ನಟಿ ವೈಷ್ಣವಿ ಗೌಡ ಅವರು ಮಿನಿ ಸ್ಕರ್ಟ್​ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದು ರೀಲ್ಸ್​ ಮಾಡಿದ್ದಾರೆ. ಆದರೆ ಅವರ ಬೋಳು ಹಣೆ, ಮಾಂಗಲ್ಯಸರ ರಹಿತ ಕುತ್ತಿಗೆ ನೋಡಿ ಯಾಕೋ ಅಭಿಮಾನಿಗಳು ಬೇಸರಗೊಂಡಿದ್ದಾರೆ! 

ಸೀತಾರಾಮ ಸೀತಾ ಉರ್ಫ್‌ ವೈಷ್ಣವಿ ಗೌಡ ಅವರು ಈಗ ಮದ್ವೆ ಲೈಫ್​ ಅನ್ನು ಎಂಜಾಯ್​ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರು ಛತ್ತೀಸಗಢದ ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಮದುವೆಯಾಗಿರುವ ನಟಿ, ಈಗ ಹೊಸದಾಗಿ ಮದ್ವೆಯಾಗಿರುವ ಕಾರಣ ಬಣ್ಣದ ಲೋಕದಿಂದ ಸ್ವಲ್ಪ ವಿರಾಮ ತೆಗೆದುಕೊಂಡರೂ ರೀಲ್ಸ್​ಗೇನೂ ಕಡಿಮೆ ಇಲ್ಲ. ಈ ರೀಲ್ಸ್​, ಹೆಸರು, ಪ್ರಸಿದ್ಧಿ ಎಂದರೆ ಹಾಗೇನೇ. ಅದರಲ್ಲಿಯೂ ಸೆಲೆಬ್ರಿಟಿಗಳ ಲೈಫು ಅದೇನೇ. ತಮ್ಮ ಹೆಸರು ಹೇಗಾದರೂ ಬರುತ್ತಿರಬೇಕು, ತಮ್ಮ ಅಭಿಮಾನಿಗಳು ತಮ್ಮನ್ನು ಮರೆಯಬಾರದು ಎಂದು ಸದಾ ಹಪಹಪಿಸುತ್ತಲೇ ಇರುತ್ತಾರೆ. ಇದೀಗ ಸೋಷಿಯಲ್​ ಮೀಡಿಯಾ ಇಷ್ಟೊಂದು ಪ್ರಭಾವ ಬೀರುವುದರಿಂದ ಅವರಿಗೆ ರೀಲ್ಸ್​ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರ ಆಗೋದು ತುಂಬಾ ಸುಲಭವಾಗಿದೆ. ಅದಕ್ಕಾಗಿ ಮದುವೆಯೇ ಆಗಿರಲಿ, ಇನ್ನೇನೋ ಅಪಘಾತವೇ ಆಗಿರಲಿ... ಸೋಷಿಯಲ್​ ಮೀಡಿಯಾದಲ್ಲಿ ಯಾವ ರೂಪದಲ್ಲಿಯಾದರೂ ಆ್ಯಕ್ಟೀವ್​ ಆಗಿರುತ್ತಾರೆ. ಒಮ್ಮೆ ಪ್ರಸಿದ್ಧ ತಲೆಗೆ ಏರಿದ ಮೇಲೆ ಅದನ್ನು ಇಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಜನರ ಮೆಮೊರಿ ಕೂಡ ತುಂಬಾ ಅಲ್ಪಾಯು. ನಟ-ನಟಿಯರು ಬಳಕೆಯಲ್ಲಿ ಇದ್ದರೆ ಮೆರೆಸಿ ಕುಣಿಯುತ್ತಾರೆ, ಅವರ ಸ್ವಲ್ಪ ದಿನ ಕಾಣಿಸಲಿಲ್ಲ ಎಂದಾಕ್ಷಣ ಮರೆತು ಬಿಡುತ್ತಾರೆ. ಇದು ಸೆಲೆಬ್ರಿಟಿಗಳಿಗೆ ಸಹಿಸಲು ಸಾಧ್ಯವಾಗದ ಮಾತು.

ಅದೇನೇ ಇರಲಿ. ಸದ್ಯ ಸೀತಾರಾಮ ಸೀತಾ ನಟಿ ವೈಷ್ಣವಿ ಗೌಡ ಮದುವೆಯಾದ ಮೇಲೂ ರೀಲ್ಸ್​ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗ್ತಾ ಇದ್ದಾರೆ. ಇದೀಗ ಮಿನಿ ಸ್ಕರ್ಟ್​ ಧರಿಸಿ ರೀಲ್ಸ್​ ಮಾಡಿದ್ದಾರೆ. ಆದರೆ ಇದ್ಯಾಕೋ ಹಲವು ಅಭಿಮಾನಿಗಳಿಗೆ ಸರಿ ಕಾಣಿಸುತ್ತಿಲ್ಲ. ಅಷ್ಟಕ್ಕೂ ಸೀತಾರಾಮ ಸೀತಾ ಎಂದರೆ ಆಕೆ ಅಪ್ಪಟ ಗೃಹಿಣಿಯಾಗಿದ್ದಳು. ಸೀರೆ, ಮಂಗಳಸೂತ್ರ, ಕಾಲುಂಗುರ, ದೊಡ್ಡದಾದ ಕುಂಕುಮ, ಸಿಂದೂರ... ಹೀಗೆ ಸೀತೆ ಎಂದಾಕ್ಷಣ ಎಲ್ಲರಿಗೂ ಅದೊಂದು ಭಾರತೀಯ ನಾರಿಯ ಕಲ್ಪನೆ ಬರುತ್ತಿತ್ತು. ಆದರೆ ಮದುವೆಯಾದ ಮೇಲೆ ಇರಬೇಕಾದ ಈ ಎಲ್ಲಾ ಲಕ್ಷಣಗಳು ನಿಜವಾಗಿಯೂ ಮದುವೆಯಾದ ಮೇಲೆ ಕಾಣದಿದ್ದರೆ ಹಲವರಿಗೆ ಕಸಿವಿಸಿಯಾಗುವುದು ಸಹಜವೇ. ಆದ್ದರಿಂದ ಈಗ ಮಿನಿ ಸ್ಕರ್ಟ್​, ಮಂಗಳಸೂತ್ರ, ಕುಂಕುಮ, ಸಿಂದೂರ ರಹಿತ ನಟಿಯನ್ನು ನೋಡಿದವರು ಸಕತ್​ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸನ್ನಿಧಿ ಸನ್ನಿ ಲಿಯೋನ್​ ಆಗಿಬಿಟ್ರಾ ಎಂದು ಒಬ್ಬರು ಕೇಳಿದ್ರೆ, ಮದುವೆಗೂ ಮುನ್ನ ಅಷ್ಟು ಚೆಂದ ಭಾರತೀಯ ನಾರಿಯಾಗಿ ಕಾಣಿಸಿಕೊಂಡಾಕೆ, ರಿಯಲ್​ ಆಗಿ ಮದ್ವೆಯಾದ ಮೇಲೆ ಇದ್ಯಾಕೆ ಹೀಗೆ ಕಾಣಿಸಿಕೊಳ್ತಿದ್ದಿಯಾ ಎಂದು ಬೇಸರ ಹೊರಹಾಕುತ್ತಿದ್ದಾರೆ. ಮತ್ತೆ ಕೆಲವರು ಇದ್ಯಾಕೋ ಅತಿಯಾಯ್ತು ಎಂದು ಕೆಟ್ಟದ್ದಾಗಿಯೂ ಕಮೆಂಟ್​ ಮಾಡಿದರೆ, ಮತ್ತೆ ಕೆಲವರು ನಟಿಯ ಪರವಾಗಿ ನಿಂತಿದ್ದು, ಅದು ಅವರ ಇಷ್ಟ. ಒಬ್ಬ ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವುದು ಅವರ ಮನಸ್ಥಿತಿ ತೋರಿಸುತ್ತದೆ. ಅಷ್ಟಕ್ಕೂ ಇಲ್ಲೇನು ನಟಿ ಅಶ್ಲೀಲ ಎನ್ನುವಂಥ ಬಟ್ಟೆ ಹಾಕಿಲ್ಲ, ಅದು ಡೀಸೆಂಟ್​ ಆಗಿಯೇ ಇದೆ. ನಿಮ್ಮ ಕಣ್ಣು ಸರಿಯಿಲ್ಲದಿದ್ದರೆ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ.

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

View post on Instagram