ಲಕ್ಷ್ಮೀ ನಿವಾಸದಲ್ಲಿ ಭಾವನಾಗೆ ಶಾಕ್! ಬೆಳದಿಂಗಳ ಹುಡುಗ ಗೌಡ್ರೇ ಸಿದ್ದೇಗೌಡ್ರು ಅಂತ ಗೊತ್ತಾದಾಗ ಅವಳ ರಿಯಾಕ್ಷನ್ ಏನು?
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಭಾವನಾಗೆ ಕಳೆದ ಕೆಲ ಸಮಯದಿಂದ ಶಾಕ್ ಟ್ರೀಟ್‌ಮೆಂಟ್! ಮೇಲಿಂದ ಮೇಲೆ ಶಾಕ್ ಆಗ್ತಿದೆ. ಅದರಲ್ಲೊಂದು ಬೆಳದಿಂಗಳ ಹುಡುಗನಂತಿದ್ದ ಗೌಡ್ರೇ ಸಿದ್ದೇಗೌಡ್ರು ಅಂತ ಗೊತ್ತಾಗೋ ಮೊಮೆಂಟ್. ಹೇಗಿರುತ್ತೆ ಅದು?
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಭಾವನಾ ಪಾತ್ರ ಮೋಡದ ಹಾಗೆ. ಸೀರಿಯಸ್, ಯಾವ ಕ್ಷಣದಲ್ಲೂ ಕಣ್ಣಿಂದ ನೀರು ಸುರಿಯಲು ರೆಡಿಯಾಗಿ ನಿಂತಿರುವಂಥಾ ಪಾತ್ರ. ಈ ಪಾತ್ರ ನಿರ್ವಹಿಸೋ ದಿಶಾ ಮದನ್ ಸಹ ಈ ಪಾತ್ರದಲ್ಲಿ ಜೀವಿಸಿದ್ದಾರೆ. ಆಕೆಯ ಡ್ರೆಸಿಂಗ್ ಸ್ಟೈಲ್, ಲುಕ್, ಎಕ್ಸ್‌ಪ್ರೆಶನ್ ಅದರಲ್ಲೂ ಒಬ್ಬ ಮೆಚ್ಯೂರ್ಡ್, ಜೀವನಾನುಭವ ಇರುವ ಹೆಣ್ಣಿನ ಪಾತ್ರದಲ್ಲಿ ದಿಶಾ ನಟನೆ awesome ಅನ್ನುವಂಥಾದ್ದು. ಸದ್ಯಕ್ಕಂತೂ ಅವಳ ಪರಿಸ್ಥಿತಿ ಬಹಳ ಸಂದಿಗ್ಧದಲ್ಲಿದೆ. ಅವಳನ್ನು ಸಿದ್ದೇಗೌಡ ಅವಳ ಇಚ್ಛೆಯನ್ನು ಕೇಳದೇ ಮದುವೆ ಆಗಿ ಬಿಟ್ಟಿದ್ದಾನೆ. ಅದು ಆಕೆಗೆ ನೋವು ಕೊಟ್ಟಿದೆ. ಆತನ ಮನೆಯಲ್ಲಿರುವವರ ನಡವಳಿಕೆಯೂ ಆಕೆಯನ್ನು ನೋಯಿಸುವ ಹಾಗಿದೆ.
ಇದೀಗ ಗುರುಗಳು ಬಂದು ಆಕೆಯ ಕಾಲ್ಗುಣ ಚೆನ್ನಾಗಿದೆ ಅಂದಾಗ ಜವರೇಗೌಡರು ಕೊಂಚ ಬದಲಾದರೂ ಅವರ ಹೆಂಡತಿ ಭಾವನಾಳನ್ನು ಆಚೆ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ಅವಳಿಗೆ ತಾನು ಹೆರದಿದ್ದರೂ ತನ್ನ ಮಗಳೇ ಆಗಿರುವ ಖುಷಿ ದೂರಾಗುವ ನೋವೂ ಉಂಟಾಗಿತ್ತು. ಆದರೆ ಸದ್ಯ ಅದು ಸುಧಾರಿಸಿದೆ.
ಅಣ್ಣಯ್ಯ ಸೀರಿಯಲ್‌ನಲ್ಲಿ ಮಿಲನ ಸಿನಿಮಾ ಸ್ಟೋರಿ! ಮುಂದೈತೆ ಬೆಂಕಿ ಅಂತಿರೋದ್ಯಾಕೆ ಫ್ಯಾನ್ಸ್?
ಆದರೆ ಈ ಭಾವನಾ ತನ್ನ ಮನಸ್ಸಲ್ಲಿದ್ದದ್ದನ್ನು ಬಹಳ ಆಪ್ತವಾಗಿ ಮಾತನಾಡುತ್ತಿದ್ದದ್ದು, ಸಲಹೆ ಪಡೆಯುತ್ತಿದ್ದದ್ದು ಗೌಡ್ರಿಂದ. ಆತ ಆಕೆಯ ವೆಲ್‌ವಿಶರ್, ಮಾರ್ಗದರ್ಶಿ, ಧೈರ್ಯ ತುಂಬೋ ವ್ಯಕ್ತಿ, ಸ್ನೇಹಿತ ಎಲ್ಲ ಆಗಿದ್ದ. ಆತನ ಬಳಿ ಅವಳ ತನ್ನ ಮನಸ್ಸನ್ನು ಬಿಚ್ಚಿಡಲು ಹಿಂದೆ ಮುಂದೆ ನೋಡ್ತಿರಲಿಲ್ಲ. ಎಲ್ಲರೂ ಇದ್ದೂ ಯಾರೂ ಇಲ್ಲದ ತಬ್ಬಲಿಯಂತಿದ್ದ ಅವಳಿಗೆ ಗೌಡರ ಮಾತು ಸಮಾಧಾನ ನೀಡುತ್ತಿತ್ತು. ಆದರೆ ಇದೀಗ ಇಷ್ಟು ದಿನ ತಾನು ಅಷ್ಟು ಆಪ್ತವಾಗಿ ಮಾತನಾಡುತ್ತಿದ್ದ ಗೌಡ್ರು ಮತ್ಯಾರೂ ಅಲ್ಲ ಸಿದ್ದೇಗೌಡರೇ ಅಂತ ಗೊತ್ತಾದಾಗ ಅವಳ ರಿಯಾಕ್ಷನ್ ಹೇಗಿರಬಹುದು ಅನ್ನೋದೆ ಕುತೂಹಲ.
ಹಾಗೆ ನೋಡಿದರೆ ಭಾವನಾಳನ್ನು ಬಹಳ ಪ್ರೀತಿಸುವ ಸಿದ್ಧೇಗೌಡರಿಗೆ ಭಾವನಾ ಚೆನ್ನಾಗಿರಬೇಕು, ಅವಳು ಸದಾ ಖುಷಿಯಾಗಿರಬೇಕು ಅನ್ನೋ ಆಸೆ. ಆದರೆ ಅವಳಿಗೆ ಸಿದ್ದೇಗೌಡರ ಬಗ್ಗೆ ಸಿಟ್ಟು, ನೋವು ಕಡಿಮೆ ಆದ ಹಾಗೆ ಕಾಣೋದಿಲ್ಲ. ಈ ಹಿಂದೆಯೂ ಭಾವನಾ ಮಗಳಂತಿರುವ ಖುಷಿಯನ್ನ ಭಾವನಾ ಅಮ್ಮನ ಮನೆಗೆ ಬಂದ ಸೌಪರ್ಣಿಕಾ ತನ್ನೊಂದಿಗೆ ಕರೆದೊಯ್ಯುತ್ತಾಳೆ. ಆದರೆ ಖುಷಿ ಸೌಪರ್ಣಿಕಾ ಜೊತೆ ಇರಲು ಇಷ್ಟಪಡುವುದಿಲ್ಲ. ವಿಚಾರ ತಿಳಿದ ಭಾವನಾಗೆ ಖುಷಿಯನ್ನು ನೋಡಬೇಕೆನಿಸುತ್ತದೆ. ಸಿದ್ದು ಕೂಡಾ ಭಾವನಾ ಜೊತೆ ಸೌಪರ್ಣಿಕಾ ಮನೆಗೆ ಬರುತ್ತಾನೆ. ಖುಷಿಯನ್ನು ತಮ್ಮೊಂದಿಗೆ ಕಳಿಸಿಕೊಂಡುವಂತೆ ಹೇಳುತ್ತಾನೆ. ಸಿದ್ದು ಜೊತೆ ಈಗ ಜಗಳ ಮಾಡುವುದು ಸರಿ ಅಲ್ಲ ಎನಿಸಿದ ಸೌಪರ್ಣಿಕಾ, ಖುಷಿಯನ್ನು ಮತ್ತೆ ಭಾವನಾ ಜೊತೆ ಕಳಿಸಲು ಒಪ್ಪುತ್ತಾಳೆ. ಖುಷಿ ಮತ್ತೆ ಮನೆಗೆ ವಾಪಸ್ ಆಗಿದ್ದಕ್ಕೆ ಲಕ್ಷ್ಮೀ ಸಂತೋಷ ವ್ಯಕ್ತಪಡಿಸುತ್ತಾಳೆ.
ವೈಷ್ಣವ್ ಗೆ ಜ್ಞಾನೋದಯವಾಯ್ತಾ? ಅಮ್ಮನ ಮೇಲೆ ಕೂಗಾಡ್ತಿರೋದು ಕನಸಾ, ನನಸಾ?
ಹೀಗೆಲ್ಲ ಟ್ವಿಸ್ಟ್ ಟರ್ನ್ ಇರುವ ಸೀರಿಯಲ್‌ನಲ್ಲಿ ಸದ್ಯ ದೊಡ್ಡದೊಂದು ಸತ್ಯ ಭಾವನಾ ಎದುರು ಬಾಯ್ತೆರೆದು ನಿಂತಿದೆ. ತಾನು ತನ್ನೆಲ್ಲ ವಿಚಾರ, ಮನದ ತೊಳಲಾಟ ನೋವನ್ನೆಲ್ಲ ಹಂಚಿಕೊಳ್ತಿದ್ದ ವ್ಯಕ್ತಿ ತನ್ನ ಮನಸ್ಸನ್ನು ಅರಿಯದೇ ತಾಳಿ ಕಟ್ಟಿರೋ ಸಿದ್ದೇಗೌಡರೇ ಅಂತ ಗೊತ್ತಾದರೆ ಅವಳ ರಿಯಾಕ್ಷನ್ ಹೇಗಿರಬಹುದು, ಅವಳು ಮತ್ತಷ್ಟು ಸಿಟ್ಟಾಗಿ ಸಿದ್ದೇಗೌಡರಿಂದ ಇನ್ನಷ್ಟು ಡಿಸ್ಟೆನ್ಸ್ ಮೈಂಟೇನ್ ಮಾಡಬಹುದಾ? ಸಿದ್ದೇಗೌಡನ ಜೊತೆ ಜಗಳ ಆಡಬಹುದಾ? ಆದರೆ ಇದೆಲ್ಲ ಭಾವನಾ ತಾಯಿ ಲಕ್ಷ್ಮೀಗೂ ತಿಳಿದಿರುವ ಕಾರಣ ಅವರು ಭಾವನಾ ಮತ್ತು ಸಿದ್ದೇಗೌಡರ ನಡುವಿನ ಶೀತಲ ಸಮರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಬಹುದಾ? ಎಂಬೆಲ್ಲ ಪ್ರಶ್ನೆಗಳು ಎದುರಾಗಿವೆ. 'ಭಾವನಾ ಗೌಡ್ರನ್ನ ಒಪ್ಪಿದ್ರೆ ಚೆನ್ನಾಗಿರುತ್ತೆ. ಆದ್ರೆ ಕರ್ಮದ ಡೈರೆಕ್ಟರ್ ಅಡ್ಡಗಾಲು ಹಾಕ್ತಾರಲ್ವಾ?', 'ಡ್ರೈರೆಕ್ಟರ್ ಅಡ್ಡ ಬರದಿದ್ರೆ ಭಾವನಾ ಗೌಡ್ರು ಒಂದಾಗ್ತಿದ್ರು' ಅಂತ ಜನ ಈ ಸೀರಿಯಲ್ ಡೈರೆಕ್ಟರ್‌ಗೆ ಕ್ಲಾಸ್ ತಗೊಳ್ತಿರೋದು ಮಜವಾಗಿದೆ.
ಸಿದ್ದೇಗೌಡ್ರು ಪಾತ್ರದಲ್ಲಿ ಧನಂಜಯ ಮೋಡಿ ಮಾಡಿದ್ರೆ, ಭಾವನಾ ಆಗಿ ದಿಶಾ ಮದನ್ ಗಮನಸೆಳೀತಾರೆ. ಭಾವನಾ ತಾಯಿ ಲಕ್ಷ್ಮೀಯಾಗಿ ಹಿರಿಯ ನಟಿ ಶ್ವೇತಾ ನಟಿಸಿದ್ದಾರೆ.