16 ವರ್ಷದ ಬಾಲಕಿ ಫಿನ್‌ಲೆಂಡ್‌ನ ಪ್ರಧಾನಿಯಾಗಿದ್ದಾಳೆ . ಆವಾ ಮುರ್ಟೊ ಒಂದು ದಿನ ತನ್ನ ಸ್ಥಾನಕ್ಕೆ ಬರಲು ಹಾಲಿ ಪ್ರಧಾನಿ ಮರಿನ್ ತಮ್ಮ ಸ್ಥಾನದಿಂದ ಸರಿದಿದ್ದಾರೆ. ಹವಾಮಾನ ಮತ್ತು ಮಾನವ ಹಕ್ಕುಗಳ ಸಂಬಂಧ ಸಕ್ರಿಯವಾಗಿ ಅಭಿಯಾನಗಳನ್ನು ಮಾಡಿದ 16 ವರ್ಷದ ಬಾಲಕಿ ಫಿನ್‌ಲೆಂಡ್‌ನ ಪ್ರಧಾನಿಯಾಗಿದ್ದಾಳೆ.

ಲಿಂಗ ತಾರತಮ್ಯವನ್ನು ಕೊನೆಗೊಳಿಸಲು ಹಾಲಿ ನಾಯಕಿ ಸನ್ನಾ ಮರಿನ್ ಅವರ ಹೋರಾಟದ ಭಾಗವಾಗಿ ಇಂತಹದೊಂದು ಬೆಳವಣಿಗೆ ಫಿನ್‌ಲೆಂಡ್‌ನಲ್ಲಿ ನಡೆದಿದೆ. 16ರ ಬಾಲಕಿ ಆವಾ ಮುರ್ಟೊಗೆ ಒಂದು ದಿನ ತನ್ನ ಸ್ಥಾನಕ್ಕೆ ಬರಲು ಹಾಲಿ ಪ್ರಧಾನಿ ಮರಿನ್ ತಮ್ಮ ಸ್ಥಾನದಿಂದ ಸರಿದಿದ್ದಾರೆ. ಇದೇ ಸಮಯದಲ್ಲಿ ಅವರು ರಾಜಕಾರಣಿ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಎತ್ತಿ ತೋರಿಸಿದರು.

ಮಕ್ಕಳಾಗಿಲ್ಲ ಎಂದು ಬಂದವರಿಗೆ ಕದ್ದು ತನ್ನದೇ ವೀರ್ಯ ಕೊಡ್ತಿದ್ದ ವೈದ್ಯ, 17 ಮಕ್ಕಳ ತಂದೆ..!

ಅಂತಾರಾಷ್ಟ್ರೀಯ ಗಲ್ರ್ಸ್ ಟೇಕ್ ಓವರ್ ಕಾರ್ಯಕ್ರಮದಲ್ಲಿ ಇದು ನಾಲ್ಕನೇ ಸಲ ಫಿನ್‌ಲೆಂಡ್ ಭಾಗಿಯಾಗಿದೆ. ರಾಜಕೀಯ ನಾಯಕರು ಮತ್ತು ಪ್ರಮುಖ ಆಡಳಿತ ಅಂಗಗಳ ಸ್ಥಾನಕ್ಕೆ ಒಂದು ದಿನದ ಮಟ್ಟಿಗೆ ದೇಶಾದ್ಯಂತ ಇರುವ ಬಾಲಕಿಯರಲ್ಲಿ ಆಯ್ದವರನ್ನು ನೇಮಿಸಲಾಗುತ್ತದೆ.

ಈ ವರ್ಷ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಲ್ಲಿ ಡಿಜಿಟಲ್ ಕೌಶಲ್ಯ ಮತ್ತು ತಾಂತ್ರಿಕ ಅವಕಾಶಗಳನ್ನು ಉತ್ತೇಜಿಸುವುದರ ಬಗ್ಗೆ ಗಮನಹರಿಸಲಾಗಿದೆ. ಕೀನ್ಯಾ, ಪೆರು, ಸುಡಾನ್ ಮತ್ತು ವಿಯೆಟ್ನಾಂ ದೇಶಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತವೆ.

ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ

ಪ್ರಧಾನಿಯಾಗಿ ಮಾತನಾಡಿದ ಮುರ್ಟೋ ನಿಮ್ಮ ಮುಂದೆ ಇಲ್ಲಿ ಮಾತನಾಡುತ್ತಿರುವುದು ಸಂತೋಷದ ಸಂಗತಿ. ಆದರೂ, ಒಂದು ರೀತಿಯಲ್ಲಿ, ನಾನು ಇಲ್ಲಿ ನಿಲ್ಲಬೇಕಾಗಿ ಬರಬಾರದಿತ್ತು ಎಂದು ನಾನು ಬಯಸುತ್ತೇನೆ. ಹುಡುಗಿಯರ ಸ್ವಾಧೀನದಂತಹ ಅಭಿಯಾನಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದಿದ್ದಾರೆ.

ಆದರೂ ಸತ್ಯ ಏನೆಂದರೆ ನಾವಿಂದೂ ಲಿಂಗ ಸಮಾನತೆಯನ್ನು ತಲುಪಿಲ್ಲ. ಈ ಭೂಮಿಯ ಎಲ್ಲಿಯೂ ಲಿಂಗ ಸಮಾನತೆ ಇಲ್ಲ. ಲಿಂಗ ಸಮಾನತೆಯಲ್ಲಿ ನಾವು ಸಾಕಷ್ಟು ಉತ್ತಮ ಸಾಧನೆ ಮಾಡಿದ್ದರೂ, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ಎಂದಿದ್ದಾರೆ.

ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ತಾಯಿ ಮಗು ಆರೋಗ್ಯ!

ಮೆರಿನ್ ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿಯಾದಾಗ ತಂತ್ರಜ್ಞಾನ ಎಲ್ಲರಿಗೂ ಸಿಗಬೇಕು ಎಂದು ಬಯಿಸಿದ್ದರು. ಮೆರಿನ್ ಫಿನ್‌ಲೆಂಡ್‌ನ ನಾಲ್ಕನೇ ಮಹಿಳಾ ಪ್ರಧಾನಿಯಾಗಿದ್ದು, ನಾಲ್ಕು ಪಕ್ಷಗಳ ಜೊತೆ ಸೆಂಟರ್ ಲೆಫ್ಟ್ ಮೈತ್ರಿಯನ್ನು ಇವರು ಮುನ್ನಡೆಸುತ್ತಿದ್ದಾರೆ. ಇವೆಲ್ಲದರ ಮುಖ್ಯಸ್ಥರೂ ಮಹಿಳೆಯರೆಂಬುದು ವಿಶೇಷ