ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ

ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕ | ಗುರುವಿಗೆ ವಿದ್ಯಾರ್ಥಿ ಕೊಟ್ಟ ದುಬಾರಿ ಕಾಣಿಕೆ | ಬ್ಯಾಂಕ್ ಸಿಇಒ ನಡೆಗೆ ವ್ಯಾಪ ಶ್ಲಾಘನೆ

Bank CEO gifts shares worth Rs 30 lakh to teacher who lent him Rs 500 to travel for interview dpl

ಬ್ಯಾಂಕ್‌ನ ಸಿಇಒ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಶಿಕ್ಷಕನಿಗೆ 30 ಲಕ್ಷದ ಶೇರ್ಸ್ ಗಿಫ್ಟ್ ಮಾಡಿದ್ದಾರೆ. ಐಡಿಎಫ್‌ಸಿ  ಫಸ್ಟ್ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿರುವ ವಿ. ವೈದ್ಯನಾಥನ್ 30 ಲಕ್ಷ ಬೆಲೆ ಬಾಳುವ 1 ಲಕ್ಷ ಈಕ್ವಿಟಿ ಶೇರ್ಸ್‌ನ್ನು ತಮ್ಮ ಗಣಿತ ಅಧ್ಯಾಪಕರಿಗೆ ಗಿಫ್ಟ್ ಮಾಡಿದ್ದಾರೆ.

ತನ್ನ ಬದುಕಿನ ಆರಂಭದ ಹಂತದಲ್ಲಿ ತನಗೆ ನೆರವಾದ ಶಿಕ್ಷಕರಿಗೆ ಥ್ಯಾಂಕ್ಸ್ ಹೇಳಿದ ವೈದ್ಯನಾಥ್ ಇಂತಹದೊಂದು ಗಿಫ್ಟ್ ಕೊಟ್ಟಿದ್ದಾರೆ. ಫೇಸ್‌ಬುಕ್ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಶಿಕ್ಷಕ ಸೈನಿ ಅವರು ವಿದ್ಯಾರ್ಥಿಯ ಇಂಟರ್‌ವ್ಯೂ ಎಟೆಂಡ್ ಮಾಡಲು ಪ್ರಯಾಣಕ್ಕೆ 500 ರೂಪಾಯಿ ಸಾಲ ನೀಡಿರುವ ಸ್ಟೋರಿ ನೆಟ್ಟಿಗರ ಮನ ಮುಟ್ಟಿದೆ.

ಭಾವಿ ಪತ್ನಿ ಹುಟ್ಟುಹಬ್ಬ ಡಿಫ್ರೆಂಟ್‌ ಆಗಿ ಸೆಲೆಬ್ರೆಟ್‌ ಮಾಡಿದ ಕ್ರಿಕೆಟಿಗ ಚಹಲ್

ಬಿಇಟಿಎಸ್‌ನಲ್ಲಿ ವೈದ್ಯನಾಥನ್‌ಗೆ ಎಡ್ಮಿಷನ್ ಸಿಕ್ಕಿತ್ತು. ಕೌನ್ಸಿಲಿಂಗ್ ಫಾರ್ಮಾಲಿಟೀಸ್ ಹಾಗೂ ಇಂಟರ್‌ವ್ಯೂಗೆ ಹೋಗಲು ಆತನಲ್ಲಿ ಹಣವಿರಲಿಲ್ಲ. ವೈದ್ಯನಾಥನ್‌ನ ಆಗಿನ ಗಣಿತ ಶಿಕ್ಷಕ ಗರ್ಡಿಯಲ್ ಸೈನಿ ವಿದ್ಯಾರ್ಥಿಗೆ 500 ರೂಪಾಯಿ ಸಾಲ ಕೊಟ್ಟಿದ್ದರು. ವೈದ್ಯನಾಥನ್ ಚೆನ್ನಾಗಿ ಕಲಿತು ಔದ್ಯೋಗಿಕ ಜೀವನದಲ್ಲಿ ಮೇಲೆ ಬಂದರು.

ವೈದ್ಯನಾಥ್ ತನ್ನ ಶಿಕ್ಷಕರನ್ನು ಹುಡುಕಿದ್ದರು. ಆದರೆ ಕೆಲಸದ ನಿಮಿತ್ತ ವರ್ಗವಾಗಿ ಹೋಗಿದ್ದರಿಂದ ಶಿಕ್ಷಕರನ್ನು ಪತ್ತೆ ಮಾಡಲಾಗಲಿಲ್ಲ. ತುಂಬ ವರ್ಷಗಳ ನಂತರ ವೈದ್ಯನಾಥನ್‌ಗೆ ತನ್ನ ಸಹುದ್ಯೋಗಿ ಮೂಲಕ ಶಿಕ್ಷಕನ ಬಗ್ಗೆ ಗೊತ್ತಾಯಿತು.

50ರ ಪ್ರಾಯದಲ್ಲಿ ಬ್ಯುಸಿನೆಸ್ ಆರಂಭಿಸಿ, 2 ಕೋಟಿ ಗಳಿಸಿದ ಅಮ್ಮಂದಿರು!

ಸೈನಿ ಆಗ್ರಾದಲ್ಲಿರುವುದನ್ನು ತಿಳಿದ ವೈದ್ಯನಾಥನ್ ವೈದ್ಯರಿಗೆ ಕರೆ ಮಾಡಿ ತಮಗೆ ಮಾಡಿದ ನೆರವಿಗೆ ಧನ್ಯವಾದ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸಾಮಾನ್ಯ ಸ್ಟಾಕ್ ಎಕ್ಸ್‌ಚೇಂಜ್ ಫಿಲ್ಲಿಂಗ್ ಮಾಡಿತ್ತು. ವೈದ್ಯನಾಥನ್ ಅವರು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿದ್ದ ಅವರ ವೈಯಕ್ತಿಕ ಶೇರ್ 1 ಲಕ್ಷದ ಈಕ್ವಿಟಿಯನ್ನು  ಅವರ ಹಳೆಯ ಶಾಲೆಯ ಶಿಕ್ಷಕ ಗಾರ್ಡಿಯಲ್ ಸರೂಪ್ ಸೈನಿ ಅವರಿಗೆ ಉಡುಗೊರೆಯಾಗಿ ವಾರ್ಗಯಿಸಿದ್ದಾರೆ ಎಂದು ಬ್ಯಾಂಕ್ ಹೇಳಿತ್ತು. ಈ ಸುದ್ದಿ ಸಿಗುತ್ತಲೇ ವೈದ್ಯನಾಥನ್‌ಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.

The MD & CEO of IDFC First bank is V.Vaidyanathan. I have met Vaidya a few times when he was at ICICI and found him to...

Posted by Peri Maheshwer on Tuesday, October 6, 2020

ಈ ದಿನ, ಈ ದಿನಗಳಲ್ಲಿ ಇಂತಹದೊಂದು ಸುಂದರ ಕಥೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಧನ್ಯವಾದ ಹೇಳುವ ರೀತಿ ಇದು ಎಂದಿದ್ದಾರೆ. ಇದು ನಿಜವಾದ ಗುರು ಶಿಷ್ಯ ಸಂಬಂಧ, ಇಂದಿನ ದಿನದಲ್ಲಿ ಕಾಣಲು ಸಿಗುವುದು ಬಲು ಅಪರೂಪ ಎಂದಿದ್ದಾರೆ ಮತ್ತೊಬ್ಬರು. ಬಹಳಷ್ಟು ಮಕ್ಕಳಿಗೆ ತಮ್ಮ ಕಷ್ಟದ ಸಮಯದಲ್ಲಿ ನೆರವಾಗಲು ಅಂತಹ ಶಿಕ್ಷಕರು ಸಿಗಲ್ಲ, ಬಹಳಷ್ಟು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮೇಲೆ ಬಂದಾಗ ಅಷ್ಟು ಸರಳತೆ ಇರಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios