ಕನ್ನಡ ಕಿರುತೆರೆಯ ಅತಿಹೆಚ್ಚು ಟಿಆರ್‌ಪಿ ಧಾರವಾಹಿಯಲ್ಲಿ ಒಂದಾಗಿರುವ ಸೀತಾರಾಮ ಧಾರವಾಹಿಯ ರಾಮನ ಸ್ನೇಹಿತ ಅಶೋಕನಿಗೆ ದೊಡ್ದ ಅವಮಾನ ಮಾಡಲಾಗಿದೆ.

ಬೆಂಗಳೂರು (ಸೆ.28): ಕನ್ನಡ ಕಿರುತೆರೆಯ ಅತಿ ಹೆಚ್ಚು ಟಿಆರ್‌ಪಿ ಪಡೆದ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾ ರಾಮ ಧಾರಾವಾಹಿಯಲ್ಲಿ ರಾಮನ (ಗಗನ್‌ ಚಿನ್ನಪ್ಪ) ಸ್ನೇಹಿತನಾಗಿ ಅಶೋಕ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾನೆ. ದೇಸಾಯಿ ಕಂಪನಿಯಲ್ಲಿ ನಡೆಯುತ್ತಿರುವ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯಬೇಕು ಎಂದು ರಾಮನೊಂದಿಗೆ ಕೈ ಜೋಡಿಸಿದ ಅಶೋಕನಿಗೆ, ರಾಮನ ಚಿಕ್ಕಮ್ಮ ಭಾರ್ಗವಿ ಕಚೇರಿಗೆ ಬಂದು ದೊಡ್ಡ ಅವಮಾನವನ್ನು ಮಾಡಿದ್ದಾರೆ.

ಹೌದು, ಕನ್ನಡದ ಸ್ಟಾರ್‌ ನಟ ಯಶ್‌ ನಾಯಕನಾಗಿ ನಟಿಸಿದ ಮಿಸ್ಟರ್‌ ಅಂಡ್‌ ಮಿಸಸ್‌ ರಾಮಚಾರಿ, ಕೆಜಿಎಫ್‌ ಸಿನಿಮಾಗಳು ಹಾಗೂ ಕಟಕ ಸಿನಿಮಾದಲ್ಲಿ ನಾಯಕನ ಸ್ನೇಹಿತನಾಗಿ ನಟಿಸಿದ ಅಶೋಕ ಶರ್ಮಾ ಮೂಲತಃ ಗಾಯಕನಾಗಿದ್ದಾನೆ. ಈಗ ಸಿನಿಮಾದ ಹೊರತಾಗಿ ಕನ್ನಡ ಕಿರುತೆರೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಅತಿಹೆಚ್ಚು ಟಿಆರ್‌ಪಿ ತಂದುಕೊದುವ ಧಾರಾವಾಹಿ ಸೀತಾರಾಮದಲ್ಲಿ ನಾಯಕನ ಸ್ನೇಹಿತನಾಹಗಿ ಉತ್ತಮವಾಗಿ ಪಾತ್ರ ಮಾಡುತ್ತಿದ್ದಾರೆ. ಧಾರವಾಹಿಯಲ್ಲಿಯೂ ಅಶೋಕ ಎಂದು ಹೆಸರಿಟ್ಟುಕೊಂಡಿರುವ ಅಶೋಕ ಶರ್ಮಾಗೆ ಈಗ ನಾಯಕನ ಚಿಕ್ಕಮ್ಮನಿಂದಲೇ ಅವಮಾನ ಮಾಡಲಾಗಿದೆ.

ಪುಟ್ಟಕ್ಕನ ಮಕ್ಕಳು ಜೋಡಿ ಬೆಡ್ ರೂಮ್‌ ಸೀನ್ ಲೀಕ್: ಯಾವಾಗಪ್ಪ ನಿಜವಾಗ್ಲೂ ಮದ್ವೆಯಾಗೋದು ಕೇಳ್ತಿದ್ದಾರೆ ಫ್ಯಾನ್ಸ್!

ದೇಸಾಯಿ ಕುಟುಂಬದ ಕಂಪನಿಯಲ್ಲಿ ರಾಮ ಬಾಸ್‌ ಆಗಿದ್ದರೂ, ಕಂಪನಿಯಲ್ಲಿ ನಡೆಯುತ್ತಿದ್ದ ಕೆಲವು ಹಣ ಸೋರಿಕೆ ತಡೆಯಲು ಬಾಸ್‌ ಚೇರಿನಲ್ಲಿ ಅಶೋಕನನ್ನು ಕೂರಿಸಲಾಗಿದೆ. ಆದರೆ, ಇದನ್ನು ನೋಡಿದ ಭಾರ್ಗವಿ ದೇಸಾಯಿ ಅಶೋಕನನ್ನು ಬಾಸ್‌ ಚೇರಿನಿಂದ ಎಬ್ಬಿಸಿ, ಆತ ತೊಟ್ಟುಕೊಂಡಿದ್ದ ಕೋಟ್‌ ಬಿಚ್ಚಿಸಿ ಹೊರಗೆ ಕಳಿಸಿದ್ದಾರೆ. ಧಾರಾವಾಹಿಯಲ್ಲಿ ಅಪ್ಪ ಅಮ್ಮನಿಲ್ಲದೇ ಅನಾಥವಾಗಿ ದೇಸಾಯಿ ಮನೆಯ ಆಶ್ರಯದಲ್ಲಿ ಬೆಳೆದ ಅಶೋಕ ರಾಮನ ಪ್ರಾಣ ಸ್ನೇಹಿತನೂ ಆಗಿದ್ದಾನೆ. ಈಗ ರಾಮನಿಗಾಗಿ ಸಹಾಯ ಮಾಡಲು ಬಂದು ಅವಮಾನ ಮಾಡಿಸಿಕೊಂಡಿದ್ದಾನೆ. ಇನ್ನು ರಾಮನಿಗೆ ಈ ವಿಚಾರವನ್ನು ತಿಳಿಸೋಣ ಎಂದರೂ ಅವರ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಭಾರ್ಗವಿ ದೇಸಾಯಿ ಕಂಪನಿಯಲ್ಲಿ ಮಾಡುವ ಹಣ ಲೂಟಿ ಹಾಗೂ ಕಾರ್ಮಿಕರಿಗೆ ಕೊಡುವ ತೊಂದರೆ ಬಗ್ಗೆ ಯಾರಿಗೂ ಹೇಳದ ಸ್ಥಿತಿ ಉಂಟಾಗಿದೆ. 

100 ಕೋಟಿ ಫೈಲ್‌ಗೆ ಸಹಿ ಆಗುವುದು ತಡೆದ ಅಶೋಕ್‌:
ದೇಸಾಯಿ ಮನೆತನದ ಮುಖ್ಯಸ್ಥ ಸೂರ್ಯಪ್ರಕಾಶ್‌ ದೇಸಾಯಿ (ಮುಖ್ಯಮಂತ್ರಿ ಚಂದ್ರು) ಅವರಿಂದ ಸೊಸೆ ಭಾರ್ಗವಿ ದೇಸಾಯಿ ಸುಳ್ಳು ಕಾಂಟ್ರಾಕ್ಟ್‌ ಫೈಲ್‌ ರಚಿಸಿ 100 ಕೋಟಿ ರೂ. ಹಣವನ್ನು ಲೂಟಿ ಮಾಡಲು ಮುಂದಾಗಿದ್ದಳು. ಇದಕ್ಕಾಗಿ ನಕಲಿ ಫೈಲ್‌ ರಚಿಸಿ ಅದನ್ನು ಕಂಪನಿ ಚೇರ್ಮನ್‌ ಆದ ತಮ್ಮ ಮಾವನಿಂದ ಸಹಿ ಹಾಕುವಾಗ ಅಶೋಕ್‌ ತಡೆದಿದ್ದನು. ನೇರವಾಗಿ ಕ್ಲೈಂಟ್‌ ಭೇಟಿ ಮಾಡುವುದಾಗಿ ತಿಳಿಸಿದ್ದನು. ಅಶೋಕ್‌ನ ನಿರ್ಧಾರದಿಂದ ಭಾರ್ಗವಿ ದೇಸಾಯಿಯ 100 ಕೋಟಿ ರೂ. ಹಣ ಲೂಟಿ ಮಾಡುವ ಕುತಂತ್ರಕ್ಕೆ ಹಿನ್ನಡೆ ಉಂಟಾಗಿತ್ತು. ಇದರಿಂದ ಕೋಪಗೊಂಡ ಭಾರ್ಗವಿ ದೇಸಾಯಿ ಅಶೋಕನಿಗೆ ಅವಮಾನ ಮಾಡಿದ್ದಾಳೆ. ನಿನ್ನ ಹುಟ್ಟಿನ ಬಗ್ಗೆಯೇ ಗೊತ್ತಿರದ ನೀನು ರಾಮನ ಸಿಂಹಾಸನಕ್ಕೆ ಆಸೆ ಪಡುವ ನಾಯಿ ಎಂದು ಹೇಳಿದ್ದಾರೆ. ಇನ್ನು ಈವಿಚಾರವನ್ನು ತನ್ನ ಸ್ನೇಹಿತ ರಾಮನಿಗೆ ಹೇಳುತ್ತಾನೋ ಅಥವಾ ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ.

ಟಿಆರ್‌ಪಿ ರೇಸ್‌ನಲ್ಲಿ ಧಾರಾವಾಹಿಗಳ ಮಧ್ಯೆ ತೀವ್ರ ಪೈಪೋಟಿ: ಸೆಕೆಂಡ್ ಟಾಪ್ ಯಾವುದು?

ಧಾರಾವಾಹಿ ಪಾತ್ರದಾರಿಗಳು: 
ಸೀತಾ ಪಾತ್ರದಲ್ಲಿ ನಟಿ ವೈಷ್ಣವಿ ಗೌಡ, ರಾಮ್ ದೇಸಾಯಿ ಪಾತ್ರದಲ್ಲಿ ಗಗನ್ ಚಿನ್ನಪ್ಪ, ಸಿಹಿ ಪಾತ್ರದಲ್ಲಿ ರಿತು ಸಿಂಗ್, ಅಶೋಕ್‌ ಪಾತ್ರದಲ್ಲಿ ಅಶೋಕ್‌ ಶರ್ಮಾ, ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್, ಪ್ರಿಯಾ ಪಾತ್ರದಲ್ಲಿ ಮೇಘನಾ ಶಂಕರಪ್ಪ, ಸೂರ್ಯಪ್ರಕಾಶ್‌ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಇತರರು ನಟಿಸುತ್ತಿದ್ದಾರೆ.