ದಿನಕ್ಕೆ 8-10 ಬಾರಿ ಟಾಯ್ಲೆಟ್‌ಗೆ ಹೋಗ್ತಿದ್ದವಳಿಗೆ ಕಾದಿತ್ತು ಶಾಕ್, ನೀವೆಷ್ಟು ಸಾರಿ ವಾಷ್ ರೂಮಿಗೆ ಹೋಗ್ತೀರಿ?

Synopsis
ದೇಹದ ಕೊಳಕು, ಮಲ ಮತ್ತು ಮೂತ್ರದ ಮೂಲಕ ಹೊರಗೆ ಹೋಗುತ್ತೆ. ಇದು ಒಂದು ಮಿತಿಯಲ್ಲಿದ್ರೆ ಒಳ್ಳೆಯದು. ಮೂತ್ರ ವಿಸರ್ಜನೆಯಂತೆ ಮಲ ವಿಸರ್ಜನೆ ಕೂಡ ಮಿತಿ ಮೀರಿದೆ ಅಪಾಯ.
ನಾವು ಯಾವ ಆಹಾರ ಸೇವನೆ ಮಾಡ್ತೇವೆ ಅದರ ಆಧಾರದ ಮೇಲೆ ನಮ್ಮ ಮಲ – ಮೂತ್ರ ವಿಸರ್ಜನೆ ಆಗುತ್ತದೆ. ನಾವು ಹೊಟೇಲ್ ನಲ್ಲಿ, ಬೀದಿ ಬದಿಯಲ್ಲಿ ತಿಂದಾಗ ಅಥವಾ ಮಿತಿಗಿಂತ ಹೆಚ್ಚು ಆಹಾರ ಸೇವನೆ ಮಾಡಿದಾಗ ದಿನಕ್ಕೆ ಒಮ್ಮೆ ಹೋಗ್ತಿದ್ದವರು ಎರಡು ಬಾರಿ ಮಲ ವಿಸರ್ಜನೆಗೆ ಹೋಗ್ತಾರೆ. ಇನ್ನು ಕೆಲವರಿಗೆ ದಿನಕ್ಕೆ ಒಮ್ಮೆ ಮಲ ವಿಸರ್ಜನೆ ಆಗೋದು ಕಷ್ಟ. ಮಲಬದ್ಧತೆಯಿಂದ ಅವರು ಸಮಸ್ಯೆ ಎದುರಿಸುತ್ತಾರೆ. ಮತ್ತೆ ಕೆಲವರ ಹೊಟ್ಟೆ ವಿಚಿತ್ರವಾಗಿರುತ್ತೆ. ವಿಶೇಷ ದಿನಗಳಲ್ಲಿ ಮಾತ್ರವಲ್ಲ ಪ್ರತಿ ದಿನ ಮೂರ್ನಾಲ್ಕು ಮಾತ್ರ ಮಲ ವಿಸರ್ಜನೆಗೆ ಹೋಗ್ತಾರೆ. ನೀವೂ ಪ್ರತಿ ದಿನ ನಾಲ್ಕಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆ ಮಾಡ್ತೀರಿ ಎಂದಾದ್ರೆ ತಪ್ಪದೆ ವೈದ್ಯರನ್ನು ಭೇಟಿಯಾಗಿ. ಯಾಕೆಂದ್ರೆ ಇದು ನಿಮ್ಮನ್ನು ಗಂಭೀರ ಸ್ಥಿತಿಗೆ ಕೊಂಡೊಯ್ಯುವ ಸಾಧ್ಯತೆ ಇರುತ್ತದೆ. ಮಹಿಳೆಯೊಬ್ಬಳು ತನ್ನ ಸ್ಥಿತಿಯನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾಳೆ.
ಅಮೆರಿಕ (America) ದಲ್ಲಿ ನೆಲೆಸಿರುವ 32 ವರ್ಷದ ಮಹಿಳೆಗೆ ಪದೇ ಪದೇ ಬೇಧಿ ಆಗ್ತಿತ್ತು. ದಿನಕ್ಕೆ 10 ಬಾರಿ ಶೌಚಾಲಯ (Toilet)ಕ್ಕೆ ಹೋಗ್ತಿದ್ದಳು. ಆರಂಭದಲ್ಲಿ ಅದನ್ನು ನಿರ್ಲಕ್ಷ್ಯ ಮಾಡಿದ್ದಳು. ನಂತ್ರ ವೈದ್ಯರ ಬಳಿ ಹೋಗಿದ್ದಾಳೆ. ವೈದ್ಯರು ಆಹಾರದಲ್ಲಿ ಬದಲಾವಣೆ ಮಾಡುವಂತೆ ಹೇಳಿದ್ದರು. ಫೈಬರ್ (Fiber) ಹೆಚ್ಚು ಸೇವನೆ ಮಾಡುವಂತೆ ಸಲಹೆ ನೀಡಿದ್ದರು. ಇದನ್ನು ಪಾಲನೆ ಮಾಡಿದ್ರೂ ಮಹಿಳೆ ಸ್ಥಿತಿ ಸುಧಾರಿಸಲಿಲ್ಲ. ಇದ್ರಿಂದಾಗಿ ಸಾವಿನಂಚಿಗೆ ಹೋಗಿ ವಾಪಸ್ ಬಂದಿದ್ದಾಳೆ.
ನಿಮಗೆ ಗೊತ್ತಾ? ನೀವು ತಿನ್ನೋ ಈ ಆಹಾರಗಳು ಆಲ್ಕೋಹಾಲ್‌ಗಿಂತಲೂ ಡೇಂಜರಸ್!
ಆಕೆ ಕ್ಯಾಲಿಫೋರ್ನಿಯಾದ ನಿವಾಸಿ. ಹೆಸರು ರಾಕುಲ್. ಈಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆ ಹೇಳಿದ್ದಾಳೆ. ರಾಕುಲ್ ಗೆ ಹತ್ತು ವರ್ಷಗಳಿಂದ ಈ ಸಮಸ್ಯೆ ಇತ್ತಂತೆ. ಏನಾಗಿದೆ ಎಂಬುದನ್ನು ವೈದ್ಯರಿಗೆ ಪತ್ತೆ ಹಚ್ಚಲು ಆಗಿರಲಿಲ್ಲವಂತೆ. ಗ್ಯಾಸ್ ಇರಬೇಕು ಎಂದು ವೈದ್ಯರು ಹೇಳಿದ್ದರಂತೆ. ಗ್ಲುಟನ್‌ನಲ್ಲಿ ಸಮಸ್ಯೆ ಇದೆ ಎಂದು ಮಹಿಳೆ ಭಾವಿಸಿದ್ದಳಂತೆ. ವೈದ್ಯರು ಹೇಳಿದಂತೆ ಫೈಬರ್ ಇರುವ ಆಹಾರವನ್ನು ಹೆಚ್ಚು ಸೇವಿಸಲು ಶುರು ಮಾಡಿದ್ದಳು. ಸ್ವಲ್ಪಮಟ್ಟಿಗೆ ಇದ್ರಿಂದ ಪರಿಹಾರ ಸಿಕ್ಕಿದ್ದರೂ ಸಂಪೂರ್ಣ ಸಮಸ್ಯೆ ಕಡಿಮೆ ಆಗಿರಲಿಲ್ಲ. 2022ರಲ್ಲಿ ಆಕೆ ಸಮಸ್ಯೆ ಮತ್ತಷ್ಟು ಉಲ್ಬಣಿಸಿತ್ತು.
ಹೊಟ್ಟೆ ಮತ್ತು ಬೆನ್ನಿನ ಕೆಳಭಾಗದಲ್ಲಿ ಅಸಹನೀಯ ನೋವು ರಾಕುಲ್ ಕಾಡ್ತಿತ್ತು. ಹಾಲು ಕುಡಿದ್ರೂ ಹೊಟ್ಟೆ ಊದಿಕೊಳ್ಳುತ್ತಿತ್ತು. ಮಲದಲ್ಲಿ ಬದಲಾವಣೆ ಆಗ್ತಿರುತ್ತಿತ್ತು. ಬಣ್ಣದಲ್ಲೂ ಬದಲಾವಣೆ ಕಾಣಿಸಿಕೊಳ್ಳುತ್ತಿತ್ತು, ರಕ್ತ ಕೂಡ ಹೋಗ್ತಿತ್ತು ಎನ್ನುತ್ತಾಳೆ ರಾಕುಲ್. ಒಮ್ಮೆ ಅಪಾರ್ಟ್ಮೆಂಟ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಪರಿಸ್ಥಿತಿ ಕೈಮೀರಿದೆ ಎಂಬುದನ್ನು ಅರಿತ ರಾಕುಲ್ ಆಸ್ಪತ್ರೆಗೆ ಹೋಗಿದ್ದಾಳೆ. ಅನೇಕ ಚಿಕಿತ್ಸೆ ನಂತ್ರ ಆಕೆಗೆ ಕೊಲೊರೆಕ್ಟಲ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದನ್ನು ಕರುಳಿನ ಕ್ಯಾನ್ಸರ್ ಎಂದೂ ಕರೆಯುತ್ತಾರೆ.
ಬಡವರಿಗಾಗಿ ಆಯುಷ್ಮಾನ್ ಗರೀಬ್ ಆಸ್ಪತ್ರೆ, ಬಡ ಕ್ಯಾನ್ಸರ್ ರೋಗಿಗಳಿಗೊಂದು ಆಶಾಕಿರಣ!
ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆ ಬಹಳ ನಿಧಾನ. ಹಾಗಾಗಿಯೇ ಹತ್ತು ವರ್ಷಗಳ ಕಾಲ ರಾಕುಲ್ ಗೆ ಹೆಚ್ಚಿನ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ರೋಗಿಗಳಿಗೆ ರೋಗ ಲಕ್ಷಣ ಕಾಣಿಸಿಕೊಳ್ಳದೆ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ಬಂದು ನಿಲ್ಲುತ್ತದೆ. ರಾಕುಲ್ ಪರಿಸ್ಥಿತಿ ಕೂಡ ಭಯಾನಕವಾಗಿತ್ತು. ಅದನ್ನು ದೇಹದಿಂದ ಹೊರಹಾಕಲು ವೈದ್ಯರು ಸಾಕಷ್ಟು ಪ್ರಯತ್ನಪಟ್ಟಿದ್ದರು. ವಾಕರಿಕೆ, ಮಲಬದ್ಧತೆ, ಅತಿಸಾರ, ಪದೇ ಪದೇ ಶೌಚಾಲಯಕ್ಕೆ ಹೋಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣ ಪತ್ತೆಯಾಗ್ತಿದ್ದಂತೆ ವೈದ್ಯರನ್ನು ಭೇಟಿಯಾಗಿ ಯಕೃತ್ತಿನ ಬಯಾಪ್ಸಿಗೆ ಒಳಗಾದ್ರೆ ಇದನ್ನು ಗುಣಪಡಿಸಬಹುದು. ರೋಗ ಲಕ್ಷಣವನ್ನು ನಿರ್ಲಕ್ಷ್ಯ ಮಾಡಿದ್ರೆ ಸಾವಿಗೆ ಹತ್ತಿರವಾಗುತ್ತೀರಿ. ಹಾಗಾಗಿ ನಿಮ್ಮ ದಿನಚರಿಯಲ್ಲಾಗುವ ಬದಲಾವಣೆ ಬಗ್ಗೆ ಗಮನವಿರಲಿ ಎನ್ನುತ್ತಾರೆ ರಾಕುಲ್.