'ಸೀತಾರಾಮ' ಸೀರಿಯಲ್ ನಟಿ ನವವಿವಾಹಿತೆ ವೈಷ್ಣವಿ ಜಸ್ಟ್ ಹನಿಮೂನ್‌ನಿಂದ ಜಸ್ಟ್ ಮರಳಿದ್ದಾರೆ. ಹಾಗೆ ಬಂದವರು ಒಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಏನಮ್ಮಾ ಇದು, ಇಷ್ಟು ಫಾಸ್ಟಾ ಅಂತ ಕೇಳ್ತಿದ್ದಾರೆ.
'ಸೀತಾರಾಮ' ಸೀರಿಯಲ್ ನಟಿ ನವವಿವಾಹಿತೆ ವೈಷ್ಣವಿ ಜಸ್ಟ್ ಹನಿಮೂನ್‌ನಿಂದ ಜಸ್ಟ್ ಮರಳಿದ್ದಾರೆ. ಹಾಗೆ ಬಂದವರು ಒಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಏನಮ್ಮಾ ಇದು, ಇಷ್ಟು ಫಾಸ್ಟಾ ಅಂತ ಕೇಳ್ತಿದ್ದಾರೆ.
ವೈಷ್ಣವಿ ಗೌಡ ಎಂಬ ಅಪ್ಪಟ ಕನ್ನಡದ ಹುಡುಗಿ ಉತ್ತರ ಭಾರತದ ಅನುಕೂಲ್ ಮಿಶ್ರಾ ಅವರನ್ನು ಇತ್ತೀಚೆಗೆ ಅದ್ದೂರಿಯಾಗಿ ಮದುವೆ ಆಗಿರೋದು ಎಲ್ಲರಿಗೂ ಗೊತ್ತಿರೋದೆ. ಮಜಾ ಏನಪ್ಪಾ ಅಂದರೆ ಇವರ ಮದುವೆ ನಡೆದದ್ದು ಉತ್ತರ ಭಾರತದ ಪದ್ಧತಿ ಪ್ರಕಾರ. ಸಿಕ್ಕಾಪಟ್ಟೆ ಗ್ರಾಂಡ್ ಏನೋ ಇತ್ತು. ಆದರೆ ಮದುವೆ ಆಗಿದೆ ಅನ್ನೋದೆ ಜನಕ್ಕೆ ಗೊತ್ತಾಗಲಿಲ್ಲ. ಎಲ್ಲರೂ ನಡೆದದ್ದು ರಿಸೆಪ್ಶನ್ ಅಂತಲೇ ಅಂದುಕೊಂಡಿದ್ದರು. ಆದರೆ ಲೇಟಾಗಿ ಗೊತ್ತಾಯ್ತು ಅದು ಮದುವೆ ಅಂತ. ಏಕೆಂದರೆ ಮದುವೆ ಅಂದಾಕ್ಷಣ ಮಂಟಪದಲ್ಲಿ ಮದುಮಗ, ಮದುಮಗಳ ಜೊತೆಗೆ ಆ ಸಂದರ್ಭಕ್ಕೆ ಸಾಕ್ಷಿ ಆದವರು ಫೋಟೋ ತಗೊಳ್ತಾರೆ. ಮದುಮಗ, ಮದುಮಗಳು ಜೊತೆ ಜೊತೆಗೇ ಇರುತ್ತಾರೆ. ಮದುವೆ ಮಂಟಪದಿಂದ ಎದ್ದು ಸಭೆಯಲ್ಲಿ ಕೂರುವುದು ಕಡಿಮೆ. ಆದರೆ ವೈಷ್ಣವಿ ಮಾತ್ರ ಒಬ್ಬೊಬ್ಬರೆ ಗೆಸ್ಟ್ ಹತ್ರ ಬಂದು ಮಾತಾಡ್ತಾ ನಿಂತಿದ್ದರು. ತಾನೊಬ್ಬಳೇ ಅವರ ಜೊತೆಗೆ ಫೋಟೋ ತೆಗೆಸಿಕೊಂಡರು.
ಇದನ್ನೆಲ್ಲ ನೋಡಿ ಎಲ್ಲೋ ರಿಸೆಪ್ಶನ್ ಇರಬೇಕು ಅಂತಲೇ ಎಲ್ಲರೂ ಅಂದುಕೊಂಡಿದ್ರು. ಬಟ್ ಅದಾಗಿದ್ದು ಮದುವೆಯೇ ಆಗಿತ್ತು. ಇರಲಿ, ಮದುವೆಯ ಫೋಟೋವನ್ನು ಲೇಟಾಗಿ ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೈಷ್ಣವಿ ಹನಿಮೂನ್ ಫೋಟೋಗಳನ್ನೂ ಧಾರಾಳವಾಗಿ ಹಂಚಿಕೊಂಡರು. ಉತ್ತರ ಭಾರತದ ಮನಾಲಿ, ಹಿಮಾಚಲ ಪ್ರದೇಶಗಳ ಬ್ಯೂಟಿಫುಲ್ ಡೆಸ್ಟಿನೇಶನ್‌ಗಳಲ್ಲಿ ಇವರಿಬ್ಬರೂ ಹನಿಮೂನ್ ಮುಗಿಸಿದರು. ಈ ವೇಳೆ ವೈಷ್ಣವಿ ಗಂಡನನ್ನು ತಬ್ಬಿಹಿಡಿದು ನೂರಾರು ಅಡಿಗಳಿಗೆ ಬಂಗಿ ಜಂಪ್ ಮಾಡುವ ವೀಡಿಯೋ ಹಾಕಿದ್ರು. ಅವರ ಫ್ಯಾನ್ಸ್‌ಗೆ ಎದೆ ಜಿಗ್ ಆಯ್ತು. ಸಖತ್ ಫ್ಯಾನ್ಸಿ ಡ್ರೆಸ್‌ಗಳಲ್ಲಿ ಪರ್ವತಗಳ ನಡುವೆ ನಿಂತು ಮದುಮಗಳು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದು, ಅದನ್ನು ನೋಡಿ ನೆಟ್ಟಿಗರು ಎಂದಿನ ತಮ್ಮ ಟೋನ್‌ನಲ್ಲಿ ಟ್ರೋಲ್ ಮಾಡಿದ್ದೂ ಆಯ್ತು.
ಆದರೆ ಇದೀಗ ವೈಷ್ಣವಿ ಮದುವೆ, ಹನಿಮೂನ್ ಎಲ್ಲ ಮುಗಿಸಿ ಮರಳಿದ್ದಾರೆ. ಹಾಗೆ ಬಂದವರು ಒಂದು ಗುಡ್‌ನ್ಯೂಸ್ ಹೇಳಿದ್ದಾರೆ. ಅದೇನು ಅಂದರೆ ಅವರು ಬಹಳ ಇಷ್ಟಪಡೋವ್ರ ಜೊತೆಗೆ ಕೊನೆಗೂ ರೀಯೂನಿಯನ್ ಆಯ್ತು ಅನ್ನೋ ಸಮಾಚಾರ.
ಅವರು ಯಾರು ಅನ್ನುವ ಕುತೂಹಲ ನಿಮಗೆ ಬರಬಹುದು.
ಬಿಗ್ ಬಾಸ್ ಶಾಪಗ್ರಸ್ತ ಮನೆಯೇ? ಸ್ಪರ್ಧಿಗಳ ಸಾಲು ಸಾಲು ಸಾವಿನ ಕೂಪ, ಕನ್ನಡತಿಯನ್ನೂ ಬಿಡಲಿಲ್ಲ ಸಾವು!
ಅದು ವೈಷ್ಣವಿ ಅವರ ಅಚ್ಚುಮೆಚ್ಚಿನ ಪೆಟ್. ಅರ್ಥಾತ್ ಭಾರತೀಯ ತಳಿಯ ನಾಯಿ. ನೀವು ವೈಷ್ಣವಿ ಅವ್ರ ಸೋಷಲ್ ಮೀಡಿಯಾ ಪೇಜ್‌ಅನ್ನು ಫಾಲೋ ಮಾಡ್ತಿದ್ರೆ, ಮದುವೆ ಶಾಸ್ತ್ರ ಶುರುವಾದಾಗ ವೈಷ್ಣವಿ ನಾಯಿ ಜೊತೆಗೆ ಫೋಟೋ ಹಾಕಿದ್ರು. ಅವರು ಆ ನಾಯಿ ಜೊತೆಗೆ ಪೋಸ್ ಕೊಟ್ಟಿದ್ರಲ್ಲೇ ಗೊತ್ತಾಗ್ತಿತ್ತು, ಅವ್ರಿಗೆ ಅದನ್ನು ಕಂಡರೆ ಎಷ್ಟು ಇಷ್ಟು ಅಂತ. ಮದುವೆ ಶುರುವಾದಾಗ ಹೇಗೆ ನಾಯಿ ಜೊತೆಗೆ ಪೋಸ್ ಕೊಟ್ಟಿದ್ರೋ ಇದೀಗ ಮದುವೆ ಹನಿಮೂನ್ ಎಲ್ಲ ಮುಗಿದು ಮನೆಗೆ ಮರಳಿದ ಮೇಲೂ 'ಅಂತೂ ನಮ್ಮಿಬ್ಬರ ರೀ ಯೂನಿಯನ್ ಆಯ್ತು' ಅನ್ನೋ ಸ್ಟೇಟ್‌ಮೆಂಟಿನ ಜೊತೆಗೆ ಅದೇ ನಾಯಿ ಜೊತೆಗೆ ವೀಡಿಯೋ ಶೇರ್ ಮಾಡಿದ್ದಾರೆ.
ಮೊಗ್ಗಿನ ಜಡೆ ಹಾಕಿ, ಶಾಕುಂತಲೆಯಾದ ಭೂಮಿ ಶೆಟ್ಟಿ… ಅಂದಕ್ಕೆ ಮನಸೋತು ದುಷ್ಯಂತರಾದ್ರು ಹುಡುಗರು
ಹನಿಮೂನ್ ಮುಗಿಸಿ ಬಂದೋಳು ಆ ಕಥೆ ಹೇಳ್ತೀಯ ಅಂದರೆ ನಾಯಿ ಜೊತೆಗೆ ವೀಡಿಯೋ ಶೇರ್ ಮಾಡ್ಕೊಳ್ತಿದ್ದೀಯಲ್ಲವ್ವಾ ಅಂತ ನೆಟ್ಟಿಗರು ಗೊಣಗುತ್ತಿದ್ದಾರೆ. ಅದ್ಸರಿ ಸದ್ಯಕ್ಕಂತೂ ವೈಷ್ಣವಿ ಕೈಯಲ್ಲಿರುವ ಸೀರಿಯಲ್, ಸಿನಿಮಾ ಪ್ರಾಜೆಕ್ಟ್‌ಗಳು ಮುಗಿದಿವೆ. ಈ ಬ್ಯೂಟಿಫುಲ್ ನಟಿ ಮುಂದೆ ಮನರಂಜನಾ ಕ್ಷೇತ್ರದಲ್ಲಿ ಮುಂದುವರೀತಾರ ಇಲ್ಲ ಗೃಹಿಣಿಯಾಗಿ 'ಅನುಕೂಲ' ನೋಡ್ತಾರ ಅನ್ನೋದು ವೈಷ್ ಫ್ಯಾನ್ಸ್ ಸದ್ಯದ ಗೊಂದಲ. ಇದಕ್ಕೆ ಉತ್ತರ ವೈಷ್ಣವಿ ಕಡೆಯಿಂದಲೇ ಬರಬೇಕಿದೆ.
