- Home
- Entertainment
- TV Talk
- Vaishnavi Gowda: ಆಷಾಡ ಮಾಸದಲ್ಲಿ ಹನಿಮೂನ್’ಗೆ ಹೋದ ವೈಷ್ಣವಿ ಗೌಡ! ತಾಳಿ ಎಲ್ಲಿ ಕೇಳ್ತಿದ್ದಾರೆ ಜನ
Vaishnavi Gowda: ಆಷಾಡ ಮಾಸದಲ್ಲಿ ಹನಿಮೂನ್’ಗೆ ಹೋದ ವೈಷ್ಣವಿ ಗೌಡ! ತಾಳಿ ಎಲ್ಲಿ ಕೇಳ್ತಿದ್ದಾರೆ ಜನ
ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಮನಾಲಿಗೆ ತೆರಳಿದ್ದು, ಅಲ್ಲಿನ ಸುಂದರವಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿದ್ದಾರೆ.

ಅಗ್ನಿ ಸಾಕ್ಷಿ ಹಾಗೂ ಸೀತಾ ರಾಮ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನೆಮಾತಾದ ನಟಿ ವೈಷ್ಣವಿ ಗೌಡ (Vaishnavi Gowda). ಸದ್ಯಕ್ಕಂತೂ ತಮ್ಮ ಮದುವೆಯ ಸುದ್ದಿಯಿಂದಲೇ ಸದ್ದು ಮಾಡ್ತಿದ್ದಾರೆ ಬೆಡಗಿ. ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆ ಉತ್ತರ ಭಾರತ ಮೂಲಕ ಯುವಕನ ಜೊತೆ ಸಪ್ತಪದಿ ತುಳಿದಿದ್ದರು ಈ ಚೆಲುವೆ.
ವೈಷ್ಣವಿ ಜೂನ್ 4 ರಂದು ಅನುಕೂಲ್ ಮಿಶ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಫೋಟೊಗಳು, ಅರಶಿನ ಶಾಸ್ತ್ರ, ಮೆಹೆಂದಿ ಫೋಟೊಗಳನ್ನು ಶೇರ್ ಮಾಡುತ್ತಿರುವ ನಟಿ, ಕಳೆದ ಕೆಲ ದಿನಗಳಿಂದ ಹನಿಮೂನ್ ಫೋಟೊಗಳನ್ನು (Honeymoon Photos) ಪೋಸ್ಟ್ ಮಾಡುತ್ತಿದ್ದಾರೆ.
ಕೆಲದಿನಗಳ ಹಿಂದೆ ಗಂಡನ ಜೊತೆಗಿನ ಬಂಜೀ ಜಂಪಿಂಗ್ ವಿಡಿಯೋ ಶೇರ್ ಮಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಾದ ನಂತರ ಗಂಡನ ಜೊತೆ ಹಿಮದಲ್ಲಿ ಸಾಹಸ ಮಾಡುವ ಫೋಟೊ ಕೂಡ ಶೇರ್ ಮಾಡಿದ್ದರು. ಇದೀಗ ವೈಷ್ಣವಿ ಒಂದಷ್ಟು ಸಿಂಗಲ್ ಫೋಟೊಗಳನ್ನು ಶೇರ್ ಮಾಡಿದ್ದು, ನಟಿ ಮನಾಲಿಯ ಸುಂದರ ಕಣಿವೆಯಲ್ಲಿ ತಾವೂ ಕೂಡ ಕಾಶ್ಮೀರಿ ಬೆಡಗಿಯಂತೆ ಡ್ರೆಸ್ ಮಾಡಿ ಫೋಟೊ ಶೂಟ್ ಮಾಡಿಕೊಂಡಿದ್ದಾರೆ.
ವೈಷ್ಣವಿ ಗೌಡ ಒಂದು ಫೋಟೊದಲ್ಲಿ ಕೆಂಪು ಬಣ್ಣದ ಕಾಶ್ಮೀರಿ ಡ್ರೆಸ್ ಧರಿಸಿ, ಅವರಂತೆ ಸರ, ಜ್ಯುವೆಲ್ಲರಿಗಳನ್ನು ಧರಿಸಿ, ಕೆಂಪು ಸುಂದರ ಹೂವಿನ ಬುಟ್ಟಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಹಿಮಪರ್ವತಗಳ ಮುಂದೆ ಸ್ಟೈಲಿಶ್ ಆಗಿ ನಿಂತು ಪೋಸ್ ಕೊಟ್ಟಿದ್ದಾರೆ. ವೈಷ್ಣವಿ ಗೌಡ ಈ ಲುಕ್ ಹಾಗೂ ಫೋಟೊಗಳಿಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಬರುತ್ತಿವೆ.
ಒಬ್ಬರು ಕಾಮೆಂಟ್ ಮಾಡಿ ಆಷಾಢ ಮಾಸದಲ್ಲಿ Honeymoon ಹೋಗಿದೆಯಾ ವೈಷ್ಣವಿ. ಜಾಲಿ ಜಾಲಿ. ಗಂಡನಿಗೆ ಕನ್ನಡ ಕಲಿಸು ಎಂದಿದ್ದಾರೆ. ಎಷ್ಟೋ ಹುಡುಗರನ್ನು ರಿಜೆಕ್ಟ್ ಮಾಡಿ, ಕೊನೆಗೆ ಇವರನ್ನ ಯಾಕೆ ಮದುವೆಯಾದ್ರಿ ಅಂತಾನೂ ಕಾಮೆಂಟ್ ನಲ್ಲಿ ಕೇಳಿದ್ದಾರೆ. ಮತ್ತೊಬ್ಬರು ನಿಮ್ಮ ತಾಳಿ ಎಲ್ಲಿ ಕಾಣಿಸ್ತಿಲ್ಲ ಎಂದರೆ, ಮಗದೊಬ್ಬರು ಏನು ಹನಿಮೂನ್ ಗೆ ಹೋಗುವಾಗ್ಲೂ ಫೋಟೊಗ್ರಾಫರನ್ನು ಕರೆದುಕೊಂಡು ಹೋಗ್ತೀರಾ ಎಂದಿದ್ದಾರೆ.
ಇನ್ನು ಹಲವು ಜನರು ವೈಷ್ಣವಿ ಗೌಡ, ಸ್ಟೈಲ್, ಸ್ಮೈಲ್ ಹಾಗೂ ಲುಕ್ ಗೆ ಮನಸೋತು. ಸೂಪರ್, ಫೋಟೊಗಳೆಲ್ಲಾ ಸಖತ್ ಆಗಿವೆ. ಆದರೆ ಸುರಕ್ಷಿತವಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಸೀತಾ ರಾಮ ಸೀರಿಯಲ್ ನ್ನು ಸಹ ಜನ ಮಿಸ್ ಮಾಡಿಕೊಳ್ಳುತ್ತಿದ್ದು, ಆದಷ್ಟು ಬೇಗ ಇನ್ನೊಂದು ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಿ ಎಂದು ಕೇಳುತ್ತಿದ್ದಾರೆ.