MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪವರ್ ಸ್ಟಾರ್ ಹುಟ್ಟುಹಬ್ಬ… ಕೊನೆ ಉಸಿರಿನ ನಂತರವೂ ನಾ ನಿಮ್ಮ ಅಭಿಮಾನಿ ಎಂದ ನಿರೂಪಕಿ ಅನುಶ್ರೀ

ಪವರ್ ಸ್ಟಾರ್ ಹುಟ್ಟುಹಬ್ಬ… ಕೊನೆ ಉಸಿರಿನ ನಂತರವೂ ನಾ ನಿಮ್ಮ ಅಭಿಮಾನಿ ಎಂದ ನಿರೂಪಕಿ ಅನುಶ್ರೀ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಿರೂಪಕಿ ಹಾಗೂ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿರುವ ಅನುಶ್ರೀ ಅಪ್ಪು ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ, ನನ್ನ ಕೊನೆ ಉಸಿರಿನ ನಂತರವೂ ನಾ ಎಂದಿಗೂ ನಿಮ್ಮ ಅಭಿಮಾನಿನೇ ಎಂದಿದ್ದಾರೆ. 

2 Min read
Author : Pavna Das
Published : Mar 17 2026, 03:52 PM IST
Share this Photo Gallery
  • FB
  • TW
  • Linkdin
  • Whatsapp
15
ಪವರ್ ಸ್ಟಾರ್ ಪುನೀತ್ ರಾಜಕುಮಾರ್
Image Credit : instagram

ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು, ನಾಡಿನಾದ್ಯಂತ ಅಭಿಮಾನಿಗಳು ಹಬ್ಬದಂತೆ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಪ್ಪು ಅವರ ಅಭಿಮಾನಿಯಾಗಿರುವ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀಯವರು ಕೂಡ ಅಪ್ಪು ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಪ್ಪು ಜೊತೆಗಿನ ಫೋಟೊಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

25
ನಿರೂಪಕಿ ಅನುಶ್ರೀ
Image Credit : instagram

ನಿರೂಪಕಿ ಅನುಶ್ರೀ

ನಿರೂಪಕಿ ಅನುಶ್ರೀಯವರು ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ, ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲೂ ಸಹ ಅನುಶ್ರೀ ತಮ್ಮ ಹೆಸರಿನ ಜೊತೆ ಅಪ್ಪು ಅಭಿಮಾನಿ ಅಂತಾನೆ ಬರೆದುಕೊಂಡಿದ್ದಾರೆ. ಇದೀಗ ಅಪ್ಪು ಹುಟ್ಟುಹಬ್ಬದ ದಿನ ಪುನೀತ್ ಜೊತೆಗಿನ ಮಧುರ ನೆನಪುಗಳನ್ನು ಮೆಲುಕು ಹಾಕಿಕೊಂಡು ನನ್ನ ಕೊನೆ ಉಸಿರಿನ ನಂತರವೂ ನಾ ಎಂದಿಗೂ ನಿಮ್ಮ ಅಭಿಮಾನಿನೇ ಎಂದು ಹೇಳಿದ್ದಾರೆ.

Related Articles

Related image1
Anchor Anushree: ಯಶ್ ಜೊತೆ ಅನುಶ್ರೀ ಇರ್ಬೇಕಿತ್ತು, ಆ ನಟಿ ಅಲ್ಲ; ಏಕೆ 'ಉಪ್ಪು ಹುಳಿ ಖಾರ' ಬೆಡಗಿಗೆ ಆ ಚಾನ್ಸ್‌ ಮಿಸ್ ಆಯ್ತು?
Related image2
Puneeth Rajkumar B'day: ಪಾರ್ವತಮ್ಮ ಬೇಡ ಅಂದ್ರೂ 6 ತಿಂಗಳ ಶಿಶುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್- ರೋಚಕ ಸ್ಟೋರಿ
35
ಕೊನೆವರೆಗೂ ಅಭಿಮಾನಿ
Image Credit : instagram

ಕೊನೆವರೆಗೂ ಅಭಿಮಾನಿ

ನಿರೂಪಕಿ ಅನುಶ್ರೀಯವರು ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿ, ಅದರ ಜೊತೆ ಮುದ್ದಾದ ಕ್ಯಾಪ್ಶನ್ ಕೊಟ್ಟಿದ್ದು, ಈ ಫೋಟೊ ಹಾಗೂ ಕ್ಯಾಪ್ಶನ್ ಇದೀಗ ಗಮನ ಸೆಳೆದಿದೆ.

ನೀವೇ ನೀವೇ.. ನಮಗೆಲ್ಲ ನೀವೇ!!!

ಮಾತು ನೀವೇ.. ಮನಸೆಲ್ಲಾ ನೀವೇ!!!

ನಮ್ಮೆಲ್ಲರ ಹೃದಯ ತುಂಬಾ ನಿಮ್ಮ ಪ್ರೀತಿ ತಾನೇ…

ನನ್ನ ಕೊನೆ ಉಸಿರಿನ ನಂತರವೂ ನಾ ಎಂದಿಗೂ ನಿಮ್ಮ ಅಭಿಮಾನಿನೇ!!!!

Happiest bday to my ONE AND ONLY FAVOURITE Appu sir @puneethrajkumar.official Love u sir always forever n ever ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

45
ಅಪ್ಪು ಜೊತೆಗೆ ಕಳೆದ ಕ್ಷಣ
Image Credit : instagram

ಅಪ್ಪು ಜೊತೆಗೆ ಕಳೆದ ಕ್ಷಣ

ಅನುಶ್ರೀ ಗಾಜನೂರಿನ ಮನೆಯಲ್ಲಿರುವ ಅಪ್ಪು ಫೋಟೊ ಜೊತೆಗಿನ ಫೋಟೊ, ಅದರ ಜೊತೆಗೆ ವೇದಿಕೆ ಒಂದರಲ್ಲಿ ಅಪ್ಪು ಜೊತೆಗೆ ಹೆಜ್ಜೆ ಹಾಕಿರುವ ಫೋಟೊ, ವೇದಿಕೆ ಮೇಲೆ ಇಬ್ಬರು ಏನೋ ಚರ್ಚೆ ಮಾಡುತ್ತಿರುವ ಫೋಟೊ ಹಾಗೂ ಅನುಶ್ರೀ ಕೈ ಹಿಡಿದು ಪುನೀತ್ ರಾಜಕುಮಾರ್ ವಿಶ್ ಮಾಡುತ್ತಿರುವ ಫೋಟೊಗಳನ್ನು ಅನುಶ್ರೀ ಹಂಚಿಕೊಂಡಿದ್ದಾರೆ.

55
ಪುನೀತ್ ಕುಟುಂಬದ ಜೊತೆಗಿನ ಒಡನಾಟ
Image Credit : instagram

ಪುನೀತ್ ಕುಟುಂಬದ ಜೊತೆಗಿನ ಒಡನಾಟ

ಹಿಂದೆಯೂ, ಇಂದಿಗೂ ಕೂಡ ಅನುಶ್ರೀಯವರು ಪುನೀತ್ ಹಾಗೂ ಅವರ ಕುಟುಂಬದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹಿಂದಿನ ಬಾರಿ ಅನುಶ್ರೀ ಹುಟ್ಟುಹಬ್ಬಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು, ಅಪ್ಪು ಓಡಿಸುತ್ತಿದ್ದ ಸೈಕಲನ್ನು ಉಡುಗೊರೆಯಾಗಿ ನೀಡಿದ್ದರು. ಶಿವಣ್ಣ ಕೂಡ ಅನುಶ್ರೀ ಹುಟ್ಟುಹಬ್ಬವನ್ನು ಜೋರಾಗಿ ಸೆಲೆಬ್ರೇಟ್ ಮಾಡಿದ್ದರು. ಅಂದ ಹಾಗೆ ಪುನೀತ್ ರಾಜಕುಮಾರ್ ಅವರ್ ಅಕ್ಟೋಬರ್ 29, 2021ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುವ ಅವರದೇ ಸಿನಿಮಾದ ಡೈಲಾಗ್ ನಂತೆ, ಇವತ್ತಿಗೂ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಸಂಭ್ರಮಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆಂಕರ್ ಅನುಶ್ರೀ
ಪುನೀತ್ ರಾಜ್‌ಕುಮಾರ್
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
Latest Videos
Recommended Stories
Recommended image1
ಗಂಡನ ಕೈ ಹಿಡಿದು ದೆಹಲಿ ಸುತ್ತಿದ ಕನ್ನಡ ಕಿರುತೆರೆ ಸುಂದ್ರಿ ವೈಷ್ಣವಿ ಗೌಡ
Recommended image2
ಇರೋ ಒಂದು ಹೃದಯನ್ನ ಎಷ್ಟೂ ಅಂತ ಗೆಲ್ತಿಯಾ: Rakshita Shetty ಹುಟ್ಟುಹಬ್ಬದ ವಿಡಿಯೋಗೆ ಫ್ಯಾನ್ಸ್​ ಭಾವುಕ
Recommended image3
Naa Ninna Bidalaare: ಹೆಣ್ಣಿನ ಬಗ್ಗೆ ಈ ಡೈಲಾಗ್​ ಬರೆದವರಿಗೆ ಕೈ ಎತ್ತಿ ನಮಸ್ಕರಿಸ್ತಿರೋ ಸೀರಿಯಲ್​ ಫ್ಯಾನ್ಸ್​
Related Stories
Recommended image1
Anchor Anushree: ಯಶ್ ಜೊತೆ ಅನುಶ್ರೀ ಇರ್ಬೇಕಿತ್ತು, ಆ ನಟಿ ಅಲ್ಲ; ಏಕೆ 'ಉಪ್ಪು ಹುಳಿ ಖಾರ' ಬೆಡಗಿಗೆ ಆ ಚಾನ್ಸ್‌ ಮಿಸ್ ಆಯ್ತು?
Recommended image2
Puneeth Rajkumar B'day: ಪಾರ್ವತಮ್ಮ ಬೇಡ ಅಂದ್ರೂ 6 ತಿಂಗಳ ಶಿಶುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್- ರೋಚಕ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved