ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...
ಮಕ್ಕಳಾಗಿಲ್ಲ ಎನ್ನುವವರಿಗೆ ಹಾಗೂ ನಿಮ್ಮ ಇಷ್ಟದ ಮಗುವನ್ನು ಹುಟ್ಟಿಸುವ ಕುರಿತು ಸಂಶೋಧನೆ ಒಂದು ನಡೆಯುತ್ತಿದೆ. ಏನಿದು ಐವಿಜಿ?

ಇಂದು ಹಲವಾರು ಕಾರಣಗಳಿಂದ ಬಂಜೆತನ ಉಂಟಾಗುತ್ತಿದೆ. ಕೆಲವೊಮ್ಮೆ ಎಲ್ಲವೂ ಸರಿಯಾಗಿದ್ದರೂ ಮಕ್ಕಳು ಆಗುವುದೇ ಇಲ್ಲ. ವೈದ್ಯರಿಗೂ ನಿಲುಕದ ಪ್ರಶ್ನೆಗಳು ಉಳಿದುಬಿಡುತ್ತವೆ. ಮತ್ತೆ ಕೆಲವೊಮ್ಮೆ ಪತಿ ಅಥವಾ ಪತ್ನಿಯಲ್ಲಿ ಸಮಸ್ಯೆಗಳು ಇದ್ದರೆ ಮಕ್ಕಳಾಗದೇ ಇರಬಹುದು. ಇವರೂ ಸೇರಿದಂತೆ ಸಲಿಂಗ ದಂಪತಿಗಳು, ವಯಸ್ಸಾದ ವ್ಯಕ್ತಿಗಳು ಮುಂತಾದವರು ಮಕ್ಕಳನ್ನು ಪಡೆಯುವುದಕ್ಕೆ ಅನುವು ಮಾಡಿಕೊಡುವಂಥ ಹೊಸ ಆವಿಷ್ಕಾರವೊಂದನ್ನು ನಡೆಸಲಾಗುತ್ತಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಸಂತಾನೋತ್ಪತ್ತಿ ವಿಜ್ಞಾನದಲ್ಲಿ ಒಂದು ಹೊಸ ಆವಿಷ್ಕಾರ ಇದಾಗಿದೆ. ಇದರ ಜೊತೆಗೆ ತಮ್ಮ ಮಕ್ಕಳು ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಮೊದಲೇ ನಿಗದಿ ಮಾಡುವುದು ಕೂಡ ಈ ಸಂಶೋಧನೆಯ ಭಾಗವಾಗಿದೆ.
ಇನ್-ವಿಟ್ರೊ ಗ್ಯಾಮೆಟೋಜೆನೆಸಿಸ್ (IVG) ಎಂದು ಕರೆಯಲ್ಪಡುವ ಈ ತಂತ್ರಜ್ಞಾನದ ಮೂಲಕ ಪ್ರಯೋಗಾಲಯದಲ್ಲಿ ಉತ್ಪತ್ತಿಯಾಗುವ ವೀರ್ಯ ಮತ್ತು ಮೊಟ್ಟೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಜ್ಞಾನಿಗಳು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಈ ಪ್ರಗತಿಯು ಬಂಜೆತನವನ್ನು ನಿವಾರಿಸುವುದಕ್ಕಿಂತ ಹೆಚ್ಚಿನದನ್ನು ಮಾಡಲು ಅನುವು ಮಾಡಿಕೊಡುತ್ತದೆ ಎನ್ನುವುದು ಅವರ ಮಾತು. ತಮ್ಮ ಭವಿಷ್ಯದ ಮಕ್ಕಳಿಗೆ ನಿರ್ದಿಷ್ಟ ಗುಣಲಕ್ಷಣಗಳನ್ನು ಆಯ್ಕೆ ಮಾಡಲು ಕೂಡ ಇದರಿಂದ ಸಾಧ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. IVG ಯಲ್ಲಿನ ಪ್ರಗತಿಯು ಪ್ರಭಾವಶಾಲಿಯಾಗಿದ್ದರೂ, ತಂತ್ರಜ್ಞಾನವು ಇನ್ನೂ ಆರಂಭಿಕ ಹಂತಗಳಲ್ಲಿದೆ ಮತ್ತು ಮಾನವ ಅನ್ವಯಕ್ಕೆ ಇನ್ನೂ ಸಿದ್ಧವಾಗಿಲ್ಲ. ಹೆಚ್ಚಿನ ಅಧ್ಯಯನಗಳನ್ನು ಪ್ರಾಣಿಗಳ ಮೇಲೆ ನಡೆಸಲಾಗಿದೆ, ಮಾನವ ಪ್ರಯೋಗಗಳು ಇನ್ನೂ ವರ್ಷಗಳ ದೂರದಲ್ಲಿವೆ.
ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!
ಇದರ ಬಗ್ಗೆ ವಿಶ್ಲೇಷಿಸಿರುವ ಸಂಶೋಧಕರು, ಲೈಂಗಿಕ ಸಂತಾನೋತ್ಪತ್ತಿಯ ಅಗತ್ಯವಿಲ್ಲದೆ ಚರ್ಮ ಅಥವಾ ರಕ್ತ ಕಣಗಳಿಂದ ವೀರ್ಯ ಮತ್ತು ಮೊಟ್ಟೆಗಳನ್ನು ರಚಿಸುವುದು ಇದರ ಮುಖ್ಯ ಧ್ಯೇಯವಾಗಿದೆ ಎಂದಿದ್ದಾರೆ. ಸಲಿಂಗ ದಂಪತಿಗಳು, ವಯಸ್ಸಾದ ವ್ಯಕ್ತಿಗಳು ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದ ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಾಗದವರಿಗೆ ಇದು ಕ್ರಾಂತಿಕಾರಿಯಾಗಬಹುದು. ಬಂಜೆತನವನ್ನು ಪರಿಹರಿಸುವುದರ ಜೊತೆಗೆ, ದೈಹಿಕ ನೋಟ, ಬುದ್ಧಿವಂತಿಕೆ ಮತ್ತು ರೋಗ ನಿರೋಧಕತೆಯಂತಹ ಆನುವಂಶಿಕ ಗುಣಲಕ್ಷಣಗಳನ್ನು ಆಯ್ಕೆ ಮಾಡುವ ಮೂಲಕ IVG ಹೊಸ ಬಾಗಿಲನ್ನು ತೆರೆಯಲಿದೆ ಎಂದು ಹೇಳಿದ್ದಾರೆ.
ಈ ತಂತ್ರಜ್ಞಾನವು ಆನುವಂಶಿಕ ಅಸ್ವಸ್ಥತೆಗಳನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನಲಾಗಿದೆ. ಭವಿಷ್ಯದಲ್ಲಿ, ಪೋಷಕರು ಆನುವಂಶಿಕ ಕಾಯಿಲೆಗಳ ಕಡಿಮೆ ಅಪಾಯವಿರುವ ಭ್ರೂಣಗಳನ್ನು ಆಯ್ಕೆ ಮಾಡಬಹುದು, ಇದು ಆರೋಗ್ಯಕರ ಭವಿಷ್ಯದ ಪೀಳಿಗೆಯನ್ನು ಖಚಿತಪಡಿಸುತ್ತದೆ. ಅನೇಕರಿಗೆ, ವೈಯಕ್ತಿಕ ಅಥವಾ ವೈದ್ಯಕೀಯ ಸಂದರ್ಭಗಳನ್ನು ಲೆಕ್ಕಿಸದೆ ಜೈವಿಕ ಮಕ್ಕಳನ್ನು ಹೊಂದುವ ಸಾಮರ್ಥ್ಯವು ಹೊಸ ಮಟ್ಟದ ಸಂತಾನೋತ್ಪತ್ತಿ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ. ಆದರೆ ಇದೇ ವೇಳೆ, ಇದರ ಅಪಾಯಗಳ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಈ ಕಾರ್ಯವಿಧಾನಗಳು ದುಬಾರಿಯಾಗಬಹುದು. ಇದರ ಜೊತೆಗೆ, ಈ ವಿಧಾನದ ಮೂಲಕ ಗರ್ಭಧರಿಸಿದ ಮಕ್ಕಳು ಯಾವ ರೀತಿ ಹುಟ್ಟಲಿದ್ದಾರೆ ಎನ್ನುವ ಬಗ್ಗೆಯೂ ಇನ್ನಷ್ಟೇ ತಿಳಿಯಬೇಕಿದೆ ಎಂದಿದ್ದಾರೆ.
ಮೇಲೆ ಹೋಗುವ ಗುಟುಕು ನೀರನ್ನೂ ಹಾರಿಯೇ ಕುಡಿಯಬೇಕು: ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್ ವಿಡಿಯೋ ವೈರಲ್