ಮದುವೆ ಮೇಲೆ ನಂಬಿಕೆನೇ ಇಲ್ಲ ಅನ್ನೋ ವ್ಯಕ್ತಿಗಳಿಗೆ ಇಷ್ಟವಾಗುವ ಧಾರಾವಾಹಿ ಅಮೃತಾಧಾರೆ. ಮದುವೆ ಅನ್ನೋ ಇನ್ಸ್ಟಿಟ್ಯೂಟ್ ಹೇಗಿರಲಿದೆ ಎಂದು ವಿವರಿಸಿದ ಛಾಯಾ. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿ ಕನ್ನಡ ಕಿರುತೆರೆ ವೀಕ್ಷಕರಿಗೆ ವಿಭಿನ್ನ ಲವ್ ಸ್ಟೋರಿ ಹೇಳಲು ಮುಂದಾಗಿದ್ದಾರೆ. ಅಂಕಲ್ ಹುಡುಗಿ ಲವ್ ಸ್ಟೋರಿ ಒಂದು ಟ್ರೆಂಡ್ ಆದರೆ ಈಗ ಮದುವೆನೇ ಆಗದ ಬ್ಯಾಚುಲರ್ ಆಗಿರುವ ಅಂಕಲ್ ಮತ್ತು ಹುಡುಗ ಇಷ್ಟವಾದ ಮದುವೆನೇ ಬೇಡ ಎನ್ನುವ ಹುಡುಗಿ (ಮದುವೆ ವಯಸ್ಸು ಮೀರಿದು ಹುಡುಗಿ) ನಡುವೆ ಹುಟ್ಟುವ ಪ್ರೀತಿ ಇದಾಗಿದೆ. ಈ ಧಾರಾವಾಹಿ ಜನರಿಗೆ ಮದುವೆ ಅನ್ನೋ ವಿಚಾರವನ್ನು ತಪ್ಪಾಗಿ ಅರ್ಥ ಮಾಡಿಸುತ್ತದೆ ಎಂದು ಪ್ರಶ್ನೆ ಮಾಡಿದಾಗ ನಟಿ ಛಾಯಾ ಸಿಂಗ್ ಅದ್ಭುತವಾಗಿ ಸಂಬಂಧ ಮತ್ತು ಮದುವೆ ಬಗ್ಗೆ ವಿವರಿಸುತ್ತಾರೆ. 

ಸಿನಿಮಾ ವಿಲನ್‌ನನ್ನೇ ವರಿಸಿದ ಛಾಯಾ ಸಿಂಗ್! ಅಷ್ಟಕ್ಕೂ ಆ ವ್ಯಕ್ತಿ ಯಾರು?

'ಮದ್ವೆ ಅನ್ನೋ ಇನ್ಸ್ಟಿಟ್ಯೂಟ್ ತುಂಬಾ ಬ್ಯೂಟಿಫುಲ್ ಆಂದ್ರೆ ಒಂದೊಳ್ಳೆ ಪಾರ್ಟನರ್‌ ಜೊತೆ ಜೀವನವನ್ನು ಎಂಜಾಯ್ ಮಾಡಬಹುದು. ಸರಿಯಾದ ವ್ಯಕ್ತಿ ಸಿಕ್ಕಾಗ ಜೀವನವನ್ನು ಅದ್ಭುತವಾಗಿ ಎಂಜಾಯ್ ಮಾಡಬಹುದು. ನಮ್ಮ ಭಾವನೆಗಳು ನಮ್ಮ ಲೈಫ್‌ಸ್ಟೈಲ್‌ ಬಗ್ಗೆ ಅವರು ಅರ್ಥ ಮಾಡಿಕೊಳ್ಳುವುದು ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳುವುದು ಚೆಂದ. ಎಲ್ಲರು ಹೇಳುವ ಹಾಗೆ ಆಪೋಸಿಟ್ ಅಟ್ರ್ಯಾಕ್ಸ್ ಮಾಡುತ್ತೆ ಅಂತ ಅದು ನಿಜ ಆದರೆ ಯಾವುದಾದರೂ ಒಂದು ವಿಚಾರದಲ್ಲಿ ಹೊಲಿಕೆ ಇದ್ದೇ ಇರುತ್ತದೆ. ತುಂಬಾ ಆಪೋಸಿಟ್‌ ವ್ಯಕ್ತಿಗಳಾಗಿ ನಾನು ಹೈಪರ್ ಆಕ್ಟಿವ್ ಅವ್ರು ಸೋಂಬೇರಿ ಅಗಿ ಬಿಟ್ಟರೆ ಸಂಬಂಧ ವರ್ಕೌಟ್ ಆಗುವುದಿಲ್ಲ. ಇಬ್ಬರಲ್ಲಿ ಹೊಲಿಕೆ ಇದ್ದರೆ ಮಜಾ ಇರುತ್ತೆ. ಪ್ರತಿಯೊಂದು ಸಂಬಂಧದಲ್ಲಿ ಜಗಳ ಮನಸ್ಥಾಪ ಕೋಪ ಇದ್ದೇ ಇರುತ್ತದೆ ಅದನ್ನು ಮೀರಿ ಒಟ್ಟಿಗೆ ಇರುವುದು ಪ್ರೀತಿ ಮತ್ತು ಮದುವೆ. ಧೈರ್ಯದಿಂದ ಕೆಟ್ಟ ಸಮಯವನ್ನು ಎದುರಿಸಿದರೆ ಖಂಡಿತಾ ಜೀವನ ಸೂಪರ್ ಆಗಿರುತ್ತದೆ ಹೀಗಾಗಿ ಪ್ರತಿಯೊಬ್ಬರಿಗೂ ನಾನು ಹೇಳುವುದು ಒಂದೇ ನಿಮ್ಮವರನ್ನು ಹೆಚ್ಚಿಗೆ ಪ್ರೀತಿಸಿ ಜೀವನ ಏನೆಂದು ಸಂಬಂಧಗಳು ಅರ್ಥ ಮಾಡಿಸುತ್ತದೆ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಛಾಯಾ ಮಾತನಾಡಿದ್ದಾರೆ.

ಅಂದು ಶಿವಣ್ಣ ಫೋನ್ ಮಾಡಿ ಹೇಳಿದ್ದೇನು? DKD ವೇದಿಕೆಯಲ್ಲಿ ಕಣ್ಣೀರಿಟ್ಟ ನಟಿ ಛಾಯ ಸಿಂಗ್

'ಅಮೃತಾಧಾರಿ ಧಾರಾವಾಹಿಯಲ್ಲಿ ನನ್ನ ಪಾತ್ರದ ಮೂಲಕ ಜನರಿಗೆ ಫ್ಯಾಮಿಲಿ ಜವಾಬ್ದಾರಿಗಳು ತುಂಬಾ ಮುಖ್ಯವಾಗುತ್ತದೆ ಎಂದು ತಿಳಿಸುತ್ತದೆ. ಜೀವನದಲ್ಲಿ ನಂಬಿಕೆ ಕಳೆದುಕೊಳ್ಳಬಾರದು ನಮ್ಮ ಕನಸುಗಳ ಮೇಲೆ ನಂಬಿಕೆ ಇರಬೇಕು. ಸೂಕ್ತವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಜೀವನ ಅದ್ಭುತವಾಗಿರುತ್ತದೆ ಸಮಾನತೆ ಮತ್ತು ಹೊಲಿಕೆ ಇರಬೇಕು. ಈಗಿನ ಜನರೇಷನ್‌ನಲ್ಲಿ ಅನೇಕರು ಯಾಕೆ ಮಾದುವೆ ಮಾಡಿಕೊಳ್ಳಬೇಕು ಮದುವೆ ಅಗತ್ಯವಿಲ್ಲ ನೆಮ್ಮದಿಯಾಗಿದ್ದೀವಿ ಅನ್ನೋ ಯೋಚನೆಯಲ್ಲಿ ಇದ್ದಾರೆ ಆದರೆ ನಾವು ಮದುವೆ ಅನ್ನೋದು ಜೀವನದಲ್ಲಿ ತುಂಬಾನೇ ಮುಖ್ಯ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನ ಎಂಜಾಯ್ ಮಾಡಬಹುದು ಎಂದು ತಿಳಿಸುತ್ತಿದ್ದೀವಿ' ಎಂದು ಛಾಯಾ ಸಿಂಗ್ ಹೇಳಿದ್ದಾರೆ.