Asianet Suvarna News Asianet Suvarna News

BBK10: 'ಫನ್ ಫ್ರೈಡೇ' ಬಿಗ್ ಬಾಸ್ ಮ್ಯೂಸಿಕಲ್ ಬಕೆಟ್ಸ್‌ ಆಟದಲ್ಲಿ ಬಹುಮಾನ ಗೆದ್ದ ತನಿಶಾ!

ಆಟವೇನೋ ಮೋಜಿನದಿರುತ್ತದೆ, ಆದರೆ ಅದರ ಫಲಿತಾಂಶ ಬರೀ ಮೋಜಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಸ್ಪರ್ಧಿಗಳ ಕುರಿತು ಜನರಲ್ಲಿ ಅಭಿಪ್ರಾಯವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಈ ಆಟದಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಬಹುಮಾನವನ್ನೂ ಕೊಡಲಿದ್ದಾರೆ. 

Tanisha won Fun Friday musical buckets game in Bigg Boss Kannada Season 10 srb
Author
First Published Oct 15, 2023, 4:45 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಅಕ್ಟೋಬರ್ 8 ರಿಂದ ಪ್ರಸಾರ ಕಾಣುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಬಿಗ್‌ಬಾಸ್‌ ಕನ್ನಡದ 10ನೇ ಸೀಸನ್‌ನಲ್ಲಿ ಇನ್ನೊಂದು ಹೊಸ ಸೆಗ್ಮೆಂಟ್ ಪರಿಚಯಿಸಲಾಗಿದೆ.  'ಫನ್ ಫ್ರೈಡೇ' ಹೆಸರಿನ ಬಹುಮೋಜಿನ ಈ ಸೆಗ್ಮೆಂಟ್‌ ' JioCinema'ದಲ್ಲಿ ಎಕ್ಸ್‌ಕ್ಲೂಸಿವ್  ಆಗಿ ವೀಕ್ಷಣೆಗೆ ಲಭ್ಯವಿದೆ. ಇನ್ನು ಮುಂದೆ ಪ್ರತಿ ಶುಕ್ರವಾರ ಬಿಗ್‌ಬಾಸ್‌ ಮನೆಯೊಳಗಿನ ಸ್ಪರ್ಧಿಗಳು ಫನ್‌ ಫ್ರೈಡೆ ಸೆಗ್ಮೆಂಟ್‌ನಲ್ಲಿ ಮೋಜಿನ ಆಟಗಳನ್ನು ಆಡಲಿದ್ದಾರೆ. 

ಆಟವೇನೋ ಮೋಜಿನದಿರುತ್ತದೆ, ಆದರೆ ಅದರ ಫಲಿತಾಂಶ ಬರೀ ಮೋಜಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಸ್ಪರ್ಧಿಗಳ ಕುರಿತು ಜನರಲ್ಲಿ ಅಭಿಪ್ರಾಯವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಈ ಆಟದಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಬಹುಮಾನವನ್ನೂ ಕೊಡಲಿದ್ದಾರೆ. 
ಈ ವಾರದ ಫನ್‌ ಫ್ರೈಡೆ: ಈ ವಾರದ ‘ಫನ್‌ ಫ್ರೈಡೆ’ನಲ್ಲಿ ಮನೆಯೊಳಗಿನ ಸದಸ್ಯರು ‘ಮ್ಯೂಸಿಕಲ್ ಬಕೆಟ್ಸ್‌’ ಆಟ ಆಡಿದರು. 

ವೃತ್ತದೊಳಗೆ ಬಿಂದಿಗೆಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ವೃತ್ತದ ಹೊರಗೆ ಸ್ಪರ್ಧಿಗಳು ನಿಂತಿದ್ದರು. ಸಂಗೀತ ಶುರುವಾಗುತ್ತಿದ್ದಂತೆಯೇ ವೃತ್ತದ ಗುಂಟ ಅವರು ಓಡಬೇಕು. ಸಂಗೀತ ನಿಂತ ಹಾಗೆ ವೃತ್ತದೊಳಗೆ ಓಡಿ ಬಿಂದಿಗೆಯ ಮೇಲೆ ಹತ್ತಿ ನಿಂತುಕೊಳ್ಳಬೇಕು. ಯಾರು ನಿಲ್ಲಲು ಬಿಂದಿಗೆ ಸಿಗುವುದಿಲ್ಲವೋ, ಅವರು ಔಟ್‌! ಇಂಥದೊಂದು ಮಜವಾದ ಆಟವನ್ನು ಸ್ಪರ್ಧಿಗಳು ಮಜವಾಗಿಯೇ ಆಡಿದರು. 

ಎಲ್ಲ ಸ್ಪರ್ಧಿಗಳನ್ನೂ ಹಿಮ್ಮೆಟ್ಟಿಸಿ ಕೊನೆಯ ಹಂತದಲ್ಲಿ ಸಿರಿ ಮತ್ತು ತನಿಷಾ ಅಂತಿಮವಾಗಿ ಉಳಿದಿದ್ದರು. ವೃತ್ತದೊಳಗೆ ಇರುವುದು ಒಂದೇ ಬಿಂದಿಗೆ. ಸಂಗೀತ ನಿಲ್ಲುತ್ತಿದ್ದಂತೆಯೇ ಇಬ್ಬರೂ ವೇಗವಾಗಿ ಬಿಂದಿಗೆಯ ಕಡೆಗೆ ಓಡಿದರೂ, ಬಿಂದಿಗೆಯನ್ನು ಮೊದಲು ತಲುಪಿ ಹತ್ತಿ ನಿಲ್ಲಲು ಸಾಧ್ಯವಾಗಿತ್ತು ತನಿಷಾಗೆ. ಹಾಗಾಗಿ ಈ ಸೀಸನ್‌ನ ಮೊದಲ ಫನ್ ಫ್ರೈಡೆನಲ್ಲಿ ತನಿಷಾ ಗೆದ್ದಿದ್ದಲ್ಲದೆ ಬಹುಮಾನವನ್ನೂ ತಮ್ಮದಾಗಿಸಿಕೊಂಡರು. 

Pitru Paksha : ಅಪ್ಪು, ರಾಜ್, ಚಿರು ಸೇರಿ ಅಗಲಿದ ತಾರೆಯರ ಫೋಟೋ ಇಟ್ಟು ಪೂಜಿಸಿದ ಸೃಜನ್ ಕುಟುಂಬ

ಈ ಆಟದ ರೋಚಕ ಗಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್‌ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ 'JioCinema'ದ 'ಫನ್ ಫ್ರೈಡೇ' ಸೆಗ್ಮೆಂಟ್‌ನಲ್ಲಿ (https://jiocinema.onelink.me/fRhd/z17wt8x0) ಎಕ್ಸ್‌ಕ್ಲೂಸಿವ್ ಆಗಿ ನೋಡಬಹುದು. ಜತೆಗೆ, ಬಿಗ್‌ಬಾಸ್ ಕನ್ನಡ ಶೋನ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವೀಕೆಂಡ್‌ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಬಹುದು. 

BBK10 ಕಿಚ್ಚನ ಪಂಚಾಯಿತಿ; ತುಕಾಲಿ ಸಂತುಗೆ ಮಂಗಳಾರತಿ, ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್-ತನಿಶಾ

Follow Us:
Download App:
  • android
  • ios