ಕನ್ನಡ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಪತಿ ಮತ್ತು ಮಗುವಿನ ಜೊತೆಗೆ ಇತ್ತೀಚೆಗೆ ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರ ಸ್ವಾಮಿಜಿ ದರ್ಶನ ಪಡೆದು ಬಂದಿದ್ದಾರೆ.
ಮಂತ್ರಾಲಯ. ಎಷ್ಟೋ ವರುಷಗಳ ನಂತರ ಮಂತ್ರಾಲಯಕ್ಕೆ ನನ್ನ ಪಯಣ. ನನ್ನ ಕುಟುಂಬದೊಂದಿಗೆ... ರಾಯರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ. ರಾಯರು ಎಲ್ಲರಿಗೂ ಒಳ್ಳೆಯದು ಮಾಡಲಿ.
ನಟಿ ಮಂತ್ರಾಲಯದಲ್ಲಿ ಪತಿ ಕಿರಣ್ ಅಪ್ಪಚ್ಚು ಮತ್ತು ಮಗ ಹಾಗೂ ಸ್ನೇಹಿತರ ಕುಟುಂಬದ ಜೊತೆ ತೆರಳಿ, ರಾಯರ ದರ್ಶನ, ರಥೋತ್ಸವ ಎಲ್ಲವನ್ನೂ ಕಣ್ತುಂಬಿಕೊಂಡು ಬಂದಿದ್ದಾರೆ.
ರಾಯರು ಯತಿಗಳಾಗಿ ಪಟ್ಟಾಭಿಷೇಕವಾಗಿ 450 ವರ್ಷಗಳು ಸಂದ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಅದ್ಧೂರಿ ಮಹೋತ್ಸವ ನಡೆದಿದ್ದು, ಈ ಸಂದರ್ಭಕ್ಕೆ ನಟಿ ಸಾಕ್ಷಿಯಾಗಿದ್ದಾರೆ.
ನಟನೆಯಿಂದ ಈಗಾಗಲೇ ದೂರವಾಗಿರುವ ಶ್ವೇತಾ ಚೆಂಗಪ್ಪ ಅವರು ನಿರೂಪಕಿಯಾಗಿ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳದೇ ಒಂದು ವರ್ಷಗಳಾಗುತ್ತಾ ಬಂದಿದೆ.
ಶ್ವೇತಾ ಅವರನ್ನು ನಟಿಯಾಗಿ, ನಿರೂಪಕಿಯಾಗಿ ಜನರು ನೋಡಲು ಇಷ್ಟ ಪಡುತ್ತಾರೆ. ಆದರೆ, ನಟಿ ಮತ್ತೆ ಯಾವಾಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಮಾತ್ರ ಗೊತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಶ್ವೇತಾ ಚೆಂಗಪ್ಪ ತಮ್ಮ ಫ್ಯಾಮಿಲಿ ಜೊತೆ ಟೆಂಪಲ್ ರನ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಹೆಚ್ಚಾಗಿ ದೇಗುಲ ದರ್ಶನ ಮಾಡುತ್ತಲೇ ಇರುತ್ತಾರೆ.
ಶ್ವೇತಾ 3 ಸಿನಿಮಾಗಳಲ್ಲಿ ಹಾಗೂ ಸುಕನ್ಯಾ, ಕಾದಂಬರಿ, ಸುಮತಿ, ಅರುಂಧತಿ ಮತ್ತು ಸೌಂದರ್ಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಳಿಕ ನಿರೂಪಕಿಯಾಗಿ ಮುಂದುವರೆದಿದ್ದರು.
ಕನ್ನಡ ಸೀರಿಯಲ್ ನಟಿಯರ ವಿದ್ಯಾಭ್ಯಾಸ… ಆತಿ ಹೆಚ್ಚು ಕಲಿತಿರೋರು ಯಾರು?
ಸಿಂಪಲ್ಲಾಗ್ ಹುಟ್ಟುಹಬ್ಬ ಆಚರಿಸಿಕೊಂಡ Vaishnavi Gowda, ನಟಿಯ ವಯಸ್ಸೆಷ್ಟು?
ಬಿಗ್ ಬಾಸ್ ಬೆಡಗಿ Spandana Somannaಗೆ ನಿಜವಾಗ್ಲೂ ಲವ್ ಆಗಿದ್ಯಂತೆ!
ಥಂಪಾದಿಂದಲೇ ಗಂಡು ಹೈಕ್ಳ ಕಣ್ಣು ತಂಪಾಗಿಸಿದ ನಿವೇದಿತಾ ಗೌಡ!