಕೆ ಕಣ್ಣೀರಾದ ಜನ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ (Moradabad) ಡಾ ಬಿಆರ್ ಅಂಬೇಡ್ಕರ್ ಪೊಲೀಸ್ ಅಕಾಡೆಮಿಯಲ್ಲಿ (Dr. B R Ambdekar Police Academy) ಪದವಿ ಪಡೆದ ಅಪೇಕ್ಷಾ ಪಾಸಿಂಗ್‌ ಔಟ್‌ ಪರೇಡ್‌ನಲ್ಲಿ (Passing Out Parade) ಭಾಗವಹಿಸಿದ ನಂತರ ಈ ಫೋಟೋ ತೆಗೆಯಲಾಗಿತ್ತು. ಪೋಲಿಸ್ ಸಮವಸ್ತ್ರವನ್ನು ಧರಿಸಿರುವ ಮಗಳು ತನ್ನ ಅಧಿಕಾರಿ ತಂದೆಗೆ ಸೆಲ್ಯೂಟ್ ಮಾಡುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ‌ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೊಲೀಸ್ (ITBP) ಹಂಚಿಕೊಂಡಿದ್ದಾರೆ. ಹೆಮ್ಮೆಯ ತಂದೆ ಅವಳ ಸೆಲ್ಯೂಟ್ ಸ್ವೀಕರಿಸಿ - ಪ್ರತಿಯಾಗಿ ಸೆಲ್ಯೂಟ್ ಮಾಡಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. "ಹೆಮ್ಮೆಯ ತಂದೆ ಹೆಮ್ಮೆಯ ಮಗಳಿಂದ ಸೆಲ್ಯೂಟ್ ಪಡೆಯುತ್ತಿದ್ದಾರೆ" ಎಂದು ಐಟಿಬಿಪಿ ಪೋಸ್ಟ್ ಮಾಡಿದೆ.  
 

Follow Us:
Download App:
  • android
  • ios