ಮನೆಯಿಂದ ಇಬ್ಬರನ್ನು ಹೊರಹಾಕಲು ಬಂದ್ರು ಮಾಜಿ ಸ್ಪರ್ಧಿಗಳು; ಕಿಚ್ಚನಿಲ್ಲದ ಮನೆಯಲ್ಲಿ ಏನಾಗ್ತಿದೆ ನೋಡಿ!
ಕಾರ್ತಿಕ್, ಸಂಗೀತಾ ಸೇರಿದಂತೆ ಎಲ್ಲರೂ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ಅವರಿಬ್ಬರನ್ನು ನೋಡಿ ಪುಳಕ ಅನುಭವಿಸಿದರು. ಅವರನ್ನು ಸುತ್ತುವರೆದು ಖುಷಿಯಿಂದ ಬರಮಾಡಿಕೊಂಡರು.
ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಇಂದು ಭಾರೀ ಸಂಭ್ರಮ ಮನೆ ಮಾಡಿದೆ. ಕಾರಣ, ಮನೆಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ನೋಡಿದ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದರು. ಅವರಿಬ್ಬರನ್ನು ಬಣ್ಣಬಣ್ಣದ ಬಲೂನ್‌ಗಳ ಮೂಲಕ ಬರಮಾಡಿಕೊಂಡರು. ಈ ವೇಳೆ 'ಶುಭಾ ಪೂಂಜಾ, ನಿಮ್ಮ ಮೈಕ್ ಸರಿ ಮಾಡಿಕೊಳ್ಳಿ' ಎಂಬ ಬಿಗ್ ಬಾಸ್ ಧ್ವನಿ ಕೇಳಿ ಎಲ್ಲರೂ ಶಾಕ್ ಆದರು.
ಆದರೆ, ಜತೆಯಲ್ಲೇ ಬಿಗ್ ಬಾಸ್ ಧ್ವನಿ ಮತ್ತೆ ಮುಂದುವರೆಯಿತು. 'ಈ ಮನೆಗೆ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇಂದು ಈ ಮನೆಯಿಂದ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರು ಅಥವಾ ಇಬ್ಬರು ಹೊರಹೋಗಲಿದ್ದಾರೆ' ಎಂಬ ಧ್ವನಿ ಕೇಳಿ ಅಲ್ಲಿರುವ ಎಲ್ಲ ಸ್ಪರ್ಧಿಗಳೂ ತೀವ್ರ ಆತಂಕಕ್ಕೆ ಒಳಗಾದರು. ಮುಂದೇನು ಯೋಚನೆ ಅವರನ್ನು ಕಾಡಲಿದೆ ಎಂಬುದನ್ನು ಇಂದಿನಸಂಚಿಕೆಯಲ್ಲಿ ನೋಡಬಹುದು.
ಸಲಾರ್ ಮುಂದೆ ಮಂಡಿಯೂರಿದ ಶಾರುಖ್ ಖಾನ್ ಡಂಕಿ; ಸೌತ್ ಸಿನಿಮಾ ಹವಾ ನೋಡಿ ಕಂಗೆಟ್ಟ ಬಾಲಿವುಡ್!
ಕಾರ್ತಿಕ್, ಸಂಗೀತಾ ಸೇರಿದಂತೆ ಎಲ್ಲರೂ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ಅವರಿಬ್ಬರನ್ನು ನೋಡಿ ಪುಳಕ ಅನುಭವಿಸಿದರು. ಅವರನ್ನು ಸುತ್ತುವರೆದು ಖುಷಿಯಿಂದ ಬರಮಾಡಿಕೊಂಡರು. ಆದರೆ, ಅಚ್ಚರಿ ಎಂಬಂತೆ, ಇಂದು ಬಿಗ್ ಬಾಸ್ ಮನೆಯಿಂದ ಇಬ್ಬರು ಎಲಿಮಿನೇಟ್ ಆಗಿಲಿದ್ದಾರೆ ಎಂಬುದು ಬಿಗ್ ಬಾಸ್ ಪ್ರಿಯರಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ನಿಜವಾಗಿಯೂ ಇಂದು ಮನೆಯಿಂದ ಹೊರಹೋಗಲಿರುವ ಸ್ಪರ್ಧಿಗಳು ಯಾರಿರಬಹುದು ಎಂಬುದೀಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.
ಕಾರ್ಪೆಂಟರ್ ಆಗಿದ್ದವ ಗ್ಯಾಂಗ್‌ಸ್ಟರ್, ಬಳಿಕ ಬಾಲಿವುಡ್ ಫೈಟರ್; ಮಗ ಬಾಲಿವುಡ್ ಸೂಪರ್ ಸ್ಟಾರ್!