ಸಿನಿಮಾ ವಿಲನ್‌ನನ್ನೇ ವರಿಸಿದ ಛಾಯಾ ಸಿಂಗ್! ಅಷ್ಟಕ್ಕೂ ಆ ವ್ಯಕ್ತಿ ಯಾರು?

'ಅಮೃತಧಾರೆ' ಸೀರಿಯಲ್ ಮೂಲಕ ಸಖತ್ ಪಾಪ್ಯುಲಾರಿಟಿ ಪಡೀತಿರೋ ನಟಿ ಛಾಯಾಸಿಂಗ್. ಅವರ ರಿಯಲ್ ವಯಸ್ಸು ಎಷ್ಟು? ಮದುವೆ, ಗಂಡ, ಫ್ಯಾಮಿಲಿ ಡೀಟೇಲ್ಸ್ ಏನು?

Amruthavarshini serial artist Chaya singh family details

ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಅಮೃತಧಾರೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಮುಖ್ಯಪಾತ್ರದಲ್ಲಿದ್ದಾರೆ. ಛಾಯಾ ಸಿಂಗ್ ಕನ್ನಡಿಗರಿಗೆ ಅಪರಿಚಿತ ಹೆಸರೇನಲ್ಲ. ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಒಂದಿಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಜೊತೆಗೆ ಫೇಮಸ್ಸೂ ಆಗಿ ಕನ್ನಡಿಗರ ಮನೆ ಮಾತಾಗಿದ್ದರು. ಇದೀಗ ಮತ್ತೆ ಸೀರಿಯಲ್ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ. ಈ ಸೀರಿಯಲ್‌ನಲ್ಲಿ ಅವರ ವಯಸ್ಸು 35 ವರ್ಷ. ಅವಿವಾಹಿತೆ. ತನ್ನ ಪ್ರೋಮೋಗಳಿಂದಲೇ ಕುತೂಹಲ ಮೂಡಿಸಿದ 'ಅಮೃತಧಾರೆ' ಸೀರಿಯಲ್‌ನಲ್ಲಿ ಛಾಯಾ ಸಿಂಗ್ ಒಂದು ಕಡೆ ನೋವಿನ ಬದುಕಿನ ಮೂಲಕ ಮತ್ತೊಂದು ಕಡೆ ಕೋಳಿ ಜಗಳದ ಮೂಲಕ ಗಮನಸೆಳೆದಿದ್ದರು. ಇದೀಗ ಸೀರಿಯಲ್ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್ ಅವರು ಭೂಮಿಕಾ ಎನ್ನುವ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಹೆಸರು ಮಾಡಿರುವ ರಾಜೇಶ್ ನಟರಂಗ ಈ ಧಾರಾವಾಹಿಯ ಹೀರೋ.

ಅಂದಹಾಗೆ ಈ ಸೀರಿಯಲ್ ನಲ್ಲಿ ಛಾಯಾ ಸಿಂಗ್ ವಯಸ್ಸು 35 ವರ್ಷ. ಮದುವೆ ಆಗಿಲ್ಲ. ಆದರೆ ರಿಯಲ್ ಲೈಫಲ್ಲಿ ಇವರ ವಯಸ್ಸೆಷ್ಟು ಗೊತ್ತಾ? 42 ವರ್ಷ. ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ತಮ್ಮ ವಯಸ್ಸೆಷ್ಟೋ ಅದಕ್ಕಿಂತ ಜಾಸ್ತಿ ವಯಸ್ಸಿನ ಪಾತ್ರ ಮಾಡೋದೇ ಹೆಚ್ಚು. ಕೆಲವೊಮ್ಮೆ ಅದೇ ವಯಸ್ಸಿನ ಪಾತ್ರ ಸಿಗೋದೂ ಇದೆ. ಆದರೆ ಈ ಸೀರಿಯಲ್‌ನಲ್ಲಿ ಮಾತ್ರ ತಮ್ಮ ರಿಯಲ್ ವಯಸ್ಸಿಗಿಂತ ಕಡಿಮೆ ವಯಸ್ಸಿನ ಪಾತ್ರ ಛಾಯಾ ಸಿಂಗ್ ಮಾಡಿದ್ದಾರೆ. ಮಾತ್ರವಲ್ಲ, ಆ ವಯಸ್ಸಿಗೆ ತಕ್ಕ ಹಾಗೆ ಕಾಣಿಸಿಕೊಂಡೂ ಇದ್ದಾರೆ. ಈ ಸೀರಿಯಲ್ ನ ಹೀರೋ ಪಾತ್ರ ಮಾಡುತ್ತಿರುವ ರಾಜೇಶ್ ನಟರಂಗ ರಿಯಲ್ ವಯಸ್ಸೂ ಸೀರಿಯಲ್ ಪಾತ್ರಕ್ಕಿಂತ ಹೆಚ್ಚೇ.

ಓ ಮೈ ಗಾಡ್..! 'ಗೀತಾ' ನಟಿಯ ಮೈ ಮೇಲೆ ಹೆಬ್ಬಾವು ನೋಡಿ ಹೌಹಾರಿದ ಫ್ಯಾನ್ಸ್

ಇನ್ನೊಂದು ಅಂದರೆ ಈ ಸೀರಿಯಲ್‌ನಲ್ಲಿ ಅವಿವಾಹಿತೆ ಆಗಿರುವ ಛಾಯಾ ಸಿಂಗ್ ರಿಯಲ್ ಲೈಫಿನಲ್ಲಿ ವಿವಾಹಿತೆ. 2012ರಲ್ಲೇ ಛಾಯಾ ಸಿಂಗ್, ಕೃಷ್ಣ ಅವರ ಕೈ ಹಿಡಿದಿದ್ದಾರೆ. ಇವರಿಬ್ಬರ ಲವ್‌ ಸ್ಟೋರಿ ಸಖತ್ ಇಂಟರೆಸ್ಟಿಂಗ್ ಆಗಿಯೂ ಇದೆ. ಅಂದಹಾಗೆ ಇವರಿಬ್ಬರದ್ದೂ ಲವ್ ಮ್ಯಾರೇಜ್ ಆದರೂ ಮನೆಯವರ ಸಮ್ಮತಿ ಪಡೆದೇ ಮದುವೆ ಆಗಿದ್ದಾರೆ. ಅಷ್ಟಕ್ಕೂ ಈ ಫೀಲ್ಡ್‌ನಲ್ಲಿರುವ ಹುಡುಗೀರು ಬ್ಯುಸಿನೆಸ್ ಮ್ಯಾನ್ ಕೈ ಹಿಡಿಯೋದು ಕಾಮನ್. ಆದರೆ ಛಾಯಾಸಿಂಗ್ ಪ್ರೀತಿಯಲ್ಲಿ ಬಿದ್ದಿರೋದು ಒಬ್ಬ ಆಕ್ಟರ್ ಜೊತೆ. ಒಂದೇ ಸಿನಿಮಾ ಅಥವಾ ಸೀರಿಯಲ್‌ನಲ್ಲಿ ನಟಿಸುವಾಗ ಹೀರೋ ಹೀರೋಯಿನ್ ನಡುವೆ ಪ್ರೀತಿ ಬೆಳೆಯೋದು ಸಹಜ. ಆದರೆ ಈ ಚುಟು ಚುಟು ಹುಡುಗಿ ಲವ್ವಲ್ಲಿ ಬಿದ್ದಿರೋದು ತಾನು ನಟಿಸ್ತಿದ್ದ ಸಿನಿಮಾದ ವಿಲನ್‌ ಜೊತೆಗೆ. ಹೌದು. 2010ರಲ್ಲಿ ತೆರೆ ಕಂಡ ಆನಂದಪುರತ್ತು ವೀಡು ಎನ್ನುವ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾದಲ್ಲಿ ನಟ ಕೃಷ್ಣ ಹಾಗೂ ಛಾಯಾ ಸಿಂಗ್ ನಟಿಸಿದ್ದರು. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ ಅವರು ನೆಗೆಟಿವ್ ಪಾತ್ರ ಮಾಡಿದ್ದರು.

ಮೂರು ತಿಂಗಳುಗಳ ಕಾಲ ಈ ಸಿನಿಮಾ ಶೂಟಿಂಗ್ (shooting) ನಡೆದಿತ್ತು. ಆರಂಭದ ಎರಡೂವರೆ ತಿಂಗಳ ಕಾಲ ಕೃಷ್ಣ, ಛಾಯಾ ಅಷ್ಟಾಗಿ ಮಾತನಾಡಿಕೊಂಡಿಲ್ಲ. ಛಾಯಾ ಅವರು ಬೆಂಗಳೂರಿನಲ್ಲಿ ಬೆಳೆದರೆ, ಕೃಷ್ಣ ಅವರು ದೆಹಲಿಯಲ್ಲಿ ಹುಟ್ಟಿ ಶಿಕ್ಷಣ ಪಡೆದಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ಕೃಷ್ಣ ಅವರು ಛಾಯಾ ತಾಯಿ ಬಳಿ ಹಿಂದಿಯಲ್ಲಿ ಆಗಾಗ ಮಾತನಾಡುತ್ತಿದ್ದರು. ಇದು ಛಾಯಾಗೆ ಗೊತ್ತಿರಲಿಲ್ಲ. ಒಮ್ಮೆ ಕೃಷ್ಣ ಸೆಟ್‌ನಲ್ಲಿset) ಪುಸ್ತಕ ಓದುತ್ತಿದ್ದರು. ಅದು ಛಾಯಾ ಕಣ್ಣಿಗೆ ಬಿತ್ತು. ಛಾಯಾ ಅವರಿಗೂ ಪುಸ್ತಕ ಓದುವ ಹವ್ಯಾಸ(hobbies) ಇದ್ದಿದ್ದರಿಂದ ಅವರು ಕೃಷ್ಣ ಬಳಿ ಬಂದು ಯಾವ ಪುಸ್ತಕ ಇದು ಎಂದು ಪ್ರಶ್ನೆ ಮಾಡಿದ್ದರಂತೆ. ಅಲ್ಲಿಂದ ಇವರಿಬ್ಬರ ಮಾತು ಶುರುವಾಗಿತ್ತು. ಆಮೇಲೆ ಕೃಷ್ಣ ಹಾಗೂ ಛಾಯಾ ನಡುವೆ ಸ್ನೇಹ ಬೆಳೆದು, ಪ್ರೀತಿಯಾಗಿ ತಿರುಗಿ 2012ರಲ್ಲಿ ಕುಟುಂಬದ(Family) ಒಪ್ಪಿಗೆಯೊಂದಿಗೆ ಮದುವೆಯಾಗಿದ್ದಾರೆ. ಇವರಿಬ್ಬರು ಸಾಂಪ್ರದಾಯಿಕವಾಗಿ, ಆತ್ಮೀಯರು, ಕುಟುಂಬಸ್ಥರ ಸಾಕ್ಷಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.

ಕಾಯಾ ವಾಚಾಮನಸಾ ನಾತಿಚರಾಮಿ; ರಾಮಾಚಾರಿ ಹೇಳಿದ್ದೇನು?

ಈಗ ಕೃಷ್ಣ ತಮಿಳು ಕಿರುತೆರೆಯ ಜನಪ್ರಿಯ ನಟ. ತಮಿಳು ಸೀರಿಯಲ್, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ನಟಿಸ್ತಿದ್ದಾರೆ.

ಒಟ್ಟಾರೆ ಸೀರಿಯಲ್‌ನಲ್ಲೂ ರಿಯಲ್‌ನಲ್ಲೂ ನಾಯಕಿಯಂತೆ ಬದುಕುತ್ತಿರುವ ಛಾಯಾ ಸಿಂಗ್‌ಗೆ ಆಲ್‌ ದಿ ಬೆಸ್ಟ್.

Latest Videos
Follow Us:
Download App:
  • android
  • ios