- Home
- Entertainment
- TV Talk
- Bhoomi Shetty: ಮೊಗ್ಗಿನ ಜಡೆ ಹಾಕಿ, ಶಾಕುಂತಲೆಯಾದ ಭೂಮಿ ಶೆಟ್ಟಿ… ಅಂದಕ್ಕೆ ಮನಸೋತು ದುಷ್ಯಂತರಾದ್ರು ಹುಡುಗರು
Bhoomi Shetty: ಮೊಗ್ಗಿನ ಜಡೆ ಹಾಕಿ, ಶಾಕುಂತಲೆಯಾದ ಭೂಮಿ ಶೆಟ್ಟಿ… ಅಂದಕ್ಕೆ ಮನಸೋತು ದುಷ್ಯಂತರಾದ್ರು ಹುಡುಗರು
ಕನ್ನಡ ಕಿರುತೆರೆಯಲ್ಲಿ, ಬಿಗ್ ಬಾಸ್ ಹಾಗೂ ಒಂದಷ್ಟು ಸಿನಿಮಾಗಳಲ್ಲೂ ಮಿಂಚಿ ತಮ್ಮ ಬೋಲ್ಡ್ ಬಿಂದಾಸ್ ಅವತಾರಗಳಿಂದ ಸದ್ದು ಮಾಡುವ ಬೆಡಗಿ ಭೂಮಿ ಶೆಟ್ಟಿಯ ಹೊಸ ಲುಕ್ ಸಖತ್ ಆಗಿದೆ.

ಕಿನ್ನರಿ ಧಾರಾವಾಹಿ (Kinnari Serial) ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕರಾವಳಿಯ ಬೆಡಗಿ ಭೂಮಿ ಶೆಟ್ಟಿ, ಸೀರಿಯಲ್ ನಲ್ಲಿ ಪಾಪದ ಹುಡುಗಿಯಾದರೂ ನಿಜ ಜೀವನದಲ್ಲಿ ತಮ್ಮ ಬೋಲ್ಡ್ ಲೈಫ್ ಸ್ಟೈಲ್ ನಿಂದ ಸುದ್ದಿಯಲ್ಲಿರುವ ಬೆಡಗಿ ಇವರು.
ಬಿಗ್ ಬಾಸ್ ಸೀಸನ್ 7 (Bigg Boss Season 7) ರಲ್ಲಿ ಸ್ಪರ್ಧಿಯಾಗಿದ್ದ ಭೂಮಿ, ಅಲ್ಲಿ ತಮ್ಮ ಆಟ, ಮಾತು, ಮುದ್ದುತನ, ಸ್ನೇಹ, ಹಾಗೂ ಭರ್ಜರಿ ಆಟದ ಮೂಲಕ ಪ್ರತಿಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟಿದ್ದರು ರಾಯಲ್ ಕ್ವೀನ್.
ಸದ್ಯ ನಟನೆಯಿಂದ ದೂರ ಉಳಿದು, ತಮಗಿಷ್ಟ ಬಂದ ಕೆಲಸಗಳನ್ನು ಹವ್ಯಾಸಗಳನ್ನು ಮುಂದುವರೆಸುತ್ತಾ, ಹಾಯಾಗಿರುವ ಹುಡುಗಿ ಹೊಸ ಫೋಟೊ ಶೂಟನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದು, ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪಡ್ಡೆಗಳ ನಿದ್ದೆ ಕೆಡಿಸಿದೆ.
ಹೌದು ಭೂಮಿ ಶೆಟ್ಟಿ (Bhoomi Shetty), ಬಿಳಿ ಬಣ್ಣದ ಸೀರೆಯಂತಹ ಕಚ್ಚೆ, ತೋಳು ಗಳಿಲ್ಲದ ಬ್ಲೌಸ್ ಧರಿಸಿ, ಮೇಲೊಂದು ಶಾಲ್ ಇಳಿ ಬಿಟ್ಟಿದ್ದು, ತಲೆಗೆ ದುಂಡು ಮಲ್ಲಿಗೆಯ ಮೊಗ್ಗಿನ ಜಡೆಯನ್ನು ಧರಿಸಿದ್ದಾರೆ. ಅಭರಣಗಳನ್ನು ಧರಿಸಿದ್ದು, ತುಂಬಾನೆ ಮುದ್ದಾಗಿ ಶಾಕುಂತಲೆಯಂತೆ ಕಾಣಿಸುತ್ತಿದ್ದಾರೆ.
ಯಾವಾಗಲೂ ರಾಯಲ್ ಎನ್ ಫೀಲ್ಡ್ ಏರಿ, ರೈಡ್ ಮಾಡುವ ಬೆಡಗಿ, ಒಂದಾದ ಮೇಲೊಂದು ಹೇರ್ ಸ್ಟೈಲ್ ಮಾಡಿಸಿಕೊಂಡು, ಬೋಲ್ಡ್ ಲುಕ್ ನೀಡುವ ಹುಡುಗಿ ಈ ಬಾರಿ ಈ ರೀತಿಯಾಗಿ ಸಾಂಪ್ರದಾಯಿಕ ಡ್ರೆಸಲ್ಲಿ, ವಿವಿಧ ಭಂಗಿಯಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಜನ ಅಚ್ಚರಿ ಪಟ್ಟಿದ್ದಾರೆ. ಆದರೆ ಈ ಸಿಂಪಲ್ ಆಗಿರುವ ಆದರೆ ತುಂಬಾನೆ ಮುದ್ದಾಗಿರುವ ಫೋಟೊ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಕಪ್ಪು ಸುಂದರಿ, ಕೃಷ್ಣ ಸುಂದರಿ, ಬ್ಯೂಟಿಫುಲ್, ಬೇಗನೆ ಮದುವೆಯಾಗಿ, ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರಿ? ಕನ್ನಡ ಕಿರುತೆರೆಗೆ ಮತ್ತೆ ಬನ್ನಿ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. ಇನ್ನು ನಟಿ ಸಂಗೀತ ಶೃಂಗೇರಿ ಕೂಡ ಕಾಮೆಂಟ್ ಮಾಡಿ ಗಾರ್ಜಿಯಸ್ ಎಂದಿದ್ದಾರೆ.
ಭೂಮಿ ಶೆಟ್ಟಿ ಕನ್ನಡದಲ್ಲಿ ಕಿನ್ನರಿ ಧಾರಾವಾಹಿ ಅಲ್ಲದೇ, ಇಳ್ ಕಲ್ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ. ಅಲ್ಲದೇ ಲಂಭೋದರ, ವಾಸಂತಿ, ಶರತುಲು ವರ್ತಿಸ್ಥೈ ಎನ್ನುವ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ ಭೂಮಿ ಶೆಟ್ಟಿ.
ಅಷ್ಟೇ ಅಲ್ಲ ಭೂಮಿ ಟ್ರಾವೆಲ್ ಪ್ರಿಯೆಯಾಗಿತ್ತು, ದೇಶ ವಿದೇಶ ಸುತ್ತಿ ಅಲ್ಲಿನ ಸಂಸ್ಕೃತಿ, ಆಚರಣೆಗಳನ್ನು ಆಳವಾಗಿ ತಿಳಿದು, ಸ್ಥಳೀಯ ಜನರೊಂದಿಗೆ ಬೆರೆತು ಬಾಳೋದನ್ನು ಇಷ್ಟ ಪಡ್ತಾರೆ. ಅಲ್ಲದೇ ಇತ್ತೀಚೆಗೆ ನಟಿ ಸರ್ಫಿಂಗ್ (surfing) ಕೂಡ ಕಲಿತಿದ್ದಾರೆ.