Asianet Suvarna News Asianet Suvarna News

ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!

ಶಾರುಖ್ ಖಾನ್ ನಟನೆಯ ಸಿನಿಮಾ 'ಡಂಕಿ' ಇದೀಗ ವರ್ಷದ ಕೊನೆಯಲ್ಲಿ, ಅಂದರೆ 21 ಡಿಸೆಂಬರ್ 2023ರಲ್ಲಿ ಬಿಡುಗಡೆಯಾಗಿದೆ. ಆದರೆ, ಪಠಾನ್ ಹಾಗು ಜವಾನ್ ಸಿನಿಮಾಗಳಂತೆ ಡಂಕಿ ಚಿತ್ರವು ಹಿಟ್ ಆಗಿಲ್ಲ.

4 year acting break is not intentionally happened says actor Shah Rukh Khan srb
Author
First Published Dec 23, 2023, 3:46 PM IST

ಡಂಕಿ ನಟ ಶಾರುಖ್ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಾವು '4 ವರ್ಷಗಳು ಸಿನಿಮಾಗಳಿಂದ ತೆಗೆದುಕೊಂಡ ಬ್ರೇಕ್' ಬಗ್ಗೆ ಮಾತನಾಡಿದ್ದಾರೆ. 2023ಕ್ಕಿಂತ ಮೊದಲು ಬರೋಬ್ಬರಿ ನಾಲ್ಕು ವರ್ಷಗಳಷ್ಟು ಕಾಲ ನಟ ಶಾರುಖ್ ಖಾನ್ ಅವರು ಸಿನಿಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ 2023ರಲ್ಲಿ ಶಾರುಖ್ ನಟನೆಯ ಪಠಾನ್ ಹಾಗೂ ಜವಾನ್ ಸಿನಿಮಾಗಳು ತೆರೆಗೆ ಬಂದು ಸೂಪರ್ ಹಿಟ್ ಆದವು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟ ಶಾರುಖ್ ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಟಾನಿಕ್ ಕೊಟ್ಟು ಮರುಜೀವ ಕೊಟ್ಟರು ಎಂದೇ ಹೇಳಬೇಕು. 

ಇಂಥ ಶಾರುಖ್ ಖಾನ್ ನಟನೆಯ ಸಿನಿಮಾ 'ಡಂಕಿ' ಇದೀಗ ವರ್ಷದ ಕೊನೆಯಲ್ಲಿ, ಅಂದರೆ 21 ಡಿಸೆಂಬರ್ 2023ರಲ್ಲಿ ಬಿಡುಗಡೆಯಾಗಿದೆ. ಆದರೆ, ಪಠಾನ್ ಹಾಗು ಜವಾನ್ ಸಿನಿಮಾಗಳಂತೆ ಡಂಕಿ ಚಿತ್ರವು ಹಿಟ್ ಆಗಿಲ್ಲ ಎನ್ನಬಹುದು. ಏಕೆಂದರೆ, ಬಿಡುಗಡೆಯಾದ ಮೊದಲ ದಿನ ಕೇವಲ 30 ಕೋಟಿಯಷ್ಟೇ ಕಲೆಕ್ಷನ್ ಮಾಡಿರುವ ಡಂಕಿ, ಎರಡನೇ ದಿನ ಕೂಡ 50 ಕೋಟಿ ಕಲೆಕ್ಷನ್ ದಾಟಲು ವಿಫಲವಾಗಿದೆ ಎನ್ನಬಹುದು. ಜವಾನ್ ಹಾಗೂ ಫಠಾನ್ ರೀತಿ ಡಂಕಿ ಹಿಟ್ ಆಗಿಲ್ಲ ಎನ್ನುವುದು ಶಾರುಖ್ ಖಾನ್ ಗಮನಕ್ಕೂ ಬಂದಿದೆ. ಆದರೆ, ಅವರು ತಮ್ಮ 4 ವರ್ಷಗಳ ಗ್ಯಾಪ್ ಹಿಂದೆ ಇದ್ದ ಕಾರಣಗಳ ಬಗ್ಗೆ ಹೇಳಿಕೊಂಡಿದ್ದಾರೆ. 

ಶಾರುಖ್ ಖಾನ್ 'ಡಂಕಿ' ಡಮಾರ್ ಆಯ್ತು, ಪ್ರಭಾಸ್ 'ಸಲಾರ್' ಸೂಪರ್ ಹಿಟ್; ತಪ್ಪಿದ ಲೆಕ್ಕಾಚಾರ!

ನಿಜವಾಗಿ ಹೇಳಬೇಕು ಎಂದರೆ, ನಾನು 2018 ರಿಂದ 4 ವರ್ಷಗಳ ಗ್ಯಾಪ್ ತೆಗೆದುಕೊಂಡಿದ್ದು ಉದ್ದೇಶಪೂರ್ವಕವಾಗಿ ಅಲ್ಲ. ನಾನು ಮೊದಲು ಅಂದುಕೊಂಡಿದ್ದು ಸ್ವಲ್ಪ ಕಾಲ ನಾನು ರಿಲ್ಯಾಕ್ಸ್  ಮಾಡಬೇಕು, ನನ್ನನ್ನೆ ನಾನು ನೋಡಿಕೊಳ್ಳಬೇಕು, ನನ್ನ ಬಗ್ಗೆ ಚಿಂತಿಸಬೇಕು ಎಂಬ ಕಾರಣಕ್ಕಾಗಿ. ಆದರೆ ಆ ಗ್ಯಾಪ್ ಆರು ತಿಂಗಳು ಆಗಬಹುದು ಎಂದುಕೊಂಡಿದ್ದೆ. ಆದರೆ ಅದು ಒಂದು ವರ್ಷಗಳ ಕಾಲ ನಡೆಯಿತು. ಆ ಕಾಲದಲ್ಲಿ ನಾನು ತುಂಬಾ ಆಲಸಿಯಾಗಿದ್ದೆ. ಹೀಗಾಗಿ ಸಿನಿಮಾ ಕಥೆ ಕೂಡ ನಾನು ಕೇಳಲಿಲ್ಲ, ನಾನು ಸಿನಿಮಾ ಮಾಡುವ ಬಗ್ಗೆ ಯೋಚನೆ ಮಾಡಲಿಲ್ಲ. 

ಎರಡು ಬಾರಿ 'ನೋ' ಅಂದಿದ್ದರು ಪೃಥ್ವಿರಾಜ್ ಸುಕುಮಾರ್; ಸಲಾರ್‌ನಲ್ಲಿ ನಟಿಸಿದ ರಹಸ್ಯ ರಿವೀಲ್ ಆಯ್ತು!

ಆದರೆ, ಈ ಗ್ಯಾಪ್‌ನಲ್ಲಿ ನಾನು ಬೇರೆಯವರ ಸಿನಿಮಾಗಳನ್ನು ನೋಡಿದೆ. ಅದರಿಂದ ಬಹಳಷ್ಟು ವಿಷಯಗಳನ್ನು ಕಲಿತುಕೊಂಡೆ. ಒಂದು ವರ್ಷಗಳಲ್ಲಿ ಇವೆಲ್ಲಾ ನಡೆದುಹೋಯಿತು. ಅಷ್ಟರಲ್ಲಿ 'ಕೋವಿಡ್ ಸಾಂಕ್ರಾಮಿಕ' ಸಂಕಟ ಜಗತ್ತಿನೆಲ್ಲೆಡೆ ವ್ಯಾಪಿಸಿತು. ಹೀಗಾಗಿ ನಾನು ಆ ವೇಳೆ ಸಿನಿಮಾ ಮಾಡಲು ಇಷ್ಟಪಡಲಿಲ್ಲ. ಕೋವಿಡ್ ಕಾರಣಕ್ಕೆ ಸಿನಿಮಾ ಮಾಡದೇ 3 ವರ್ಷ ಕಳೆದೇ ಹೋಯಿತು. ಬಳಿಕ ನಾನು ಕಥೆ ಕೇಳಿ ನನಗಿಷ್ಟವಾದ ಪಠಾಣ್ ಸಿನಿಮಾ ಶೂಟಿಂಗ್ ಮುಗಿದು ಅದು ತೆರೆಗೆ ಬರುವ ಹೊತ್ತಿಗೆ ಬರೋಬ್ಬರಿ 4 ವರ್ಷಗಳು ಕಳೆದುಹೋಯಿತು. ಹೀಗಾಗಿ ನಾನು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದು ಒಂದೇ ವರ್ಷ ಎನ್ನಬಹುದು' ಎಂದಿದ್ದಾರೆ ನಟ ಶಾರುಖ್ ಖಾನ್.

ಕಾಟೇರ ನಿರ್ದೇಶಕ ತರುಣ್ ಸುಧೀರ್ ಭವಿಷ್ಯ ಹೇಳಿದ ಜಗಪತಿ ಬಾಬು; ದರ್ಶನ್ ಬಗ್ಗೆ ಏನು ಹೇಳಿದ್ರು ನೋಡಿ!

Follow Us:
Download App:
  • android
  • ios