Asianet Suvarna News Asianet Suvarna News

ಟಿಆರ್‌ಪಿ ರೇಸ್‌ನಲ್ಲಿ ಧಾರಾವಾಹಿಗಳ ಮಧ್ಯೆ ತೀವ್ರ ಪೈಪೋಟಿ: ಸೆಕೆಂಡ್ ಟಾಪ್ ಯಾವುದು?

ಸೀತಾರಾಮ ಹಾಗೂ ಗಟ್ಟಿಮೇಳ ಎರಡೂ ಧಾರಾವಾಹಿಗಳ 'ಕರ್ನಾಟಕ ಟಿಆರ್‌ಪಿ' ಸಮನಾಗಿಯೇ ಇದೆ. ಆದರೆ, ನಗರ ಪ್ರದೇಶಗಳಲ್ಲಿ ಗಟ್ಟಿಮೇಳಕ್ಕಿಂತ ಸೀತಾರಾಮ ಸೀರಿಯಲ್ ಹೆಚ್ಚು ಟಿಆರ್‌ಪಿ ದಾಖಲಿಸಿದೆ. ಈ ಕಾರಣಕ್ಕೆ ಗಟ್ಟಿಮೇಳವನ್ನು 3ನೇ ಸ್ಥಾನಕ್ಕೆ ಸೇರಿಸಬಹುದು. 

Kannada serial trp list: seetha rama occupies second place srb
Author
First Published Sep 23, 2023, 12:43 PM IST

ಸೀರಿಯಲ್ ಲೋಕ ಹೊಸದೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿಕೊಂಡು ಸಾಕಷ್ಟು  ಅಲ್ಲಿನ ಆಗುಹೋಗುಗಳ ಬಗ್ಗೆ ವೀಕ್ಷಕರಿಗೆ ಬಹಳಷ್ಟು  ಕ್ಯೂರಿಯಾಸಿಟಿ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಸೆಲೆಬ್ರಿಟಿಗಳು ಕೂಡ ಸಿನಿಮಾ ಸ್ಟಾರ್‌ಗಳ ಲೆವೆಲ್‌ ತಲುಪತೊಡಗಿದ್ದಾರೆ. ಹಲವರು ಸೀರಿಯಲ್ ಸ್ಟಾರ್‌ಗಳಾಗಿ ಹೊರಹೊಮ್ಮಿ ಸಿನಿಮಾದಲ್ಲಿ ಕೂಡ ಮಿಂಚತೊಡಗಿದ್ದಾರೆ. ಈ ಎಲ್ಲ ಕಾರಣಗಳಿಂದ ಸೀರಿಯಲ್ 'ಟಿಆರ್‌ಪಿ' ಬಹಳಷ್ಟು ಕ್ಯೂರಿಯಾಸಿಟಿ ಗಳಿಸಿದೆ. 

ಬಹಳಷ್ಟು ಕಾಲದಿಂದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಾಪ್ ಸ್ಥಾನ ಕಾಯ್ದುಕೊಂಡಿದೆ. ಹಿರಿಯ ನಟಿ ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿರುವ ಪಟ್ಟಕ್ಕನ ಮಕ್ಕಳು ಸೀರಿಯಲ್, ಈ ಬಾರಿಯೂ ತನ್ನ ಸ್ಥಾನವನ್ನು ಟಾಪ್‌ನಲ್ಲೇ ಕಾಯ್ದುಕೊಂಡಿದೆ. ಈಗೇನಿದ್ದರೂ ಸೆಕೆಂಡ್‌ ಪ್ಲೇಸ್‌ಗೆ ಪೈಪೋಟಿ ಅಷ್ಟೇ. ವೀಕ್ಷಕರ ಕ್ಯೂರಿಯಾಸಿಟಿ ಕೂಡ ಇರೋದು ಕೂಡ ಯಾವುದು ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ ಎಂಬ ಬಗ್ಗೆ ಅಷ್ಟೇ. ಈ ಬಾರಿ ಎರಡನೇ ಸ್ಥಾನದಲ್ಲಿ 'ಸೀತಾ ರಾಮ' ಸೀರಿಯಲ್ ಬಂದು ಕುಳಿತಿದೆ.

ಮಾಡರ್ನ್ ಡ್ರೆಸಲ್ಲಿ ವೈಷ್ಣವಿಗೌಡ, ಸೀತಮ್ಮಾ ಏನಮ್ಮಾ ನಿನ್ ಕಥೆ ಎಂದ ಫ್ಯಾನ್ಸ್! 

ಸೀತಾ ರಾಮ ಹಾಗೂ ಗಟ್ಟಿಮೇಳ ಎರಡೂ ಧಾರಾವಾಹಿಗಳ 'ಕರ್ನಾಟಕ ಟಿಆರ್‌ಪಿ' ಸಮನಾಗಿಯೇ ಇದೆ. ಆದರೆ, ನಗರ ಪ್ರದೇಶಗಳಲ್ಲಿ ಗಟ್ಟಿಮೇಳಕ್ಕಿಂತ ಸೀತಾ ರಾಮ ಸೀರಿಯಲ್ ಹೆಚ್ಚು ಟಿಆರ್‌ಪಿ ದಾಖಲಿಸಿದೆ. ಈ ಕಾರಣಕ್ಕೆ ಗಟ್ಟಿಮೇಳವನ್ನು 3ನೇ ಸ್ಥಾನಕ್ಕೆ ಸೇರಿಸಬಹುದು. ನಾಲ್ಕನೇ ಸ್ಥಾನದಲ್ಲಿ 'ಅಮೃತ ಧಾರೆ' ಹಾಗೂ 5ನೇ ಸ್ಥಾನದಲ್ಲಿ 'ಸತ್ಯ' ಹಾಗೂ 6ನೇ ಸ್ಥಾನದಲ್ಲಿ 'ಶ್ರೀ ರಸ್ತು ಶುಭಮಸ್ತು' ಸ್ಥಾನ ಪಡೆದಿವೆ. ಉಳಿದ ಸೀರಿಯಲ್‌ಗಳ ಟಿಆರ್‌ಪಿ ಕೂಡ ಸಾಕಷ್ಟು ಬದಲಾಗಿದ್ದು, ಅವುಗಳ ಸ್ಥಾನಗಳು ಬದಲಾಗಿ ಅಲ್ಲೋಲಕಲ್ಲೋಲ ಏರ್ಪಡತೊಡಗಿದೆ.

BBK10 ಬಿಗ್‌ ಬಾಸ್‌ ಕನ್ನಡ 10ನೇ ಸೀಸನ್‌ ಈ ದಿನಾಂಕದಿಂದ ಆರಂಭ! 

ಒಟ್ಟಿನಲ್ಲಿ, ಹಲವು ತಿಂಗಳುಗಳಿಂದ ನಂ. 1 ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ರಾರಾಜಿಸುತ್ತಿದ್ದು, ಎರಡನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿರುವುದು ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ ಎನ್ನಬಹುದು. ಮುಂದಿನ ವಾರದ ಹೊತ್ತಿಗೆ ಎಲ್ಲವೂ ಬದಲಾಗಬಹುದು. ಯಾವ ಸೀರಿಯಲ್ ಸ್ಥಾನ ಎಲ್ಲಿ ಬದಲಾಗುವುದು ಎಂಬುದನ್ನು ನೋಡಲು ಮಂದಿನ ವಾರದ ಟಿಆರ್‌ಪಿ ಬರುವ ತನಕ ಕಾಯಲೇಬೇಕು. ನಮ್ಮ ಮುಂದಿನ ವಾರದ ಟಿಆರ್‌ಪಿ ಅಪ್ಡೇಡ್ ನೋಡಲು ಮರೆಯದಿರಿ!

Follow Us:
Download App:
  • android
  • ios