- Home
- Entertainment
- TV Talk
- ಶೀಘ್ರದಲ್ಲಿ ಅಂತ್ಯವಾಗಲಿರೋ Colors Kannada Serial ಯಾವುದು?; ಆ ಜಾಗಕ್ಕೆ ಹೊಸ ಧಾರಾವಾಹಿ ಎಂಟ್ರಿ!
ಶೀಘ್ರದಲ್ಲಿ ಅಂತ್ಯವಾಗಲಿರೋ Colors Kannada Serial ಯಾವುದು?; ಆ ಜಾಗಕ್ಕೆ ಹೊಸ ಧಾರಾವಾಹಿ ಎಂಟ್ರಿ!
Colors Kannada New Serial: ಬಿಗ್ ಬಾಸ್ ಕನ್ನಡ 12 ಶೋ ಪ್ರಸಾರ ಆಗುವ ಸಮಯದಲ್ಲಿಯೇ ರಾಣಿ ಧಾರಾವಾಹಿ ಬರಲಿದೆ ಎಂದು ಹೇಳಲಾಗಿತ್ತು. ಅಂದಹಾಗೆ ರಾಣಿ ಧಾರಾವಾಹಿ ಟೀಂ ಕೂಡ ದೊಡ್ಮನೆಗೆ ಭೇಟಿ ಕೊಟ್ಟು, ಧಾರಾವಾಹಿ ಕಥೆ ಹೇಗಿದೆ ಎಂದು ಹೇಳಿತ್ತು. ಈ ಸೀರಿಯಲ್‌ಗೋಸ್ಕರ ಇನ್ನೊಂದು ಧಾರಾವಾಹಿ ಅಂತ್ಯ ಆಗಲಿದೆ.

ರಾಣಿ ಸೀರಿಯಲ್ ಆರಂಭ
ಈಗ ರಾಣಿ ಧಾರಾವಾಹಿಯ ಪ್ರೋಮೋ ಮತ್ತೆ ರಿಲೀಸ್ ಆಗಿದೆ. ಶೀಘ್ರದಲ್ಲಿಯೇ ಈ ಸೀರಿಯಲ್ ಪ್ರಸಾರ ಆಗಲಿದೆಯಂತೆ. ಪ್ರೋಮೋ ನೋಡಿ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ.
ರಾಣಿ ಧಾರಾವಾಹಿ ಕತೆ ಏನು?
ಜೈಲಿನಲ್ಲಿರುವ ತಾಯಿಯನ್ನು ಆದಷ್ಟು ಬೇಗ ಬಿಡಿಸ್ತೀನಿ ಎಂದು ಪುಟ್ಟ ಮಗಳು ಆಸೆ ಇಟ್ಟುಕೊಂಡಿರುತ್ತಾಳೆ, ಹೊರಗಡೆ ಮಗಳು ಹೇಗಿದ್ದಾಳೋ ಎಂದು ತಾಯಿಗೆ ಚಿಂತೆ. ಇದರ ಸುತ್ತ ರಾಣಿ ಕಥೆ ಸಾಗುವುದು.
ಯಾವ ಸೀರಿಯಲ್ ಅಂತ್ಯ ಆಗುತ್ತೆ?
ರಾಣಿ ಧಾರಾವಾಹಿಗೋಸ್ಕರ ಯಾವ ಧಾರಾವಾಹಿ ಅಂತ್ಯ ಆಗುವುದು ಎಂಬ ಡೌಟ್ ಇರುವುದು. ಟಿಆರ್‌ಪಿ ಕಡಿಮೆ ಇದ್ದರೆ, ಸೀರಿಯಲ್ ಕಥೆ ಮುಗಿದಿದ್ದರೆ ಅಥವಾ ಕಲಾವಿದರ ಸಮಸ್ಯೆ ಇದ್ದಾಗಲೂ ಕೂಡ ಸೀರಿಯಲ್ ಅಂತ್ಯ ಆಗುವುದು.
ಯಜಮಾನ ಧಾರಾವಾಹಿ ಅಂತ್ಯ ಆಗುತ್ತಾ?
ಉಳಿದ ಸೀರಿಯಲ್‌ಗಳಿಗೆ ಹೋಲಿಕೆ ಮಾಡಿ ನೋಡಿದರೆ ಯಜಮಾನ ಧಾರಾವಾಹಿಗೆ ಕಡಿಮೆ ಟಿಆರ್‌ಪಿ ಇದೆ. ಹೀಗಾಗಿ ಈ ಸೀರಿಯಲ್ ಅಂತ್ಯ ಆಗುವುದು ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ಟೀಂ ಆಗಲಿ ಮಾಹಿತಿ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

