Asianet Suvarna News Asianet Suvarna News

ಥಿಯೇಟರಲ್ಲಿ ಜಗಳವಾಡಿದ ಮಹಿಳೆ ಮೇಲೆ ಭಯಂಕರ ರೂಪದಲ್ಲಿ ಸೇಡು ತೀರಿಸಿಕೊಂಡ ಭೂಪ!

ಪ್ರತಿ ನಿತ್ಯ ಸಣ್ಣಪುಟ್ಟ ಜಗಳಗಳು ಸಾರ್ವಜನಿಕ ಪ್ರದೇಶದಲ್ಲಿ ನಡೆಯುತ್ತಿರುತ್ತವೆ. ಕೆಲವೊಂದು ಎಷ್ಟು ಹಿಂಸೆ ನೀಡುತ್ತೆ ಅಂದ್ರೆ ಅದಕ್ಕೆ ಸೇಡು ತೀರಿಸಿಕೊಳ್ಳುವ ಮನಸ್ಸಾಗುತ್ತೆ. ಈತ ಕೂಡ ಸೇಡು ತೀರಿಸಿಕೊಳ್ಳಲು ಸೈಲೆಂಟ್ ಐಡಿಯಾ ಹುಡುಕಿದ್ದಾನೆ. 
 

After An Argument In The Theatre A Man Took Fierce Revenge roo
Author
First Published Jan 23, 2024, 3:47 PM IST

ರೆಡ್ಡಿಟ್ (Reddit) ನಲ್ಲಿ ಮಹಿಳೆ ಒಂದು ಪೋಸ್ಟ್ ಮಾಡಿದ್ದಾಳೆ. ನಾನು ಗ್ರೇಸ್, ನಾನು ನನ್ನ ಪತಿ ಜೊ ಹಾಗೂ ಅಪ್ಪ – ಅಮ್ಮನ ಜೊತೆ ಒಂದು ಥಿಯೇಟರ್ (Theater) ಗೆ ಕಾರ್ಯಕ್ರಮವೊಂದನ್ನು ವೀಕ್ಷಿಸಲು ಹೋಗಿದ್ವಿ. ಥಿಯೇಟರ್ ಸ್ವಲ್ಪ ಚಿಕ್ಕದಿದ್ದ ಕಾರಣ ಕುಳಿತುಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು. ನಾವೆಲ್ಲ ಹೇಗೋ ಅಡ್ಜೆಸ್ಟ್ ಮಾಡಿಕೊಂಡು ಕುಳಿತಿದ್ವಿ. ಆದ್ರೆ ನಮ್ಮ ಮುಂದಿನ ಸೀಟ್ ನಲ್ಲಿ ಕುಳಿತಿದ್ದ ಮಹಿಳೆ ಕೂದಲು ನಮಗೆ ಕಿರಿಕಿರಿ ಮಾಡ್ತಿತ್ತು ಎಂದು ಗ್ರೇಸ್ ಬರೆದಿದ್ದಾಳೆ.

ಆಕೆ ಕೂದಲನ್ನು ಹಿಂದಕ್ಕೆ ಬಿಟ್ಟಿದ್ದಳು. ಅದು ಜೋ ಕಾಲಿಗೆ ತಾಗುತ್ತಿತ್ತು. ನಾನು ಕೂದಲನ್ನು ಮುಂದೆ ಎಳೆದುಕೊಳ್ಳುವಂತೆ ಹೇಳಿದೆ. ಆದ್ರೆ ಆಕೆ ಅದನ್ನು ನಿರ್ಲಕ್ಷ್ಯ ಮಾಡಿದ್ದಳು. ಜೋ ಕೂಡ, ಕೂದಲನ್ನು ಸರಿಪಡಿಸಿಕೊಳ್ಳುವಂತೆ ಕೇಳಿದ್ದ. ಆತನ ಮಾತಿಗೂ ಆಕೆ ಪ್ರತಿಕ್ರಿಯೆ ನೀಡಲಿಲ್ಲ. ಜೋ ಸುಮ್ಮನಾದ. ಆತ ಸೋಲೊಪ್ಪಿಕೊಂಡ ಎಂದು ನಾನು ಸುಮ್ಮನಾದೆ. ವಾಸ್ತವವಾಗಿ ಜೋ ಸೋಲೊಪ್ಪಿಕೊಂಡಿರಲಿಲ್ಲ. ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ.

ಸರ್ಜರಿ ಮಾಡಿಸಿಕೊಳ್ಳೋ ಮುನ್ನ ಹಳೇ ಮೂಗಿಗೆ ಅಂತ್ಯಕ್ರಿಯೆ ಮಾಡಿದ ನಾರಿ!

ಎಲ್ಲರೂ ಥಿಯೇಟರ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ವೀಕ್ಷಣೆ ಮಾಡ್ತಿದ್ದರೆ ಈತ ಸುಮ್ಮನೆ ತನ್ನ ಕೆಲಸ ಮಾಡ್ತಿದ್ದ. ಜೋ ಆಕೆ ಕೂದಲನ್ನು ಗಂಟು ಹಾಕುವ ಕೆಲಸ ಮಾಡ್ತಿದ್ದ. ಗಂಟು ಬಿಚ್ಚಲಾಗದೆ ಆಕೆ ಕೂದಲು ಕತ್ತರಿಸಬೇಕು ಎನ್ನುವ ಕಾರಣಕ್ಕೆ ಜೋ ಆ ಕೆಲಸ ಮಾಡಲಿಲ್ಲ. ಕೂದಲಿನ ಗಂಟು ಬಿಡಿಸಲು ಆಕೆಗೆ ಸಾಕಷ್ಟು ಸಮಯ ಹಿಡಿಯುವಂತೆ ಮಾಡಿದ್ದ. ಅವನು ಅವಳ ಕೂದಲನ್ನು ಕೆಳಗಿನಿಂದ ಮೇಲಕ್ಕೆ ಹೆಣೆದು ಅದರಲ್ಲಿ ಗಂಟುಗಳನ್ನು ಕಟ್ಟುತ್ತಿದ್ದ. ದಪ್ಪ ಗಂಟು, ಎರಡು ಗಂಟುಗಳ ನಡುವೆ ಸಣ್ಣ ಜಡೆ, ದಪ್ಪ ಗಂಟು, ಗಂಟು ತಿರುಚಿದ ಚಿಕ್ಕ ಜಡೆ ಹೀಗೆ ನಾನಾ ವಿಧದಲ್ಲಿ ಗಂಟು ಹಾಕಿದ್ದ.

ಜೋ ಆಕೆ ಕೂದಲಿಗೆ ಗಂಟು ಹಾಕ್ತಿದ್ದರೂ ಆಕೆಗೆ ಇದು ತಿಳಿಯಲಿಲ್ಲ. ಹಿಂದಿನವರಿಗೆ ಇದು ಗೊತ್ತಾಗಿ ಮುಸಿ ಮುಸಿ ನಗ್ತಿದ್ದರು. ಆದ್ರೆ ಯಾರೂ ಬಾಯ್ಬಿಡಲಿಲ್ಲ. ಸೇಡು ತೀರಿಸಿಕೊಂಡ ನನ್ನ ಪತಿಯ ಬೆನ್ನು ತಟ್ಟಿದ್ದರು ನನ್ನ ತಂದೆ ಎಂದು ಗ್ರೇಸ್ ಹೇಳಿದ್ದಾಳೆ. ಆಕೆಗೆ ಗಂಟು ಬಿಚ್ಚಲು ಗಂಟೆಗಳ ಸಮಯ ಹಿಡಿದಿರಬೇಕು. ಅದ್ರಲ್ಲಿ ನನ್ನದೇನೂ ತಪ್ಪಿರಲಿಲ್ಲ ಎಂದು ಆಕೆ ಅನೇಕರಿಗೆ ಹೇಳಿರಬೇಕು ಎಂದು ಗ್ರೇಸ್ ಬರೆದಿದ್ದಾಳೆ. ಗ್ರೇಸ್ ಪೋಸ್ಟ್ ಗೆ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಜೋ ಮಾಡಿದ ಕೆಲಸವನ್ನು ಅನೇಕರು ಮೆಚ್ಚಿದ್ದಾರೆ.  

ದಿನಕ್ಕೆ 8-10 ಬಾರಿ ಟಾಯ್ಲೆಟ್‌ಗೆ ಹೋಗ್ತಿದ್ದವಳಿಗೆ ಕಾದಿತ್ತು ಶಾಕ್, ನೀವೆಷ್ಟು ಸಾರಿ ವಾಷ್ ರೂಮಿಗೆ ಹೋಗ್ತೀರಿ?

Follow Us:
Download App:
  • android
  • ios