ಎಷ್ಟು ಸೆಕ್ಸ್ ಪಾರ್ಟನರ್ಸ್ ಇದ್ದಾರೆಂದು ವೈದ್ಯರು ಕೇಳಿದರೆ ಏನು ಹೇಳುತ್ತೀರಿ?
ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆ ಅನಾರೋಗ್ಯ ಕಾಡುವುದು ಹೆಚ್ಚು. ಅನೇಕ ಸೋಂಕಿಗೆ ಮಹಿಳೆ ಒಳಗಾಗ್ತಾರೆ. ಸೆಕ್ಸ್ ಜೀವನದಲ್ಲೂ ಕೆಲ ಸಮಸ್ಯೆ ಎದುರಿಸುತ್ತಾಳೆ. ಆದ್ರೆ ಅದನ್ನು ವೈದ್ಯರ ಬಳಿ ಹೇಳದೆ ಮುಚ್ಚಿಟ್ಟು ಸಮಸ್ಯೆ ಹೆಚ್ಚು ಮಾಡಿಕೊಳ್ತಾಳೆ.
ಸ್ತ್ರೀ ರೋಗ ತಜ್ಞರ ಬಳಿ ಹೋಗಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮಹಿಳೆಯರಿಗೆ ಅವಶ್ಯಕ. ಅನೇಕ ಮಹಿಳೆಯರು ಚಿಕಿತ್ಸೆಗೆ ಹೋಗ್ತಾರೆ ಆದ್ರೆ ಸೆಕ್ಸ್ ಲೈಫ್ ಗೆ ಸಂಬಂಧಿಸಿದ ವಿಷ್ಯವನ್ನು ಮುಚ್ಚಿಡ್ತಾರೆ. ಇಂಟಿಮೆಟ್ ವಿಷ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಬಳಿ ಎಲ್ಲವನ್ನೂ ಹೇಳದೆ ವಿಷ್ಯ ಮುಚ್ಚಿಟ್ಟರೆ ಅದು ಮುಂದೆ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ. ಸ್ತ್ರೀರೋಗ ತಜ್ಞರು ಕೇಳುವ ಎಲ್ಲ ಪ್ರಶ್ನೆಗಳಿಗೆ ಯಾವುದೇ ಮುಜುಗರವಿಲ್ಲದೆ, ಯಾವುದೇ ಮುಚ್ಚುಮರೆಯಿಲ್ಲದೆ ಉತ್ತರ ನೀಡುವುದು ಮುಖ್ಯವಾಗುತ್ತದೆ. ನೀವು ಚಿಕಿತ್ಸೆಗೆಂದು ಹೋದಾಗ ಸ್ತ್ರೀರೋಗ ತಜ್ಞರು ನಿಮಗೆ ಕೆಲವೊಂದು ಪ್ರಶ್ನೆ ಕೇಳ್ತಾರೆ. ಆ ಪ್ರಶ್ನೆಗಳು ಯಾವುದು ಹಾಗೆ ಅದನ್ನು ಯಾಕೆ ಮುಚ್ಚಿಡಬಾರದು ಎಂಬ ಸಂಗತಿಯನ್ನು ನಾವಿಂದು ನಿಮಗೆ ಹೇಳ್ತೇವೆ.
ಸ್ತ್ರೀರೋಗ ತಜ್ಞ (Gynecologist) ರು ಕೇಳುವ ಪ್ರಶ್ನೆಗಳು :
ನೀವು ಲೈಂಗಿಕ (Sex) ಜೀವನದಲ್ಲಿ ಸಕ್ರಿಯವಾಗಿದ್ದೀರಾ? : ಸ್ತ್ರೀರೋಗ ತಜ್ಞರು ಕೇಳುವ ಈ ಪ್ರಶ್ನೆ ನಿಮಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ರೆ ಮಾತ್ರ ವೈದ್ಯರಿಗೆ ಯಾವ ಟೆಸ್ಟ್ ಮಾಡ್ಬೇಕು ಎಂಬುದು ಗೊತ್ತಾಗುತ್ತದೆ. ಸರಿಯಾದ ಮಾಹಿತಿ ನೀಡದೆ ಮುಚ್ಚಿಟ್ಟರೆ ಚಿಕಿತ್ಸೆ (Treatment) ಕೂಡ ಬೇರೆ ದಾರಿಯಲ್ಲಿ ಸಾಕುತ್ತದೆ. ಇದ್ರಿಂದ ನಿಮ್ಮ ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ನೀವು ಬೇಗ ಗುಣಮುಖರಾಗಲು ಸಾಧ್ಯವಾಗುವುದಿಲ್ಲ.
ನಿಮಗೆ ಎಷ್ಟು ಸೆಕ್ಸ್ ಪಾರ್ಟನರ್ಸ್ ಇದ್ದಾರೆ : ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟದ ಕೆಲಸ. ಮಹಿಳೆಯರು ಇದಕ್ಕೆ ಉತ್ತರಿಸಲು ಇಚ್ಛಿಸುವುದಿಲ್ಲ. ಅದು ನಮ್ಮಿಷ್ಟ ಎನ್ನುವವರಿದ್ದಾರೆ. 15 ವರ್ಷಗಳಿಂದ ಒಬ್ಬ ಸಂಗಾತಿ ಜೊತೆಯೇ ಸಂಬಂಧ ಬೆಳೆಸ್ತಿದ್ದರೆ ಎಸ್ ಟಿಡಿ ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡುವುದಿಲ್ಲ. ಒಂದು ತಿಂಗಳಲ್ಲಿ ಮೂರ್ನಾಲ್ಕು ಸಂಗಾತಿ ಜೊತೆ ಸಂಬಂಧ ಬೆಳೆಸಿದ್ದರೆ ಎಸ್ ಟಿಡಿ ಪರೀಕ್ಷೆ ಅನಿವಾರ್ಯವಾಗುತ್ತದೆ. ಹಾಗಾಗಿ ನೀವು ಈ ಪ್ರಶ್ನೆಗೂ ಪ್ರಾಮಾಣಿಕ ಉತ್ತರ ನೀಡಬೇಕಾಗುತ್ತದೆ.
Ovulation disorder ತಾಯಿಯಾಗುವ ಕನಸನ್ನು ಚೂರು ಮಾಡುವ ಸಮಸ್ಯೆ!
ನಿಮ್ಮ ಮುಟ್ಟು ಸಮಯಕ್ಕೆ ಸರಿಯಾಗಿ ಆಗುತ್ತಾ? : ಪಿರಿಯಡ್ಸ್ ಸೈಕಲ್ 28 ದಿನಗಳದ್ದಾಗಿರುತ್ತದೆ. ನಾಲ್ಕು ದಿನ ಮೊದಲು ಅಥವಾ ನಾಲ್ಕು ದಿನ ನಂತ್ರ ಕೂಡ ಮುಟ್ಟಾಗುವುದು ಸಾಮಾನ್ಯ. ಆದ್ರೆ ಈ ಗ್ಯಾಪ್ ಹೆಚ್ಚಾದ್ರೆ ಸಮಸ್ಯೆ ಕಾಡುತ್ತದೆ. ಅನೇಕ ಬಾರಿ ಇದು ಗಂಭೀರ ಖಾಯಿಲೆಗೆ ಕಾರಣವಾಗುತ್ತದೆ. ಮುಟ್ಟು ಸರಿಯಾಗಿ ಆಗ್ತಿಲ್ಲವೆಂದ್ರೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.
ಸಂಭೋಗದ ನಂತ್ರ ನೋವಾಗುತ್ತಾ? ರಕ್ತಸ್ರಾವ ಆಗುತ್ತಾ? : ಸ್ತ್ರೀರೋಗ ತಜ್ಞರು ಈ ಪ್ರಶ್ನೆಯನ್ನು ಕೂಡ ನಿಮಗೆ ಕೇಳ್ತಾರೆ. ಸೆಕ್ಸ್ ನಂತ್ರ ಅಪರೂಪಕ್ಕೆ ಯೋನಿ ನೋವಾದ್ರೆ ಅದು ಸಾಮಾನ್ಯ. ಆದ್ರೆ ಪ್ರತಿ ಬಾರಿ ಸಂಭೋಗದ ನಂತ್ರ ಹಾಗೂ ಸಂಭೋಗದ ವೇಳೆ ಯೋನಿ ನೋವು ಅಥವಾ ರಕ್ತಸ್ರಾವಾಗ್ತಿದ್ದರೆ ಅದು ಗಂಭೀರ ಸಮಸ್ಯೆ. ಈ ವೇಳೆ ವೈದ್ಯರು ಸೋಂಕಿನ ಪರೀಕ್ಷೆ ಮಾಡುತ್ತಾರೆ.
ಯೋನಿ ಡಿಸ್ಚಾರ್ಜ್ ಅಥವಾ ವಾಸನೆಯಲ್ಲಿ ಏನಾದರೂ ಬದಲಾವಣೆ ಇದೆಯೇ? : ಅನೇಕ ಮಹಿಳೆಯರು ಇದಕ್ಕೆ ಉತ್ತರ ನೀಡಲು ಮುಂದಾಗೋದಿಲ್ಲ. ಇದೇ ಕಾರಣಕ್ಕೆ ವೈದ್ಯರು ಕೂಡ ಈ ಪ್ರಶ್ನೆಯನ್ನು ಅಪರೂಪಕ್ಕೆ ಕೇಳ್ತಾರೆ. ಆದ್ರೆ ಯೋನಿ ಡಿಸ್ಜಾರ್ಜ್ ನಲ್ಲಿ ಬದಲಾವಣೆ ಅಥವಾ ವಾಸನೆ ಕಾಣಿಸಿಕೊಳ್ತಿದ್ದರೆ ಅದು ಸೋಂಕಿಗೆ ಕಾರಣವಾಗಿರಬಹುದು. ಹಾಗಾಗಿ ಈ ವಿಷ್ಯವನ್ನು ಕೂಡ ವೈದ್ಯರ ಬಳಿ ಹೇಳುವ ಅವಶ್ಯಕತೆಯಿದೆ.
40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು
ಸ್ತನವನ್ನು ಚೆಕ್ ಮಾಡಿಕೊಳ್ತೀರಾ? : ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನೀವು ಸ್ತನ ಚೆಕ್ ಮಾಡಿಕೊಳ್ಳುವುದು ಅತ್ಯಗತ್ಯ. ನಿಮಗೆ ಈ ವಿಷ್ಯವನ್ನು ನೆನಪು ಮಾಡುವುದು ವೈದ್ಯರ ಕರ್ತವ್ಯ.