Asianet Suvarna News Asianet Suvarna News

ಸರ್ಜರಿ ಮಾಡಿಸಿಕೊಳ್ಳೋ ಮುನ್ನ ಹಳೇ ಮೂಗಿಗೆ ಅಂತ್ಯಕ್ರಿಯೆ ಮಾಡಿದ ನಾರಿ!

ಈಗಿನ ಜನರ ಆಲೋಚನೆಗಳು ಚಿತ್ರವಿಚಿತ್ರವಾಗಿವೆ. ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳ ಕೆಲಸ ಸುದ್ದಿ ಮಾಡಿದೆ. ಮೂಗಿಗೆ ಅಂತ್ಯಕ್ರಿಯೆ ಮಾಡಿಕೊಂಡ ಮಹಿಳೆ  ಭರ್ಜರಿ ಪಾರ್ಟಿ ನೀಡಿದ್ದಾಳೆ.
 

Woman Held Funeral For Her Old Nose Before Getting Its Rhinoplasty Praised roo
Author
First Published Jan 23, 2024, 1:23 PM IST

ಮಹಿಳೆಯರು ತಮ್ಮ ಸೌಂದರ್ಯದ ಗುಟ್ಟನ್ನು ಸುಲಭವಾಗಿ ಬಿಟ್ಟುಕೊಡೋದಿಲ್ಲ. ಮುಖಕ್ಕೆ ಯಾವ ಕ್ರೀಂ ಹಚ್ಚುತ್ತೀರಿ ಅಂತಾ ನೀವು ಪ್ರಶ್ನೆ ಮಾಡಿದ್ರೆ ನೂರು ಬಾರಿ ಆಲೋಚನೆ ಮಾಡಿ ಉತ್ತರ ನೀಡ್ತಾರೆ. ಇನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂಬ ರಹಸ್ಯವನ್ನು ಎಂದಿಗೂ , ಯಾರ ಮುಂದೆಯೂ ಹೇಳೋದಿಲ್ಲ. ಕಿವಿ, ಮೂಗು, ತುಟಿ ಸೇರಿದಂತೆ ಮುಖದ ಅನೇಕ ಅಂಗಗಳ ಪ್ಲಾಸ್ಟಿಕ್ ಸರ್ಜರಿ ಈಗ ಕಾಮನ್. ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಜನರು ಕೂಡ ಸದ್ದಿಲ್ಲದೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದಲ್ಲದೆ ಇದನ್ನು ಒಪ್ಪಿಕೊಳ್ಳೋದಿಲ್ಲ. ಹಾಗಿರುವಾಗ ಈ ಮಹಿಳೆಯೊಬ್ಬಳು ಭಿನ್ನವಾಗಿ ಕಾಣ್ತಿದ್ದಾಳೆ. ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಮೊದಲು ಈ ಮಹಿಳೆ ಎಲ್ಲರಿಗೂ ವಿಷ್ಯ ತಿಳಿಸಿದ್ದಾಳೆ. ಜೊತೆಗೆ  ಮೂಗಿಗೆ ಅಂತ್ಯಕ್ರಿಯೆ ಮಾಡಿದ್ದಾಳೆ. ಅದಕ್ಕಾಗಿ ಆಕೆ ಭರ್ಜರಿ ಪಾರ್ಟಿ ಕೂಡ ನೀಡಿದ್ದಾಳೆ. ಈ ಅಂತ್ಯಕ್ರಿಯೆ ಪಾರ್ಟಿ ಬಹಳ ವಿಶೇಷತೆಯಿಂದ ಕೂಡಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರ ಮನಸ್ಸು ಗೆದ್ದಿದೆ.

ಅಂತ್ಯಕ್ರಿಯೆ ಎಂದಾಗ ಅಲ್ಲೊಂದು ದುಃಖವಿರುತ್ತದೆ. ಯಾರೂ ಸತ್ತಾಗ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದ್ರೆ ಈ ಮಹಿಳೆ ಸತ್ತಿಲ್ಲ. ಆಕೆಯ ಯಾವುದೇ ಸಂಬಂಧಿಕರು, ಸ್ನೇಹಿತರು ಸತ್ತಿಲ್ಲ. ಆಕೆ ಸಾಯಲಿರುವ  ತನ್ನ ಮೂಗಿಗೆ ಅಂತ್ಯಕ್ರಿಯೆ (Funeral) ಮಾಡಿದ್ದಾಳೆ. ಪ್ಲಾಸ್ಟಿಕ್ ಸರ್ಜರಿ (Plastic Surgery ) ನಂತ್ರ ಆಕೆ ಮೂಗು ಹಿಂದಿನಂತೆ ಇರಲು ಸಾಧ್ಯವಿಲ್ಲ. ಅಂದ್ರೆ ಹಿಂದಿದ್ದ ಮೂಗಿನ ಅಂತ್ಯವಾದಂತೆ. ಹಾಗಾಗಿ ಮಹಿಳೆ ಮೂಗಿಗೆ ಅಂತ್ಯಕ್ರಿಯೆ ಮಾಡಿದ್ದಲ್ಲದೆ ಅನೇಕ ಸ್ನೇಹಿತರ ಜೊತೆ ಪಾರ್ಟಿ ಆಚರಿಸಿದ್ದಾಳೆ.

HEALTH TIPS: ಈ ರೋಗ ಶುರುವಾದ್ರೆ ಹುಡುಗಿಯರ ಮುಖದ ಮೇಲೆ ಬೆಳೆಯುತ್ತೆ ಕೂದಲು

ಟಿಕ್ ಟಾಕ್ (Tik Tok) ನಲ್ಲಿ ಇವರ ಪಾರ್ಟಿ ವಿಡಿಯೋ ವೈರಲ್ ಆಗಿದೆ. ಮೂಗಿನ ಸರ್ಜರಿ ಮಾಡಿಸಿಕೊಳ್ಳುತ್ತಿರುವ, ಹಳೆ ಮೂಗಿಗೆ ಅಂತ್ಯಕ್ರಿಯೆ ಮಾಡ್ತಿರುವ ಮಹಿಳೆ ಹೆಸರು ಸೋಫಿ. ಘಟನೆ ನಡೆದಿರೋದು ಯುಕೆಯಲ್ಲಿ.
ಸೋಫಿ ಒಂದು ಪಬ್ ನಲ್ಲಿ ಅಂತ್ಯಕ್ರಿಯೆ ಪಾರ್ಟಿ ಏರ್ಪಡಿಸಿದ್ದಳು. ಆಕೆ ಆಹ್ವಾನಿಸಿದ್ದ ಸ್ನೇಹಿತರು, ಸಂಬಂಧಿಕರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಇನ್ಮುಂದೆ ಕಾಣಸಿಗದಿರುವ ಮೂಗಿಗೆ ವಿಷಾಧ ವ್ಯಕ್ತಪಡಿಸಿದ್ರು. ನಂತ್ರ ಪಾರ್ಟಿಯನ್ನು ಎಂಜಾಯ್ ಮಾಡಿದ್ರು. ಸೋಫಿ ದೊಡ್ಡ ಮೂಗಿರುವ ಮುಖವಾಡ ಧರಿಸಿದ್ದಳು. ಆಕೆಯ ಮೂಗಿಗೆ ಗೌರವ ಸಲ್ಲಿಸಿದ ಜನರು, ಅದ್ರ ಒಂದಿಷ್ಟು ಫೋಟೋ ಕ್ಲಿಕ್ಕಿಸಿದರು. ನಂತ್ರ ಕೇಕ್ ಕತ್ತರಿಸಿದರು. ಮುಖವಾಡ ಹಾಕಿದ್ದ ಸೋಫಿ ಮೂಗಿಗೆ ಪಿನ್ ಹಾಕುವ ಆಟವನ್ನು ಆಕೆ ಸ್ನೇಹಿತರೆಲ್ಲರು ಆಡಿದ್ರು. ಸೋಫಿ ಮೂಗಿನ ಅಂತ್ಯಕ್ರಿಯೆ ಕಾರ್ಯಕ್ರಮ ಪಬ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಒಂದಿಷ್ಟು ಮೋಜು – ಮಸ್ತಿ ಅಲ್ಲಿತ್ತು.

ಸೋಫಿ ಮೂಗಿನ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗ್ತಿದ್ದಾಳೆ. ಆಕೆಗೆ ರೈನೋಪ್ಲ್ಯಾಸ್ಟ್ ಮಾಡಲಾಗುವುದು. ಸೋಫಿ ಈ ಚಿಕಿತ್ಸೆಯನ್ನು ಟರ್ಕಿಯಲ್ಲಿ ಮಾಡಿಸಿಕೊಳ್ಳಲಿದ್ದಾಳೆ. ಹಾಗಾಗಿ ತನ್ನ ಸ್ನೇಹಿತರು, ಆಪ್ತರಿಗೆ ಪಾರ್ಟಿ ನೀಡಿ, ಮೂಗಿನ ಅಂತ್ಯಕ್ರಿಯೆ ಕಾರ್ಯ ಮುಗಿಸಿದ ಸೋಫಿ ನಂತ್ರ ಟರ್ಕಿಗೆ ತೆರಳಿದ್ದಾಳೆ. ಆಕೆ ಸ್ನೇಹಿತರು ಪ್ರೀತಿಯ ವಿದಾಯ ಹೇಳಿದ್ದಾರೆ.

ಹಾಟ್ನೆಸ್ ಓವರ್ ಲೋಡೆಡ್; ಸಂಯುಕ್ತಾ ಜಿಮ್ ಸೆಲ್ಫಿಗಳಿಗೆ ಫಾಲೋವರ್ಸ್ ಫಿದಾ

ಟಿಕ್ ಟಾಕ್ ನಲ್ಲಿ ಸೋಫಿ ಸ್ನೇಹಿತ ಆಮಿ, ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾನೆ. 66 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಸೋಫಿ ಅಂತ್ಯಕ್ರಿಯೆ ಕಾರ್ಯಕ್ರಮದ ಬಗ್ಗೆ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೋಫಿ ಕೆಲಸ ಶ್ಲಾಘನೀಯ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಸ್ಪೂರ್ತಿ ಪಡೆದಿದ್ದಾರೆ. ಇನ್ನು ಕೆಲವರು ಸೋಫಿ ಮೂಗಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಚೆಂದದ ಮೂಗನ್ನು ಹೊಂದಿರುವ ಸೋಫಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಿರಲಿಲ್ಲ ಎಂದಿದ್ದಾರೆ.  
 

Follow Us:
Download App:
  • android
  • ios