BBK10 ಕಿಚ್ಚನ ಪಂಚಾಯಿತಿ; ತುಕಾಲಿ ಸಂತುಗೆ ಮಂಗಳಾರತಿ, ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್-ತನಿಶಾ

ಡಿಪ್ಲೋಮ್ಯಾಟಿಕ್ ಹಾಗೂ ಊಸರವಳ್ಳಿ ಎಂಬ ಶಬ್ದಕ್ಕೆ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಲಾಯ್ತು. ಆದರೆ, ಭಾಗ್ಯಶ್ರೀ ಅದನ್ನು ಒಪ್ಪಿಕೊಳ್ಳದೇ ಸಮಜಾಯಿಸಿ ಕೊಡಲು ಹೋಗಿ ತಾವೇ ತಗಲಾಕಿಕೊಂಡರು. ಬಳಿಕ, ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದರು. ಸ್ನೇಹಿತ್ ಕ್ಯಾಪ್ಟನ್ಸಿ ಬಗ್ಗೆ ಕೆಲವರಿಂದ ಅಪಸ್ವರ ಬಂತು. 

Weekend with Kichcha Sudeep Bigg Boss Panchayiti episode gets high response srb

ಕಲರ್ಸ್ ಕನ್ನಡದ ಬಿಗ್ ಬಾಸ್ ಸೀಸನ್ 10ನ ಮೊದಲ 'ಕಿಚ್ಚಿನ ಪಂಚಾಯಿತಿ' ನೋಡಿ ಹಲವರು ಫುಲ್ ಖುಷಿಯಾಗಿದ್ದಾರೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಬರುತ್ತಾರೆ ಎಂಬ ಕಾರಣಕ್ಕೇ ಎಷ್ಟೋ ಜನರಿಗೆ ಶನಿವಾರ ಎಂದು ನೆನಪಾಗುವಷ್ಟರ ಮಟ್ಟಿಗೆ ಕಿಚ್ಚನ ಪಂಚಾಯಿತಿ ಫೇಮಸ್. ನಿನ್ನೆ (14 ಅಕ್ಟೋಬರ್ 2023) ಕಿಚ್ಚನ ಪಂಚಾಯಿತಿ ಶುರುವಾಗುತ್ತಿದ್ದಂತೆ, ವೀಕ್ಷಕರು ಮಾತ್ರವಲ್ಲ, ಬಿಗ್ ಬಾಸ್ ಸ್ಪರ್ಧಿಗಳು ಸಹ ಸಖತ್ ಥ್ರಿಲ್ ಅನುಭವಿಸುತ್ತಿದ್ದರು. ಸ್ಪರ್ಧಿಗಳೆಲ್ಲ ಸಾಲಾಗಿ ಕಿಚ್ಚನ ಎದುರು ಕುಳಿತು ಸಂಭ್ರಮಿಸುತ್ತಿದ್ದಂತೆ , ಶುರುವಾಯ್ತು ನೋಡಿ ಕಿಚ್ಚನ ದರ್ಬಾರು!

ಸ್ಪರ್ಧಿಗಳೆಲ್ಲರೂ ಒಂದು ವಾರ ಮಾಡಿರುವ ಸರಿ-ತಪ್ಪುಗಳ ವಿಶ್ಲೇಷಣೆ ಬಳಿಕ, ಒಬ್ಬಬ್ಬರಿಂದಲೂ ಆದ ತಪ್ಪುಗಳಿಗೆ ಅವರಿಗೆಲ್ಲ ಡೈರೆಕ್ಟ್ ಆಗಿ ಅಥವಾ ಇಂಡರೆಕ್ಟಾಗಿ ಶಿಕ್ಷೆ ದೊರಕಿದೆ. ಅದು ಅಲ್ಲಿರುವ ಸ್ಪರ್ಧಿಗಳಲ್ಲಿ ಕೆಲವರಿಗೆ ಗೊತ್ತಾಗಿಲ್ಲ ಅಷ್ಟೇ. ತನಿಶಾ, ಸಂಗೀತಾ ಮತ್ತು ಕಾರ್ತಿಕ್ ಅವರಿಗೆ ಬಟ್ಟೆಯನ್ನೇ ಕೊಟ್ಟಿಲ್ಲ. ಕಾರಣ, ಅವರು ಮೂವರೂ ಸೇರಿ ಕಿಚನ್‌ನಲ್ಲಿ ಟೊಮ್ಯಾಟೋವನ್ನು ಕದ್ದು ತಿಂದಿದ್ದಾರೆ. ಹೀಗಾಗಿ ಅವರಿಗೆ ಬಟ್ಟೆ ಸಿಕ್ಕಿಲ್ಲ ಎಂದು ಕಿಚ್ಚ ಸೀಕ್ರೆಟ್ ರಿವೀಲ್ ಮಾಡಿದರು. ಬಟ್ಟೆ ಕೊಡದೇ ಬಿಗ್ ಬಾಸ್‌ನಲ್ಲಿ ತನಗೆ ಅವಮಾನ ಮಾಡಿದ್ದಾರೆ ಎಂಬ ತನಿಶಾ ಮಾತಿಗೆ ಬಿಗ್ ಬಾಸ್ ಪರವಾಗಿ ಈ ಮೂಲಕ ಟಾಂಗ್ ಕೊಟ್ಟರು ಕಿಚ್ಚ ಸುದೀಪ್. 

ಬಿಗ್​ಬಾಸ್​ನಲ್ಲಿ ಸುಂದರಿಯರ ಜೊತೆ ಡ್ರೋನ್​ ಪ್ರತಾಪ್​ ಭರ್ಜರಿ ರ‍್ಯಾಂಪ್​ ವಾಕ್​: ವ್ಹಾರೆವ್ಹಾ ಅಂತಿದ್ದಾರೆ ಫ್ಯಾನ್ಸ್​!

ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿ ಅವರ ಬಗ್ಗೆ ಎಲ್ಲರ ಮುಂದೆ ತಮಾಷೆ ಮಾಡಿ ಅವಮಾನ ಮಾಡುವ ಮೂಲಕ ತುಕಾಲಿ ಸಂತು ದೊಡ್ಡ ಅಪರಾಧ ಎಸಗಿದ್ದಾರೆ ಎಂಬ ಮಾತು ಸುದೀಪ್ ಕಡೆಯಿಂದ ಬಂತು. ತಾನು ಪ್ರತಾಪ್‌ರನ್ನು ಅವಮಾಡಿದ್ದಲ್ಲದೇ ಅವರ ಬಗ್ಗೆ ಉಳಿದವರು ಕೂಡ ಹಗುರವಾಗಿ ಮಾತನಾಡಲು ಕಾರಣರಾದ ತುಕಾಲಿ ಸಂತುಗೆ ಒಂದು ವಾರ ಮನೆಯ ಎಲ್ಲರ ಪಾತ್ರೆ ತೊಳೆಯುವ ಶಿಕ್ಷೆ ಕೊಡಲಾಗಿದೆ. ಸುದೀಪ್ ಹೇಳಿದ ಬಳಿಕ ತನ್ನ ತಪ್ಪಿನ ಅರಿವಾಗಿ ಈ ಬಗ್ಗೆ ತುಕಾಲಿ ಸಂತು ಪ್ರತಾಪ್ ಬಳಿ ಕ್ಷಮೆ ಕೇಳಿದ್ದೂ ಆಯ್ತು. 

ರಣ್ಬೀರ್ ಜತೆ ರಶ್ಮಿಕಾ ಮಂದಣ್ಣ 'Lip Lock' ಕಿಸ್ಸಿಂಗ್; ಬೆಚ್ಚಿಬಿದ್ದ ವಿಜಯ್ ದೇವರಕೊಂಡ ಫ್ಯಾನ್ಸ್!

ಡಿಪ್ಲೋಮ್ಯಾಟಿಕ್ ಹಾಗೂ ಊಸರವಳ್ಳಿ ಎಂಬ ಶಬ್ದಕ್ಕೆ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಲಾಯ್ತು. ಆದರೆ, ಭಾಗ್ಯಶ್ರೀ ಅದನ್ನು ಒಪ್ಪಿಕೊಳ್ಳದೇ ಸಮಜಾಯಿಸಿ ಕೊಡಲು ಹೋಗಿ ತಾವೇ ತಗಲಾಕಿಕೊಂಡರು. ಬಳಿಕ, ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದರು. ಸ್ನೇಹಿತ್ ಕ್ಯಾಪ್ಟನ್ಸಿ ಬಗ್ಗೆ ಕೆಲವರಿಂದ ಅಪಸ್ವರ ಬಂತು. ಆದರೆ, ಸ್ನೇಹಿತ್ ತಮ್ಮ ಬಗ್ಗೆ ಬಂದ ಎಲ್ಲ ಆಪಾದನೆಗಳನ್ನು ಒಪ್ಪಿಕೊಂಡು ಕ್ಷಮೆ ಕೇಳಿ, ತಮಗೆ ಕ್ಯಾಪ್ಟನ್‌ಶಿಪ್ ಅನುಭವ ಇಲ್ಲದ್ದರಿಂದ ಅದನ್ನು ನಿಭಾಯಿಸುವುದರಲ್ಲಿ ಸಾಕಷ್ಟು ತಪ್ಪು ಎಸಗಿದ್ದು ಹೌದು ಎಂದು ಒಪ್ಪಿಕೊಂಡು ಹಲವರ ಪ್ರೀತಿ-ಮೆಚ್ಚುಗೆ ಗಳಿಸಿದರು. ಒಟ್ಟಿನಲ್ಲಿ, ಅನಿರೀಕ್ಷಿತ ಮಾತುಕತೆಗಳ ಮೂಲಕ ನಿನ್ನೆಯ ಕಚ್ಚನ ಪಂಚಾಯಿತಿ ಕೊನೆಯವರೆಗೆ ಕುತೂಹಲ ಉಳಿಸಿಕೊಳ್ಳುವಲ್ಲಿ ಸಫಲವಾಯ್ತು. 

ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಸಂಚಿಕೆ ಕಲರ್ಸ್ ಕನ್ನಡದಲ್ಲಿ ವೀಕೆಂಡ್‌ನಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿದೆ. ಜೀಯೋ ಸಿನಿಮಾದಲ್ಲಿ ನಿರಂತರ 24 ಗಂಟೆ ಈ ಶೋ ಪ್ರಸಾರ ವೀಕ್ಷಣೆಗೆ ಅವಕಾಶವಿದ್ದು, ನೀವು 'JioCineam' ವೀಕ್ಷಿಸಬಹುದು.

Latest Videos
Follow Us:
Download App:
  • android
  • ios