ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಎಲ್ಲರೂ ಸಮಾನ ಸಮರ್ಥರು ಎನ್ನಲಾಗದು. ಆದರೆ, 11 ವಾರಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದಾರೆ ಎಂದರೆ ಯಾರನ್ನೂ ನೆಗ್ಲೆಕ್ಟ್ ಮಾಡಲು ಸಾಧ್ಯವಿಲ್ಲ. 

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ದಿನಗಳು ಉರುಳುತ್ತಿವೆ. 12ನೇ ವಾರ ಶುರುವಾಗುತ್ತಿದೆ. ಈ ಹಂತದಲ್ಲಿ 11ನೇ ವಾರದ ವೀಕೆಂಟ್ ಸಂಚಿಕೆ 'ವಾರದ ಕತೆ ಕಿಚ್ಚನ ಜೊತೆ' ಇಂದು ರಾತ್ರಿ 9.00ಕ್ಕೆ ಪ್ರಸಾರ ಕಾಣಲಿದೆ. ಈಗ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಎಲ್ಲರೂ ಗೆಲ್ಲುವ ತವಕದಲ್ಲಿ ಇದ್ದಾರೆ. ಆದರೆ, ಒಬ್ಬರೇ ವಿನ್ನರ್, ಇನ್ನೊಬ್ಬರು ರನ್ನರ್ ಅಪ್ ಆಗುತ್ತಾರೆ. ಅವರು ಯಾರು ಎಂಬುದಷ್ಟೇ ಸಸ್ಪೆನ್ಸ್. ಇಂದು ಮತ್ತೆ ನಾಮಿನೇಶನ್ ಸಂಕಟವಿದೆ, ಯಾರು ಇಂದು ನಾಮಿನೇಟ್ ಆಗಿ ನಾಳೆ ಮನೆಯಿಂದ ಗೇಟ್ ಪಾಸ್ ಪಡೆಯುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ!

ಇಂದು ಮತ್ತೆ ನಾಮಿನೇಶನ್ ಕತ್ತಿ ಸ್ಪರ್ಧಿಗಲ ತಲೆಯ ಮೇಲೆ ತೂಗುತ್ತಿದೆ. ಕಾರಣ, ಇಂದು ಶನಿವಾರ. ಇವತ್ತು ಒಟ್ಟೂ 6 ಜನರು ನಾಮಿನೇಶನ್ ಲಿಸ್ಟ್‌ನಲ್ಲಿದ್ದಾರೆ. ಡ್ರೋನ್ ಪ್ರತಾಪ್ ಫೇಕ್ ಎಂದಿದ್ದಾರೆ ಮೈಕೇಲ್ ಅಜಯ್. ಸಂಗೀತಾ ತಮ್ಮ ವಿರುದ್ಧ ಬಂದಿರುವ ಆರೋಪವನ್ನು ಅಲ್ಲಗಳೆದಿದ್ದಾರೆ. ಒಟ್ಟೂ ಆರು ಜನರಲ್ಲಿ ಇಂದು ನಾಮಿನೇಟ್ ಆಗುವವರು ಯಾರು, ನಾಳೆ ಈ ಮನೆಯಿಂದ ತಮ್ಮ ಮನೆಗೆ ಪ್ರಯಾಣ ಬೆಳೆಸುವವರು ಯಾರು ಎಂಬುದು ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಇಬ್ಬರಿಗೂ ತೀವ್ರ ಕುತೂಹಲದ ಸಂಗತಿಯಾಗಿ ಕಾಡುತ್ತಿದೆ. 

ಪುಷ್ಪಾಳ ಜೊತೆ ಹೋಗಲಾರ, ಅಜ್ಜಿಯ ಮಾತು ಮೀರಲಾರ; ಮುಂದೇನು ಆಕಾಶ್ ಯೋಜನೆ!

ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಎಲ್ಲರೂ ಸಮಾನ ಸಮರ್ಥರು ಎನ್ನಲಾಗದು. ಆದರೆ, 11 ವಾರಗಳನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದಿದ್ದಾರೆ ಎಂದರೆ ಯಾರನ್ನೂ ನೆಗ್ಲೆಕ್ಟ್ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನೂ ಸ್ಟ್ರಾಂಗ್ ಕಂಟೆಸ್ಟಂಟ್ಸ್ ಎಂದೇ ಪರಿಗಣಿಸಬೇಕಾಗುತ್ತದೆ. ಇಲ್ಲಿ ಎಲ್ಲರೂ ಗೆಲ್ಲಲೆಂದೇ ಇದ್ದಾರೆ. ಯಾರನ್ನೂ ಯಾರೂ ನಂಬಲಾರರು. ಆದರೂ ಕೂಡ ತಮಗೆ ಸರಿ ಅನ್ನಿಸಿದವರ ಜತೆ ಸ್ನೇಹ, ತಮಗೆ ಇಷ್ಟವಾಗದವರ ಜತೆ ವೈರತ್ವ ಕಟ್ಟಿಕೊಂಡು ಅಲ್ಲಿ ಗೇಮ್ ಆಡುತ್ತಿದ್ದಾರೆ. ಗೆಲ್ಲುವ ಗುರಿ ಎಲ್ಲರಿಗೂ ಇದ್ದರೂ ಅದರಲ್ಲಿ ಸಫಲರಾಗುವುದು ಯಾರು? ಇದಕ್ಕೆ ಕಾಲವೇ ಉತ್ತರ ನೀಡಲಿದೆ. 

ರಾಮಾಚಾರಿ ಬಗ್ಗೆ ಚಾಡಿ ಹೇಳಿದ ಸ್ನೇಹಿತರ ಕೆನ್ನೆಗೆ ಬಾರಿಸಿದ ಚಾರು; ರೌದ್ರಾವತಾರ ನೋಡಿ ಕಂಗೆಟ್ಟರೇ ಸ್ನೇಹಿತರು!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.

View post on Instagram