ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾಳೆ. ಲಕ್ಷ್ಮೀ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾಳೆ. ಈ ಬೆಳವಣಿಗೆಯಿಂದ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿ, ಕಥಾಹಂದರವನ್ನು ಟೀಕಿಸಿದ್ದಾರೆ. ಧಾರಾವಾಹಿಯ ನಿರ್ದೇಶಕರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಅದ್ಭುತವಾಗಿ ಮೂಡಿ ಬರುತ್ತಿದ್ದ ಸೀರಿಯಲ್ ಅಂದ್ರೆ ಅದು ಲಕ್ಷ್ಮೀ ಬಾರಮ್ಮ (Lakshmi Baramma), ಸೀರಿಯಲ್ ಕಥೆ, ಒಂದರ ಮೇಲೊಂದು ತಿರುವುಗಳು ಎಲ್ಲವೂ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಥೆಯ ಹಾದಿಯೇ ಬದಲಾಗಿದೆ. ಎಲ್ಲವನ್ನೂ ಎದುರಿಸಿ ಕಾವೇರಿಯನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದ ಲಕ್ಷ್ಮೀ ಇನ್ನು ಮುಂದೆ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವ ದೊಡ್ಡ ಮುನ್ಸೂಚನೆ ಸಿಕ್ಕಿದೆ. ಅದೇ ಪ್ರೋಮೊ ಕೂಡ ರಿಲೀಸ್ ಆಗಿದ್ದು, ಪ್ರೋಮೋ ನೋಡಿದ ವೀಕ್ಷಕರು ನಿರ್ದೇಶಕರ ವಿರುದ್ಧ ಕಿಡಿ ಕಾರಿದ್ದಾರೆ.
ವೈಷ್ಣವ್ ಲಕ್ಷ್ಮೀ ಹನಿಮೂನ್‌ನಲ್ಲಿ ಕರಡಿಯಂತೆ ಬಂದ ಕೀರ್ತಿ! ಬಿಂದಾಸ್ ಡ್ಯಾನ್ಸ್ ಮಾಡಿದವಳಿಗೆ ನೆಟ್ಟಿಗರ ಬೆಂಬಲ
ಸೀರಿಯಲ್ ಕಥೆಯ ಪ್ರಕಾರ ಇಲ್ಲಿವರೆಗೆ ಕಾವೇರಿ ಜೈಲಿನಲ್ಲಿದ್ದಳು. ಜೈಲಿನಲ್ಲಿ ಇದ್ದು ಕೊಂಡೆ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದ ಕಾವೇರಿಗೆ ಇದೀಗ ಕೀರ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಅನ್ನೋದು ಗೊತ್ತಾಗಿದೆ. ಅದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. ಪ್ರೊಮೋದಲ್ಲಿ ತೋರಿಸಿದಂತೆ ಕಾವೇರಿ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ತನ್ನ ಮನೆಗೆ ಹಿಂದಿರುಗಿದ್ದಾಳೆ. ಜೊತೆಗೆ ಲಕ್ಷ್ಮೀ ವಿರುದ್ಧ ತನ್ನ ದರ್ಪವನ್ನು ತೋರಿಸಿದ್ದಾರೆ. ನಾನು ಕಾವೇರಿ ಕಷ್ಯಪ್ (Kaveri Kashyap), ಈ ಮನೆಯ ಯಜಮಾನಿ, ನಾನು ಬರ್ತೀನಿ ಅಂತ ನೀನು ಅಂದುಕೊಂಡಿರಲಿಲ್ಲ ಅಲ್ವಾ? ಇವತ್ತಿಗೆ ನಿನ್ನ ನೆಮ್ಮದಿ ಮುಗೀತು. ಕಾವೇರಿಯನ್ನು ಎದುರು ಹಾಕಿಕೊಂಡ್ರೆ, ಲೈಫಲ್ಲಿ ಏನೇನು ಆಗುತ್ತೆ ಅಂತ ನಿನಗೆ ಗೊತ್ತಾಗುತ್ತೆ ಎನ್ನುತ್ತಾ ಲಕ್ಷ್ಮಿಗೆ ಕಾಲಿನಲ್ಲಿ ಜೋರಾಗಿ ಒದೆಯುತ್ತಾ ಬೀಳುವಂತೆ ಮಾಡಿದ್ದಾಳೆ ಕಾವೇರಿ. ಇದನ್ನು ನೋಡ್ತಿದ್ರೆ, ಇದೀಗ ಲಕ್ಷ್ಮೀ ಮತ್ತು ವೈಷ್ಣವ್ ಒಂದಾಗುತ್ತಿರುವ ಸಮಯದಲ್ಲಿ ಮತ್ತೆ ದೊಡ್ಡ ಕಂದರ ಸೃಷ್ಟಿಯಾಗುತ್ತೆ, ಲಕ್ಷ್ಮೀ ವೈಷ್ಣವ್ ಬೇರೆಯಾಗುವಂತೆ ಕಾವೇರಿ ಮಾಡುತ್ತಾಳೆ, ಇಡೀ ಮನೆಯವರನ್ನೇ ಲಕ್ಷ್ಮೀ ವಿರುದ್ಧ ಕಟ್ಟುತ್ತಾಳೆ ಅನ್ನೋದು ಗೊತ್ತಾಗುತ್ತೆ.
ಮಗುವಿನಂತೆ ನಾಟಕ ಆಡ್ತಿದ್ದಾಳಾ ಕೀರ್ತಿ? ಫ್ಯಾನ್ಸ್ ಮಧ್ಯೆ ಶುರುವಾಗಿದೆ ತಿಕ್ಕಾಟ
ಆದರೆ ಈ ಪ್ರೊಮೊ (Lakshmi Baramma Promo) ನೋಡಿ ವಿಕ್ಷಕರು ಕಿಡಿ ಕಾರಿದ್ದಾರೆ. ಲಕ್ಷ್ಮಿ ಬಾರಮ್ಮ ಬೇಡ, ದರಿದ್ರ ಲಕ್ಷ್ಮಿ ಅಂತಿಡಿ, ಈ ಸೀರಿಯಲ್ ಡೈರೆಕ್ಟರ್‌ಗೆ ಕಾವೇರಿ ಒದಿಬೇಕು ಅಂತಿದ್ದಾರೆ ಜನ, ಅಷ್ಟೇ ಅಲ್ಲ ಸೀರಿಯಲ್ ಕಥೆ ಎಳೆಬೇಕು ಅಂತ ಇಷ್ಟೂ ಕೆಟ್ಟದಾಗಿ ತೋರಿಸೋದು ಸರಿಯಲ್ಲ ಅಂತಾನೂ ಹೇಳಿದ್ದಾರೆ. ಸೀರಿಯಲ್ ಗೆ ಕಾವೇರಿ ಬಾರಮ್ಮ ಅಂತಾನೆ ಇಟ್ಕೊಳಿ, ಇಲ್ಲಿ ನಾಯಕಿಯರಿಗೆ ಬೆಲೆನೇ ಇಲ್ಲ, ಇನ್ನೂ ಕಥೆ ನೋಡೋದಕ್ಕೆ ಇಂಟ್ರೆಸ್ಟ್ ಇಲ್ಲ ಎಂದಿದ್ದಾರೆ ಹಲವರು. ಏನೇನೋ ಬ್ಯಾನ್ ಮಾಡ್ತಾರೆ ಈ ಸೀರಿಯಲ್ ಯಾಕೆ ಬ್ಯಾನ್ ಮಾಡ್ತಿಲ್ಲ ಅಂತಾನೂ ಕೇಳ್ತಿದ್ದಾರೆ ಜನ.
