ಇಲ್ಲೊಂದು ಕಡೆ ಕುಟುಂಬವೊಂದರಲ್ಲಿ  ಬರೋಬ್ಬರಿ 138 ವರ್ಷಗಳ ಬಳಿಕ  ಮೊದಲ ಬಾರಿ ಹೆಣ್ಣು ಮಗುವಿನ ಜನನವಾಗಿದ್ದು, ಮನೆಯಲ್ಲಿ ಸಂತಸ ನೆಲೆ ಆಗಿದೆ. 

ಬರೋಬ್ಬರಿ 138 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವಾಗಿದ್ದು, ಕುಟುಂಬದ ಸದಸ್ಯರೆಲ್ಲರೂ ಈ ಮಗುವನ್ನು ಲಕ್ಷ್ಮಿಯಂತೆ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ದಂಪತಿ ಹೆಣ್ಣು ಮಕ್ಕಳಿದ್ದರೆ ಗಂಡು ಮಗು ಬೇಕೆಂದು ಗಂಡು ಮಗುವಿದ್ದರೆ ಹೆಣ್ಣು ಮಗು ಬೇಕೆಂದು ಬಯಸುತ್ತಾರೆ. ಒಂದೊಂದು ಕುಟುಂಬದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದ್ದರೆ ಕೆಲವೊಂದು ಕುಟುಂಬದಲ್ಲಿ ಗಂಡು ಮಕ್ಕಳ ಸಂಖ್ಯೆಯೇ ಹೆಚ್ಚಿರುತ್ತದೆ. ಹಲವರು ತಲೆಮಾರುಗಳವರೆಗೂ ಕೆಲವು ಕುಟುಂಬಗಳಲ್ಲಿ ಗಂಡು ಮಕ್ಕಳೇ ಜನಿಸುತ್ತಾರೆ. ಕೆಲವು ಕುಟುಂಬಗಳಲ್ಲಿ ಹೆಣ್ಣು ಮಕ್ಕಳೇ ಜನಿಸುತ್ತಾರೆ. ಗಂಡು ಮಕ್ಕಳೇ ಹೆಚ್ಚಿರುವ ಕುಟುಂಬದವರು ತಮ್ಮ ಕುಟುಂಬದಲ್ಲಿ ಯಾರಾದರೂ ಗರ್ಭಿಣಿಯಾದರೆ ಒಂದು ಹೆಣ್ಣು ಮಗು ಜನಿಸಲಿ ಎಂದು ಹಾತೊರೆಯುತ್ತಾರೆ. ಹಾಗೆಯೇ ಹೆಣ್ಣು ಮಕ್ಕಳೇ ಹೆಚ್ಚಿರುವ ಕುಟುಂಬದಲ್ಲಿ ಒಂದು ಗಂಡು ಮಗು ಜನಿಸಲಿ ಎಂದು ಬಯಸುತ್ತಾರೆ. ಹೀಗಾಗಿ ಅಪರೂಪಕ್ಕೆ ಎಂಬಂತೆ ಗಂಡು ಅಥವಾ ಹೆಣ್ಣು ಮಗು ಜನಿಸಿದಾಗ ಆ ಕುಟುಂಬದಲ್ಲಿ ದೊಡ್ಡ ಖುಷಿ ಮನೆ ಮಾಡುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಕುಟುಂಬವೊಂದರಲ್ಲಿ ಬರೋಬ್ಬರಿ 138 ವರ್ಷಗಳ ಬಳಿಕ ಮೊದಲ ಬಾರಿ ಹೆಣ್ಣು ಮಗುವಿನ ಜನನವಾಗಿದ್ದು, ಮನೆಯಲ್ಲಿ ಸಂತಸ ನೆಲೆ ಆಗಿದೆ. 

ಅಮೆರಿಕಾದ ದಂಪತಿ ಕ್ಯಾರೊಲಿನ್ ಮತ್ತು ಆಂಡ್ರ್ಯೂ ಕ್ಲಾರ್ಕ್‌ಗೆ (Andrew Clark) ಮೊದಲ ಬಾರಿ ಹೆಣ್ಣು ಮಗುವಿನ ಜನನವಾಗಿದ್ದು, ಮಗುವಿಗೆ ಆಡ್ರೆ ಎಂದು ಹೆಸರಿಡಲಾಗಿದೆ. ಈ ಮಗು 138 ವರ್ಷಗಳಲ್ಲಿ ಅವರ ಇಡೀ ಕುಟುಂಬದಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗು. ಅಮೆರಿಕಾದ ಮಿಚಿಗನ್‌ನ ದಂಪತಿಗಳು ತಮ್ಮ ಮಗಳು ಆಡ್ರೆಯನ್ನು ಮಾರ್ಚ್‌ನಲ್ಲಿ ತಮ್ಮ ಜಗತ್ತಿಗೆ ಸ್ವಾಗತಿಸಿದಾಗ ಭಾವುಕರಾಗಿದ್ದರು. ಏಕೆಂದರ ಅವರ ಕುಟುಂಬದಲ್ಲಿ 138 ವರ್ಷಗಳಿಂದ ಬರೀ ಗಂಡು ಮಕ್ಕಳೇ ಜನಿಸಿದ್ದರು. ಈಗ ಹೆಣ್ಣು ಮಗುವಾಗುವ ಮೂಲಕ ಈ ಗಂಡು ಮಕ್ಕಳ ಸರಣಿ ಜನನಕ್ಕೆ ಬ್ರೇಕ್ ಬಿದ್ದಂತಾಗಿದೆ.

ಸಮೀರ್ ಆಚಾರ್ಯ-ಶ್ರಾವಣಿ ದಂಪತಿಗೆ ಹೆಣ್ಣು ಮಗು; ತುಳಜಾ ಭವಾನಿ ಬಂದಳು ಎಂದ ರಿಯಾಲಿಟಿ ಶೋ ಕಪಲ್

1885ರಿಂದಲೂ ಅವರ ಕುಟುಂಬದ ಹೆಣ್ಣು ಮಗುವನ್ನು ನೋಡಿರಲಿಲ್ಲ. ಒಂದು ದಶಕದ ಹಿಂದೆ ಮನೆಗೆ ಸೊಸೆಯಾಗಿ ಬಂದ ಕ್ಯಾರೊಲಿನ್‌ಗೆ ಈ ವಿಚಾರ ಪತಿಯಿಂದ ತಿಳಿದು ಅಚ್ಚರಿಯಾಗಿತ್ತು. ಆಡ್ರೆ ಜನಿಸುವ ಮೊದಲು ಕ್ಯಾರೊಲಿನ್‌ಗೆ ಎರಡು ಬಾರಿ ಗರ್ಭಪಾತವಾಗಿತ್ತು. ಹೀಗಾಗಿ ದಂಪತಿ ಮಗುವಿನ ನಿರೀಕ್ಷೆಯಲ್ಲಿಆರೋಗ್ಯಕರ ಗರ್ಭಧಾರಣೆಗಾಗಿ ಪ್ರಾರ್ಥಿಸುತ್ತಿದ್ದರು. ಪ್ರಾರ್ಥನೆಗೆ ಫಲವಿದೆ ಎಂಬಂತೆ ಈಗ ಕ್ಯಾರೊಲಿನ್ (Carolyn) ಹೆಣ್ಣು ಮಗು ಆಡ್ರೆಗೆ ಜನ್ಮ ನೀಡಿದ್ದು, ಇಡೀ ಕುಟುಂಬವೇ ಅಪರೂಪದ ಅತಿಥಿಯ ಆಗಮನದಿಂದ ಖುಷಿಯಾಗಿದ್ದಾರೆ. 

ಈ ಬಗ್ಗೆ ಗುಡ್‌ ಮಾರ್ನಿಂಗ್ ಅಮೆರಿಕಾದೊಂದಿಗೆ (Good morning America) ಮಾತನಾಡಿದ ಮಗುವಿನ ಪೋಷಕರು, ತಮಗೆ ಈಗಾಗಲೇ 4 ವರ್ಷದ ಕ್ಯಾಮರೂನ್ ಎಂಬ ಮಗನಿದ್ದಾನೆ. ಆತನ ಜನನದ ನಂತರ ಎರಡು ಬಾರಿ ಗರ್ಭಪಾತವಾಗಿದ್ದರಿಂದ ನಾವು ಹೆಣ್ಣು ಅಥವಾ ಗಂಡು (Male) ಎಂಬ ಯಾವ ನಿರೀಕ್ಷೆಯನ್ನು ಹೊಂದಿರಲಿಲ್ಲ. ನಾವು ಕೇವಲ ಆರೋಗ್ಯಕರ ಗರ್ಭಧಾರಣೆ (Healthy pragnency) ಹಾಗೂ ಆರೋಗ್ಯಕರ ಮಗುವಿನ ಜನನಕ್ಕಾಗಿ ಪ್ರಾರ್ಥಿಸಿದ್ದೆವು. ಆದರೆ ಅಚ್ಚರಿ ಎಂಬಂತೆ ನಮಗೆ ಹೆಣ್ಣು ಮಗು ಜನಿಸಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. 

ಅಂತ್ಯಕ್ರಿಯೆ ವೇಳೆ ಎದ್ದು ಕುಳಿತ 3 ವರ್ಷದ ಕಂದಮ್ಮ, ಸಂತಸದಲ್ಲಿದ್ದ ಕುಟುಂಬಕ್ಕೆ ಮತ್ತೆ ಶಾಕ್!

ವಿದೇಶಗಳಲ್ಲಿ ಮಗು ಜನಿಸುವುದಕ್ಕೂ ಮೊದಲೇ ಗಂಡೋ ಹೆಣ್ಣೋ ಎಂದು ಮೊದಲೇ ಪತ್ತೆ ಮಾಡುತ್ತಾರೆ. ಹಾಗೆಯೇ ಈ ದಂಪತಿ ಜಂಡರ್ ರೀವಿಲ್ ಪಾರ್ಟಿ (Gender revel party) ಮಾಡಿದ್ದು, ಈ ವೇಳೆ ವಿಶೇಷ ಬಿಸ್ಕೆಟ್‌ ಅನ್ನು ತಿನ್ನುವ ಮೂಲಕ ಹೆಣ್ಣು ಮಗು ಎಂದು ಇಡೀ ಕುಟುಂಬಕ್ಕೆ ತಿಳಿಸಿದ್ದಾರೆ. ಈ ವೇಳೆ ಕುಟುಂದ ಸದಸ್ಯರು ಅಚ್ಚರಿ ಹಾಗೂ ನಂಬಲಾಗದೇ ಖುಷಿಯಿಂದ ಬೊಬ್ಬೆ ಹೊಡೆದಿದ್ದಾಗಿ ದಂಪತಿ ವೆಬ್‌ಸೈಟೊಂದಕ್ಕೆ ತಿಳಿಸಿದ್ದಾರೆ. 

ಅಲ್ಲದೇ ಮಗುವಿಗೆ ಹೆಸರಿಡಲು ಇದುವರೆಗೆ ಬರೀ ಗಂಡು ಮಕ್ಕಳ ಹೆಸರನ್ನೇ ಹುಡುಕಿ ಹುಡುಕಿ ಇಟ್ಟಿದ್ದ ಕುಟುಂಬದವರಿಗೆ ಈ ಬಾರಿ ಹೆಣ್ಣು ಮಗುವಿನ ಹೆಸರು ಹುಡುಕುವುದು ಸವಾಲಾಗಿತ್ತಂತೆ ನಂತರ ಕೊನೆಯದಾಗಿ ಆಡ್ರೆ ಎಂಬ ಹೆಸರನ್ನು ಕುಟುಂಬ ಆಯ್ಕೆ ಮಾಡಿದೆ. ಸೇಂಟ್ ಪ್ಯಾಟ್ರಿಕ್ ದಿನದಂದು (St. Patrick's Day) ಮಾರ್ಚ್ 17 ರಂದು ಆಡ್ರೆ ಜನಿಸಿದ್ದಾಳೆ. ಆಡ್ರೆ ಆಗಮನದಿಂದ ಇಡೀ ಕುಟುಂಬ ಸಂತಸದಲ್ಲಿದೆ. ತಾವು ಈ ಹಿಂದೆ ಅನುಭವಿಸಿದ ಎಲ್ಲಾ ಕಷ್ಟ ತೊಂದರೆಗಳನ್ನು ಹೆಣ್ಣು ಮಗು ಆಡ್ರೆ ಜನನ ಮರೆಸಿದೆ ಎಂದು ಕ್ಯಾರೊಲಿನ್ ಹೇಳಿಕೊಂಡಿದ್ದಾರೆ.