BBK9 ಕ್ಯಾಪ್ಟನ್‌ ರೂಮಲ್ಲಿ ರೂಪೇಶ್‌- ಸಾನ್ಯಾ ನಡುವೆ ಏನಾಯ್ತು: ಕಂಫರ್ಟ್‌ ಝೋನ್‌ನಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ?

ತಬ್ಬಿಕೊಳ್ಳುವುದು ತಪ್ಪಲ್ಲ..ಕಂಫರ್ಟ್‌ ಝೋನ್‌ ತಪ್ಪಲ್ಲ ಅಂದ್ಮೇಲೆ ಸಾನ್ಯಾ ಐಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಕ್ಯಾಪ್ಟನ್ ರೂಮಲ್ಲಿ ಏನಾಯ್ತು?

Colors Kannada Bigg boss Sanya Iyer clarifies about Roopesh shetty relationship vcs

3ನೇ ವಾರದ ಕ್ಯಾಪ್ಟನ್ ಅವಧಿ ಮುಗಿದ್ದರೂ ಆರ್ಯವರ್ಧನ್ ಜೊತೆ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯರ್ ಕ್ಯಾಪ್ಟನ್‌ ರೂಮ್‌ ಬಳಸಿಕೊಂಡಿರುವುದರ ಬಗ್ಗೆ ಸುದೀಪ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ ರೂಮಲ್ಲಿ ಸಾನ್ಯಾ ಮತ್ತು ರೂಪೇಶ್ ನಡೆದುಕೊಂಡ ರೀತಿ ವೀಕ್ಷಕರಿಗೆ ತಪ್ಪಾಗಿ ಕಾಣಿಸಿದೆ ಎಂದು ವಾರ ಕಥೆ ಕಿಚ್ಚನ ಜೊತೆಯಲ್ಲಿ ಚರ್ಚೆ ಮಾಡಿದ್ದಾರೆ. ಅಷ್ಟಕ್ಕೂ ಏನಾಯ್ತು? ತಪ್ಪು ತಿಳಿದುಕೊಂಡಿರುವ ಜನರಿಗೆ ಸಾನ್ಯಾ ಕ್ಲಾರಿಟಿ ಕೊಟ್ಟಿದ್ದಾರೆ.

ಸುದೀಪ್: ನಿಮಗೆ ನಾನು ಕೊಟ್ಟಿದ್ದು ಎಚ್ಚರಿಕೆ. ಎಲ್ಲ ಮಾತನಾಡುವುದಕ್ಕೂ ಮುಂಚೆ ತಿಳಿದುಕೊಳ್ಳಿ ಹೊರಗಡೆ ಏನೂ ಡ್ಯಾಮೇಜ್ ಅಗಿಲ್ಲ ಆಗೋದನ್ನು ತಡೆದಿರುವುದು ಚಿಕ್ಕ ಡಿಸ್‌ ಕಂಪೋರ್ಟ್‌ ವೀಕ್ಷಕರ ಗಮನಕ್ಕೆ ಬಂದಾಗ ನಾನು ನಿಮ್ಮ ಮುಂದೆ ಇಡಬೇಕಾಗುತ್ತದೆ. ಓಟಿಟಿಯಿಂದ ಕಷ್ಟ ಪಟ್ಟು ಬಂದಿದ್ದೀರಿ 61ನೇ ದಿನ ಇದ್ದು ಬಿಬಿ ಮನೆಯಲ್ಲಿ ಇಷ್ಟು ದಿನ ನಾನು ಹೇಳಿರಲಿಲ್ಲ. ನೀವು ಸಿನಿಮಾ ಮಾಡಿದ್ದೀರ ಒದ್ದಾಡಿ ಒದ್ದಾಡಿ ಹಿಟ್ ಕೊಡಬೇಕು ಅಂತ ಒಂದು ಸಿನಿಮಾ ಓಡುವುದಿಲ್ಲ ಜನರು ನಮ್ಮನ್ನು ರಿಜೆಕ್ಟ್‌ ಮಾಡಿದ್ದರು ಅಂತಲ್ಲ ಆ ಒಂದು ಸಿನಿಮಾ ಇಷ್ಟ ಆಗಿಲ್ಲ ಅಂತಲ್ಲ. ಮುಂದಕ್ಕೆ ಅವರೇ ಕೈ ಹಿಡಿಯುವುದು. ನೀವು ಚೆನ್ನಾಗಿ ಆಟವಾಡಿಲ್ಲ ಅಂತ ಹೇಳುತ್ತಿಲ್ಲ ಆಟ ಆಡಿದ್ದೀರಿ. ಪೋಸೆನ್ಶಿಯಲ್ ಕೂಡ ಇದೆ. ಉದ್ದೇಶನ ಚೆನ್ನಾಗಿ ಜನರು ಅರ್ಥ ಮಾಡಿಕೊಂಡಿದ್ದಾರೆ. ನಾನು ಇಲ್ಲಿ ನಿಂತ್ಕೊಂಡು ನಗಾಡಿಸಿ ಪ್ಲಸ್‌ ವಿಚಾರಗಳು ಕೊಟ್ಟೆ ಅಂದ್ರೆ ನಾನು ನಿಮಗೆ ನ್ಯಾಯ ಕೊಡುತ್ತಿಲ್ಲ. ಈ ವಿಚಾರ ನಿಮ್ಮ ತಿಳುವಳಿಕೆ ಬಿಡುತ್ತೀನಿ ಇದರಿಂದ ಏನು ತಿಳಿದುಕೊಂಡಿದ್ದೀರಿ ನಿಮಗೆ ಬಿಟ್ಟಿದ್ದೀವಿ. ಇಬ್ಬರು ಚೆನ್ನಾಗಿ ಆಟ ಆಡುತ್ತಿದ್ದೀರಿ ಗಮನ ಕಳೆದುಕೊಳ್ಳಬೇಡಿ.

Colors Kannada Bigg boss Sanya Iyer clarifies about Roopesh shetty relationship vcs

ಸಾನ್ಯಾ: ನಿಮ್ಮ ಮೂಲಕ ವೀಕ್ಷಕರಿಗೆ ಒಂದು ವಿಚಾರ ಹೇಳಬೇಕು. ನೀವೇ ಹೇಳಿದ್ದೀರಿ ಬಿಬಿ ಮನೆಯಲ್ಲಿ ನಮಗೆ 61ನೇ ದಿನ ಅಂತ. ಓಟಿಟಿನ ಕೂಡ ಇದೇ ಮನೆಯಲ್ಲಿ ಮಾಡಿಕೊಂಡು ಬಂದಿದ್ದೀವಿ ಹೀಗಾಗಿ ದಿನ ಕಳೆಯುತ್ತಿದ್ದಂತೆ ಇದೇ ನಮಗೆ ಮನೆ ಹೊರಗಿನ ಪ್ರಪಂಚಕ್ಕೆ ನಾವು ಎಕ್ಸಪೋಸ್ ಆಗಿಲ್ಲ. ಪ್ರತಿ ಶನಿವಾರ ನೀವು ಕೊಡುವ ಮಾಹಿತಿ ಬಿಟ್ಟರೆ ಬೇರೆ ಏನೂ  ನಮಗೆ ಸಿಕ್ಕಿಲ್ಲ. ಒಬ್ಬರ ಜೊತೆ ಕನೆಕ್ಷನ್ ಆದಾಗ ಕಂಫರ್ಟ್‌ ಝೋನ್ ಕ್ರಿಯೇಟ್ ಆದಾಗ ಎಲ್ಲೋ ಒಂದು ಕಡೆ ನಾವು ಮರೆತು ಹೋಗಿರಬಹುದು ಜನರು ನಮ್ಮನ್ನು ನೋಡುತ್ತಿದ್ದಾರೆಂದು ನಮ್ಮ ನಡವಳಿಕೆ ಅವರಿಗೆ ಡಿಸ್‌ಕಂಫರ್ಟ್‌ ಆಗಿರಬಹುದು ಅಂತ. subconciously ಮನುಷ್ಯ ಎಲ್ಲೇ ಹೋದರೂ ಕಂಫರ್ಟ್‌ ಝೋನ್‌ಗೆ ಜಾರುತ್ತಾರೆ ಹೀಗಾಗಿ ಈ ರೀತಿ ಆಗಿರಬಹುದು. ನಮ್ಮ ಮನೆ ಇದೇ ನಮ್ಮ ಜನ ಇದೇ ಮನೆಗೆ ಬಂದಿರುವ ಜನರು ಬದಲಾಗಿದ್ದಾರೆ ಕೆಲವರು ನಮ್ಮ ಜೊತೆಗಿದ್ದವರೇ ಇದ್ದಾರೆ ಹೀಗಾಗಿ ನನಗೆ ಮನೆ ಇದು ಇವರು ನಮ್ಮ ಜನರ ಅಂತ ಹೊರಗಿನ ಪ್ರಪಂಚದ ಯೋಚನೆ ಕೂಡ ಮಾಡಿಲ್ಲ. ತಪ್ಪು ಮಾಡಿದ್ದರೆ ಹೊರಗಡೆ ತಿದ್ದುವುದಕ್ಕೆ ಅಮ್ಮ ಇರ್ತಾರೆ ಅಪ್ಪ ಇರ್ತಾರೆ ಸ್ನೇಹಿತರು ಇರ್ತಾರೆ ಆದರೆ ಇಲ್ಲಿ ನಾನು ಅದನ್ನು ಮರೆತು ಬಿಟ್ಟಿದ್ದೆ. ನನ್ನ ತಾಯಿ ಸ್ಥಾನದಲ್ಲಿ ನಿಂತು ನನಗೆ ಎಚ್ಚರಿಗೆ ಕೊಟ್ಟಿದ್ದೀರಿ ಥ್ಯಾಂಕ್ಸ್‌

BBK9 ಇದೇನು ಪಿಕ್‌ನಿಕ್ ಸ್ಪಾಟ್ ಅಲ್ಲ; ಮಿತಿ ಮೀರಿದ ರೂಪೇಶ್-ಸಾನ್ಯ ಆಪ್ತತೆಗೆ ಕಿಚ್ಚನ ಕ್ಲಾಸ್

ಸಾನ್ಯಾ: ನನ್ನ ಪರ್ಸನಲ್ ಪ್ರಶ್ನೆ ಇದೆ. ಈ ಘಟನೆಗಳಿಂದ ನನ್ನ ತಾಯಿ ಬೇಸರ ಮಾಡಿಕೊಂಡಿಲ್ಲ ಅಂದುಕೊಳ್ಳುತ್ತೀನಿ ನನಗೆ ಅಮ್ಮನ ಚಿಂತೆ ಜಾಸ್ತಿ.

ಸುದೀಪ್: ಇಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ತಾಯಿ ಆರಾಮ್ ಆಗಿದ್ದಾರೆ. ಇವತ್ತು ನಾನು ಮಾತನಾಡಿರುವುದು ಗೆಲ್ಲುವ ಸಾಮರ್ಥ್ಯ ಇರುವ ಇಬ್ಬರು ಸ್ಪರ್ಧೀಗಳ ಬಗ್ಗೆ ಪೋಕಸ್ ಇಟ್ಕೊಂಡು ಇಲ್ಲಿನವರೆಗೂ ಬಂದಿದ್ದೀರಾ ಕಳೆದುಕೊಳ್ಳಬೇಡಿ. ರೂಪೇಶ್ ಶೆಟ್ಟಿ ನೀವು ನಾನು ಅಂತದೇನು ಮಾಡಿದ್ದೀನಿ ಅಂತ ಪ್ರಶ್ನೆ ಕೇಳಿದ್ದೀರಿ ಏನೋ ಮಾಡಿದ್ದೀರಿ ಮಾಡಿಲ್ಲ ಅಂತಲ್ಲ ಹೋಗುತ್ತಿರುವ ದಾರಿಯಲ್ಲಿ ಏನೋ ಸರಿ ಇಲ್ಲ ಅಂತ ಬಂದಾಗ ಸರಿ ಮಾಡುವುದು ನನ್ನ ಜವಾಬ್ದಾರಿ ನನ್ನ ಕರ್ತವ್ಯ. ನೀವು ಹೋಗುತ್ತಿರುವ ಹಾದಿ ಸರಿ ಇಲ್ಲ ಅಂದಾಗ ನಾನು ಹೇಳಬೇಕು ಅದು ಮಾಡಿರುವೆ.

Latest Videos
Follow Us:
Download App:
  • android
  • ios