ವೈಷ್ಣವ್ ಗೆ ಜ್ಞಾನೋದಯವಾಯ್ತಾ? ಅಮ್ಮನ ಮೇಲೆ ಕೂಗಾಡ್ತಿರೋದು ಕನಸಾ, ನನಸಾ?
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ವೈಷ್ಣವ್ ಗೆ ಬುದ್ಧಿ ಬಂದಂತಿದೆ. ಅಮ್ಮ ಕಾವೇರಿ ವಿರುದ್ಧ ಕೋರ್ಟ್ ನಲ್ಲಿ ವೈಷ್ಣವ್ ಕೂಗಾಡ್ತಿದ್ದಾನೆ. ಆದ್ರೆ ವೀಕ್ಷಕರು ಮಾತ್ರ ಇದನ್ನು ನಂಬಲು ಸಿದ್ಧರಿಲ್ಲ.
ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್ (Colors Kannada's Lakshmi Baramma serial ) ನಲ್ಲಿ ವೀಕ್ಷಕರು ಶಾಕ್ ಆಗುವ ಘಟನೆ ನಡೆದಿದೆ. ವೈಷ್ಣವ್ ಅಂದ್ರೆ ಕಾವೇರಿ ಪುಟ್ಟ, ಅಮ್ಮನ ಮೇಲೆ ತಿರುಗಿ ಬಂದಿದ್ದಾನೆ. ಸದಾ ಅಮ್ಮನ ಮಾತನ್ನು ನಂಬ್ತಾ, ಅಮ್ಮನ ಹಿಂದೆ ತಿರುಗುವು ವೈಷ್ಣವ್ ಇದೇ ಮೊದಲ ಬಾರಿ ಮಹಾಲಕ್ಷ್ಮಿ ಪರ ನಿಂತಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಇದು ಸತ್ಯ ಎಂಬುದನ್ನು ಬಹುತೇಕರು ನಂಬೋಕೆ ಸಿದ್ಧರಿಲ್ಲ. ಈ ಎಪಿಸೋಡ್ (Episode) ಪ್ರಸಾರವಾಗ್ಲಿ, ವೈಷ್ಣವ್ ಅಮ್ಮನ ವಿರುದ್ಧ ಮಾತನಾಡ್ತಿದ್ದಾನಾ ಇಲ್ವಾ ಎಂಬುದು ಗೊತ್ತಾಗುತ್ತೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಲಕ್ಷ್ಮಿ ಬಾರಮ್ಮ ಸೀರಿಯಲ್ ಪ್ರೋಮೋ (Promo) ವನ್ನು ಕಲರ್ಸ್ ಕನ್ನಡ ತನ್ನ ಇನ್ಸ್ಟಾ (Instagram) ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅದ್ರಲ್ಲಿ ಕಾವೇರಿ ಕಟಕಟೆಯಲ್ಲಿ ನಿಂತಿರೋದನ್ನು ನೋಡ್ಬಹುದು. ಅಮ್ಮನ ಮುಂದೆ ನಿಂತಿರುವ ವೈಷ್ಣವ್, ಅಮ್ಮನ ವಿರುದ್ಧ ಮಾತನಾಡ್ತಿದ್ದಾನೆ. ಕೊಲೆಗಾರ್ತಿ ನೀನು, ಮಹಾಲಕ್ಷ್ಮಿಗೆ ಏನೂ ಆಗ್ದೆ ಇದ್ರೂ ಅವರನ್ನು ಆಸ್ಪತ್ರೆಗೆ ಸೇರಿಸಿ, ಶಾಕ್ ಟ್ರೀಟ್ಮೆಂಟ್ ನೀಡಿದ್ದು ನಮ್ಮ ಅಮ್ಮ ಎಂದು ಎಲ್ಲರ ಮುಂದೆ ವೈಷ್ಣವ್ ಕೂಗಾಡಿದ್ದಾನೆ. ವೈಷ್ಣವ್ ಮಾತು ಕೇಳಿ ಅಮ್ಮ ಕಾವೇರಿ ಅಚ್ಚರಿಗೊಳಗಾಗಿದ್ದಾಳೆ. ಇತ್ತ ತನ್ನ ಪರ ಮಾತನಾಡ್ತಿರುವ ಹಾಗೂ ಸತ್ಯದ ಪರ ನಿಂತಿರುವ ವೈಷ್ಣವ್ ನೋಡಿ ಮಹಾಲಕ್ಷ್ಮಿ ಖುಷಿಯಾಗಿದ್ದಾಳೆ.
bigg boss kannada 11: ಚೈತ್ರಾ ಕುಂದಾಪುರ ಸೀಕ್ರೆಟ್ ರೂಂ, ಇದು ಮಿಡ್ ವೀಕ್ ಎಲಿಮಿನೇಶನ್ ಸೂಚನೆಯಾ?
ಪ್ರೊಮೋ ನೋಡಿದ ವೀಕ್ಷಕರು, ಇಂದಿನ ಎಪಿಸೋಡ್ ವೀಕ್ಷಿಸಲು ಕಾತುರರಾಗಿದ್ದಾರೆ. ಆದ್ರೆ ಬಹುತೇಕರು, ಇದು ಕನಸು, ಯಾರೂ ಹೆಚ್ಚು ಖುಷಿಪಡ್ಬೇಡಿ ಎನ್ನುತ್ತಿದ್ದಾರೆ. ಪುಟ್ಟನಿಗೆ ಇಷ್ಟೊಂದು ಬುದ್ಧಿ ಬರಲು ಸಾಧ್ಯವೇ ಇಲ್ಲ. ಜಾಣ ಪುಟ್ಟ ಆಗೋಗೆ ನಿರ್ದೇಶಕರು ಬಿಡೋದೂ ಇಲ್ಲ. ಹಾಗಾಗಿ ಇದು ಕನಸು ಎನ್ನುತ್ತಿದ್ದಾರೆ ವೀಕ್ಷಕರು. ವೈಷ್ಣವ್ ಗೆ ಇವತ್ತು ಎಚ್ಚರವಾಯ್ತು, ಆತನಿಗೆ ಈಗ ಬುದ್ಧಿ ಬಂತು, ಜ್ಞಾನೋದಯವಾಯ್ತಾ, ವೈಷ್ಣವ್ ತಲೆ ಬಳಿ ರಕ್ತವಿದ್ದು, ತಲೆಗೆ ಪೆಟ್ಟು ಬಿದ್ಮೇಲೆ ಬುದ್ಧಿ ಬಂದಿರಬೇಕು ಎಂದು ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ. ಕಾವೇರಿಗೆ ಇದು ಕನಸು ಎಂಬುದು ಮತ್ತೆ ಕೆಲವರ ಅಭಿಪ್ರಾಯವಾದ್ರೆ, ವೈಷ್ಣವ್, ಮಹಾಲಕ್ಷ್ಮಿ ಪರ ನಿಂತಿದ್ದು ವೀಕ್ಷಕರಿಗೆ ಇಷ್ಟವಾಗ್ತಿಲ್ಲ. ಮೊದಲು ದೂರು ನೀಡಿದ್ದು ಕೀರ್ತಿ. ಇಲ್ಲಿ ಕೀರ್ತಿ ಮಾತಿಗೆ ಬೆಲೆಯೇ ಇಲ್ಲ. ಆಕೆ ಸ್ಟೇಟ್ಮೆಂಟ್ ತೆಗೆದುಕೊಳ್ತಿಲ್ಲ. ಅವಳಿಗೆ ಮೊದಲು ನ್ಯಾಯ ಸಿಗ್ಬೇಕು. ಮಹಾಲಕ್ಷ್ಮಿಗೆ ಅಮ್ಮ ತೊಂದ್ರೆ ಕೊಟ್ರು ಎಂಬುದನ್ನು ವೈಷ್ಣವ್ ಹೇಳ್ತಿದ್ದಾನೆಯೇ ವಿನಃ ಕೀರ್ತಿ ಬಗ್ಗೆ ಏನೂ ಹೇಳ್ತಿಲ್ಲ ಎಂದು ವೀಕ್ಷಕರು ತನ್ನ ವಿರೋಧ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್ ಹೇಳಿರುವುದೇನು ಆಗಿರುವುದೇನು? ಉಲ್ಟಾ ಪ್ರೊಜೆಕ್ಷನ್ ಅಂದ್ರೆ ಇದೇನಾ?
ಕೀರ್ತಿ ಹತ್ಯೆ ನಂತ್ರ ಕಾವೇರಿ ಮೇಲೆ ಮಹಾಲಕ್ಷ್ಮಿಗೆ ಅನುಮಾನ ಬಂದಿತ್ತು. ಕೀರ್ತಿ ಮೈಮೇಲೆ ಬಂದಂತೆ ನಾಟಕವಾಡಿದ್ದಳು. ಆದ್ರೆ ಕಾವೇರಿ ಇದಕ್ಕೆ ಬಗ್ಗಿರಲಿಲ್ಲ. ಕೀರ್ತಿ ವಿಷ್ಯ ಲಕ್ಷ್ಮಿಗೆ ಗೊತ್ತಾಗಿದೆ ಎಂಬುದು ಕಾವೇರಿಗೆ ತಿಳಿದಿ ತಕ್ಷಣ, ರಾವಣ ದಹನ ಸಂದರ್ಭದಲ್ಲಿ ಮಹಾಲಕ್ಷ್ಮಿ ಕೊಲೆಗೆ ಮುಂದಾಗಿದ್ದಳು. ಆದ್ರೀಗ ಕೀರ್ತಿ ಹಾಗೂ ಮಹಾಲಕ್ಷ್ಮಿ ಇಬ್ಬರೂ ಕಾವೇರಿ ಮುಂದೆ ಬಂದಾಗಿದೆ. ಕಾವೇರಿ ಅಪರಾಧಿ ಎನ್ನುವ ಬಗ್ಗೆ ಸಾಕ್ಷ್ಯ ನೀಡಲಾಗ್ತಿದೆ. ಕಾವೇರಿ ನಿಜವಾಗ್ಲೂ ನಿರಪರಾಧಿಯಾಗಿದ್ರೆ ನಾನು ಮನೆ ಬಿಟ್ಟು ಹೋಗೋಕೆ ಸಿದ್ಧ ಎಂದು ಮಹಾಲಕ್ಷ್ಮಿ, ವೈಷ್ಣವ್ ತಂಗಿ ಚಾಲೆಂಜ್ ಸ್ವೀಕರಿಸಿದ್ದಾಳೆ. ಸದ್ಯ ಸೀರಿಯಲ್ ಬೇಗ ಸಾಗ್ತಿದ್ದು, ಆದಷ್ಟು ಬೇಗ ಕಾವೇರಿ ಜೈಲು ಸೇರ್ತಾಳೆ ಎನ್ನುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ. ನಿರ್ದೇಶಕರ ಟ್ವಿಸ್ಟ್ ಏನು ಎಂಬುದನ್ನು ಕಾದು ನೋಡ್ಬೇಕಿದೆ.