Asianet Suvarna News Asianet Suvarna News

Lok Sabha Election: ಮತ ಚಲಾಯಿಸಿದ 116ರ ಅಜ್ಜಿ; ಮೆರವಣಿಗೆಯಲ್ಲಿ ಕರೆತಂದ ಅಧಿಕಾರಿಗಳು!

ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬ ಅರ್ಹ ಭಾರತೀಯನೂ ತನ್ನ ಕರ್ತವ್ಯ ಮಾಡ್ಬೇಕು. ಈಗಿನ ದಿನಗಳಲ್ಲಿ ಯುವಕರು ಮತದಾನ ಮಾಡಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಹಿರಿಯರು ತಮ್ಮ ಕರ್ತವ್ಯವನ್ನು ಚಾಚೂತಪ್ಪದೆ ಮಾಡ್ತಿದ್ದಾರೆ. 
 

Ambedkar Nagar Lok Sabha Election Hundred Sixteen Years Old Grandmother Cast Her Vote roo
Author
First Published May 25, 2024, 4:31 PM IST

ದೇಶದಲ್ಲಿ ಪ್ರಜಾಪಪ್ರಭುತ್ವದ ಮಹಾ ಹಬ್ಬ ನಡೆಯುತ್ತಿದೆ. ಈಗಾಗಲೇ ಲೋಕಸಭೆ ಚುನಾವಣೆಯ ಐದು ಹಂತದ ಮತದಾನ ಮುಗಿದಿದ್ದು, ಆರನೇ ಹಂತದ ಮತದಾನ ಇಂದು ಶನಿವಾರ ನಡೆದಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ ಎಂದು ವರದಿಗಳು ಹೇಳ್ತಿವೆ. ಯುವಕರು ಮತಗಟ್ಟೆಗೆ ಬರಲು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪವೂ ಇದೆ. ಆದ್ರೆ ವೃದ್ಧರೇ ಆಸಕ್ತಿಯಿಂದ ಮತದಾನ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆರನೇ ಹಂತದ ಮತದಾನದಲ್ಲಿ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ 116 ವರ್ಷದ ಅಜ್ಜಿ ಮತದಾನ ಮಾಡಿ, ಯುವಕರಿಗೆ ಸ್ಫೂರ್ತಿ ನೀಡಿದ್ದಾರೆ. 

ಚುನಾವಣಾ (Election) ಆಯೋಗ  ಹಿರಿಯ ನಾಗರಿಕರನ್ನು ಗುರುತಿಸಿ, ಅವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡುತ್ತಿದೆ. ಆದ್ರೆ ಅಂಬೇಡ್ಕರ್ (Ambedkar) ನಗರದ ಅಜ್ಜಿ ರಾಮರತಿ ದೇವಿ, ಮನೆಯ ಬದಲು ಮತಗಟ್ಟೆಗೆ ಬಂದು ಮತ ಹಾಕುವ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮತಗಟ್ಟೆ (Polling Station) ಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಯ್ತು. ಆದ್ರೆ ರಾಮರತಿ ದೇವಿಯರವನ್ನು ಅಧಿಕಾರಿಗಳು ಸಂಭ್ರಮದಿಂದ, ಅದ್ಧೂರಿಯಾಗಿ ಮತಗಟ್ಟೆಗೆ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿದೆ.

2014 ರಿಂದ 2024ರವರೆಗೆ ಮೋದಿ ಹೃದಯದಲ್ಲಿದೆ ಆ ನೋವು!

ರಾಮರತಿ ದೇವಿಯವರಿಗೆ ಈಗ 116 ವರ್ಷ ಪ್ರಾಯ. ಮನೆಯಲ್ಲಿ ರಾಮ ಕೃಷ್ಣ ಅಂದ್ಕೊಂಡು ಇರೋ ಬದಲು ಅವರು ತಮ್ಮ ಹಕ್ಕನ್ನು ಚಲಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಮತದಾನದ ಮಹತ್ವ ತಿಳಿದಿದ್ದ ರಾಮರತಿ ದೇವಿ, ಪೈಕೋಲಿಯಾ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು. 

ಅಂಬೇಡ್ಕರ್ ನಗರ ತಾಂಡಾ ವಿಧಾನಸಭಾ ಕ್ಷೇತ್ರದ ಪೈಕೋಲಿಯಾ ಮತಗಟ್ಟೆಯಲ್ಲಿ ರಾಮರತಿ ದೇವಿ ಮತದಾನಕ್ಕೆ ಎಲ್ಲ ಸಿದ್ಧತೆ ನಡೆದಿತ್ತು. ಮೊದಲು ತಾಂಡಾ ಎಸ್‌ಡಿಎಂ ಮೋಹನ್‌ಲಾಲ್ ಗುಪ್ತಾ ಅವರು 116 ವರ್ಷದ ರಾಮರತಿ ದೇವಿ ಜೀವಂತವಾಗಿದ್ದಾರೆ ಎಂಬ ಮಾಹಿತಿ ಪಡೆದು ಪಕೋಲಿಯಾ ತಲುಪಿದ್ದರು. ರಾಮರತಿ ದೇವಿ ಮನೆಗೆ ಹೋದ ಮೋಹನ್ ಲಾಲ್ ಗುಪ್ತಾ, ರಾಮರತಿ ಮತ್ತು ಅವರ ಕುಟುಂಬವನ್ನು ಮತದಾನಕ್ಕೆ ಆಹ್ವಾನಿಸಿದರು. ಅವರ ಹಣೆಗೆ ತಿಲಕವಿಟ್ಟು ಅವರನ್ನು ಸ್ವಾಗತಿಸಿದರು. ನಂತ್ರ ಹೂವಿನ ಅಲಂಕಾರ ಮಾಡಿದ್ದ, ವಧುವಿನಂತೆ ಸಂಗಾರಗೊಂಡಿದ್ದ ಕುದುರೆ ಗಾಡಿಯಲ್ಲಿ ರಾಮರತಿ ದೇವಿಯವರನ್ನು ಮತಗಟ್ಟೆಗೆ ಕರೆತರಲಾಯ್ತು. ರಾಮರತಿ ದೇವಿ ಕುದುರೆ ಗಾಡಿ ಹತ್ತುತ್ತಿದ್ದಂತೆ ಬ್ಯಾಂಡ್ ಬಾರಿಸಲಾಯ್ತು. ಗ್ರಾಮದಲ್ಲಿ ಮದುವೆ ವಾತಾವರಣ ನಿರ್ಮಾಣವಾಗಿತ್ತು. ದಿಬ್ಬಣ ಬರ್ತಿದೆ ಎನ್ನುವ ಅನುಭವ ಅಲ್ಲಿನ ಜನರಿಗಾಯ್ತು. ಪ್ರತಿಯೊಬ್ಬರೂ, ಮೆರವಣಿಗೆಯನ್ನು ಕುತೂಹಲದಿಂದ ವೀಕ್ಷಿಸಿದ್ರು. ಮತಗಟ್ಟೆಗೆ ಬಂದ ಅವರು ಕುಟುಂಬ ಸಮೇತ ತಮ್ಮ ಹಕ್ಕು ಚಲಾಯಿಸಿದ್ರು. 

ಆರನೇ ಹಂತದ ಮತದಾನದ ವೇಳೆ ಅನೇಕ ದಿಗ್ಗಜರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಅನೇಕ ನಾಯಕರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಪುತ್ರ ರೆಹಾನ್ ವಾದ್ರಾ ಮತ್ತು ಪುತ್ರಿ ಮಿರಾಯಾ ವಾದ್ರಾ ಕೂಡ ಈ ಬಾರಿ ಮತ ಚಲಾಯಿಸಿದ್ದಾರೆ. ಮೊದಲ ಬಾರಿ ಮತದಾನ ಮಾಡಿದ ಅವರು ಎಲ್ಲರೂ ಹುರುಪಿನಿಂದ ಮತದಾನ ಮಾಡುವಂತೆ ಜನತೆಗೆ ಮನವಿ ಮಾಡಿದರು. ಪ್ರಜಾಪ್ರಭುತ್ವ ಉಳಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಸಕಾರಾತ್ಮಕ ಬದಲಾವಣೆಗಾಗಿ ಮತ ಚಲಾಯಿಸುವುದು ಸಹ ಮುಖ್ಯವಾಗಿದೆ ಎಂದು ರೆಹಾನ್ ವಾದ್ರಾ ಹೇಳಿದ್ರು.  

ಕಾಂಗ್ರೆಸ್ ದೊಡ್ಮನೆ ಮತದಾನ ಮಾಡಿದ ಕ್ಷೇತ್ರದಲ್ಲಿ 'ಕೈ' ಅಭ್ಯರ್ಥಿಯೇ ಇಲ್ಲ!

ಲೋಕಸಭಾ ಚುನಾವಣೆ ಏಳು ಹಂತದಲ್ಲಿ ನಡೆಯಲಿದ್ದು, ಈಗಾಗಲೇ ಆರನೇ ಹಂತದ ಮತದಾನ ಮುಕ್ತಾಯ ಹಂತದಲ್ಲಿದೆ. ಜೂನ್ ಒಂದರಂದು ಕೊನೆಯ ಏಳನೇ ಹಂತದ ಮತದಾನ ನಡೆಯಲಿದೆ. ಜೂನ್ ನಾಲ್ಕರಂದು ಫಲಿತಾಂಶ ಪ್ರಕಟವಾಗಲಿದೆ. 

 

Latest Videos
Follow Us:
Download App:
  • android
  • ios