ಅಮೆಜಾನ್‌ನಂತಹ ದಿಗ್ಗಜ ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡ ಬಳಿಕ, ಮತ್ತೊಂದು ಕಾರ್ಪೊರೇಟ್ ಕೆಲಸಕ್ಕಾಗಿ ಕಾಯುತ್ತಾ ಕೂರದೆ ಮಹಿಳೆ ವಿಭಿನ್ನ ಹಾದಿ ಹಿಡಿದಿದ್ದಾರೆ. ಕೇವಲ ಆರು ಕೋಳಿ ಮರಿಗಳಿಂದ ಆರಂಭವಾದ ಅವರ ಪ್ರಯತ್ನ ಇಂದು ಸ್ವಂತ ಕೋಳಿ ಫಾರ್ಮ್ ಮತ್ತು ಮೊಟ್ಟೆ ಮಾರಾಟದ ಉದ್ಯಮವಾಗಿ ಬೆಳೆದಿದೆ.
ಅಮೆಜಾನ್‌ನಂತಹ ದಿಗ್ಗಜ ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡ ಬಳಿಕ, ಮತ್ತೊಂದು ಕಾರ್ಪೊರೇಟ್ ಕೆಲಸಕ್ಕಾಗಿ ಕಾಯುತ್ತಾ ಕೂರದೆ ಮಹಿಳೆಯೊಬ್ಬರು ಸಂಪೂರ್ಣ ವಿಭಿನ್ನ ಹಾದಿ ಹಿಡಿದಿದ್ದಾರೆ. ಕೇವಲ ಆರು ಕೋಳಿ ಮರಿಗಳಿಂದ ಆರಂಭವಾದ ಅವರ ಪ್ರಯತ್ನ ಇಂದು ಸ್ವಂತ ಕೋಳಿ ಫಾರ್ಮ್ ಮತ್ತು ಮೊಟ್ಟೆ ಮಾರಾಟದ ಉದ್ಯಮವಾಗಿ ಬೆಳೆದಿದೆ.
ಮಾರ್ಚ್ 2026ರಲ್ಲಿ ಅಮೆಜಾನ್‌ನಿಂದ ವಜಾ
ಮಾರಿಯಾ ಹರ್ಷಿತಾ ಅವರು 2026ರ ಮಾರ್ಚ್‌ನಲ್ಲಿ ಅಮೆಜಾನ್ ಉದ್ಯೋಗ ಕಳೆದುಕೊಂಡರು. ಮ್ಯಾನೇಜರ್ ಕೆಲಸದಿಂದ ವಜಾಗೊಂಡಿರುವ ವಿಷಯ ತಿಳಿಸಿದಾಗ ತಾವು ನಗುತ್ತಲೇ ಆ ಸುದ್ದಿಯನ್ನು ಸ್ವೀಕರಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ. ತಮಗೆ ಅಗತ್ಯವಿದ್ದಾಗ ಉದ್ಯೋಗ ದೊರೆತಿತ್ತು, ಹೀಗಾಗಿ ಮುಂದೆ ಮತ್ತೊಂದು ಅವಕಾಶವೂ ಖಂಡಿತ ಸಿಗುತ್ತದೆ ಎಂದು ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡಿದ್ದರು. ಆದರೆ ನಂತರದ ದಿನಗಳು ಅಷ್ಟು ಸುಲಭವಾಗಿರಲಿಲ್ಲ
ಉದ್ಯೋಗಕ್ಕಾಗಿ ಸಾಕಷ್ಟು ಪ್ರಯತ್ನ… ಆದರೂ ಆಫರ್ ಬರಲಿಲ್ಲ
ಕೆಲಸ ಕಳೆದುಕೊಂಡ ಬಳಿಕ ಹರ್ಷಿತಾ ಹೊಸ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಆರಂಭಿಸಿದರು. ಹಿರಿಯರು, ಸ್ನೇಹಿತರು ಮತ್ತು ಕುಟುಂಬದವರನ್ನು ಸಂಪರ್ಕಿಸಿ ರೆಫರ್ ಮಾಡಲು ಕೇಳಿದರು, ರೀಕ್ಷಿಸಿದ ರೀತಿಯಲ್ಲಿ ಯಾವುದೇ ಉದ್ಯೋಗದ ಆಫರ್ ಬರಲಿಲ್ಲ. ಉದ್ಯೋಗ ಹುಡುಕಾಟ ಮುಂದುವರಿದರೂ ಆ ಯೋಜನೆಯೂ ಸಫಲವಾಗಲಿಲ್ಲ.
ಪತಿಯ ಸಲಹೆ ಜೀವನದ ದಿಕ್ಕನ್ನೇ ಬದಲಿಸಿತು
ಈ ಸಂದರ್ಭದಲ್ಲಿ ಅವರ ಪತಿ ಖಾನಿಷ್ಕಾ ಡೇವಿಡ್, ಕಾರ್ಪೊರೇಟ್ ಕೆಲಸದ ಹಿಂದೆ ಓಡುವ ಬದಲು ಸ್ವಂತ ಉದ್ಯಮ ಆರಂಭಿಸುವಂತೆ ಹೇಳಿದರು‘ನೀನೇ ನಿನ್ನ ಬಾಸ್ ಆಗುವುದೇಕೆ ಸಾಧ್ಯವಿಲ್ಲ?’ ಎಂಬ ರೀತಿಯಲ್ಲಿ ಅವರು ಹರ್ಷಿತಾ ಅವರಿಗೆ ಸವಾಲು ಹಾಕಿದರು. ಅಲ್ಲಿಂದ ಆರಂಭವಾಯಿತು ಹೊಸ ಪ್ರಯೋಗ.
ಒಂದು ದಿನ ದಂಪತಿಗಳು ಸೇರಿ ಆರು ಕೋಳಿ ಮರಿಗಳನ್ನು ಮನೆಗೆ ತಂದರು. ಹರ್ಷಿತಾ ಕೋಳಿಗಳನ್ನು ನೋಡಿಕೊಳ್ಳುತ್ತಲೇ ಉದ್ಯೋಗಗಳಿಗೂ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಮೊದಲ ಪ್ರಯತ್ನದಲ್ಲೇ ಒಂದು ಅನಿರೀಕ್ಷಿತ ಟ್ವಿಸ್ಟ್ .
ಆರು ಮರಿಗಳೂ… ಹುಂಜ
ತಾವು ತಂದ ಆರು ಕೋಳಿ ಮರಿಗಳೂ ಹೆಣ್ಣು ಕೋಳಿಗಳಲ್ಲ, ಹುಂಜಗಳು ಎಂದು ನಂತರ ತಿಳಿಯಿತು. ಆದರೂ ಹರ್ಷಿತಾ ಹಿಂದೆ ಸರಿಯಲಿಲ್ಲ. ತಮ್ಮ ಮಕ್ಕಳಿಗೆ ತಾಜಾ ಮೊಟ್ಟೆಗಳು ಸಿಗಬೇಕು ಎಂಬ ಉದ್ದೇಶದಿಂದ ಮತ್ತಷ್ಟು ಕೋಳಿಗಳನ್ನು ಸಾಕಲು ಅವರು ಪತಿಯನ್ನು ಒಪ್ಪಿಸಿದರು. ಕ್ರಮೇಣ ಇನ್ನಷ್ಟು ಕೋಳಿಗಳನ್ನು ತರಲಾಯಿತು. ನಂತರ ಮೊಟ್ಟೆಗಳನ್ನು ಸಂಗ್ರಹಿಸಲು ಆರಂಭಿಸಿದರು. ಮೊಟ್ಟೆ ಮಾರಾಟದಿಂದ ಶುರುವಾಯ್ತು ಹೊಸ ಬಿಸಿನೆಸ್, ಮೊಟ್ಟೆಗಳ ಸಂಖ್ಯೆ ಹೆಚ್ಚಾದಂತೆ ಅವುಗಳನ್ನು ಮಾರಾಟ ಮಾಡಲು ಹರ್ಷಿತಾ ಆರಂಭಿಸಿದರು.
Amazonನಲ್ಲಿ Product Manager… ಈಗ Eggs Product Manager
ಹರ್ಷಿತಾ ಅವರ ಕಥೆಯ ಅತ್ಯಂತ ಕುತೂಹಲಕಾರಿ ಭಾಗವೇ ಇದು. ಹಿಂದೆ ಅವರು ಟೆಕ್ ಕ್ಷೇತ್ರದಲ್ಲಿ Product Management ಮಾಡುತ್ತಿದ್ದರು. ಈಗ ಅವರು ತಮಾಷೆಯಾಗಿ ಮೊಟ್ಟೆಗಳೊಂದಿಗೆ Product Management ಮಾಡುತ್ತಿದ್ದೇನೆ ಎನ್ನುತ್ತಾರೆ. ಅಷ್ಟೇ ಅಲ್ಲ, ಹಿಂದೆ ಬಳಸುತ್ತಿದ್ದ Power BI ಅನ್ನು ತಾನು ಎಂದಿಗೂ ಊಹಿಸದ ಕೆಲಸಕ್ಕಾಗಿ ಈಗ ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಂದರೆ ಕಾರ್ಪೊರೇಟ್ ಆಫೀಸ್‌ನಿಂದ ಕೋಳಿ ಫಾರ್ಮ್‌ಗೆ ಬಂದರೂ, ಹಳೆಯ ಕೌಶಲ್ಯಗಳು ಮಾತ್ರ ಅವರ ಜೊತೆಗೇ ಬಂದಿವೆ.
