ಹೆಚ್ಚು ಬ್ಯೂಟಿ ಪಾರ್ಲರ್‌ಗೆ ಹೋಗೋ ಹೆಣ್ಣಿಗೆ ಶಾಪ ತಟ್ಟುತ್ತೆ: ವಿವಾದವಾಯಿತು ಭೋಗೇಶ್ವರ್ ಬಾಬಾ ಹೇಳಿಕೆ
ಬಾಗೇಶ್ವರ್ ಬಾಬಾ ಉರ್ಫ್ ಧೀರೇಂದ್ರ ಶಾಸ್ತ್ರಿ ಒಂದಲ್ಲ ಒಂದು ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಮಹಿಳೆಯರು, ಅವರ ಉಡುಗೆ – ತೊಡುಗೆ ಬಗ್ಗೆಯೂ ಮಾತನಾಡುವ ಬಾಬಾ ಈಗ ಬ್ಯೂಟಿಪಾರ್ಲರ್ ಗೆ ಹೋಗುವ ಮಹಿಳೆಯರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ.
ಸದ್ಯ ಸುದ್ದಿಯಲ್ಲಿರುವ ವ್ಯಕ್ತಿಗಳಲ್ಲಿ ಬಾಗೇಶ್ವರ್ ಬಾಬಾ ಎಂದೇ ಖ್ಯಾತರಾಗಿರುವ ಧೀರೇಂದ್ರ ಶಾಸ್ತ್ರಿ ಕೂಡ ಒಬ್ಬರು. ಧೀರೇಂದ್ರ ಶಾಸ್ತ್ರಿ ತಮ್ಮ ವಿಚಿತ್ರ ಮತ್ತು ವಿವಾದಾತ್ಮಕ ಹೇಳಿಕೆಗಳಿಗಾಗಿ ಚರ್ಚೆಯಲ್ಲಿದ್ದಾರೆ. ಬಾಗೇಶ್ವರ ಧಾಮದಲ್ಲಿ ಪ್ರವಚನ ನೀಡ್ತಿದ್ದ ಧೀರೇಂದ್ರ ಶಾಸ್ತ್ರಿ ಈಗ ದೇಶದ ಅನೇಕ ಭಾಗಗಳಿಗೆ ಸಂಚರಿಸಿ ಅಲ್ಲಿ ಪ್ರವಚನ ನೀಡ್ತಿದ್ದಾರೆ. ಅವರನ್ನು ನೋಡಲು ಭಕ್ತ ಸಾಗರವೇ ಹರಿದು ಬರ್ತಿದೆ.
ಧೀರೇಂದ್ರ ಶಾಸ್ತ್ರಿ (Dhirendra Shastri) ಕೆಲವೊಮ್ಮೆ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಿದ್ರೆ ಮತ್ತೆ ಕೆಲವೊಮ್ಮೆ ಭಗವದ್ಗೀತೆ (Bhagavad Gita) ಬಗ್ಗೆ ಮಾತನಾಡ್ತಾರೆ. ಅವರ ಕೆಲ ಮಾತುಗಳು ವಿವಾದಕ್ಕೆ ಕಾರಣವಾಗ್ತಿದೆ. ಈಗ ಬಾಗೇಶ್ವರ್ ಬಾಬಾ (Bageshwar Baba) ಮಹಿಳೆಯರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಜನರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದು, ಬಾಬಾ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ.
ರೇಷ್ಮೆಯಂಥ ಸಾಫ್ಟ್ ಕೂದಲು ಇರೋರ ಸ್ವಭಾವ ಎಂಥದ್ದು?
ಮಹಿಳೆಯರ ಬಗ್ಗೆ ಧೀರೇಂದ್ರ ಶಾಸ್ತ್ರಿ ಹೇಳಿದ್ದೇನು? : ಧೀರೇಂದ್ರ ಶಾಸ್ತ್ರಿಯವರ ವೈರಲ್ ವಿಡಿಯೋದಲ್ಲಿ ಅವರು ಮಹಿಳೆಯರ ಬಗ್ಗೆ ಮಾತನಾಡ್ತಿದ್ದಾರೆ. ಬ್ಯೂಟಿಪಾರ್ಲರ್ ಗೆ ಹೋಗುವ ಮಹಿಳೆಯರ ಬಗ್ಗೆ ಬಾಬಾ ಮಾತನಾಡ್ತಿರೋದನ್ನು ನೀವು ಕೇಳ್ಬಹುದು. ಮಹಿಳೆಯರ ಬಣ್ಣದ ಬಗ್ಗೆಯೂ ಕಮೆಂಟ್ ಮಾಡಿದ ಬಾಬಾ, ಮಹಿಳೆಯರನ್ನು ಬ್ಲಾಕ್ ಬೆರಿ ಹಣ್ಣು ಎಂದಿದ್ದಾರೆ. ಅತ್ಯಂತ ಹೆಚ್ಚು ಶಾಪ ಯಾರಿಗೆ ತಟ್ಟುತ್ತೆ ಅಂದ್ರೆ ಬ್ಯೂಟಿಪಾರ್ಲರ್ ನಲ್ಲಿರುವವರಿಗೆ. ಯಾಕೆಂದ್ರೆ ಅವರು ಬ್ಲಾಕ್ ಬೆರಿ ಮೇಲೆ ಬಲವಾದ ಪೌಂಡೇಶನ್ ಹಾಕುತ್ತಾರೆ ಎಂದು ಧೀರೇಂದ್ರ ಶಾಸ್ತ್ರಿ ಹೇಳಿದ್ದಾರೆ.
ಶಾಸ್ತ್ರಿ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಅವರ ಮೇಲೆ ಮುಗಿ ಬಿದ್ದಿದ್ದಾರೆ. ಹೆಣ್ಣು ಮಕ್ಕಳಿಗೆ ಧೀರೇಂದ್ರ ಶಾಸ್ತ್ರಿ ಅಪಮಾನ ಮಾಡಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. ಧೀರೇಂದ್ರ ಶಾಸ್ತ್ರಿ ಇದೇ ಮೊದಲಲ್ಲ ಈ ಹಿಂದೆಯೂ ಅನೇಕ ಬಾರಿ ತಮ್ಮ ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕೆಲ ದಿನಗಳ ಹಿಂದೆ ಹಣೆಗೆ ಸಿಂಧೂರ ಹಚ್ಚಿಕೊಳ್ಳದ ಹೆಂಗಸರು ಖಾಲಿ ಪ್ಲಾಟ್ ಇದ್ದಂತೆ ಎಂದು ಧೀರೇಂದ್ರ ಶಾಸ್ತ್ರಿ ಹೇಳಿದ್ದರು. ಈ ವೀಡಿಯೋ ಬಗ್ಗೆ ಸಾಕಷ್ಟು ವಿವಾದವೂ ಆಗಿತ್ತು.
ಶೆಲ್ ಇಂಡಿಯಾಕ್ಕೆ ಮಹಿಳಾ ಸಾರಥ್ಯ; ರಾಷ್ಟ್ರೀಯ ಮುಖ್ಯಸ್ಥೆಯಾಗಿ ಮಾನ್ಸಿ ಮದನ್ ತ್ರಿಪಾಠಿ ನೇಮಕ
ಪರೀಕ್ಷೆಯಲ್ಲಿ ಈ ಮಂತ್ರ ಪಠಿಸಲು ಸಲಹೆ : ಪ್ರವಚನದ ವೇಳೆ ಧೀರೇಂದ್ರ ಶಾಸ್ತ್ರಿ ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ನಡೆಸುತ್ತಾರೆ. ಬಾಲಕಿಯೊಬ್ಬಳು ಧೀರೇಂದ್ರ ಶಾಸ್ತ್ರಿಯವರಿಗೆ ಪರೀಕ್ಷೆ ಪಾಸ್ ಆಗಲು ಯಾವ ಮಂತ್ರ ಪಠಿಸಬೇಕು ಎಂದು ಕೇಳಿದ್ದಳು. ಹನುಮಾನ ಚಾಲೀಸಾ ದೊಡ್ಡದಿರುವ ಕಾರಣ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಳು. ಅದಕ್ಕೆ ಉತ್ತರ ನೀಡಿದ ಬಾಗೇಶ್ವರ್ ಬಾಬಾ, ಓಂ ನಮಃ ಶಿವಾಯ ಹೇಳುವಂತೆ ಸಲಹೆ ನೀಡಿದ್ದಾರೆ.
ಯಾರು ಬಾಗೇಶ್ವರ್ ಬಾಬಾ? : ಮಧ್ಯಪ್ರದೇಶದ ಬಾಗೇಶ್ವರ್ ಪೀಠದ ಪೀಠಾಧಿಪತಿ ಧೀರೇಂದ್ರ ಶಾಸ್ತ್ರಿ. ಸಾಮಾಜಿಕ ಜಾಲತಾಣ, ಟಿವಿಗಳಲ್ಲಿ ಸಾಕಷ್ಟು ಸದ್ದು ಮಾಡಿರುವ ಧೀರೇಂದ್ರ ಶಾಸ್ತ್ರಿ ಜನಿಸಿದ್ದು ಜುಲೈ 4, 1996ರಲ್ಲಿ. ಮಧ್ಯಪ್ರದೇಶದ ಗಢಾ ಗ್ರಾಮದ ನಿವಾಸಿ ಇವರು. ಧೀರೇಂದ್ರ ಶಾಸ್ತ್ರಿ ಬಿಎ ಪದವಿ ಪಡೆದಿದ್ದಾರೆ. ಬಡ ಕುಟುಂಬದಿಂದ ಬಂದವರು ಧೀರೇಂದ್ರ ಶಾಸ್ತ್ರಿ. ಅವರ ತಂದೆ, ಗ್ರಾಮದ ಜನರಿಗೆ ಸತ್ಯನಾರಾಯಣನ ಕಥೆ ಹೇಳಿ, ಜೀವನ ಸಾಗಿಸುತ್ತಿದ್ದರು. ಧೀರೇಂದ್ರ ಶಾಸ್ತ್ರಿ ತಮ್ಮ ಗುರುವಿನ ಸ್ಥಾನವನ್ನು ಅಜ್ಜನಿಗೆ ನೀಡ್ತಾರೆ. ಧೀರೇಂದ್ರ ಶಾಸ್ತ್ರಿ ಅಜ್ಜ ವಾರದಲ್ಲಿ ಎರಡು ದಿನ ದರ್ಬಾರ್ ನಡೆಸುತ್ತಿದ್ದರಂತೆ. ಅದ್ರಲ್ಲಿ ಧೀರೇಂದ್ರ ಶಾಸ್ತ್ರಿ ಪಾಲ್ಗೊಳ್ಳುತ್ತಿದ್ದರಂತೆ. ಜನರ ಸಮಸ್ಯೆಯನ್ನು ಕೇಳಿ ಅಲ್ಲಿಯೇ ಪರಿಹರಿಸುವ ಧೀರೇಂದ್ರ ಶಾಸ್ತ್ರಿ ಅಂಧವಿಶ್ವಾಸ ಹರಡುತ್ತಿದ್ದಾರೆ ಎಂಬ ಆರೋಪವಿದೆ.