ಆಕಾಶ್‌ಗೆ ಅಜ್ಜಿಯ ಮಾತನ್ನು ಮೀರಲು ಕಷ್ಟವಾಗುತ್ತಿದೆ. ವಯಸ್ಸಾಗಿರುವ ಅಜ್ಜಿ ತೀರಿಕೊಂಡುಬಿಟ್ಟರೆ ಎಂಬ ಯೋಚನೆ ಬಂದು ಆತ ಅಧೀರನಾಗುತ್ತಾನೆ.

ಕಲರ್ಸ್ ಕನ್ನಡದಲ್ಲಿ ಬೃಂದಾವನ ಸೀರಿಯಲ್ ಹೊಸ ಹೊಸ ತಿರುವುಗಳನ್ನು ತರುತ್ತಿದ್ದು ವೀಕ್ಷಕರನ್ನು ಸಂಚಿಕೆ ಮಿಸ್ ಮಾಡದಂತೆ ಮಾಡುತ್ತಿದೆ ಎನ್ನಬಹುದು. ಅದ್ದೂರಿ ಮದುವೆ ಮೂಲಕ ಶುರುವಾದ ಬೃಂದಾವನ ಸೀರಿಯಲ್, ಈಗ ಆಕಾಶ್ ಮತ್ತು ಪುಷ್ಪಾ ಜೋಡಿಯ ಮಧ್ಯೆ ಅಂತರ ಇರುವುದನ್ನೇ ಚಿತ್ರಕತೆಯಲ್ಲಿ ಹೈಲೈಟ್ ಮಾಡಲಾಗುತ್ತಿದೆ. ಪುಷ್ಪಾ ತನ್ನ ಜತೆ ಆಕಾಶ್ ಮಾತನಾಡದೇ ಇರುವುದಕ್ಕೆ, ಮಲಗದೇ ಇರುವುದಕ್ಕೆ ಆತ ಸ್ಟಡಿ ಮಾಡುತ್ತಿರುವುದೇ ಕಾರಣ ಎಂಬ ಸುಳ್ಳನ್ನೇ ಸತ್ಯ ಅಂದುಕೊಂಡಿದ್ದಾಳೆ. ಆದರೆ, ಆಕಾಶ್‌ಗೆ ಈ ಮದುವೆ ಇಷ್ಟವೇ ಇರಲಿಲ್ಲ ಎಂಬುದು ಆಕೆಗೆ ಗೊತ್ತಿಲ್ಲ. 

ಇತ್ತ ಆಕಾಶ್ ತಾನು ತನ್ನ ಹೆಂಡತಿ ಪುಷ್ಪಾ ಜತೆ ಚೆನ್ನಾಗಿಯೇ ಸಂಸಾರ ಮಾಡುತ್ತಿದ್ದೇನೆ ಎಂಬ ನಾಟಕವನ್ನು ಮನೆ ಮಂದಿಯ ಮುಂದೆ ಮಾಡುತ್ತಲೇ ಇದ್ದಾನೆ. ಅತ್ತ ಸುಳ್ಳನ್ನು ನಂಬಿಕೊಂಡಿರುವ ಪುಷ್ಪಾ ಕೂಡ ಆಕಾಶ್ ನಾಟಕಕ್ಕೆ ಸಾತ್ ಕೊಡುತ್ತಿದ್ದಾಳೆ. ಆದರೆ, ಆಕಾಶ್ ಅಜ್ಜಿ ಸೇರಿದಂತೆ ಮನೆಮಂದಿಗೆ ಆಕಾಶ್-ಪುಷ್ಪಾ ಸಂಸಾರ ಸರಿ ಇದೆಯಾ ಇಲ್ಲವಾ ಎಂಬ ಬಗ್ಗೆ ಸ್ವಲ್ಪ ಸಂಶಯವಿದೆ. ಚಾನ್ಸ್ ಸಿಕ್ಕಾಗ ಅದನ್ನು ಕ್ಲಾರಿಫೈ ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗುತ್ತಾರೆ. 

ಪುಷ್ಪಾ ಆಕಾಶ್ ಜತೆ ಮದುವೆ ಬಳಿಕ ಮೊದಲ ಬಾರಿಗೆ ತವರು ಮನೆಗೆ ಹೊರಟು ನಿಂತಿದ್ದಾಳೆ. ಆದರೆ, ತಾನು ಫ್ರೆಂಡ್ಸ್‌ ಜತೆ ಹೋಗಬೇಕು, ಈ ಕಾರಣಕ್ಕೆ ಪುಷ್ಪಾ ಜತೆ ಹೋಗುತ್ತಿಲ್ಲ ಎಂಬ ಕಾರಣ ನೀಡಿ ಆಕಾಶ್ ಮಾವನ ಮನೆಗೆ ಹೋಗುವುದರಿಂದ ಎಸ್ಕೇಪ್ ಆಗಲು ಸಂಚು ಹೂಡುತ್ತಾನೆ. ಆದರೆ, ಆತನ ಸಂಚಿಗೆ ಅಜ್ಜಿ ಬ್ರೇಕ್ ಹಾಕುತ್ತಾಳೆ. 'ಮದುವೆ ಬಳಿಕ ಮೊದಲ ಬಾರಿಗೆ ಪುಷ್ಪಾ ತವರಿಗೆ ಹೊರಟು ನಿಂತಿದ್ದಾಳೆ. ಈಗ ನೀನು ಜತೆಗೆ ಹೋಗದಿದ್ದರೆ ಆಕೆಗೆ ಮನೆಯವರು ಮತ್ತು ನೆರೆಹೊರೆಯವರು ನೂರೆಂಟು ಪ್ರಶ್ನೆ ಕೇಳುತ್ತಾರೆ. ಅಂಥದಕ್ಕೆ ನೀನು ಅವಕಾಶವನ್ನೇ ಕೊಡಬಾರದು ಎಂದು ಅಜ್ಜಿ ಆಕಾಶ್‌ಗೆ ಹೇಳುತ್ತಾಳೆ. 

ರಾಮಾಚಾರಿ ಬಗ್ಗೆ ಚಾಡಿ ಹೇಳಿದ ಸ್ನೇಹಿತರ ಕೆನ್ನೆಗೆ ಬಾರಿಸಿದ ಚಾರು; ರೌದ್ರಾವತಾರ ನೋಡಿ ಕಂಗೆಟ್ಟರೇ ಸ್ನೇಹಿತರು!

ಆಕಾಶ್‌ಗೆ ಅಜ್ಜಿಯ ಮಾತನ್ನು ಮೀರಲು ಕಷ್ಟವಾಗುತ್ತಿದೆ. ವಯಸ್ಸಾಗಿರುವ ಅಜ್ಜಿ ತೀರಿಕೊಂಡುಬಿಟ್ಟರೆ ಎಂಬ ಯೋಚನೆ ಬಂದು ಆತ ಅಧೀರನಾಗುತ್ತಾನೆ. ಆತ, ಅದೂ ಇದೂ ಕಾರಣ ಹೇಳಿ ತಪ್ಪಿಸಿಕೊಳ್ಳಲು ನೋಡಿ ಕೊನೆಗೆ ಅಜ್ಜಿಯ ಮಾತಿಗೆ ಒಪ್ಪಿ ಪುಷ್ಪಾ ಜತೆ ಹೋಗಲು 'ಓಕೆ' ಎನ್ನುತ್ತಾನೆ. ಅಜ್ಜಿ ಸೇರಿದಂತೆ, ಮನೆಯವರೆಲ್ಲರಿಗೂ ತುಂಬಾ ಖುಷಿಯಾಗುತ್ತದೆ. ಪುಷ್ಪಾಳಿಗಂತೂ ಇದು ಅನಿರೀಕ್ಷಿತ ಎಂಬಂತೆ ಆಗಿ ತುಂಬಾ ಖುಷಿ ಆಗುತ್ತದೆ. 

ಹಸಿವಿನಿಂದ ಕಂಗೆಟ್ಟ ಬಿಗ್‌ಬಾಸ್‌ ಸದಸ್ಯರಿಗೆ ಕಿಚ್ಚ ಸುದೀಪ್ ಕೈಯಡುಗೆ ಕೊಡುಗೆ!

ಒಟ್ಟಿನಲ್ಲಿ, ಸೀರಿಯಲ್ ಕತೆಯಲ್ಲಿ ಸದ್ಯ ಆಕಾಶ್-ಪುಷ್ಪಾ ಮಧ್ಯತೆ ಬಾಂಡಿಂಗ್ ಉಂಟುಮಾಡುವ ಸಾಧ್ಯವಾದಷ್ಟು ಸನ್ನಿವೇಶಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ಮುಂದೇನು ಎಂಬುದು ಸಂಚಿಕೆ ನೋಡಿದರೆ ಅರ್ಥವಾಗುತ್ತದೆ. ಕಲರ್ಸ್ ಕನ್ನಡದಲ್ಲಿ ಬೃಂದಾವನ ಸೀರಿಯಲ್ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಪ್ರಸಾರವಾಗುತ್ತಿದೆ.