Ovulation disorder ತಾಯಿಯಾಗುವ ಕನಸನ್ನು ಚೂರು ಮಾಡುವ ಸಮಸ್ಯೆ!
ತಾಯಿಯಾಗುವುದು ಯಾವುದೇ ಮಹಿಳೆಗೆ ತುಂಬಾ ಸಂತೋಷ ನೀಡೋ ವಿಷಯ. ಆದರೆ, ಈ ಗರ್ಭಧಾರಣೆ ಅಂಡೋತ್ಪತ್ತಿಯನ್ನು ಅವಲಂಬಿಸಿರುತ್ತದೆ. ಇದು ಓವರಿ ಎಗ್ ಉತ್ಪಾದಿಸುವ ಮತ್ತು ಅದನ್ನು ಬಿಡುಗಡೆ ಮಾಡುವ ಒಂದು ಪ್ರಕ್ರಿಯೆ. ಬಂಜೆತನ ಸಮಸ್ಯೆ ಎಲ್ಲಾ ಪ್ರಕರಣಗಳಲ್ಲಿ ಹೆಚ್ಚಿನ ಸಮಸ್ಯೆಯ ಹಿಂದಿನ ಕಾರಣವೆಂದರೆ ಅಂಡಾಶಯದ ಸಮಸ್ಯೆ. ದೇಹವು ಕೆಲವು ಸಮಸ್ಯೆಗಳನ್ನು ಸೂಚಿಸುತ್ತದೆ. ಆದರೆ, ಮಹಿಳೆಯರು ಆ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ, ಇದು ನಂತರ ಗರ್ಭಧಾರಣೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಇಂದು ಈ ಲೇಖನದಲ್ಲಿ ಅಂಡಾಶಯದ ಅಸ್ವಸ್ಥತೆಯ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸುತ್ತೇವೆ. ಅವುಗಳ ಬಗ್ಗೆ ತಿಳಿದುಕೊಳ್ಳೋದು ಉತ್ತಮ.
ಅಂಡೋತ್ಪತ್ತಿ ಸಮಸ್ಯೆ (Ovulation disorder) ಎಂದರೇನು?
ಮಹಿಳೆಯರಲ್ಲಿ ಬಂಜೆತನಕ್ಕೆ ಅತ್ಯಂತ ಸಾಮಾನ್ಯ ಕಾರಣವೆಂದರೆ ಓವ್ಯುಲೇಶನ್ ಡಿಸಾರ್ಡರ್. ಓವ್ಯುಲೇಶನ್ ಡಿಸಾರ್ಡರ್ ಅನ್ನು ಮಹಿಳೆಯ ಋತುಚಕ್ರದ ಸಮಯದಲ್ಲಿ ಅಂಡಾಣು ರಚನೆಯಲ್ಲಿನ ಅನಿಯಮಿತತೆ ಎಂದು ಕರೆಯಬಹುದು. ಈ ಕಾರಣದಿಂದಾಗಿ ಮಹಿಳೆಯ ಸಂತಾನೋತ್ಪತ್ತಿ ಹಾರ್ಮೋನುಗಳ ಸಮಸ್ಯೆಯೂ ಪ್ರಾರಂಭವಾಗುತ್ತದೆ, ಇದರಿಂದಾಗಿ ಮಹಿಳೆಗೆ ಗರ್ಭಧರಿಸಲು ಕಷ್ಟ. ಈ ಓವ್ಯುಲೇಶನ್ ಡಿಸಾರ್ಡರ್ ಹಿಂದಿನ ಕಾರಣವೆಂದರೆ ಕೆಲವು ಔಷಧಿಗಳು, ವೈದ್ಯಕೀಯ ಸಮಸ್ಯೆಗಳು ಮತ್ತು ಕಳಪೆ ಜೀವನಶೈಲಿ.
ವಿವಿಧ ಓವ್ಯುಲೇಶನ್ ಡಿಸಾರ್ಡರ್ ಯಾವುವು?
ಅಧಿಕ ತೂಕ ಅಥವಾ ಕಡಿಮೆ ತೂಕವು ಹಾರ್ಮೋನ್ ಮಟ್ಟವನ್ನು ಅಡ್ಡಿಪಡಿಸಬಹುದು, ಅನಿಯಮಿತ ಹಾರ್ಮೋನ್ ಉತ್ಪಾದನೆಗೆ ಕಾರಣವಾಗಬಹುದು, ಅಂಡಾಶಯಗಳಿಗೆ ಹಾನಿ ಮಾಡಬಹುದು ಮತ್ತು ಅಂಡೋತ್ಪತ್ತಿ ಸಮಸ್ಯೆ ಉಂಟುಮಾಡಬಹುದು. ರೋಗಗಳು, ಔಷಧಿಗಳು ಮತ್ತು ಜೀವನಶೈಲಿ ಸಹ ಹಾರ್ಮೋನ್ ಮಟ್ಟಗಳ (hormone level) ಮೇಲೆ ಪರಿಣಾಮ ಬೀರಬಹುದು.
ಗರ್ಭಿಣಿಯಾಗಲು ಅಸಮರ್ಥತೆ ಮತ್ತು ಅನಿಯಮಿತ ಅಥವಾ ಋತುಚಕ್ರದ ಸಮಸ್ಯೆಯನ್ನುಂಟು (periods problem) ಮಾಡುವುದು ಓವ್ಯುಲೇಶನ್ ಡಿಸಾರ್ಡರ್ ನ ಎರಡು ಮುಖ್ಯ ಲಕ್ಷಣಗಳಾಗಿವೆ. ಈ ಎಲ್ಲಾ ರೋಗವು ವಿಭಿನ್ನ ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಕೆಲವು ಸಾಮಾನ್ಯ ಓವ್ಯುಲೇಶನ್ ಡಿಸಾರ್ಡರ್ ಈ ಕೆಳಗಿನಂತಿವೆ.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS)
ಪಿಸಿಒಎಸ್ ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನ ಕಂಡು ಬರುತ್ತೆ ಮತ್ತು ಇದು ಮಹಿಳೆಯ ಆಂಡ್ರೋಜೆನ್ (ಟೆಸ್ಟೋಸ್ಟೆರಾನ್) ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಮಟ್ಟದ ಇನ್ಸುಲಿನ್ ಪ್ರತಿಕ್ರಿಯೆಯು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳನ್ನು ಹೆಚ್ಚಿಸಲು ಕಾರಣವಾಗಬಹುದು.
ಕೆಲವು ಟೆಸ್ಟೋಸ್ಟೆರಾನ್ ಅನ್ನು ಮಹಿಳೆಯರು ಸ್ವಾಭಾವಿಕವಾಗಿ ಉತ್ಪಾದಿಸಿದರೂ, ಪಿಸಿಒಎಸ್ ಸಮಸ್ಯೆಗಳನ್ನು ಹೊಂದಿರುವವರು ಮತ್ತು ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿರುವವರು ಅಂಡಾಶಯದ ಸಿಸ್ಟ್, ಅನಿಯಮಿತ ಋತುಚಕ್ರ ಮತ್ತು ಅಂಡೋತ್ಪತ್ತಿ ಸಮಸ್ಯೆಯನ್ನು ಎದುರಿಸಬಹುದು. ಬಳಿಕ ಬೆಳೆಯುವ ಸಿಸ್ಟ್ ಅಂಡಾಶಯದ ಕಿರು ಚೀಲಗಳು ಪ್ರಬುದ್ಧ ಅಂಡಾಣುಗಳನ್ನು ಬೆಳೆಸುವುದನ್ನು ತಡೆಯಬಹುದು, ಮತ್ತು ಟೆಸ್ಟೋಸ್ಟೆರಾನ್ ಆಂಡ್ರೋಜೆನ್ ಅತಿಯಾದ ಸೇವನೆ ಅಂಡೋತ್ಪತ್ತಿಯನ್ನು ತಡೆಗಟ್ಟಬಹುದು ಮತ್ತು ಬಂಜೆತನಕ್ಕೆ ಕಾರಣವಾಗಬಹುದು.
ಹೈಪೋಥಲಾಮಿಕ್ ಅಮೆನೋರಿಯಾ
ಹೈಪೋಥಲಾಮಿಕ್ ಅಮೆನೋರಿಯಾ ಹೊಂದಿರುವ ಮಹಿಳೆಯರಲ್ಲಿ ಓವ್ಯುಲೇಶನ್ ಅನಿಯಮಿತವಾಗಿರಬಹುದು ಅಥವಾ ಅಸ್ತಿತ್ವದಲ್ಲಿಲ್ಲದಿರಬಹುದು. ಏಕೆಂದರೆ ಅವರ ದೇಹದಲ್ಲಿ ಹಾರ್ಮೋನುಗಳ ಪ್ರಚೋದನೆಗಳನ್ನು ಅಂಡಾಶಯಗಳಿಗೆ ರವಾನಿಸಲು ಅಗತ್ಯ ಪೌಷ್ಠಿಕಾಂಶ ಅಥವಾ ಕೊಬ್ಬಿನಂಶದ ಕೊರತೆಯಿರುತ್ತೆ. ಹೆಚ್ಚಿನ ಅಥವಾ ಕಡಿಮೆ ದೇಹದ ತೂಕ, ಅತಿಯಾದ ತೂಕ ಹೆಚ್ಚಳ ಅಥವಾ ನಷ್ಟ, ಮತ್ತು ಅತಿಯಾದ ಒತ್ತಡ ಇವೆಲ್ಲವೂ ಇದಕ್ಕೆ ಕಾರಣವಾಗಬಹುದು. ನೃತ್ಯಗಾರರು, ಅನೋರೆಕ್ಸಿಕ್ ಮಹಿಳೆಯರು ಮತ್ತು ವೃತ್ತಿಪರ ಕ್ರೀಡಾಪಟುಗಳು ಹೆಚ್ಚಾಗಿ ಹೈಪೋಥಲಾಮಿಕ್ ಅಮೆನೋರಿಯಾ ಸಮಸ್ಯೆ ಅನುಭವಿಸುತ್ತಾರೆ.
ಅಕಾಲಿಕ ಅಂಡಾಶಯದ ವೈಫಲ್ಯ
40 ವರ್ಷಕ್ಕಿಂತ ಮುಂಚಿತವಾಗಿ ಪ್ರಾರಂಭವಾಗುವ ಋತುಬಂಧವನ್ನು ಅಕಾಲಿಕ ಅಂಡಾಶಯ ವೈಫಲ್ಯ (ಪಿಒಎಫ್) ಎಂದು ಕರೆಯಲಾಗುತ್ತದೆ. ಋತುಬಂಧ ಮತ್ತು ಅಕಾಲಿಕ ಅಂಡಾಶಯದ ವೈಫಲ್ಯದ ಸಮಯದಲ್ಲಿ ಅಂಡಾಶಯಗಳು ಈಸ್ಟ್ರೋಜೆನ್ ಉತ್ಪಾದಿಸುವುದನ್ನು ನಿಲ್ಲಿಸುತ್ತವೆ. ಅಕಾಲಿಕ ಅಂಡಾಶಯದ ವೈಫಲ್ಯದಿಂದಾಗಿ ಅಂಡಾಶಯ ಸರಿಯಾಗಿ ಕಾರ್ಯ ನಿರ್ವಹಿಸೋದಿಲ್ಲ.
ಆಟೋಇಮ್ಯೂನ್ ಅಸ್ವಸ್ಥತೆಗಳನ್ನು ಹೊಂದಿರುವ ಮಹಿಳೆಯರು ಅಕಾಲಿಕ ಅಂಡಾಶಯದ ವೈಫಲ್ಯವನ್ನು (Ovulation disorder) ಹೊಂದಿರುವುದು ತುಂಬಾ ಸಾಮಾನ್ಯ. ಇದಲ್ಲದೆ, ಕೀಮೋಥೆರಪಿ ಅಥವಾ ಲೇಝರ್ ಚಿಕಿತ್ಸೆ ಪಡೆದ ಮಹಿಳೆಯರು ಸಹ ಈ ಸಮಸ್ಯೆಯನ್ನು ಹೊಂದಿರಬಹುದು.
ಹಾರ್ಮೋನುಗಳ ಅಸಮತೋಲನ ಮಹಿಳೆಯರಲ್ಲಿ ಕೆಲವು ಹಾರ್ಮೋನುಗಳ ಅತಿಯಾದ ಉತ್ಪಾದನೆಯಿಂದ ಉಂಟಾಗಬಹುದು. ಉದಾಹರಣೆಗೆ, ಪಿಟ್ಯುಟರಿ ಗ್ರಂಥಿಯಿಂದ ತಯಾರಿಸಲ್ಪಟ್ಟ ಪ್ರೋಲ್ಯಾಕ್ಟಿನ್ ಎಂಬ ಹಾರ್ಮೋನಿನ ಅತಿಯಾದ ಉತ್ಪಾದನೆಯ ಪರಿಣಾಮವಾಗಿ ಹೈಪರ್ಪ್ರೊಲ್ಯಾಕ್ಟಿನೇಮಿಯಾ ಉಂಟಾಗಬಹುದು. ಇದರಿಂದ ಬಂಜೆತನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತೆ.