Pitru Paksha : ಅಪ್ಪು, ರಾಜ್, ಚಿರು ಸೇರಿ ಅಗಲಿದ ತಾರೆಯರ ಫೋಟೋ ಇಟ್ಟು ಪೂಜಿಸಿದ ಸೃಜನ್ ಕುಟುಂಬ

ನಟ ಸೃಜನ್‌ ಲೋಕೇಶ್ ಇಡೀ ಕುಟುಂಬವೇ ಸಿನಿಮಾ ತಾರೆಯರ ಕುಟುಂಬ. ಸೃಜನ್ ಅಪ್ಪ ಹಿರಿಯ ನಟ ಲೋಕೇಶ್, ಅಮ್ಮ ಗಿರಿಜಾ ಲೋಕೇಶ್, ತಂಗಿ ಪೂಜಾ ಲೋಕೇಶ್ ಮತ್ತು ಸ್ವತಃ ಸೃಜನ್ ಲೋಕೇಶ್ ಎಲ್ಲರೂ ಕಲಾವಿದರೇ ಆಗಿದ್ದಾರೆ. ಹೀಗಾಗಿ ಅವರಿಗೆ ಸಹಜವಾಗಿ ಮತ್ತು ವಿಶೇಷವಾಗಿ ಸಿನಿಮಾ ಕಲಾವಿದರ ಬಗ್ಗೆ ವಿಶೇಷ ಪ್ರೀತಿ ಇದೆ. 

Actor Srujan Lokesh family celebrated Mahalaya Amavasya with ex film actors Photos

ಕನ್ನಡದ ನಟ-ನಿರೂಪಕ ಸೃಜನ್‌ ಲೋಕೇಶ್ ಮನೆಯಲ್ಲಿ ಪಿತೃಪಕ್ಷದ ಆಚರಣೆಯನ್ನು ತುಂಬಾ ವಿಭಿನ್ನವಾಗಿ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಜರಾಮರರಾಗಿರುವ ಅಂದರೆ ಗತಿಸಿಹೋಗಿರುವ ದಿಗ್ಗಜರು ಹಾಗೂ ನಟ-ನಟಿಯರ ಫೋಟೋಗಳನ್ನು ಇಟ್ಟು ಪಿತೃಪಕ್ಷದ ಆಚರಣೆ ಮಾಡಿದ್ದಾರೆ. ಸಿನಿಮಾ ತಾರೆಯರಿಗೆ ಹೂ ಇಟ್ಟು, ಅಲಂಕಾರ ಮಾಡಿ ಪಿತೃಗಳ ಗೌರವ ಕೊಟ್ಟು ಪೂಜಿಸಿರುವ ಸೃಜನ್ ಲೋಕೇಶ್ ಫ್ಯಾಮಿಲಿ, ಈ ಮೂಲಕ ಹೊಸದೊಂದು ಸಾಧನೆಗೆ ನಾಂದಿ ಹಾಡಿದೆ ಎನ್ನಬಹುದು. 

ಹೌದು, ನಿನ್ನೆ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಹೆಚ್ಚಿನ ಕಡೆಗಳಲ್ಲಿ ಪಿತೃಪಕ್ಷದ ಆಚರಣೆ ನಡೆಸಲಾಗಿದೆ. ಮರಣ ಹೊಂದಿರುವ ಹಿರಿಯರು ಅಥವಾ ಕಿರಿಯರು ಯಾರೇ ಆಗಿರಲಿ, ಅವರ ಪ್ರತಿಮೆ ಅಥವಾ ಫೋಟೋಕ್ಕೆ ಪೂಜೆ ಮಾಡಿ, ಎಡೆ ಇಟ್ಟು ಗೌರವ ಸಲ್ಲಿಸುವ ಪದ್ದತಿ ಇದೆ. ಕೆಲವರು ತಮ್ಮ ಹಿರಿಯರು ಮರಣಹೊಂದಿದ ತಿಥಿಯಂದು ಮಾಡುತ್ತಾರೆ. ಗತಿಸಿದ ತಿಥಿ ಗೊತ್ತಿಲ್ಲದವರು ಅಥವಾ ಅವರವರ ಸಂಪ್ರದಾಯದ ಪ್ರಕಾರ ಕೆಲವರು ವರ್ಷಕ್ಕೊಮ್ಮೆ ಬರುವ ಮಹಾಲಯ ಅಮಾವಾಸ್ಯೆಯಂದು ತಿಥಿ ಮಾಡುತ್ತಾರೆ. 

ಹೆಚ್ಚಿನ ಜನರಿಗೆ ಗೊತ್ತಿರುವಂತೆ ನಟ ಸೃಜನ್‌ ಲೋಕೇಶ್ ಇಡೀ ಕುಟುಂಬವೇ ಸಿನಿಮಾ ತಾರೆಯರ ಕುಟುಂಬ. ಸೃಜನ್ ಅಪ್ಪ ಹಿರಿಯ ನಟ ಲೋಕೇಶ್, ಅಮ್ಮ ಗಿರಿಜಾ ಲೋಕೇಶ್, ತಂಗಿ ಪೂಜಾ ಲೋಕೇಶ್ ಮತ್ತು ಸ್ವತಃ ಸೃಜನ್ ಲೋಕೇಶ್ ಎಲ್ಲರೂ ಕಲಾವಿದರೇ ಆಗಿದ್ದಾರೆ. ಹೀಗಾಗಿ ಅವರಿಗೆ ಸಹಜವಾಗಿ ಮತ್ತು ವಿಶೇಷವಾಗಿ ಸಿನಿಮಾ ಕಲಾವಿದರ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಕಾರಣಕ್ಕೆ ತಮ್ಮ ಮನೆಯಲ್ಲಿ, ನಮ್ಮಿಂದ ಮರೆಯಾದ ಸಿನಿಮಾ ತಾರೆಯರ ಫೋಟೋ ಇಟ್ಟು, ಮಾಲೆ ಹಾಕಿ ಪೂಜೆ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. 

BBK10 ಕಿಚ್ಚನ ಪಂಚಾಯಿತಿ; ತುಕಾಲಿ ಸಂತುಗೆ ಮಂಗಳಾರತಿ, ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್-ತನಿಶಾ

ಲೋಕೇಶ್ ಮತ್ತು ಅವರ ತಾಯಿ, ಡಾ ರಾಜ್‌ ಕುಮಾರ್, ಡಾ ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್, ಚಿರಂಜೀವಿ ಸರ್ಜಾ, ವಜ್ರಮುನಿ ಸೇರಿದಂತೆ ನಟಿಯರಾದ ಕಲ್ಪನಾ, ಮಂಜುಳಾರನ್ನು ಒಳಗೊಂಡು ಹಲವು ತಾರೆಯರ ಫೋಟೋ ಇಟ್ಟು ಪೂಜೆ ಮಾಡಲಾಗಿದೆ. ಈ ಕಾರ್ಯಕ್ರಮದ ವೀಡಿಯೋವನ್ನು ಹಲವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ನಮ್ಮಿಂದ ಮರೆಯಾಗಿರುವ ಹಲವು ಸಿನಿಮಾ ತಾರೆಯರು ಸೃಜನ್ ಮನೆಯಲ್ಲಿ ಒಟ್ಟಿಗೇ ಫೋಟೋ ರೂಪದಲ್ಲಿ ಕಾಣಿಸಿಕೊಂಡು ಹಲವರ ಕಣ್ಣಂಚು ಒದ್ದೆ ಮಾಡಿದ್ದಾರೆ. ಜತೆಗೆ ಈ ಮೂಲಕ ನಟ ಸೃಜನ್ ಲೋಕೇಶ್ ಫ್ಯಾಮಿಲಿ ಸಾಕಷ್ಟು ಮೆಚ್ಚುಗೆ ಮತ್ತು ಗೌರವ ಗಳಿಸಿದೆ. 

ಬಿಗ್​ಬಾಸ್​ ನಡೆಸಿಕೊಡಲು ಸುದೀಪ್​ ಹಾಗೂ ಬೇರೆ ಭಾಷೆ ನಟರು ಪಡೆಯುವುದೆಷ್ಟು? ಅತಿ ಹೆಚ್ಚು ಯಾರಿಗೆ, ಇಲ್ಲಿದೆ ವಿವರ

 

 
 
 
 
 
 
 
 
 
 
 
 
 
 
 

A post shared by Namma Kfi (@namma_kfi)

 

Latest Videos
Follow Us:
Download App:
  • android
  • ios