ಬ್ರೆಜಿಲ್‌ನ ಬೀಚ್‌ನಲ್ಲಿ ಗೆಳೆಯನೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಗೆ ದಿಢೀರ್ ಸಿಡಿಲು ಬಡಿದು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಸುದ್ದಿ: ಬೀಚ್‌ನಲ್ಲಿ ಪರಸ್ಪರ ಕೈಹಿಡಿದು ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಗೆಳತಿಗೆ ಸಿಡಿಲು ಬಡಿದು ದುರ್ಮರಣಕ್ಕೀಡಾದ ಘಟನೆ ಆಘಾತ ಹುಟ್ಟಿಸುವಂತಿದೆ.
ಬೀಚ್ ನಲ್ಲಿ ನಡೆಯುತ್ತಿದ್ದಾಗ ಸಿಡಿಲು ಬಡಿದು ಮಹಿಳೆ ಸಾವು!
ಈ ಘಟನೆ ಬ್ರೆಜಿಲ್‌ನ ಪಲ್ಹೋಕಾದಲ್ಲಿರುವ ಪ್ರಿಯಾ ಡ ಪಿನ್ಹೀರಾ ಬೀಚ್ ನಡೆದಿದೆ ಎನ್ನಲಾಗಿದೆ. ಆ ವಿಡಿಯೋ ಈ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಪಲ್ಸ್ ಬೀಚ್‌ನಲ್ಲಿ ನಡೆದುಹೋಗುತ್ತಿರುವುದು ದೂರದಿಂದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ದಟ್ಟ ಮೋಡ, ಸುತ್ತಲಿನ ಹವಮಾನ ಕೆಟ್ಟದಾಗಿದೆ. ಇಂಥ ವೇಳೆ ಬೀಚ್‌ನಲ್ಲಿ ಯಾವುದೇ ಆತಂಕವಿಲ್ಲದೆ ನಡೆದುಹೋಗುವಾಗ ದಿಢೀರನೇ ಸಿಡಿಲು ಅಪ್ಪಳಿಸಿದೆ. ಸಿಡಿಲು ಬಡಿಯುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಸಿಡಿಲು ಬಡಿದು ಮಹಿಳೆ ಕುಸಿದುಬಿಳುತ್ತಾಳೆ. ಕೆಲವೇ ಸೆಕೆಂಡ್‌ನಲ್ಲಿ ನಡೆದ ಈ ಬದಲಾವಣೆಗೆ ವ್ಯಕ್ತಿ ಆಘಾತಕ್ಕೊಳಗಾಗುತ್ತಾನೆ.
ಆಸ್ಪತ್ರೆಗೆ ದಾಖಲಿಸಿದ್ರೂ ಉಳಿಯಲಿಲ್ಲ ಸಂಗಾತಿ
ವರದಿಗಳ ಪ್ರಕಾರ, ಈ ಘಟನೆ ಆಗಸ್ಟ್ 28 ರ ಸಂಜೆ ನಡೆದಿದೆ. ವೀಡಿಯೊದಲ್ಲಿರುವ ಮಹಿಳೆಗೆ 39 ವರ್ಷ. ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಆಕೆಯನ್ನು ಬದುಕಿಸಲು ಪ್ರಯತ್ನಿಸಿದರು, ಆದರೆ ಆಗಸ್ಟ್ 29 ರ ಬೆಳಿಗ್ಗೆ ಮರಣವನ್ನಪ್ಪಿದರು.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟಿಜನ್ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವರು ದಟ್ಟ ಮೋಡವಿದ್ದಾಗ ಬೀಚ್ ಬಳಿ ಹೋಗಿದ್ದು ತಪ್ಪು ಎಂದರೆ, ಇನ್ನು ಕೆಲವರು ಇದೊಂದು ಭಯಾನಕ ದೃಶ್ಯ ಎಂದು ಗಾಬರಿಯಾಗಿದ್ದಾರೆ. ಕೆಲವರು ಮಹಿಳೆಯ ಸಾವಿಗೆ ಭಾವುಕರಾಗಿದ್ದಾರೆ.

