Asianet Suvarna News Asianet Suvarna News

BBK9; ವಿನ್ನರ್ ಯಾರಾಗ್ತಾರೆ ಎಂದು ಕಿಚ್ಚನ ಮುಂದೆ ಬಹಿರಂಗ ಪಡಿಸಿದ ದರ್ಶ್ ಚಂದ್ರಪ್ಪ

ಸೂಪರ್ ಸಂಡೇ ವಿತ್ ಕಿಚ್ಚ ಸಂಚಿಕೆಯಲ್ಲಿ ಮೂರನೇ ವಾರ ಮನೆಯಿಂದ ಹೊರಹೋಗುವವರು ಯಾರು ಎಂದು ಘೋಷಿಸಿದರು. ದರ್ಶ್ ಚಂದ್ರಪ್ಪ ಮನೆಯಿಂದ ಹೊರ ನಡೆದಿದ್ದಾರೆ. 

Darsh chandrappa eliminated from bigg boss kannada season 9 sgk
Author
First Published Oct 17, 2022, 11:16 AM IST

ಬಿಗ್ ಬಾಸ್ ಸೀಸನ್ 9ರ ಮೂರನೇ ವಾರ ದರ್ಶ್ ಚಂದ್ರಪ್ಪ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ. ಬಿಗ್ ಬಾಸ್ ಮೂರು ವಾರಗಳನ್ನು ಯಶಸ್ವಿಯಾಗಿ ಪೂರೈಸಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ನಾಲ್ಕನೇ ವಾರದಿಂದ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ. ಬಿಗ್ ಬಾಸ್ ಗೆಲ್ಲುವ ಛಲದಲ್ಲಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ದರ್ಶ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ದರ್ಶ್ ತುಂಬಾ ಉತ್ಸಾಹದಲ್ಲೇ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಹೈಪರ್ ಆಕ್ಟೀವ್ ದರ್ಶ್ ಬಿಗ್ ಮನೆಯಲ್ಲಿ ಅಗ್ರೆಸಿವ್ ಆಗಿಯೇ ಇದ್ದರು. ಮೊದಲು ಮತ್ತು ಎರಡನೇ ವಾರ ದರ್ಶನ್ ಸಖತ್ ಆಕ್ವೀಟ್ ಆಗಿದ್ದರು. ಆದರೆ ನಂತರ ಕೊಂಚ ಸೈಲೆಂಟ್ ಆಗಿದ್ದರು. ಆ ಸೈಲೆನ್ಸ್ ದರ್ಶ್ ಅವರನ್ನು ಮನೆಯಿಂದ ಹೊರಬರುವಂತೆ ಮಾಡಿದೆ. 

ಸೂಪರ್ ಸಂಡೇ ವಿತ್ ಕಿಚ್ಚ ಸಂಚಿಕೆಯಲ್ಲಿ ಬಿಗ್ ಬಾಸ್ ಮೂರನೇ ವಾರ ಮನೆಯಿಂದ ಹೊರಹೋಗುವುದು ಯಾರು ಎಂದು ಘೋಷಿಸಿದರು. ಎಲಿಮಿನೇಷನ್‌ಗೆ ನಾಮಿನೇಟ್ ಆದವರಲ್ಲಿ ಸೇವ್ ಆದವರ ಹೆಸರನ್ನು ಕಿಚ್ಚ ಹೇಳುತ್ತಾ ಬಂದರು. ಕೊನೆಯಲ್ಲಿ ದರ್ಶ್ ಮತ್ತು ಮಯೂರಿ ಉಳಿದುಕೊಂಡಿದ್ದರು. ಬಳಿಕ ಮಯೂರಿ ಸೇಫ್ ಆದರು. ಆದರೆ ದರ್ಶ್ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಮನೆಯಿಂದ ಹೊರಬಂದರು. ಮನೆಯಲ್ಲಿ ಉಳಿದ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್ ಹೇಳಿ ದರ್ಶ್ ಮನೆಯಿಂದ ಸೀದ ಬಿಗ್ ಬಾಸ್ ವೇದಿಕೆಗೆ ಬಂದರು. ಬಳಿಕ ಕಿಚ್ಚನ ಜೊತೆ ಮನೆಯ ಅನುಭವ ಬಿಚ್ಚಿಟ್ಟರು. 

ಕಿಚ್ಚ ಸುದೀಪ್ ಕೇಳಿದ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ದರ್ಶ್ ಈ ಬಾರಿಯ ಬಿಗ್ ಬಾಸ್ ಯಾರು ವಿನ್ ಆಗಲಿದ್ದಾರೆ ಎನ್ನುವುದನ್ನು ತಿಳಿಸಿದರು. ಟಾಪ್ 4 ಯಾರು ಇರ್ತಾರೆ ಎಂದು ಕೇಳಿದ ಪ್ರಶ್ನೆಗೆ ದರ್ಶ್, ಸಾನ್ಯಾ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ, ಅಮೂಲ್ಯಾ ಎಂದು ಹೇಳಿದರು. ಇನ್ನು ಯಾರು ವಿನ್ ಆಗಬಹುದು ಅಂತ ಕೇಳಿದ ಪ್ರಶ್ನೆಗೆ ದರ್ಶ್ ಚಂದ್ರಪ್ಪ, ರೂಪೇಶ್ ಶೆಟ್ಟಿ ಹೆಸರು ಹೇಳಿದ್ದಾರೆ. 

BBK9 ಕ್ಯಾಪ್ಟನ್‌ ರೂಮಲ್ಲಿ ರೂಪೇಶ್‌- ಸಾನ್ಯಾ ನಡುವೆ ಏನಾಯ್ತು: ಕಂಫರ್ಟ್‌ ಝೋನ್‌ನಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ?

ಬಿಗ್ ಬಾಸ್ 9ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು

ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು. 

ಬಿಗ್ ಬಾಸ್ ಅನುಪಮಾ ಪರ ಇದೆ, ಫಿಕ್ಸಿಂಗ್ ಆಗಿದೆ; ಆರ್ಯವರ್ಧನ್ ಗಂಭೀರ ಆರೋಪ, ಕೆಂಡವಾದ ಸುದೀಪ್

ಈ ಬಾರಿಯ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಜೊತೆಗೆ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಔಟ್ ಆಗಿದ್ದಾರೆ.  ಸದ್ಯ ಬಿಗ್ ಬಾಸ್ ಮನೆಯಲ್ಲಿ 15 ಮಂದಿ ಇದ್ದಾರೆ. 4ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

Follow Us:
Download App:
  • android
  • ios