Asianet Suvarna News Asianet Suvarna News

'ಬಿಗ್ ಬಾಸ್' ವೀಕೆಂಡ್‌ಗೆ ಸುದೀಪ್ ಗೈರು; ಯಾರು ನಡಿಸಿಕೊಡ್ತಾರೆ ಎಪಿಸೋಡ್?

ಈ ವಾರ ಬಿಗ್ ಬಾಸ್ ವೀಕೆಂಡ್ ಎಪಿಸೋಡ್‌ಗೆ ಕಿಚ್ಚ ಸುದೀಪ್ ವಾರ ಕತೆ ನಡೆಸಿಕೊಡಲು ಬರ್ತಿಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದೆ. 

Sudeep likely to miss bigg boss this weekend episode sgk
Author
First Published Oct 20, 2022, 10:11 AM IST

ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ ನಡೆಯುತ್ತಿದೆ. ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಗೆಲುವಿನ ಪೈಪೋಟಿ ಜೋರಾಗಿದೆ. ಈಗಾಗಲೇ ಮೂರು ಮಂದಿ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ನಾಲ್ಕನೇ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ, ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ವಾರ ಕಿಚ್ಚ ಸುದೀಪ್ ವಾರ ಕತೆ ನಡೆಸಿಕೊಡಲು ಬರ್ತಿಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೌದು ಈ ವಾರ ಬಾಗ್ ಬಾಸ್ ವೀಕೆಂಡ್‌ಗೆ ಸುದೀಪ್ ಗೈರಾಗುತ್ತಿದ್ದಾರಂತೆ. ಈ ಸುದ್ದಿ ಕಿರುತೆರೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. 

ಅಂದಹಾಗೆ ಸುದೀಪ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್‌ಗೆ ಗೈರಾಗುವುದು ತುಂಬಾ ಕಡಿಮೆ. ಯಾವುದೇ ಶೂಟಿಂಗ್ ಇದ್ದರೂ ಸಹ ಮ್ಯಾನೇಜ್ ಮಾಡಿಕೊಂಡು ಬಿಗ್ ಬಾಸ್ ನಡೆಸಿಕೊಡುತ್ತಾರೆ.  9ನೇ ಸೀಸನ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಮೊದಲ ಸೀಸನ್ ಒಟಿಟಿ ಬಿಗ್ ಬಾಸ್ ಸಹ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದುವಗೂ ಗೈರು ಆಗಿದ್ದು ಅಂದರೆ ಕೋವಿಡ್ ಸಮಯದಲ್ಲಿ ಮಾತ್ರ.  ಕೊರೊನಾ ಸಮಯದಲ್ಲಿ ಕಿಚ್ಚನಿಗೂ ಅನಾರೋಗ್ಯ ಕಾಡಿತ್ತು. ಹಾಗಾಗಿ ಕೆಲವು ವಾರ ಬಿಗ್ ಬಾಸ್‌ಗೆ ಗೈರಾಗಿದ್ದರು.  ಅದು ಬಿಟ್ಟರೆ ಯಾವತ್ತು ಬಿಗ್ ಬಾಸ್ ಶೋಗೆ ಸುದೀಪ್ ಗೈರಾಗಿಲ್ಲ. ಆದರೆ ಈ ವಾರ ಸುದೀಪ್ ದರ್ಶನ ಇರಲ್ಲ ಎನ್ನಲಾಗುತ್ತಿದೆ. 

ಕಾರಣವೇನು?

ಅಂದಹಾಗೆ ಸುದೀಪ್ ವಿದೇಶದಲ್ಲಿದ್ದಾರೆ. ಅಕ್ಟೋಬರ್ 18ರಂದು ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ವಿವಾಹ ವಾರ್ಷಿಕೋತ್ಸವ. ಹಾಗಾಗಿ ಈ ಸ್ಟಾರ್ ಜೋಡಿ ವಿದೇಶಕ್ಕೆ ಹಾರಿದೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ವಿದೇಶದಿಂದ ವಾಪಾಸ್ ಆಗುತ್ತಿದ್ದಂತೆ ಕಿಚ್ಚ ಗಂಧದ ಗುಡಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮ ಶುಕ್ರವಾರ (ಅಕ್ಟೋಬರ್ 21) ಅದ್ದೂರಿಯಾಗಿ ಮಾಡಲಾಗುತ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗುತ್ತಿದ್ದಾರೆ. ಪುನೀತ ಪರ್ವ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಕೂಡ ಹಾಜರಾಗುತ್ತಿದ್ದಾರೆ. ಹಾಗಾಗಿ ಬಿಗ್ ಬಾಸ್ ಶೋ ನಡೆಸಿಕೊಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಕೃತ ಮಾಹಿತಿ ರಿವೀಲ್ ಆಗಿಲ್ಲ. ಸುದೀಪ್ ಬದಲಿಗೆ ಬೇರೆ ಯಾರಾದರೂ ಬಿಗ್ ಬಾಸ್ ನಡೆಸಿಕೊಡುತ್ತಾರಾ ಕಾದು ನೋಡಬೇಕಿದೆ. 

BBK9; ವಿನ್ನರ್ ಯಾರಾಗ್ತಾರೆ ಎಂದು ಕಿಚ್ಚನ ಮುಂದೆ ಬಹಿರಂಗ ಪಡಿಸಿದ ದರ್ಶ್ ಚಂದ್ರಪ್ಪ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9 ಕ್ಯಾಪ್ಟನ್‌ ರೂಮಲ್ಲಿ ರೂಪೇಶ್‌- ಸಾನ್ಯಾ ನಡುವೆ ಏನಾಯ್ತು: ಕಂಫರ್ಟ್‌ ಝೋನ್‌ನಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ?

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 15 ಮಂದಿ ಇದ್ದಾರೆ. 4ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Follow Us:
Download App:
  • android
  • ios