Asianet Suvarna News Asianet Suvarna News

ಕಣ್ಣಿನ ಅಲರ್ಜಿ ಸಮಸ್ಯೆ ಇರೋರು ಲೆನ್ಸ್ ಬಳಸ್ಬೋದಾ?

ಕಣ್ಣಿನ ದೃಷ್ಟಿ ಸಮಸ್ಯೆ ಇರೋರು, ಯಾವಾಗಲೂ ಕನ್ನಡಕ ಧರಿಸಲು ಇಷ್ಟವಿಲ್ಲದವರು ಕಣ್ಣಿಗೆ ಲೆನ್ಸ್ ಹಾಕಿಕೊಳ್ಳಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಹೀಗೆ ಯಾರು ಬೇಕಾದರೂ ಲೆನ್ಸ್ ಹಾಕ್ಕೊಳ್ಬೋದಾ, ಈ ಬಗ್ಗೆ ನೇತ್ರ ತಜ್ಞರಾದ ಡಾ.ಪ್ರಿಯಾಂಕ್ ಸೋಲಂಕಿ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಣ್ಣಿನ ದೃಷ್ಟಿಯ ಸಮಸ್ಯೆಯಿಂದಾಗಿ ಬಹುತೇಕರು ಕನ್ನಡಕವನ್ನು ಧರಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಇವನ್ನು ಅಗತ್ಯವಿದ್ದಾಗ ಬಳಸಿ, ಉಳಿದ ಸಮಯಗಳಲ್ಲಿ ತೆಗೆಉ ಇಡಬಹುದಾಗಿದೆ. ಆದರೆ ಇನ್ನು ಕೆಲವರು ಎಲ್ಲಾ ಸಂದರ್ಭಗಳಲ್ಲಿ ಕನ್ನಡಕವನ್ನು ಬಳಸುವುದು ಕಷ್ಟ, ಲುಕ್ ವೈಸ್ ನೋಡಲು ಚೆನ್ನಾಗಿರುವುದಿಲ್ಲವೆಂದು ಕಣ್ಣಿಗೆ ಲೆನ್ಸ್ ಹಾಕಿಸಿಕೊಳ್ಳುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸೇಫ್‌, ಎಲ್ಲರೂ ಇದನ್ನು ಹಾಕಿಸಿಕೊಳ್ಳಬಹುದಾ? ಈ ಬಗ್ಗೆ ನೇತ್ರ ತಜ್ಞರಾದ ಡಾ.ಪ್ರಿಯಾಂಕ್ ಸೋಲಂಕಿ ಮಾಹಿತಿ ನೀಡಿದ್ದಾರೆ. ಡ್ರೈ ನೆಸ್‌, ಅಲರ್ಜಿ ಇರುವವರು ಲೆನ್ಸ್‌ ಬಳಸುವುದು ಒಳ್ಳೆಯದಲ್ಲ ಎಂದು ಅವರು ಸಲಹೆ ನೀಡುತ್ತಾರೆ.

ಸಕ್ಕರೆ ಕಾಯಿಲೆ ಇರುವವರಿಗೆ ಕಣ್ಣಿನ ಪೊರೆ ಹೆಚ್ಚು ಬರುತ್ತಾ?

Video Top Stories