Kolar News: ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ
ಶೌಚಾಲಯಕ್ಕೆ ತೆರಳಿದ್ದ ಗರ್ಭಿಣಿಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಇಲ್ಲಿನ ಪುರಸಭೆಯ ಸಂಕೀರ್ಣದಲ್ಲಿ ಶುಕ್ರವಾರ ನಡೆದಿದೆ. ಉತ್ತರಪ್ರದೇಶದ ಮಹಿಳೆ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಶೌಚಾಲಯದಲ್ಲಿ ಜನ್ಮ ನೀಡಿರುವ ಮಹಿಳೆ
ಮಾಲೂರು (ಡಿ.17): ಶೌಚಾಲಯಕ್ಕೆ ತೆರಳಿದ್ದ ಗರ್ಭಿಣಿಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಇಲ್ಲಿನ ಪುರಸಭೆಯ ಸಂಕೀರ್ಣದಲ್ಲಿ ಶುಕ್ರವಾರ ನಡೆದಿದೆ. ಉತ್ತರಪ್ರದೇಶದ ಮಹಿಳೆ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಆಕೆಗೆ ಬಿಪಿ ಜಾಸ್ತಿಯಾಗಿತ್ತು. ಕೋಲಾರ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಆಂಬುಲೆನ್ಸ್ ಬರುವಷ್ಟರಲ್ಲಿ ಆಕೆ ಶೌಚಾಲಯಕ್ಕೆ ತೆರಳಿದ್ದರು. ಆದರೆ ಶೌಚಾಲಯದಲ್ಲೇ ಹೆರಿಗೆಯಾಯಿತು. ಬಳಿಕ ಆಶಾ ಕಾರ್ಯಕರ್ತೆಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರದ ಪುರಸಭೆಯ ಐಡಿ ಸಮಿತಿ ಸಂಕೀರ್ಣದ ಶೌಚಾಲಯದಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದ ತಕ್ಷಣ ಆಶಾ ಕಾರ‍್ಯಕರ್ತೆಯರು ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿ, 108 ಆ್ಯಂಬುಲೆನ್ಸ್‌ನಲ್ಲಿ ಮಹಿಳೆ ಹಾಗೂ ನವಜಾತ ಶಿಶುವನ್ನು ಆಸ್ಪತ್ರೆಗೆ ಸಾಗಿಸಿದರು.
Women Health: ಗರ್ಭಧಾರಣೆಗೆ ಮಾತ್ರವಲ್ಲ, ಈ ಕಾರಣಕ್ಕೂ ಮಿಸ್ ಆಗುತ್ತೆ ಪಿರಿಯಡ್ಸ್
ಇಲ್ಲಿನ ಯಶವಂತಪುರ ಬಳಿಯ ಪೈಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಉತ್ತರಪ್ರದೇಶ ಮೂಲದ ಯಾಮಿನಿ (ಹೆಸರು ಬದಲಾಯಿಸಲಾಗಿದೆ) ಗರ್ಭವತಿಯಾಗಿದ್ದು, ತನ್ನ ಗಂಡನೊಂದಿಗೆ ಆರೋಗ್ಯ ತಪಾಸಣೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಆಕೆಗೆ ರಕ್ತದೊತ್ತಡ ಹೆಚ್ಚಾದ ಕಾರಣ ಕೋಲಾರದ ಆಸ್ಪತ್ರೆಗೆ ಸಾಗಿಸುವಂತೆ ವೈದ್ಯರು ಸೂಚಿಸಿದ್ದಾರೆ. ಬಳಿಕ 108 ಕ್ಕೆ ಕರೆ ಮಾಡಿ, ಅ್ಯಂಬುಲೆನ್ಸ್ ಆಸ್ಪತ್ರೆ ಬಳಿ ಬರುವ ವೇಳೆಗೆ ಮಹಿಳೆ ಶೌಚಕ್ಕಾಗಿ ಆಸ್ಪತ್ರೆ ಎದುರೇ ಇದ್ದ ಪುರಸಭೆ ಸಂಕೀರ್ಣದಲ್ಲಿನ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದ ಆಕೆಯನ್ನು ಹಾಗೂ ನವಜಾತ ಹೆಣ್ಣು ಮಗುವನ್ನು ಆಶಾ ಕಾರ‍್ಯಕರ್ತೆಯರು ಆಸ್ಪತ್ರೆಗೆ ಸಾಗಿಸಿದ್ದಾರೆ. Women's Health: ಗರ್ಭಧಾರಣೆ ಸಾಧ್ಯವಾಗ್ತಿಲ್ವಾ ? ಹಾಗಿದ್ರೆ ತಪ್ಪದೇ ಈ ಟೆಸ್ಟ್ ಮಾಡಿಸ್ಕೊಳ್ಳಿ