* ಕರ್ನಾಟಕದ ಯುವತಿ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ-2022’ ಸ್ಪರ್ಧೆಯಲ್ಲಿ ವಿಜೇತೆ* ಮುಂಬೈನಲ್ಲಿ ನಡೆದ ಸ್ಪರ್ಧೆ* ರಾಜಸ್ಥಾನದ ರುಬಲ್‌ ಶೆಖಾವತ್‌ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್‌ 1ನೇ ಹಾಗೂ 2ನೇ ರನ್ನರ್‌ ಅಪ್‌

ಮುಂಬೈ(ಜು.04): ಕರ್ನಾಟಕದ ಯುವತಿ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ-2022’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಭಾನುವಾರ ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿವಿಜೇತರಾಗಿದ್ದು, ರಾಜಸ್ಥಾನದ ರುಬಲ್‌ ಶೆಖಾವತ್‌ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್‌ 1ನೇ ಹಾಗೂ 2ನೇ ರನ್ನರ್‌ ಅಪ್‌ ಆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಕ್ಷಿಣ ಕನ್ನಡ ಮೂಲದ 21 ವರ್ಷದ ಸಿನಿ, ಮುಂಬೈನಲ್ಲಿ ಹುಟ್ಟಿಬೆಳೆದವರು. ಭರತನಾಟ್ಯ ಕಲಾವಿದೆಯಾಗಿದ್ದಾರೆ. ಇವರು ಮುಂದೆ ಮಿಸ್‌ ವಲ್ಡ್‌ರ್‍ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್‌ ಇಂಡಿಯಾ ಸ್ಪರ್ಧೆಗೆ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೊರಿಯಾ, ಮಿಥಾಲಿ ರಾಜ್‌ ಮುಂತಾದವರು ಜೂರಿಗಳಾಗಿದ್ದರು.

ಸಿನಿ ಶೆಟ್ಟಿ ಯಾರು?

ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದರು. ಆದರೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮೂಲದವರು ಮತ್ತು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಹೀಗಿದ್ದರೂ ಅವರಿಗೆ ನೃತ್ಯ ಎಂದರೆ ಬಹಳ ಅಚ್ಚುಮೆಚ್ಚು. ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ತನ್ನ ಅರಂಗೇತ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದರು.

ಇನ್ನುಉ ಮಿಸ್ ಇಂಡಿಯಾ 2022 ರನ್ನರ್ ಅಪ್ ರುಬಲ್ ಶೇಖಾವತ್ ನೃತ್ಯ, ನಟನೆ, ಚಿತ್ರಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಬ್ಯಾಡ್ಮಿಂಟನ್ ಇಷ್ಟಪಡುತ್ತಾರೆ. ಮಿಸ್ ಇಂಡಿಯಾ 2022 ರ ಎರಡನೇ ರನ್ನರ್ ಅಪ್ ಶಿನಾತಾ ಚೌಹಾಣ್ ಒಬ್ಬ ವಿದ್ವಾಂಸರಾಗಿದ್ದಾರೆ ಮತ್ತು ಯಾವಾಗಲೂ ನಾಯಕತ್ವದ ಪಾತ್ರಗಳನ್ನು ವಹಿಸಿಕೊಂಡಿದ್ದಾರೆ.