Asianet Suvarna News Asianet Suvarna News

55 ವರ್ಷದ ಈ ಮಹಿಳೆಗೆ ಶಾಪವಾಯ್ತು ಗ್ಲಾಮರ್! ದುಃಖ ತೋಡಿಕೊಂಡ ಆಂಟಿ

ಚೆಂದ ಇದ್ರೆ ಜನ ಮುತ್ತಿಕೊಳ್ತಾರೆ ಎನ್ನುವ ಕಾರಣಕ್ಕೆ ಜನ ವರ್ಕ್ ಔಟ್, ಡಯಟ್, ಮೇಕಪ್ ಅಂತಾ ಏನೇನೋ ಕಸರತ್ತು ಮಾಡ್ತಾರೆ. ಪಾಪ ಈಕೆಗೆ ಚೆಂದವಿರೋದೇ ಕಷ್ಟತಂದಿದೆ. ತನ್ನ ಸೌಂದರ್ಯ, ಗ್ಲಾಮರ್ ಬಗ್ಗೆ ಈಕೆ ಹೇಳಿದ್ದೇನು ಗೊತ್ತಾ? 
 

Being Beautiful Is A Curse Fifty Five Year Old Woman Has No Friends And Relatives roo
Author
First Published Dec 1, 2023, 11:50 AM IST

ಸೌಂದರ್ಯ ಬಹಳ ಮುಖ್ಯ ಅಂತಾ ಬಹುತೇಕರು ಭಾವಿಸಿದ್ದಾರೆ. ನಾವು ನೋಡೋಕೆ ಸುಂದರವಾಗಿಲ್ಲ, ಆಕರ್ಷಕವಾಗಿಲ್ಲ ಹಾಗಾಗಿ ನಮಗೆ ಒಳ್ಳೆ ಸ್ನೇಹಿತರು ಸಿಗ್ತಿಲ್ಲ ಎಂದು ಬೇಸರಪಡುವವರು ಅನೇಕ ಮಂದಿ. ಮನಸ್ಸು ನೋಡದೆ, ಆಕರ್ಷಕವಾಗಿರುವ, ದುಬಾರಿ ಹಾಗೂ ಸ್ಟೈಲಿಶ್ ಬಟ್ಟೆ ಧರಿಸುವ, ಅಂದವಾಗಿರುವ ಜನರಿಗೆ ಸಾಮಾನ್ಯರು ಬೇಗ ಮರುಳಾಗ್ತಾರೆ ಕೂಡ. ಇದೇ ಕಾರಣಕ್ಕೆ ಜನರು ಸೌಂದರ್ಯಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ನೀಡ್ತಾರೆ. ಆದ್ರೆ ಕೆಲವರಿಗೆ ಅವರ ಸೌಂದರ್ಯವೇ ಮುಳುವಾಗುತ್ತದೆ. ಅತೀ ಆಕರ್ಷಕ ಹಾಗೂ ಅತಿ ಸ್ಟೈಲಿಶ್ ಈ ಮಹಿಳೆಗೆ ಶಾಪವಾಗಿದೆ. 55 ವರ್ಷದ ಮಹಿಳೆ ತನ್ನ ಸೌಂದರ್ಯವೇ ತನಗೆ ಮುಳುವಾಗಿದೆ ಎಂದಿದ್ದಾಳೆ.  ಅಷ್ಟಕ್ಕೂ ಆಕೆ ಯಾರು, ಅವಳ ಸಮಸ್ಯೆ ಏನು ಗೊತ್ತಾ?.

ಆ ಮಹಿಳೆ ಹೆಸರು ಫ್ರಾನ್ ಸಾಯರ್. ಫ್ರಾನ್ ತಮ್ಮ ಅಂದ ಹಾಗೂ ಗ್ಲಾಮರ್ (Glamour) ನನಗೆ ಶಾಪ ಎನ್ನುತ್ತಾಳೆ. ಆಕೆಯನ್ನು ನೋಡಿದ್ರೆ ಎಲ್ಲ ಮಹಿಳೆಯರು ಅಸೂಯೆಪಡ್ತಾರಂತೆ. ಆಕೆ ಜೊತೆ ಸ್ನೇಹ (Friendship) ಬೆಳೆಸೋದಿರಲಿ, ಮಾತನಾಡಲೂ ಹಿಂದೇಟು ಹಾಕ್ತಾರಂತೆ.

ಮಗನ ಶಾಲೆಗೆ ಎಂಟ್ರಿ ಇಲ್ಲ: ಆಕೆಯ ಸೌಂದರ್ಯ (Beauty) ದ ಬಗ್ಗೆ ಜನರು ಎಷ್ಟು ಅಸೂಯೆಪಡ್ತಾರೆ ಎಂಬುದನ್ನು ಫ್ರಾನ್ ಉದಾಹರಣೆ ಸಹಿತ ವಿವರಿಸಿದ್ದಾಳೆ. ಆಕೆಯ ಮಗನ ಪ್ರಾಂಶುಪಾಲರು ಒಂದು ದಿನ ಫ್ರಾನ್ ಕರೆದು, ಸ್ಕೂಲ್ ಒಳಗೆ ನಿಮ್ಮ ವಾಹನ ಪಾರ್ಕ್ ಮಾಡ್ಬೇಡಿ, ನೀವು ಸ್ಕೂಲ್ ಹೊರಗೆ ನಿಲ್ಲಿ ಎಂದಿದ್ದರಂತೆ. ನಿಮ್ಮಿಂದ ಬೇರೆ ಮಹಿಳೆಯರಿಗೆ ತೊಂದರೆಯಾಗುತ್ತದೆ ಎಂದು ವಿನಂತಿ ಮಾಡಿದ್ದರಂತೆ. ನನ್ನ ಸೌಂದರ್ಯ ನೋಡಿ ಮಹಿಳೆಯರು ಅಸೂಯೆಪಡುವುದಲ್ಲದೆ ನನ್ನನ್ನು ನನ್ನ ಗ್ಲಾಮರ್ ನಿಂದ ಜಡ್ಜ್ ಮಾಡ್ತಾರೆ ಎನ್ನುತ್ತಾಳೆ ಫ್ರಾನ್.

ಪ್ರೀತಿ, ಗೌರವ ಹೊರತು ಪಡಿಸಿ ನೀವು ಲವ್ವಲ್ಲಿ ಬಿದ್ದ ವ್ಯಕ್ತಿಯಿಂದ ನಿಮಗೆ ಹೀಗ್ ಫೀಲ್ ಆಗ್ತಿದ್ಯಾ?

ಫ್ರಾನ್ ಗೆ ಒಬ್ಬರೂ ಮಹಿಳಾ ಸ್ನೇಹಿತೆಯರಿಲ್ಲ. ತುಂಬಾ ಆತ್ಮವಿಶ್ವಾಸದಿಂದಿರುವ ಫ್ರಾನ್ ಗೆ ಒಬ್ಬ ಮಹಿಳೆಯಾದ್ರೂ ತನ್ನ ಸ್ನೇಹ ಬೆಳೆಸಲಿ ಎನ್ನುವ ಆಸೆಯಿದೆ. ಅನೇಕ ಬಾರಿ ಮಹಿಳೆಯರನ್ನು ಮಾತನಾಡಿಸುವ, ಸ್ನೇಹ ಬೆಳೆಸುವ ಪ್ರಯತ್ನ ನಡೆದಿದೆ. ಆದ್ರೆ ಅದ್ರಲ್ಲಿ ವಿಫಲತೆ ಕಂಡಿದ್ದೇನೆ ಎನ್ನುತ್ತಾಳೆ ಫ್ರಾನ್. ಬರೀ ಮಹಿಳೆಯರಲ್ಲ ಎಲ್ಲರೂ ನನ್ನನ್ನು ಜಡ್ಜ್ ಮಾಡ್ತಾರೆ ಎನ್ನುತಾಳೆ ಫ್ರಾನ್. ಪ್ರತಿಯೊಬ್ಬರೂ ಆಕೆಯನ್ನು ನೋಡುವ ದೃಷ್ಟಿ ಭಿನ್ನವಾಗಿರುತ್ತದೆಯಂತೆ. ಸುಂದರವಾಗಿರೋದು, ಗ್ಲಾಮರಸ್ ಆಗಿರೋದು ಬಹಳ ಕಷ್ಟ ಎನ್ನುತ್ತಾಳೆ ಫ್ರಾನ್.  

ಕೇವಲ 18 ರಿಂದ 21 ವರ್ಷದ ಹುಡುಗರು ಆಕೆಯನ್ನು ಇಷ್ಟಪಡ್ತಾರಂತೆ. ಕೆಲವರು ಸ್ನೇಹ ಬೆಳೆಸಲು ಬಂದ್ರೆ ಮತ್ತೆ ಕೆಲವರು ಪ್ರಫೋಸ್ ಮಾಡ್ತಾರೆ. ಆದರೆ ಯಾರೂ ಸೂಕ್ತರಲ್ಲ ಎನ್ನುತ್ತಾಳೆ ಫ್ರಾನ್. ಗ್ಲಾಮರಸ್ ನಿಂದಲೇ ಹಣ ಗಳಿಸಿದ ಫ್ರಾನ್ : ಸೌಂದರ್ಯ, ಗ್ಲಾಮರಸ್ ಜೊತೆ ಫ್ರಾನ್ ಬುದ್ಧಿವಂತೆಯೂ ಹೌದು. ತನ್ನನ್ನು ನೋಡಿ ಜನರು ಅಸೂಯೆಪಡ್ತಾರೆ ಅಂದ್ರೆ ನಾನು ಚೆನ್ನಾಗಿದ್ದೇನೆ ಎಂಬುದನ್ನು ಅರಿತಿರುವ ಫ್ರಾನ್ ಇದನ್ನು ಹಣಗಳಿಕೆಗೆ ಬಳಸಿಕೊಂಡಿದ್ದಳು. ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡಿದ್ದಲ್ಲದೆ ಅದನ್ನು ಚಾರಿಟಿ ಟ್ರಸ್ಟ್ ಗೆ ನೀಡಿದ್ದಳು. 

ನಟಿ ಅಮೃತಾ ರಾಮಮೂರ್ತಿಯ 125 ವರ್ಷ ಇತಿಹಾಸದ ಅಜ್ಜನ ಮನೆ ಹೀಗಿದೆ ನೋಡಿ...

ಬಹುಶಃ ನನ್ನ ಸೌಂದರ್ಯವು ಶಾಪವಾಗಿರಬಹುದು, ಆದರೆ : ನನ್ನ ಸೌಂದರ್ಯ ನನಗೆ ಶಾಪವಾಗಿರಬಹುದು ಆದ್ರೆ ಅದು ಆತ್ಮವಿಶ್ವಾಸದ ವಿಷ್ಯ ಎಂದು ಫ್ರಾನ್ ಹೇಳುತ್ತಾಳೆ. ಆಕೆ ಗ್ಲಾಮರಸ್ ಫೋಟೋ ನೋಡಿದ ಅನೇಕ ಮಹಿಳೆಯರು, ಈ ವಯಸ್ಸಿನಲ್ಲಿ ಇಂಥ ಕೆಲಸ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರಂತೆ. ಫ್ರಾನ್ ತಾಯಿ ಆಕೆ ಹಿಂದೆ ನಿಂತಿದ್ದಾರಂತೆ. ಜನರು ನಲವತ್ತನೇ ವಯಸ್ಸಿನಲ್ಲೇ ಮಾಡಲು ಸಾಧ್ಯವಾಗದ್ದನ್ನು ನೀನು ಐವತ್ತನೇ ವಯಸ್ಸಿನಲ್ಲಿ ಮಾಡಿದ್ದೀಯಾ ಎಂದು ತಾಯಿ ಬೆನ್ನು ತಟ್ಟಿದ್ದಾಳೆ.  
 

Follow Us:
Download App:
  • android
  • ios