Asianet Suvarna News Asianet Suvarna News

ಸಮೀರ್ ಆಚಾರ್ಯ-ಶ್ರಾವಣಿ ದಂಪತಿಗೆ ಹೆಣ್ಣು ಮಗು; ತುಳಜಾ ಭವಾನಿ ಬಂದಳು ಎಂದ ರಿಯಾಲಿಟಿ ಶೋ ಕಪಲ್

ಬಿಗ್ ಬಾಸ್ ಹಾಗೂ ರಾಜ ರಾಣಿ ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

Bigg Boss Fame Sameer Acharya and Shravani couple welcome baby girl sgk
Author
First Published Dec 10, 2022, 11:13 AM IST

ಬಿಗ್ ಬಾಸ್ ಹಾಗೂ ರಾಜ ರಾಣಿ ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗಳು ಬಂದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಶ್ರಾವಣಿ. ಮಗುವಿನ ಮುದ್ದಾದ ಕಾಲಿನ ವಿಡಿಯೋ ಶೇರ್ ಮಾಡಿ ತುಳಜಾ ಭವಾನಿ ಬಂದಳು ಎಂದು ಸಂತಸ ಹಂಚಿಕೊಂಡಿದ್ದಾರೆ ಸಮೀರ್ ಆಚಾರ್ಯ ದಂಪತಿ. ಅಂದಹಾಗೆ ಸಮೀರ್ ಆಚಾರ್ಯ ಮತ್ತು ಶ್ರಾವಣಿ ದಂಪತಿ ಕೆಲ ದಿನಗಳ ಹಿಂದೆಯಷ್ಟೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಬಹಿರಂಗ ಪಡಿಸಿದ್ದರು.  'ಜೀವನದ ಹೊಸ ಅಧ್ಯಾಯ ಆರಂಭವಾಗಿದೆ' ಎಂದು ಶ್ರಾವಣಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕುವ ಮೂಲಕ ಗರ್ಭಿಣಿ ಆಗಿರುವ ಖುಷಿ ಹಂಚಿಕೊಂಡಿದ್ದರು. ಇದೀಗ ಮನೆಗೆ ಮಹಾಲಕ್ಷ್ಮಿ ಬಂದ ಸಂತಸವನ್ನು ಹಂಚಿಕೊಂಡಿದ್ದಾರೆ. 

ಇತ್ತೀಚಿಗಷ್ಟೆ ಶ್ರಾವಣಿ ಅವರ ಸೀಮಂತ ಸಂಭ್ರಮ ಜೋರಾಗಿ ನಡೆದಿತ್ತು. ಸಂಪ್ರದಾಯದ ಪ್ರಕಾರ ಶ್ರಾವಣಿ ಅವರಿಗೆ ಸೀಮಂತ ಮಾಡಲಾಗಿತ್ತು. ಜೋಕಾಲಿಯಲ್ಲಿ ದಂಪತಿಗಳಿಬ್ಬರೂ ಕುಳಿತುಕೊಂಡು ಹಿರಿಯರು ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಸದ್ಯ ಮನೆಗೆ ಮಗು ಬಂದ ಖುಷಿಯಲ್ಲಿದ್ದಾರೆ. ಅಂದಹಾಗೆ ಸಾಮೀರ್ ಆಚಾರ್ಯ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಬಿಗ್ ಬಾಸ್ ಬಳಿಕ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಜೊತೆ ರಾಜ ರಾಣಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು. ಆ ಶೋನಲ್ಲಿ ಇಬ್ಬರೂ ಮಗು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಅಲ್ಲದೇ ರಾಜಾ ರಾಣಿ ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಶ್ರಾವಣಿಗೆ ಮಿಸ್ ಕ್ಯಾರೇಜ್‌ ಆಗಿದ್ದ ವಿಚಾರವನ್ನು ಹಂಚಿಕೊಂಡು ಭಾವುಕರಾಗಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಿಯಾಲಿಟಿ ಕಪಲ್ ಸಮೀರ್ ಆಚಾರ್ಯ - ಶ್ರಾವಣಿ!

ರಿಯಾಲಿಟಿ ಶೋ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಈ ಜೋಡಿ ಇದೀಗ ಸಂಭ್ರಮದಲ್ಲಿ ತೇಲುತ್ತಿದೆ. ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಶ್ರಾವಣಿ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಪತ್ನಿ ಸಮೀರ್ ಆಚಾರ್ಯ ಜೊತೆ ನಿಂತುಕೊಂಡಿರುವ ಫೋಟೋ ಶೇರ್ ಮಾಡಿ ಬೇಬಿ ಬಂಪ್ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಎಂದು ಹೇಳಿದ್ದಾರೆ. ಸದ್ಯ ಹೆಣ್ಣು ಮಗು ಆಗಿರುವ ಸಂತಸವನ್ನು ಹಂಚಿಕೊಂಡಿರುವ ಸಮೀರ್ ಆಚಾರ್ಯ್ ದಂಪತಿ ಸದ್ಯದಲ್ಲೇ ಮುದ್ದಾದ ಮಗಳನ್ನು ಪರಿಚಯಿಸುವ ಸಾಧ್ಯತೆ ಇದೆ.

Follow Us:
Download App:
  • android
  • ios