ಬಿಗ್‌ಬಾಸ್ ಮುಕ್ತಾಯದ ಬೆನ್ನಲ್ಲೇ, ಕಲರ್ಸ್ ಕನ್ನಡದಲ್ಲಿ 'ವಧು' ಮತ್ತು 'ಯಜಮಾನ' ಧಾರಾವಾಹಿಗಳು ಆರಂಭ. ಲಕ್ಷ್ಮೀ ಬಾರಮ್ಮದಲ್ಲಿ ವೈಷ್ಣವ್ ಮರುಮದುವೆಗೆ ಸಿದ್ಧ, ಭಾಗ್ಯಲಕ್ಷ್ಮೀಯಲ್ಲಿ ಭಾಗ್ಯ ಜೋಕರ್ ಆಗಿ ಮಕ್ಕಳನ್ನು ನಗಿಸುತ್ತಾಳೆ. ದೃಷ್ಟಿಬೊಟ್ಟುದಲ್ಲಿ ದತ್ತ ದೃಷ್ಟಿಗೆ ದ್ವೇಷದಿಂದ ತಾಳಿ ಕಟ್ಟಿದರೆ, ಕರಿಮಣಿಯಲ್ಲಿ ಸಾಹಿತ್ಯಳ ಮದುವೆಗೆ ಮತ್ತೆ ಸಂಕಷ್ಟ. ಹೊಸ ತಿರುವುಗಳೊಂದಿಗೆ ಧಾರಾವಾಹಿಗಳು ಮುಂದುವರೆಯಲಿವೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಇಲ್ಲಿವರೆಗೆ ಬಿಗ್ ಬಾಸ್ ನದ್ದೇ ಹವಾ ಇತ್ತು. ವೀಕ್ಷಕರು ಕುತೂಹಲದಿಂದ ಮೂರು ತಿಂಗಳ ಕಾಲ ಬಿಗ್ ಬಾಸ್ ನೋಡಿ, ಕೊನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಹನುಮಂತನನ್ನು ಗೆಲ್ಲಿಸಿದ್ದು ಆಗಿದೆ. ಇನ್ನೇನಿದ್ರು ಬಿಗ್ ಬಾಸ್ ಜಾಗದಲ್ಲಿ ಆರಂಭವಾಗಲಿದೆ ಎರಡು ಹೊಸ ಧಾರಾವಾಹಿಗಳು. ಈಗಾಗಲೇ ತನ್ನ ಪ್ರೊಮೋ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುವ ವಧು ಹಾಗೂ ಯಜಮಾನ ಸೀರಿಯಲ್ ಇವತ್ತಿನಿಂದ ಅಂದರೆ ಜನವರಿ 27 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಈಗಾಗಲೇ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಹೊಸ ಹೊಸ ಟ್ವಿಸ್ಟ್ ಗಳು ಶುರುವಾಗಲಿವೆ.
ವಧು ಧಾರಾವಾಹಿಯ ನಿರ್ದೇಶಕರ ಬಗ್ಗೆ FBಯಲ್ಲಿ ಬರೆದುಕೊಂಡ್ರು ಟಿಎನ್ ಸೀತಾರಾಮ್
ಈಗಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿರುವ ಸೀರಿಯಲ್ ಗಳ ಪ್ರೊಮೊ ನೋಡಿ ವೀಕ್ಷಕರು ಅಯ್ಯೋ ಇದಾನಾಗ್ತಿದೆ ಎಂದು ಹೇಳಿದ್ದಾಗಿದೆ. ಇನ್ನು ಸೀರಿಯಲ್ ನೋಡಿ ವೀಕ್ಷಕರು ಏನೆನ್ನುತ್ತಾರೆ ಅನ್ನೋದೊಂದೇ ಬಾಕಿ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ (Lakshmi Baramma serial) ದೊಡ್ಡದಾದ ಟ್ವಿಸ್ಟ್ ಕೊಟ್ಟಿರುವಂತಿದೆ. ಜೈಲಿನಿಂದ ಕಾವೇರಿ ಬಂದಾಗಿದೆ. ವೈಷ್ಣವ್ ಲಕ್ಷ್ಮೀ ವಿರುದ್ಧ ತಿರುಗಿ ಬಿದ್ದಾಗಿದೆ. ಇದೀಗ ಜೀವನದ ಹೊಸ ಅಧ್ಯಾಯ ಆರಂಭಿಸಲು ಹೊರಟಿದ್ದಾನೆ ವೈಷ್ಣವ್. ಅಂದ್ರೆ ವೈಷ್ಣವ್ ಇನ್ನೊಬ್ಬ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾನೆ. ಒಂದು ಕಡೆ ತನ್ನನ್ನು ಕಂಟ್ರೋಲ್ ಮಾಡುವ ತಾಯಿ, ಮತ್ತೊಂದು ಕಡೆ ಪ್ರೀತಿಸಿದ ಕೀರ್ತಿ, ಮತ್ತೊಂದು ಕಡೆ ತಾಳಿ ಕಟ್ಟಿದ ಹೆಂಡ್ತಿ. ಇದೆಲ್ಲವನ್ನೂ ಬಿಟ್ಟು ಇನ್ನು ಮುಂದೆ ರೂಲ್ಸ್ ನಂದೆ, ಆಟವೂ ನಂದೇ ಎನ್ನುತ್ತಿದ್ದಾನೆ ವೈಷ್ಣವ್. ಹಾಗಿದ್ರೆ ಮುಂದೆ ಏನಾಗುತ್ತೆ ಕಾದು ನೋಡಬೇಕು.
ಪ್ರೇಯಸಿ ಎದುರು ಪತ್ನಿಗೆ ಸೋಲು! ಇದ್ದ ಕೆಲಸ ಕಸಿದುಕೊಂಡ ಶ್ರೇಷ್ಠಾ- ಇದೇನಿದು ಭಾಗ್ಯಳ ಹೊಸ ವೇಷ?
ಇನ್ನು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ (Bhagyalakshmi serial) ಮತ್ತೊಂದು ತರಹದ ಟ್ವಿಸ್ಟ್, ಎಲ್ಲವನ್ನು ಎದುರಿಸಿ ನಿಲ್ಲೋದಕ್ಕೆ ರೆಡಿಯಾಗಿದ್ದ ಭಾಗ್ಯಳಿಗೆ ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ಒಂದು ಕಡೆ ಶ್ರೇಷ್ಠಾ ತಾಂಡವ್ ನನ್ನು ಭಾಗ್ಯಳಿಂದ ಕಸಿದುಕೊಂಡಿದ್ದಾನೆ. ಮತ್ತೊಂದು ಕಡೆ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಕೂಡ ಈಗ ಕೈಯಲ್ಲಿ ಇಲ್ಲ, ಇನ್ನು ಅಳು ಮಾತ್ರ ಜೀವನದಲ್ಲಿ ಉಳಿದಿರೋದು ಎಂದು ಅಳುತ್ತಿದ್ದಾಳೆ ಭಾಗ್ಯ. ನಂತರ ಅಳುತ್ತಾ ಕೂರಬಾರದು ಎಲ್ಲರನ್ನೂ ನಗಿಸಬೇಕು ಎನ್ನುತ್ತಾ, ಮುಖಕ್ಕೆ ಜೋಕರ್ ಮುಖವಾಡ ಹಾಕಿ, ತಾನು ಜೋಕರ್ ನಂತೆ ವೇಷ ತೊಟ್ಟು ಮಕ್ಕಳನ್ನು ಆಟವಾಡಿಸುತ್ತಾ ನಗಿಸುತ್ತಾಳೆ ಭಾಗ್ಯ. ಸಾಯೋವಷ್ಟು ನೋವಿದ್ರು, ಇನ್ನು ಸಾಯುವವರೆಗೂ ನಗುತ್ತೇನೆ ಎನ್ನುತ್ತಾಳೆ ಭಾಗ್ಯ.
ಲಕ್ಷ್ಮಿ ಬಾರಮ್ಮ ಬೇಡ, ದರಿದ್ರ ಲಕ್ಷ್ಮಿ ಅಂತಿಡಿ, ಈ ಸೀರಿಯಲ್ ಡೈರೆಕ್ಟರ್‌ಗೆ ಕಾವೇರಿ ಒದಿಬೇಕೆಂದ ವೀಕ್ಷಕರು
ಇನ್ನು ದೃಷ್ಟಿಬೊಟ್ಟು (Drustibottu) ಧಾರಾವಾಹಿಯಲ್ಲಿ ದೃಷ್ಟಿಯನ್ನು ತನ್ನ ಬೆಸ್ಟ್ ಫ್ರೆಂಡ್ ಎಂದು ನಂಬಿದ್ದ ದತ್ತ ಭಾಯ್, ಇದೀಗ ದೃಷ್ಟಿಯಿಂದಲೇ ತನಗೆ ಮೋಸ ಆಗಿದೆ ಎಂದು ತಿಳಿದು, ಆಕೆಗೆ ದ್ವೇಷದಿಂದ ತಾಳಿಕಟ್ಟಿ, ಅಗ್ನಿಸಾಕ್ಷಿಯಾಗಿ ನಿನ್ನ ಜೀವನ ನರಕ ಮಾಡ್ತೀನಿ ಎಂದಿದ್ದಾನೆ. ಮುಂದೆ ತನ್ನ ರೂಪದ ನಿಜ ತಿಳಿಯುವ ಭಯದಲ್ಲಿದ್ದಾಳೆ ದೃಷ್ಟಿ. ಎದುರಾಗಿರೋ ಅಗ್ನಿಪರೀಕ್ಷೆಯಲ್ಲಿ ದೃಷ್ಟಿ ಬೇಯುತ್ತಾಳಾ? ಅರಳುತ್ತಾಳಾ? ಕಾದು ನೋಡಬೇಕು. ಇನ್ನೊಂದು ಕಡೆ ಕರಿಮಣಿ ಸೀರಿಯಲ್ ನಲ್ಲಿ (Karimani serial)ಚಿಕ್ಕಪ್ಪನಿಂದಾಗಿ ಪಾಲಿಗಳ ಪಾಲಾಗುತ್ತಿದ್ದಾಳೆ ಸಾಹಿತ್ಯ. ಮೂರು ಸಲ ತನ್ನ ಮದುವೆಯನ್ನು ನಿಲ್ಲಿಸಿದ ಕರ್ಣ ಈ ಸಲ ಕೂಡ ಮದುವೆ ನಿಲ್ಲಿಸುತ್ತಾಳೆ ಎಂದು ಕಾದಿದ್ದಾಳೆ. ಎಲ್ಲರಿಗೂ ವರವಾಗುವ ಕರಿಮಣಿ ಸಾಹಿತ್ಯ ಪಾಲಿಗೆ ಶಾಪವಾಗಿದೆ. ಸಾಹಿತ್ಯ ಕುತ್ತಿಗೆಯಲ್ಲಿ ಕರಿಮಣಿ ಕಟ್ಟೋರು ಯಾರು ಕಾದು ನೋಡಬೇಕು. ಇಷ್ಟೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಹೊತ್ತು ತರುತ್ತಿರುವ ಸೀರಿಯಲ್ ಜನರಿಗೆ ಇಷ್ಟವಾಗುತ್ತಾ ಅದನ್ನೂ ಕಾದು ನೋಡಬೇಕು.
