Asianet Suvarna News Asianet Suvarna News

ರಾಮಾಚಾರಿ ಬಗ್ಗೆ ಚಾಡಿ ಹೇಳಿದ ಸ್ನೇಹಿತರ ಕೆನ್ನೆಗೆ ಬಾರಿಸಿದ ಚಾರು; ರೌದ್ರಾವತಾರ ನೋಡಿ ಕಂಗೆಟ್ಟರೇ ಸ್ನೇಹಿತರು!

ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ತದ್ರೂಪು ವ್ಯಕ್ತಿ ಕಿಟ್ಟಿ ಅಂತ ಒಬ್ಬನಿದ್ದಾನೆ ಎಂಬುದು ನಿಜವಾದ ರಾಮಾಚಾರಿ ಮತ್ತು ಚಾರು ಇಬ್ಬರಿಗೂ ಗೊತ್ತಿಲ್ಲ. 

Charu slaps her friends in colors kannada serial ramachari srb
Author
First Published Dec 15, 2023, 1:23 PM IST

ಕಲರ್ಸ್‌ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಸೀರಿಯಲ್ ಹೊಸ ಘಟ್ಟಕ್ಕೆ ಬಂದು ತಲುಪಿದೆ. ಚಾರು ಸ್ನೇಹಿತೆ ಚಾರು ಬಳಿ ಬಂದು ರಾಮಾಚಾರಿ ಬಗ್ಗೆ ಚಾಡಿ ಹೇಳಿದ್ದಾಳೆ. ಅದನ್ನು ಕೇಳಿ ರಾಮಾಚಾರಿ ಹೆಂಡತಿ ಚಾರು ಕೋಪ ಭುಗಿಲೆದ್ದಿದೆ. ಅವಳು ತನ್ನ ಸ್ನೇಹಿತೆಯರು ಹಾಗೂ ಜತೆಯಲ್ಲೇ ಇರುವ ಅವಳ ಗಂಡನನ್ನು ಸೇರಿಸಿ ಬಾಯಿಗೆ ಬಂದಂತೆ ಬೈಯ್ದಿದ್ದಾಳೆ. ತನ್ನ ಗಂಡ ಎಂತವನು ಎಂಬುದನ್ನು ತನ್ನ ಸ್ನೇಹಿತರೆದುರು ಹೇಳಿಕೊಳ್ಳುತ್ತಿದ್ದಾಳೆ. 

ಕೋಪಗೊಂಡಿರುವ ಚಾರು 'ನನ್ನ ಗಂಡನ ಬಗ್ಗೆ ಚಾಡಿ ಹೇಳುತ್ತೀರಾ? ನನ್ನ ಗಂಡ ಎಂಥ ಅಪರಂಜಿ ಎಂಬುದು ಗೊತ್ತಾ ನಿಮಗೆ? ನನ್ನ ಗಂಡ ಸ್ವಲ್ಪವೇ ಸಂಪಾದನೆ ಮಾಡಿದರೂ ಸ್ವಂತ ದುಡಿಮೆ ಮಾಡುತ್ತಾನೆ. ಅಪ್ಪನ ದುಡ್ಡಿನಲ್ಲಿ ಬದುಕಲ್ಲ. ಜೀವನ ಅಂದ್ರೇನು, ಜೀವನದ ವ್ಯಾಲ್ಯೂ ಏನು ಅಂತ ನನ್ನ ಗಂಡ ರಾಮಾಚಾರಿ ನಂಗೆ ಹೇಳಿಕೊಟ್ಟಿದಾನೆ. ನಾನು ಶ್ರೀಮಂತರ ಮನೆಯಲ್ಲಿ ಬೆಳೆದ ಹುಡುಗಿ. ನನ್ನ ಸಂಸ್ಕಾರ, ನನ್ನ ಲೈಫ್‌ ಸ್ಟೈಲ್ ಬೇರೆನೇ ಇತ್ತು. ನನಗೆ ಮಧ್ಯಮ ವರ್ಗದ ಫ್ಯಾಮಿಲಿ ಜೀವನ ಶೈಲಿ, ಕುಟುಂಬಕ್ಕೆ ಕೊಡುವ ಗೌರವ ಯಾವುದರ ಬಗ್ಗೆಯೂ ಕಲ್ಪನೆ ಇರಲಿಲ್ಲ. 

ನಾನು ರಾಮಾಚಾರಿಗೆ ಬುದ್ದಿ ಕಲಿಸಲು ಬಂದೆ. ಆದರೆ, ನಾನೇ ಅವನಿಂದ ಬುದ್ಧಿ ಕಲಿತುಕೊಂಡೆ. ನನ್ನ ಮಾನ ಕಾಪಾಡುವುದಕ್ಕೆ, ನನ್ನ ಜ್ಞಾನ ಹೆಚ್ಚು ಮಾಡುವುದಕ್ಕೆ ರಾಮಾಚಾರಿ ಅದೆಷ್ಟು ಕಷ್ಟ ಪಟ್ಟಿದ್ದಾನೆ ಎಂದರೆ ಅದು ನನಗೆ ಮಾತ್ರ ಗೊತ್ತು. ಇಂಥ ರಾಮಾಚಾರಿ ಬಗ್ಗೆ ಅಪಸ್ವರ ಎತ್ತುತ್ತೀರಾ, ಇಂಥ ರಾಮಾಚಾರಿ ಬಗ್ಗೆ ಅಪಪ್ರಚಾರ ಮಾಡುತ್ತೀರಾ ಅಂದ್ರೆ ನಿಮ್ಮ ಮೆಂಟಾಲಿಟಿ ಹೇಗಿರಬಹುದು ಹೇಳಿ? ಕುಟುಂಬದ ವ್ಯಾಲ್ಯೂ ಏನು, ಕುಟುಂಬದ ಘನತೆ ಕಾಪಾಡುವುದು ಎಷ್ಟು ಮುಖ್ಯ, ಅಪ್ಪ-ಅಮ್ಮನಿಗೆ ಹೇಗೆ ಗೌರವ ಕೊಡಬೇಕು, ಅಪ್ಪ-ಅಮ್ಮನನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಎಂಬುದನ್ನು ರಾಮಾಚಾರಿ ನನಗೆ ಹೇಳಿಕೊಟ್ಟ.

ಬಿಗ್ ಬಾಸ್ ಮನೆಯಲ್ಲಿ ಕ್ಲಾಸ್ ಕಲರವ, ವರ್ತೂರ್‍ ಕ್ಲಾಸ್‌ನಲ್ಲಿ ಎಲಿಮಿನೇಷನ್‌ ಪ್ರಾಣ ಸಂಕಟ! 

ಇಂಥ ರಾಮಾಚಾರಿ ಬಗ್ಗೆ ಅಪಸ್ವರ ಎತ್ತುವುದು ಎಂದರೇನು? ಅವನಿಗೆ ಅವಮಾನ ಮಾಡಿ ನೀವು ಸಾಧಿಸುವುದಾದರೂ ಏನು?' ಹಲವಾರು ರೀತಿಯಲ್ಲಿ ರಾಮಾಚಾರಿ ಗುಣಗಾನ ಮಾಡುತ್ತ ಚಾರು ತನ್ನ ಸ್ನೇಹಿತರಿಗೆ ಹೊಡೆದೇಬಿಡುತ್ತಾಳೆ. ನಿಜ ಸಂಗತಿ ಏನೆಂದರೆ, ರಾಮಾಚಾರಿಯಂತೆ ಇರುವ ಇನ್ನೊಬ್ಬ ವ್ಯಕ್ತಿ ಕಿಟ್ಟಿಯನ್ನು ನೋಡಿ ಅವರೆಲ್ಲ ರಾಮಾಚಾರಿ ಎಂದೇ ಅಂದುಕೊಂಡಿದ್ದಾರೆ. ಆ ಕಾರಣಕ್ಕೆ ಅವರು ಚಾರು ಹಿತೈಷಿಗಳಾಗಿಯೇ ಕಿಟ್ಟಿಯನ್ನು ನೋಡಿ ರಾಮಾಚಾರಿ ಎಂದುಕೊಂಡು ಏನೇನೋ ಹೇಳಿದ್ದಾರೆ. ಆದರೆ ಚಾರುಗೆ ಗೊತ್ತಿಲ್ಲ ಅಷ್ಟೇ. 

ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್‌ ಪೊಲಿಟಿಕ್ಸ್, ನಗೆಬುಗ್ಗೆ ಕರಗಿ ಏಳುತ್ತಿದೆಯಾ ಅಸಮಾಧಾನದ ಹೊಗೆ!

ಒಟ್ಟಿನಲ್ಲಿ, ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ತದ್ರೂಪು ವ್ಯಕ್ತಿ ಕಿಟ್ಟಿ ಅಂತ ಒಬ್ಬನಿದ್ದಾನೆ ಎಂಬುದು ನಿಜವಾದ ರಾಮಾಚಾರಿ ಮತ್ತು ಚಾರು ಇಬ್ಬರಿಗೂ ಗೊತ್ತಿಲ್ಲ. ಆದರೆ ಕಿಟ್ಟಿಗೆ ರಾಮಾಚಾರಿ ಅಂತ ತನ್ನಂತೆ ಇರುವ ಇನ್ನೊಬ್ಬ ಇದ್ದಾನೆ ಎಂಬುದು ಗೊತ್ತಾಗಿದೆ. ಬಹಳಷ್ಟು ಜನ ಕಿಟ್ಟಿಗೆ ರಾಮಾಚಾರಿ ಹೆಸರಿನ, ನೋಡುವುದಕ್ಕೆ ನಿನ್ನಂತೆ ಇರುವ ಒಬ್ಬ ಪುರೋಹಿತರು ಇದ್ದಾರೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಸ್ವತಃ ಕಿಟ್ಟಿಯೇ ರಾಮಾಚಾರಿ ಪೂಜೆ ಮಾಡುವ ದೇವಸ್ಥಾನದಕ್ಕೆ ಬಂದಿದ್ದಾನೆ, ರಾಮಾಚಾರಿಯನ್ನು ನೋಡಿದ್ದಾನೆ. 

 

 

Follow Us:
Download App:
  • android
  • ios