ಕಿರುತೆರೆ ಕಲಾವಿದೆ ಅಮೃತಾ ರಾಮಮೂರ್ತಿ ಅವರು 125 ವರ್ಷ ಇತಿಹಾಸ ಇರುವ ತಮ್ಮ ಅಜ್ಜನ ಮನೆಯನ್ನು ಪರಿಚಯಿಸಿದ್ದಾರೆ. ಅವರ ಅಜ್ಜನ ಮನೆ ಹೀಗಿದೆ ನೋಡಿ... 

 ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸ್ತಿದ್ದ ಅಮೃತಾ ರಾಮಮೂರ್ತಿ (Amrutha Ramamurthy) ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ. ಇದೀಗ ಅವರಿಬ್ಬರೂ ಧ್ರುತಿ ಎನ್ನುವ ಪುಟಾಣಿಯ ಪಾಲಕರೂ ಆಗಿದ್ದಾರೆ. ಇವರು ಧಾರಾವಾಹಿಗಳ ಜೊತೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ಅಪ್​ಡೇಟ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಮಗಳಿವೆ ಹೇರ್​ಕಟ್​ (Haircut) ಮಾಡಿಸೋ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಬಳೀಕ ಅಮ್ಮನ ಬಳಿ ಇರುವ ರೇಷ್ಮೆ ಸೀರೆಗಳ ಕುರಿತು ಮಾಹಿತಿ ನೀಡಿದ್ದರು. ಇದೀಗ ತಮ್ಮ 125 ವರ್ಷ ಹಳೆಯದಾಗಿರುವ ಅಜ್ಜನ ಮನೆಯ ಪರಿಚಯ ಮಾಡಿಸಿದ್ದಾರೆ.

ಉಡುಪಿ ಸಮೀಪದ ಮಟ್ಟು ಗ್ರಾಮದಲ್ಲಿರುವ ಅಜ್ಜನ ಮನೆಯನ್ನು ಪರಿಚಯಿಸಿದ್ದಾರೆ ಅಮೃತಾ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮನೆಗಳ ಒಳಗೆ ಪ್ರವೇಶಿಸುವಾಗ ಬಗ್ಗಿಯೇ ಪ್ರವೇಶಿಸಬೇಕಿತ್ತು. ಅದೇ ರೀತಿ ಅಮೃತಾ ಅವರ ಅಜ್ಜನ ಮನೆ ಕೂಡ ಇದೆ. ಅಲ್ಲೇ ಇರುವ ತಮ್ಮ ವಕೀಲ ಅಜ್ಜ ಸೇರಿದಂತೆ ಇತರ ಅಜ್ಜಂದಿರ ಫೋಟೋಗಳನ್ನು ಪರಿಚಯಿಸಿರುವ ನಟಿ, ಅನಂತಯ್ಯ ಅಜ್ಜ, ಹರಿದಾಸ ಅಜ್ಜ, ರಾಮಕೃಷ್ಣ, ಜ್ಯೋತಿರಾವ್ ಮುಂತಾದವರ ಪರಿಚಯ ಮಾಡಿಸಿದ್ದಾರೆ. ಇದಾದ ಬಳಿಕ ಚಾವಡಿ, ದೇವರ ಮನೆ, ಅಡುಗೆ ಮನೆಗಳನ್ನು ಪರಿಚಯ ಮಾಡಿದ್ದಾರೆ.

ರಾಮ್​ಗೆ ಸಿಹಿ ಕೊಟ್ಲು ಅಮೆರಿಕದಲ್ಲಿ ಅರಮನೆ ಕಟ್ಟೋ ಟಾಸ್ಕ್​! ಏನಪ್ಪಾ ಇದು?

ಹಿಂದಿನ ಕಾಲದಲ್ಲಿನ ಒಲೆಯ ಮೇಲಿನ ಅಡುಗೆಯ ಸವಿ ತಿಂದವರಷ್ಟೇ ಬಲ್ಲರು. ಈಗಲೂ ಕೆಲವು ಹಳ್ಳಿಗಳಲ್ಲಿ ಸೌದೆಯ ಮೇಲೆಯೇ ಅಡುಗೆ ಮಾಡಲಾಗುತ್ತದೆ. ಗ್ಯಾಸ್​ ಬಳಸಿ ಮಾಡುವ ಅಡುಗೆಗಿಂತ ಸೌದೆಯ ಮೇಲೆ ಮಾಡಿದ ಅಡುಗೆಯ ರುಚಿಯೇ ಹೆಚ್ಚು. ಇದೇ ಕಾರಣಕ್ಕೆ ಇದೀಗ ಮಹಾನಗರಗಳಲ್ಲಿಯೂ ಸೌದೆ ಒಲೆಗೆ ಡಿಮ್ಯಾಂಡ್​​ ಬರಲು ಶುರುವಾಗಿದೆ. ಮಾತ್ರವಲ್ಲದೇ ನಾನ್​ಸ್ಟಿಕ್​ಗಳ ಜಾಗದಲ್ಲಿ ಮತ್ತೆ ಹಳೆಯ ಕಾಲದ ಕಬ್ಬಿಣ ಜಾಗ ಪಡೆಯುತ್ತಿದೆ. ಕಾಲ ಬದಲಾದಂತೆ, ಹೊಸ ಹೊಸ ವಿಧಾನ ಬಂದರೂ ಅದು ಜನರಿಗೆ ಆರೋಗ್ಯಕ್ಕಿಂತ ಹೆಚ್ಚಿಗೆ ಅನಾರೋಗ್ಯವೇ ತಂದಿಡುವುದು ಇದೀಗ ಎಲ್ಲರಿಗೂ ತಿಳಿಯುತ್ತಾ ಬಂದಿದೆ. ಇದೇ ಕಾರಣಕ್ಕೆ ಮತ್ತೆ ಹಳೆಯ ಕಾಲದ ಮೊರೆ ಹೋಗುತ್ತಿದ್ದಾರೆ. 

ಹಳೆಯ ಕಾಲದ ವಸ್ತುಗಳು ಮನೆಯಲ್ಲಿ ಇದ್ದರೆ ಶ್ರೀಮಂತರು ಎನ್ನುವ ಕಾಲ ಮತ್ತೆ ಬರಲು ಶುರುವಾಗಿದೆ. ಅಮೃತಾ ಅವರು ಶತಮಾನದ ಹಿಂದಿನ ಹಳೆಯ ಕಾಲದ ಒಲೆ, ಭತ್ತ ಕುಟ್ಟುವ ಯಂತ್ರ, ಚಕ್ಕುಲಿ ಮಾಡುವ ಯಂತ್ರ, ಹಂಡೆ, ಮಣ್ಣಿನ ಗೋಡೆ, ಹಲವು ದಶಕಗಳ ಹಿಂದೆ ಇದ್ದ ಫ್ಯಾನ್​ಗಳ ಪರಿಚಯ ಮಾಡಿಸಿದ್ದಾರೆ. ನನಗೇನಾದ್ರೂ ಸಾಧ್ಯವಾಗಿದ್ದರೆ ಇಡೀ ಮನೆ ಶಿಫ್ಟ್​ ಮಾಡಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದಿದ್ದಾರೆ. ಬಹುಶಃ ಹಳ್ಳಿಯಲ್ಲಿರುವ ಅಜ್ಜನ ಮನೆಯನ್ನು ನೋಡಿದವರು ಪ್ರತಿಯೊಬ್ಬರು ಅಂದುಕೊಳ್ಳುವ ಮಾತೇ ಇದು ಎಂದು ಅಮೃತಾ ಅವರ ಈ ವಿಡಿಯೋಗೆ ಬಂದಿರುವ ಕಮೆಂಟ್​ಗಳನ್ನು ನೋಡಿದರೆ ತಿಳಿಯುತ್ತದೆ. ಅಜ್ಜನ ಮನೆಯ ಸವಿಯನ್ನು ಸವಿಯುತ್ತಿರುವ ನೀವೇ ಧನ್ಯ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. ತಮಗೂ ತಮ್ಮ ಅಜ್ಜ-ಅಜ್ಜಿಯ ಮನೆ ನೆನಪಾಯಿತು ಎನ್ನುತ್ತಿದ್ದಾರೆ. 

ಮೇಡಂ ನಿಮಗ್ಯಾಕೆ ರಾಮ್​ ಲವ್​ ಅರ್ಥ ಆಗ್ತಿಲ್ಲ? ರಾಮ್​ ಅವ್ರೇ, ಸೀತಾನೂ ಕೈ ಕೊಟ್ರೆ ಏನ್​ ಮಾಡ್ತೀರಾ?