Asianet Suvarna News Asianet Suvarna News

ಉಡುಪಿಯ ಹುಡುಗಿ ಈಗ ಮಿಸ್ ಇಂಡಿಯಾ ಬೆಡಗಿ!

ಕರ್ನಾಟಕ ಮೂಲದ ಯುವತಿ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ ವರ್ಲ್ಡ್-2022’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಸಿನಿ ಶೆಟ್ಟಿ  ಕುಟುಂಬದ ಬಗ್ಗೆ ಮಾಹಿತಿ ಇಲ್ಲಿದೆ....

About Miss India 2022 Sini shetty udupi Karnataka vcs
Author
Bangalore, First Published Jul 4, 2022, 6:58 PM IST | Last Updated Jul 4, 2022, 6:58 PM IST

  ವರದಿ ಶಶಿಧರ ಮಾಸ್ತಿಬೈಲು ಏಷಿಯಾನೆಟ್ ಸುವರ್ಣ ನ್ಯೂಸ್

ಕರ್ನಾಟಕವನ್ನು ಪ್ರತಿನಿಧಿಸಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಸಿನಿ ಶೆಟ್ಟಿ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಡುಂಬು ಮೂಲದವರು. ಈಗಲೂ ನಿರಂತರವಾಗಿ ತವರೂರಿನ ಜೊತೆ ನಿಕಟ ಸಂಪರ್ಕ ಹೊಂದಿದವರು. ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಆಯ್ಕೆಯಾಗುತ್ತಿದ್ದಂತೆ, ಕಾಪುವಿನ ಮಡಂಬುವಿನಲ್ಲಿರುವ ಕುಟುಂಬಸ್ಥರು ಅತ್ಯಂತ ಖುಷಿಪಟ್ಟಿದ್ದಾರೆ. 

ಸಿನಿ ಶೆಟ್ಟಿ ಅವರ ತಂದೆ ಸದಾನಂದ ಶೆಟ್ಟಿ ಕಾಪು ಇನ್ನಂಜೆಯ ಮಡುಂಬು ಮೂಲದವರು. ಇದೇ ಊರಿನಲ್ಲಿ ಕೃಷಿ ಮಾಡುತ್ತಾ, ವಿದ್ಯಾಭ್ಯಾಸ ನಡೆಸಿದ್ದರು. 80ರ ದಶಕದಲ್ಲಿ ಶಿಕ್ಷಣ ಪೂರೈಸಿ ದೂರದ ಮುಂಬೈಗೆ ಹೋದವರು. ಅವತ್ತಿನಿಂದಲೂ ಕಷ್ಟ ಸುಖ ಪ್ರತಿಯೊಂದು ಸಂದರ್ಭದಲ್ಲಿ ತನ್ನೂರಿಗೆ ಬರುತ್ತಿದವರು. ಈಗಲೂ ಅಷ್ಟೇ, ವರ್ಷಕ್ಕೆ ಮೂರ್ನಾಲ್ಕು ಸಲ ಕುಟುಂಬ ಸಮೇತ ಮಾವನ ಮನೆಗೆ ಬರುತ್ತಾರೆ.

About Miss India 2022 Sini shetty udupi Karnataka vcs

ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಆಯ್ಕೆ ಆಗಿರುವುದು, ಮಡುಂಬುವಿನಲ್ಲಿರುವ ಆಕೆಯ ಅಜ್ಜ, ಅಂದರೆ ತಂದೆಯ ಮಾವ ರಾಮಣ್ಣ ಶೆಟ್ಟಿ ಅವರಿಗೆ ತುಂಬಾ ಖುಷಿ ಕೊಟ್ಟಿದೆ. ರಾಮಣ್ಣ ಶೆಟ್ಟರ ಪತ್ನಿ ಶಶಿಕಲಾ ಕೂಡ, ತಮ್ಮ ಮನೆಯ ಹುಡುಗಿಯ ಸಾಧನೆಯಿಂದ ಹಿರಿ ಹಿರಿ ಹೀಗ್ಗಿದ್ದಾರೆ.

ಕರ್ನಾಟಕದ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ’

ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಘೋಷಣೆಯಾಗುತ್ತಿದ್ದಂತೆ, ಸ್ವತಹ ಸದಾನಂದ ಶೆಟ್ಟರು ಊರಿಗೆ ಕರೆ ಮಾಡಿ ಈ ಸಂತೋಷದ ವಿಷಯ ಹಂಚಿಕೊಂಡಿದ್ದಾರೆ. ಸಿನಿ ಶೆಟ್ಟಿಯ ಪ್ರತಿಯೊಂದು ಸಾಧನೆಯನ್ನು ಮಡುಂಬುವಿನಲ್ಲಿರುವ ಆಕೆಯ ಬಂಧುಗಳು ಹತ್ತಿರದಿಂದ ಗಮನಿಸಿದ್ದಾರೆ. ವರ್ಷಕ್ಕೊಮ್ಮೆಯಾದರೂ ಆಕೆ ಊರಿಗೆ ಬಂದಾಗ, ಆಕೆ ತಮ್ಮೊಂದಿಗೆ ಒಡನಾಡುತ್ತಿದ್ದ ರೀತಿಯನ್ನು ನೆನಪಿಸಿಕೊಂಡು ಖುಷಿ ಪಟ್ಟಿದ್ದಾರೆ. 

ಚೆನ್ನಾಗಿ ತುಳು ಮಾತನಾಡುವ ಸಿನಿ ಶೆಟ್ಟಿ, ಊರಿಗೆ ಬಂದಾಗೆಲ್ಲ ಇಲ್ಲಿನ ಕೃಷಿ ಗದ್ದೆ ದೈವ ದನಗಳ ಜೊತೆಬೆರೆತು ಸಂತೋಷ ಪಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಮುಂಬೈನ ಆಧುನಿಕ ಜೀವನ ಪದ್ಧತಿಗೆ ಹೊಂದಿಕೊಂಡಿದ್ದರೂ ಇವತ್ತಿಗೂ ಸಿನಿ ಶೆಟ್ಟಿಗೆ, ತುಳುನಾಡಿನ ಕೋಳಿ ಮೀನಿನ ಊಟವೇ ಬಾರಿ ಇಷ್ಟ ಎಂದು ಬಂದುಗಳು ಹೇಳಿದ್ದಾರೆ.

About Miss India 2022 Sini shetty udupi Karnataka vcs

ಭರತನಾಟ್ಯದಲ್ಲೂ ಸಿನಿ ಶೆಟ್ಟಿ ಪ್ರವೀಣೆಯಾಗಿದ್ದಾರೆ. ದೂರದ ಮುಂಬೈನಲ್ಲಿ ಆಕೆಯ ಭರತನಾಟ್ಯ ಪ್ರದರ್ಶನ ಬಿದ್ದಾಗ ಊರಿನಿಂದ ಹೋಗಿ ಸದಾನಂದ ಶೆಟ್ಟರ ಅತ್ತೆ ಮಾವ ನೋಡಿ ಬಂದಿದ್ದಾರೆ. ಕೇವಲ ಮಿಸ್ ಇಂಡಿಯಾ ಅಲ್ಲ ಮಿಸ್ ವರ್ಲ್ಡ್ ಆಗಿ ಸಿನಿ ಆಯ್ಕೆಯಾಗಲಿ ಎಂದು ಹಾರೈಸಿದ್ದಾರೆ.ಬಾಲಿವುಡ್ ನಲ್ಲೂ ಸಿನಿ ಶೆಟ್ಟಿ ಮಿಂಚಬೇಕು ಅನ್ನೋದು ಆಕೆಯ ಕುಟುಂಬದ ಆಸೆ. ಆಕೆಯ ನೃತ್ಯ ಪ್ರತಿಭೆ ಹಾಗೂ ಮಾಡೆಲಿಂಗ್ ಟ್ಯಾಲೆಂಟ್ ಅನ್ನು ಗಮನಿಸಿರುವ ಕುಟುಂಬ, ಭವಿಷ್ಯದಲ್ಲಿ ಸಿನಿ ಶೆಟ್ಟಿ ಬಾಲಿವುಡ್ ತಾರೆಯಾಗುತ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಮಿಸ್ ಇಂಡಿಯಾ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿಯ ಸುಂದರ ಫೋಟೋಗಳು

ಸದ್ಯ ಸಿನಿ ಶೆಟ್ಟಿ ಕುಟುಂಬ ಸಂಭ್ರಮದಲ್ಲಿದೆ. ಆದಷ್ಟು ಬೇಗ ಸಿನಿ ಶೆಟ್ಟಿ ತವರಿಗೆ ಬಂದು, ಪ್ರತ್ಯಕ್ಷವಾಗಿ ಆಕೆಯ ಜೊತೆ ಸಂತೋಷ ಹಂಚಿಕೊಳ್ಳುವಂತಾಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

Latest Videos
Follow Us:
Download App:
  • android
  • ios