ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಾವ್ಯಾ ಶಾ ತಮ್ಮ ವಿಶೇಷಚೇತನ ಮಗನ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ತಮಗೆ ಜನರ ಕರುಣೆ ಬೇಡ, ಬದಲಾಗಿ ತಮ್ಮನ್ನು ಸಾಮಾನ್ಯರಂತೆ ನೋಡಿದರೆ ಸಾಕು ಎಂದು ಅವರು ಭಾವುಕರಾಗಿ ಮನವಿ ಮಾಡಿದ್ದಾರೆ.

ಬೆಂಗಳೂರು: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಾವ್ಯಾ ಶಾ ಅವರು ತಮ್ಮ ಮಗನ ಕುರಿತಾದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಮ್ಮನ್ನು ಸಾಮಾನ್ಯ ಜನರಂತೆ ನೋಡಿದ್ರೆ ಸಾಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕಾವ್ಯಾ ಶಾ ಅವರ ಮಗ ರಿದಾನ್ ವಿಶೇಷಚೇತನನಾಗಿದ್ದು, ಓರ್ವ ತಾಯಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಗನೊಂದಿಗೆ ಗೆಳತಿಯನ್ನು ಭೇಟಿಯಾಗಲು ಹೋಟೆಲ್‌ಗೆ ಕಾವ್ಯಾ ಶಾ ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾವ್ಯಾ ಶಾ, ಅರ್ಥಪೂರ್ಣವಾದ ಮಾತುಗಳನ್ನು ನೋಡುಗರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

ನನಗೆ ಯಾರ ಕರುಣೆಯೂ ಬೇಡ

ಯಾರು ಏನಾದ್ರೂ ಹೇಳಲಿ, ನನಗೆ ನನ್ನ ಮಗ ದೇವರು. ನಮ್ಮ ಅತ್ತೆ ಅಥವಾ ಅತ್ತೆಯವರು ಮಗನ ಬಗ್ಗೆ ಏನಾದ್ರೂ ಹೇಳಲಿ. ನಾನು ಇದ್ಯಾವೂದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ನನಗೆ ಯಾರ ಕರುಣೆಯೂ ಬೇಡ. ಜನರು ನನ್ನ ಮತ್ತು ಮಗನನ್ನು ನಾರ್ಮಲ್ ಆಗಿ ನೋಡಿದ್ರೆ ಸಾಕು. ಇದಕ್ಕಿಂತ ನಾನು ಹೆಚ್ಚಿನದನ್ನು ಕೇಳಲ್ಲ ಎಂದು ಕಾವ್ಯಾ ಹೇಳಿದ್ದಾರೆ.

ಮಾಲ್ ಅಥವಾ ಹೊರಗಡೆ ಮಗನೊಂದಿಗೆ ಹೋದಾಗ ಜನರು ನಮ್ಮನ್ನು ಅಸಾಮಾನ್ಯವಾಗಿ ನೋಡಿ ಹಿಂದೆ ಮಾತನಾಡೋರ ನಮಗೆ ಸಿಂಪಥಿ ಅಥವಾ ಕನಿಕರದಿಂದ ಮಾತನಾಡಲ್ಲ. ನಮ್ಮ ಮನೆ ಅಥವಾ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಮಾತನಾಡೋರ ಸ್ನೇಹ ನನಗೆ ಬೇಡ. ಅಂತಹವರಿಂದ ನನಗೆ ಏನು ಆಗಬೇಕಿಲ್ಲ ಎಂದು ಕಾವ್ಯಾ ಸ್ಪಷ್ಟಪಡಿಸಿದ್ದಾರೆ.

ಪದೇ ಪದೇ ನನಗೂ ಈ ಬಗ್ಗೆ ಹೇಳಲು ಇಷ್ಟವಿಲ್ಲ

ಜನರು ಯಾಕೆ? ಕೆಲವೊಮ್ಮೆ ನನ್ನ ಗಂಡ ಸಹ ನಮಗೆ ಯಾಕೆ ಹೀಗೆ ಆಯ್ತು ಅಂತ ಕೇಳ್ತಾರೆ. ಆದ್ರೆ ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಮಕ್ಕಳೇ ತಮಗೆ ಇವರೇ ಅಪ್ಪ-ಅಮ್ಮ ಬೇಕೆಂದು ದೇವರು ಹತ್ರ ಕೇಳ್ಕೊಂಡು ಬರುತ್ತಾರೆಯೇ ಹೊರತು ನಾವಲ್ಲ ಎಂಬ ವಿಷಯ ನನಗೆ ಗೊತ್ತಾಗಿದೆ. ದೇವರ ಬಳಿ ನಾನೇ ಬೇಕೆಂದು ಮಗ ಆಯ್ಕೆ ಮಾಡಿಕೊಂಡಿದ್ದಾನೆ. ತುಂಬಾ ಜನರು ಕುತೂಹಲದಿಂದ ಮಗನಿಗೆ ಏನಾಯ್ತು ಅಂತ ಕೇಳ್ತಾರೆ. ಇದರಿಂದ ಅವರ ಜೀವನಕ್ಕೆ ಏನು ಆಗಲ್ಲ. ಪದೇ ಪದೇ ನನಗೂ ಈ ಬಗ್ಗೆ ಹೇಳಲು ಇಷ್ಟವಿಲ್ಲ . ಹಾಗಾಗಿ ಏನಾಯ್ತು ಅಂತ ಕೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಯಾರು ಈ ಕಾವ್ಯಾ ಶಾ?

ನಿರ್ಮಾಪಕ ವರುಣ್ ಕುಮಾರ್ ಅವರ ಪತ್ನಿ ಕಾವ್ಯಾ ಶಾ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಕಾವ್ಯಾ ಶಾ ಅವರ ತಂದೆ ಕನ್ನಡದ ಹಿರಿಯ ಕಲಾವಿದ ನಾಗೇಂದ್ರ ಶಾ ಅವರ ಮಗಳಾಗಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ಕಾವ್ಯಾ ಅವರ ತಂದೆ ಮತ್ತು ಗಂಡ ಕಿರುತೆರೆಯಲ್ಲಿದ್ರೂ ತಮಗೆ ಸೀರಿಯಲ್‌ಗಳಲ್ಲಿ ಅವಕಾಶಗಳು ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದರು.

ಮಿಸ್ಟರ್ & ಮಿಸಸ್ ರಾಮಾಚಾರಿ, ಚಕ್ರವ್ಯೂಹ, ಮುಕುಂದ ಮುರಾರಿ, ತಾರೈ ಥಪ್ಪಟ್ಟೈ, ಲೌಡ್‌ಸ್ಪೀಕರ್, ಮೂಕಜ್ಜಿಯ ಕನಸುಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡರೂ ಜನಪ್ರಿಯತೆ ಸಿಕ್ಕಿರಲಿಲ್ಲ. ಆದರೆ ನಿರಾಸೆಗೊಳಗಾದ ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಕಂಟೆಂಟ್ ವಿಡಿಯೋ ಮೂಲಕ ಇಂದು ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

View post on Instagram